ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸಿದ ಸೆಂಟ್ ಪಾಲ್ ಶಾಲೆ

ಗಂಗಾವತಿ: ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ರಾಜ್ಯ ಮತ್ತು ಕೇದ್ರ ಸರ್ಕಾರದ ಆದೇಶ ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಿದೆ. ಗಂಗಾವತಿಯ ಸೆಂಟ್ ಪಾಲ್ ಎಂಬ ಖಾಸಗಿ ಶಾಲೆ ಸರಕಾರಿ ನಿಯಮಗಳನ್ನು ಉಲ್ಲಂಘಿಸಿ ಹೈಸ್ಕೂಲ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸುತ್ತಿದೆ.

ಕೊರೊನಾ ಸೋಂಕಿನಿಂದಾಗಿ ಇನ್ನೂ ಶಾಲೆಗಳೆ ಆರಂಭವಾಗದ ಹಿನ್ನಲೆಯಲ್ಲಿ ಈ ಖಾಸಗೀ ಶಾಲೆ ಪರೀಕ್ಷೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇಡೀ ಜಗತ್ತೆ ಕರೊನಾ ಎನ್ನುವ ಹೆಮ್ಮಾರಿ ನಡುವೆ ನಲುಗಿ ಹೋಗಿದೆ, ನಾಡಿನಾದ್ಯಂತ ಲಾಕ್ ಡೌನ್ ಜಾರಿ ಮಾಡಿ ಕರೊನಾ ಹತ್ತಿಕ್ಕುವ ಕೆಲಸ ಮಾಡಿದರೂ ಸಹ ಹತೋಟಿಗೆ ಬರುತ್ತಿಲ್ಲ. ಸರ್ಕಾರದ ಆದೇಶದ ಪ್ರಕಾರ ಕೆಲ ಇಲಾಖೆ ಮತ್ತು ಜನತೆ ಆದೇಶ ಪಾಲಿಸುತ್ತಾ ಬರುತ್ತಿದ್ದಾರೆ.

ಸರ್ಕಾರ ವಿಧ್ಯಾಗಮ ಎಂದು ವಠಾರ ಶಾಲೆ ಅಂತ ಪ್ರಾರಂಭಿಸಿತ್ತು, ಆಗ ಭೋದನೆ ಮಾಡುವ ಕೊಪ್ಪಳ ಜಿಲ್ಲೆಯ ಹದಿಮೂರು ಜನ ಶಿಕ್ಷಕರಿಗೆ ಸೊಂಕು ತಗುಲಿ ಮೃತಪಟ್ಟ ಘಟನೆಯು ನಡೆದಿದೆ, ಅದರಲ್ಲಿ ಗಂಗಾವತಿ ತಾಲ್ಲೂಕಿನಲ್ಲೆ ಒಂಬತ್ತು ಜನ ಯಲಬುರ್ಗಾ ದಲ್ಲಿ ಇಬ್ಬರು ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ತಲಾ ಒಬ್ಬರು ಶಿಕ್ಷಕರನ್ನು ಜೀವ ಕಳೆದು ಕೊಂಡಿದ್ದಾರೆ. ಮಕ್ಕಳಿಗೆ ಸೊಂಕು ತಗಲುವ ಭೀತಿಯಿಂದ ಸರ್ಕಾರ ವಿಧ್ಯಾಗಮ ಎನ್ನುವ ಕಾರ್ಯಕ್ರಮವನ್ನು ಸಹ ರದ್ದು ಮಾಡಿತ್ತು. ಆ ಘಟನೆ ಇನ್ನೂ ಮಾಸಿಲ್ಲ.

ಆದರೆ ಗಂಗಾವತಿ ನಗರದ ಸೆಂಟ್ ಪಾಲ್ಸ್ ಸ್ಕೂಲ್‌ ಮಾತ್ರ  8,9,10, ತರಗತಿ ಶಾಲೆಯ ಮಕ್ಕಳಿಗೆ ಪರೀಕ್ಷ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಖುದ್ದಾಗಿ ತುಂಗಾವಾಣಿ ಸ್ಕೂಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಶಿಕ್ಷಕಿ ಹೇಳಿರುವ ಹೇಳಿಕೆಯು ಈಗ ವೈರಲ್ಲ ಆಗಿದೆ.

ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಪರ್ಕಿಸಿದಾಗ ಅವರು ಹೇಳಿದ್ದು ನಾವು ಮತ್ತು ಸರ್ಕಾರ ಯಾವುದೇ ರೀತಿಯ ಪರವಾನಿಗೆ ಕೊಟ್ಟಿಲ್ಲ ಯಾವ ಆಧಾರದ ಮೇಲೆ ಪರೀಕ್ಷೆ ಮಾಡುತ್ತಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.

ಈ ಖಾಸಗಿ ಶಾಲೆಯ ಆಡಳಿತ ಮಂಡಳಿ ಮತ್ತು ಮಾಲೀಕರ ವಿರುದ್ಧ ಕ್ರಮ ಜರುಗಿಸುವಂತೆ SFI ನ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *