‘ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ’. “ನನಗೆ ತಾಗುವ ಗುಂಡುಗಳು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಿರುತ್ತದೆ”.
ಈ ಮೇಲಿನಂತೆ ಸಿಂಹ ಘರ್ಜನೆ ಮಾಡಿದವರು ಬ್ರಿಟಿಷರ ನಿದ್ದೆಗಡಿಸಿದ್ದ ಮಹಾನ್ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ, “ಪಂಜಾಬಿನ ಕೇಸರಿ” ಎಂದೇ ಪ್ರಖ್ಯಾತರಾದ ಲಾಲಾ ಲಜಪತರಾಯರವು.
ಸ್ವಾತಂತ್ಯ ಚಳುವಳಿಯಲ್ಲಿ ಮಹತ್ತರ ಪಾತ್ರ ವಹಿಸಿದ ಲಾಲಾ ಲಜಪತ್ ರಾಯ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಹುತಾತ್ಮರಾದವರು ಅವರಿಗೆ ಕ್ರಾಂತಿಕಾರಿ ನಮನಗಳು.
ಭಾರತೀಯರೆಲ್ಲರೂ ಲಾಲಾಲಜಪತರಾಯ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಗೌರವಿಸಬೇಕಿದೆ. ವಿಶೇಷವಾಗಿ ವಿದ್ಯಾರ್ಥಿ-ಯುವಜನರು ಲಜಪತರಾಯರ ಅನ್ಯಾಯದ ವಿರುದ್ಧ ಸಿಡಿದೇಳುವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ.