ಅಂಕಪಟ್ಟಿ ಡಿಜಿಟಲೀಕರಣ : ಖಾಸಗಿ ಕಂಪನಿಗೆ ನೀಡಿದ್ದು ಯಾಕೆ?

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲಿಕರಣ  ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ.  ಕೊರೊನಾ ಹಾಗೂ ಲಾಕ್ಡೌನ್ ವೇಳೆ ಬಹುತೇಕ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ವ್ಯವಸ್ಥೆಗೆ ಮೊರೊ ಹೋಗಿದ್ದವು, ಈಗ  ಆ ಸಾಲಿಗೆ ಅಂಕಪಟ್ಟಿ ಸೇರ್ಪಡೆಗೊಳ್ಳುತ್ತಿದೆ.   ಹೌದು  ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಸಿಗಲಿವೆ.  ನಕಲಿ ಅಂಕಪಟ್ಟಿಯನ್ನಯ ತಡೆಯುವುದಕ್ಕಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ ಎಂದು ಸರಕಾರ ಹೇಳುತ್ತಿದ್ದರೆ, ಇತ್ತ ವಿದ್ಯಾರ್ಥಿ ಸಂಘಟನೆಗಳು  ಡಿಜಿಟಲ್ ಹೆಸರಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡುವ ಮೂಲಕ ಸರಕಾರ ಅಕ್ರಮಗಳಿಗೆ ದಾರಿಯನ್ನು ಮಾಡಿಕೊಡುತ್ತಿದೆ ಎಂದು ಆರೋಪವನ್ನು ಮಾಡುತ್ತಿವೆ. ಇವರ ಆರೋಪಕ್ಕ ಕಾರಣವಾದರು ಏನು?  ಡಿಜಿಟಲ್ ಹೆಸರಲ್ಲಿ ಕೊಳ್ಳೆ ಹೊಡಯಲು ಮುಂದಾಗಿರುವ ಆ ಕಂಪನಿ ಯಾವುದು? ಸರಕಾರಿ ಸ್ವಾಮ್ಯದ ಕಂಪನಿ ಬಿಟ್ಟು  ಖಾಸಗಿ ಕಂಪನಿಗೆ ಸರಕಾರ ನೀಡುತ್ತಿರುವುದರ ಹಿಂದನ ಉದ್ದೇಶ  ಏನು ಎಂಬುದು ತಿಳಿಯದ ಪ್ರಶ್ನೆಯಾಗಿದೆ.

ತಂತ್ರಜ್ಞಾನ ಬೆಳೆಯುತ್ತಿದೆ, ಅದಕ್ಕೆ ನಾವೆಲ್ಲ ಈಗ ಒಗ್ಗಿಕೊಳ್ಳುತ್ತಿದ್ದೇವೆ, ಕೊರೊನಾ ಮತ್ತು ಲಾಕ್ಡೌನ್ ನಿಂದಾಗಿ ನಾವು ತಂತ್ರಜ್ಞಾನದ ಮೇಲೆ ಹೆಚ್ಚಾಗಿ  ಅವಲಂಬಿತರಾಗುವಂತೆ ಮಾಡಿತು. ಅದರಲ್ಲೂ ಶಾಲೆಗಳು ಇನ್ನು ಓಪನ್ ಆಗದ ಕಾರಣ  ಆನ್ಲೈನ್ ಶಿಕ್ಷಣದ ದಾರಿಯನ್ನು ಹುಡುಕಿಕೊಳ್ಳಲಾಯಿತು.  ತಂತ್ರಜ್ಞಾನಕ್ಕೆ ನಾವು ಒಗ್ಗಿಕೊಳ್ಳಬೇಕು ನಿಜ ಆದರೆ ಆ ತಂತ್ರಜ್ಞಾನದ ಹೆಸರಲ್ಲಿ ಬ್ರಷ್ಟಾಚಾರಕ್ಕೆ ಅವಕಾಶ ನೀಡುವಂತದ್ದು, ಖಾಸಗೀಕರಣಕ್ಕೆ ಮುಂದಾಗುವಂತದ್ದು ಶಿಕ್ಷಣದ ಮೂಲ ಆಶಯಕ್ಕೆ ಕೊಡಲಿಪೆಟ್ಟನ್ನು ನೀಡುತ್ತದೆ.

ಈ ವರ್ಷದಿಂದಲೇ ಎಲ್ಲಾ ಅಂಕಪಟ್ಟಿಗಳನ್ನು ಡಿಜಿಟಲೀಕರಣ  ಮಾಡುವುದಾಗಿ ಸರಕಾರ ಹೇಳಿಕೊಳ್ಳುತ್ತಿದೆ. ಜುಲೈ  04 ರಂದು ರಾಜ್ಯಸರಕಾರ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆಯನ್ನು ಕಳುಹಿಸಿ ಡಿಜಿಟಲ್ ಅಂಕಪಟ್ಟಿ ಸಿದ್ದಪಡಿಸುವಂತೆ ಸೂಚಿನೆಯನ್ನು ನೀಡಿತ್ತು.  ಈಗಾಗಲೇ ವಿಟಿಯು ನಲ್ಲಿ ಕಳೆದ ವರ್ಷದಿಂದ ಜಾರಿ ಮಾಡಲಾಗಿದೆ. 10 ನೇ ತರಗತಿ ಅಂಕಪಟ್ಟಿಗಳು ಈಗಾಗಲೇ ಡಿಜಿಟಲೀಕರಣವಾಗಿವೆ.  ಈಗ ಪದವಿ ಹಂತಕ್ಕು ಅದನ್ನು ಜಾರಿ ಮಾಡಲು ಸರಕಾರ ಮುಂದೆ ಬಂದಿದೆ.  ಅಂಕಪಟ್ಟಿಯನ್ನು ಡಿಜಿಟಲೀಕರಣ ಮಾಡುವ ಜವಬ್ದಾರಿಯನ್ನು ಕರ್ನಾಟಕದಲ್ಲಿ ಖಾಸಗಿ ಕಂಪನಿಗೆ  ನೀಡಲಾಗಿದೆ.    ಯುಜಿಸಿಯು ಸರಕಾರಿ ಸ್ವಾಮ್ಯದ ಐಟಿ ಕಂಪನಿಗಳಿಗೆ ಡಿಜಿಟಲ್ ಅಂಕಪಟ್ಟಿ ಸಿದ್ದಪಡಿಸಲು  ಎಲ್ಲಾ ವಿಶ್ವವಿದ್ಯಾಲಯಗಳಿಗೆ ಲಿಂಕನ್ನು ಉಚಿತವಾಗಿ ನೀಡಿದೆ.  ಆದರೆ ಕರ್ನಾಟಕ ಸರಕಾರ  ಖಾಸಗಿ ಕಂಪನಿಗೆ ನೀಡವ ಮೂಲಕ ಬ್ರಷ್ಟಾಚರಕ್ಕೆ ಅವಕಾಶ ನೀಡಲು ಮುಂದಾಗಿದೆ.

ಈ ವಿಡಿಯೋ ನೋಡಿ : ಅಂಕಪಟ್ಟಿ ಡಿಜಿಟಲೀಕರಣ ಖಾಸಗಿ ಕಂಪನಿಗೆ ಕೊಟ್ಟಿದ್ದು ಯಾಕೆ?

ಮೆ, ಕಿಯೋನಿಕ್ಸ್ ಎಂಬ ಕಂಪನಿಗೆ ಅಂಕಪಟ್ಟಿ ಡಿಜಿಟಲ್ ಮಾಡುವ ಜವಬ್ದಾರಿಯನ್ನು ನೀಡಲಾಗಿದೆ.  ಮೆ. ಕಿಯೋನೆಕ್ಸ್  ಇದನ್ನು ಇನ್ನೊಂದು ಖಾಸಗಿ ಕಂಪನಿಗೆ ನೀಡಲು ಮುಂದಾಗಿದೆ.  ತಾನು  ಸೂಚಿಸುವ ಅಕೌಂಟಿಗೆ ಹಣವನ್ನು ನೀಡಬೇಕು ಮತ್ತು ಮಾಹಿತಿಯನ್ನು ಕಿಯೋನಿಕ್ಸ್ ಗೆ ಕಳುಹಿಸಬೇಕು ಎಂದು ಹೇಳಿದೆ. ಈ ಅಂಶವೇ ಹೇಳುತ್ತದೆ ಖಾಸಗೀಕರಣ ಮತ್ತು ಅಕ್ರಮಗಳಿಗೆ ಇದು ದಾರಿ ಮಾಡಿಕೊಡುತ್ತದೆ ಎಂದು. ಕಿಯೋನಿಕ್ಸ್ ತನ್ನ ಬ್ಯಾಂಕ್ ಖಾತೆಯನ್ನು ನೀಡದೆ ಬೇರೊಂದು ಖಾತೆಯನ್ನು ನೀಡುತ್ತಿರುವುದು ಹಲವಾರು ಅನುಮಾನಗಳನ್ನು ಹುಟ್ಟಿಸಿದೆ.  ಇನ್ನೊಂದು ಅಂಶ  ಏನು ಅಂದರೆ ಪ್ರತಿ ಅಂಕಪಟ್ಟಿಗೆ ವಿದ್ಯಾರ್ಥಿ 132 ರೂ + 18% ಜಿಎಸ್ಟಿ  ಶುಲ್ಕವನ್ನು ಕಟ್ಟಬೇಕಾಗುತ್ತದೆ. ಅಂದರೆ 132 + 24(18%) ಒಟ್ಟು  156 ರೂ ಹಣವನ್ನು ಸಂದಾಯ ಮಾಡಬೇಕು. ಒಬ್ಬ ವಿದ್ಯಾರ್ಥಿ ಕಡಿಮೆ ಅಂದರೂ ಪದವಿ ಮುಗಿಯುವಸ್ಟರಲ್ಲಿ 6 ರಿಂದ 10 ಅಂಕಪಟ್ಟಿಗಳನ್ನು ಪಡೆಯುತ್ತಾನೆ. ಪದವಿ ಮುಗಿಯುವ ವೇಳೆ  ಅಂಕಪಟ್ಟಿಗಾಗಿ 1650 ರೂ ಹಣವನ್ನು ಪಾವತಿಸಬೇಕಾಗುತ್ತದೆ. ರಾಜ್ಯದಲ್ಲಿ 10 ಲಕ್ಷ ವಿದ್ಯಾರ್ಥಿಗಳು ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.  140 ಕೋಟಿ ರೂ ನಷ್ಟು ಹೆಚ್ಚುವರಿ ಹಣವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ರಾಜ್ಯಸರಕಾರ ಮುಂದಾಗಿದೆ.

ರಾಜ್ಯ ಸರಕಾರದ  ಈ ನಿರ್ಧಾರವನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದು, ಸರಕಾರದ  ಈ ನಡೆ ಭ್ರಷ್ಟಾಚಾರಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ.  ನಕಲಿ ಅಂಕಪಟ್ಟಿಯನ್ನು ತಡೆಯುವುದಾಗಿ ಹೇಳಿರುವ ರಾಜ್ಯ ಸರಕಾರ ಮತ್ತೊಂದು ಅಕ್ರಮಗಳಿಗೆ ಅವಕಾಶ ನೀಡುತ್ತಿರುವುದು ಶಿಕ್ಷಣದ ಅವನತಿಯ ದಾರಿಯನ್ನು ತೋರಿಸುತ್ತದೆ ಎಂದು ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಸರಕಾರದ ನಡೆಯನ್ನು ವಿರೋಧಿಸಿದ್ದಾರೆ.

 

ವಿದ್ಯಾರ್ಥಿ ಸಂಘಟನೆಗಳು ಆರೋಪಿಸುವಂತೆ  ವಿದ್ಯಾರ್ಥಿಗಳನ್ನು ಸರಕಾರ  ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಏನು ಅಂದರೆ, ಯುಜಿಸಿ ಯು ಉಚಿತವಾಗಿ  ಅಂಕಪಟ್ಟಿಗಳನ್ನು ಡಿಜಿಟಲ್ ಲಾಕರ್ ಗೆ ಒಳಪಡಿಸುವುದಾಗಿ ಹೇಳುತ್ತಿದ್ದರು, ರಾಜ್ಯ ಸರಕಾರ ಯುಜಿಸಿಯ ಮಾತನ್ನು ತಿರಸ್ಕರಿಸಿ  ಮೆ. ಕಿಯೋನಿಕ್ಸ್ ಗೆ ಜವಬ್ದಾರಿಯನ್ನು ನೀಡಿದ್ದು ಹಲವಾರು ಅನುಮಾನಗಳನ್ನು ಹುಟ್ಟಿಹಾಕುತ್ತಿದೆ.  ಮುಖ್ಯವಾಗಿ ಕಿಯೋನಿಕ್ಸ್ ಗೆ ನೀಡುವ ರಾಜ್ಯ ಸರಕಾರದ ಪ್ರಸ್ತಾಪವನ್ನು ಯುಜಿಸಿ ತಿರಸ್ಕರಿಸಿದೆ. ಆದರೂ ರಾಜ್ಯ ಸರಕಾರ ಹಠಕ್ಕೆ ಬಿದ್ದು ಅವರ ಜೊತೆ  ಐದುವರ್ಷದ ಒಪ್ಪಂದವನ್ನು ಮಾಡಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *