ಖ್ಯಾತ ನಟ ಸೌಮಿತ್ರ ಚಟರ್ಜಿ ನಿಧನ

ಕೋಲ್ಕತಾ : ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಬಂಗಾಳಿ ನಟ ಹಾಗೂ ದಾದಾಸೇಹಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ  ಸೌಮಿತ್ರ ಚಟರ್ಜಿ ಭಾನಿವಾರ (ನಂ 15) ನಿಧನರಾಗಿದ್ದಾರೆ.  ಅವರಿಗೆ 85 ವರ್ಷ ವಯಸ್ಸಾಗಿತ್ತು.   ಬೆಂಗಾಲಿ ಚಿತ್ರರಂಗದಲ್ಲಿ ಸುಮಾರು 7 ದಶಕಗಳ ಕಾಲ ಕೆಲಸ ಮಾಡಿ, ‘ಸೂಪರ್ ಸ್ಟಾರ್‌’ ಎನಿಸಿಕೊಂಡಿದ್ದ  ಸೌಮಿತ್ರ ಚಟರ್ಜಿ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಹಾಗಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಕೊರೊನಾ ಸೋಂಕು ತಗುಲಿದ್ದರಿಂದ ಅವರನ್ನು ಅ.6ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ  ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಇತ್ತು. ವೈದ್ಯರು ಕೂಡ ಅದನ್ನೇ ಹೇಳಿದ್ದರು. ಅವರ ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆರೋಗ್ಯ ಸ್ಥಿತಿ ಚಿಂತಾಜನಕವಾಗುತ್ತಿದ್ದು, ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಿದ್ದರು. ಮತ್ತೊಮ್ಮೆ ವರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾಗ  ವರದಿ ನೆಗೆಟಿವ್‌ ಬಂದಿತ್ತು. ಆದರೆ, ಅದು ಉಂಟು ಮಾಡಿದ್ದ ದುಷ್ಪರಿಣಾಮಗಳಿಂದ ಸೌಮಿತ್ರಾ ಅವರ ಬಹುತೇಕ ಅಂಗಾಂಗಗಳಿಗೆ ತೊಂದರೆ ಆಗಿತ್ತು.  ಬೆಂಗಾಲಿ ಚಿತ್ರರಂಗದ ಮೊದಲ ‘ಸೂಪರ್‌ ಸ್ಟಾರ್’ ಎನಿಸಿಕೊಂಡಿದ್ದ ಸೌಮಿತ್ರ ಈಗ ಬರೀ ನೆನಪು ಮಾತ್ರ.  ಸೌಮಿತ್ರ ಚಟರ್ಜಿ ನೆನಪಿಗೆ ಹಲವರು ಕಂಬನಿ ಮಿಡಿದಿದ್ದು ಚಿತ್ರರಂಗ ಹಾಗೂ ಪ್ರಗತಿಪರ ಚಿಂತನೆಗಳಿಗೆ ತುಂಬಲಾರದ ನಷ್ಟ ಎಂದು  ಶೋಕ ವ್ಯಕ್ತಪಡಿಸಿದ್ದಾರೆ.

ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರ ಕಲ್ಟ್ ಕ್ಲಾಸಿಕ್ ಸಿನಿಮಾ ‘ಅಪೂರ್ ಸಂಸಾರ್‌’ (1959) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದ,  ಸೌಮಿತ್ರ ಚಟರ್ಜಿ  ಆನಂತರ ಸತ್ಯಜಿತ್ ನಿರ್ದೇಶನ ಮಾಡಿದ್ದ ಸುಮಾರು 14 ಸಿನಿಮಾಗಳಲ್ಲಿ ಸೌಮಿತ್ರ ಬಣ್ಣ ಹಚ್ಚಿದ್ದಾರೆ. 60, 70, 80ರ ದಶಕದಲ್ಲಿ ಸೌಮಿತ್ರ ಅವರ ಸಿನಿಮಾಗಳೇ ಹೆಚ್ಚು ತೆರೆಕಾಣುತ್ತಿದ್ದವು. ಸತ್ಯಜಿತ್ ರೇ ಮಾತ್ರವಲ್ಲದೆ, ಮೃಣಾಲ್ ಸೇನ್, ತಪನ್ ಸಿನ್ಹಾ ಮುಂತಾದ ಜನಪ್ರಿಯ ನಿರ್ದೇಶಕರ ಸಿನಿಮಾಗಳಲ್ಲಿಯೂ ಸೌಮಿತ್ರ ಬಣ್ಣ ಹಚ್ಚಿದ್ದಾರೆ. 2020ರಲ್ಲಿ ತೆರೆಕಂಡ ‘ಬೊರುಂಬಬುರ್ ಬೊಂಧು’ ಅವರ ಕಡೆಯ ಸಿನಿಮಾ. ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. 2012ರಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. 2004ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ. ಇನ್ನು, ಪಶ್ಚಿಮ ಬಂಗಾಳ ಸರ್ಕಾರದ 8 ರಾಜ್ಯ ಪ್ರಶಸ್ತಿಗಳು ಸೌಮಿತ್ರ ಅವರಿಗೆ ಸಿಕ್ಕಿವೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿದ ರಾಷ್ಟಪತಿ ರಾಮನಾಥ ಕೋವಿಂದ್
ಟ್ವೀಟ್ ಮೂಲಕ ಸಂತಾಪ ಸೂಚಿಸಿದ ರಾಷ್ಟಪತಿ ರಾಮನಾಥ ಕೋವಿಂದ್
ಎಡರಂಗದ ನಾಯಕರಿಂದ ಸಂತಾಪ ಸಲ್ಲಿಕೆ

 

 

 

 

 

 

 

ಸೌಮಿತ್ರ ಚಟರ್ಜಿ ಅವರ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸುತ್ತಿದೆ. ರಾಷ್ಟ್ರ ಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ಟ್ಟಿಟರ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ. ಇನ್ನು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಪಶ್ಚಿಮ ಬಂಗಾಳದ ಎಡರಂಗ ನಾಯಕರು, ಪ್ರಗತಿಪರ ಚಿಂತಕರು ಸಂತಾಪವನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *