ನವೆಂಬರ್ ೭, ೧೯೧೭– ರಶ್ಯನ್ ಸಮಾಜವಾದಿ ಕ್ರಾಂತಿಯಾದ ದಿನ

ನವೆಂಬರ್ ೭, ೧೯೧೭: ರಶ್ಯನ್ ಕ್ರಾಂತಿ ಅಥವಾ  ಮೊದಲ ಸಮಾಜವಾದಿ ಕ್ರಾಂತಿ ಅಥವಾ ಅಕ್ಟೋಬರ್ ಕ್ರಾಂತಿ ಎಂದು ಕರೆಯಲಾಗುವ ದಿನ.

ಯಾಕೆ ಅದು ಅಕ್ಟೋಬರ್ ಕ್ರಾಂತಿ?  ರಷ್ಯದಲ್ಲಿ ೧೯೧೭ರಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ವಿಶ್ವದ ಚರಿತ್ರೆಯಲ್ಲಿ ಒಂದು ಹೊಸ ಯುಗದ ಆರಂಭವನ್ನು ಸೂಚಿಸಿತು. ಈ ಕ್ರಾಂತಿಯ ಪರಿಣಾಮವಾಗಿ ಹೊಸದೊಂದು ಸಮಾಜವಾದಿ ಪ್ರಭುತ್ವ ಸ್ಥಾಪನೆಗೊಂಡಿತು. ಅದೇ ಸೋವಿಯೆತ್ ಒಕ್ಕೂಟ. ಅದು ಕಾರ್ಮಿಕ ವರ್ಗದ ನೇತೃತ್ವದ ಕ್ರಾಂತಿಕಾರಿ ಆಂದೋಲನವನ್ನು ಜಾಗತಿಕ ರಂಗಕ್ಕೆ ತಂದಿತು. ಈ ರಷ್ಯನ್ ಕ್ರಾಂತಿ ನಡೆದದ್ದು ನವಂಬರ್ ೭, ೧೯೧೭ ರಂದು. ಆಗಿದ್ದ ರಷ್ಯನ್ ಕ್ಯಾಲೆಂಡರ್ ಪ್ರಕಾರ ಅಂದು ಅಕ್ಟೋಬರ್ ೨೫. ಆದ್ದರಿಂದಲೇ ಇದಕ್ಕೆ ಅಕ್ಟೋಬರ್ ಕ್ರಾಂತಿಯೆಂಬ ಹೆಸರು ಬಂತು.

ರಷ್ಯಾ ಆಗ ಝಾರ್ ಎಂದು ಕರೆಯಲ್ಪಡುತ್ತಿದ್ದ ರಾಜನ ಚಕ್ರಾಧಿಪತ್ಯದ ಕೇಂದ್ರವಾಗಿತ್ತು. ಈ ವಿಶಾಲ ಝಾರ್‌ಶಾಹಿ ಸಾಮ್ರಾಜ್ಯ ಇಡೀ ಮಧ್ಯ ಏಶಿಯಾವನ್ನು ವ್ಯಾಪಿಸಿತ್ತು.  ದೊಡ್ಡ ಭೂಮಾಲಕರ ಪ್ರಭುತ್ವ ಈ ಝಾರ್‌ಶಾಹಿ ವ್ಯವಸ್ಥೆಯ ಮುಖ್ಯ ಲಕ್ಷಣವಾಗಿತ್ತು. ಕೊನೆಯ ಝಾರ್ ಈ ಸಾಮ್ರಾಜ್ಯದ ಅತ್ಯುತ್ತಮ ೮೦ ಲಕ್ಷ ಹೆಕ್ಟೇರ್ ಜಮೀನಿನ ಒಡೆಯನಾಗಿದ್ದ. ೨೮,೦೦೦ ದೊಡ್ಡ  ಮಾಲಕರು ೧೬.೭೪ ಕೋಟಿ ಭೂಮಿಯ ಒಡೆಯರಾಗಿದ್ದರು. ಈ ಅರೆ-ಪಾಳೆಯಗಾರಿ ಭೂಮಾಲಕತ್ವದೊಂದಿಗೆ ಬಂಡವಾಳಶಾಹಿಯ ಬೆಳವಣಿಗೆಯಿAದಾಗಿ ಕೈಗಾರಿಕೆ ಮತ್ತು ಗಣಿಗಾರಿಕೆಯಲ್ಲಿ ಗುತ್ತೇದಾರಿಗಳು ಮೂಡಿಬಂದಿದ್ದವು. ಬಂಡವಾಳಶಾಹಿ ತ್ವರಿತವಾಗಿ ಬೆಳೆಯುತ್ತಿದ್ದರೂ, ದೊಡ್ಡ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಇಲ್ಲಿ ಬಂಡವಾಳಶಾಹಿ ಇನ್ನೂ ಹಿಂದುಳಿದಿತ್ತು.

ಚಳಿಗಾಲದ ಅರಮನೆಗೆ ಕ್ರಾಂತಿಕಾರಿಗಳ ಲಗ್ಗೆ

ಝಾರ್ ೧೯೧೪ರಲ್ಲಿ ಮೊದಲ ಜಾಗತಿಕ ಯುದ್ಧದಲ್ಲಿ ಸೇರಿಕೊಂಡ. ಇದೊಂದು ಸಾಮ್ರಾಜ್ಯಶಾಹಿ ಯುದ್ಧವಾಗಿತ್ತು, ಏಕೆಂದರೆ, ಜರ್ಮನಿ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯ ಮುಂತಾದ ಸಾಮ್ರಾಜ್ಯಶಾಹಿ ಶಕ್ತಿಗಳ ನಡುವೆ ವಸಾಹತುಗಳನ್ನು, ಅವುಗಳ ಸಂಪನ್ಮೂಲಗಳ ಹತೋಟಿಗಾಗಿ ನಡೆದ ಪ್ರತಿಸ್ಪರ್ಧೆಗಳಿಂದಾಗಿ ಭುಗಿಲೆದ್ದ ಯುದ್ಧ ಅದು.  ಝಾರ್‌ಶಾಹಿ ಸೇನೆಗೆ ಕೋಟ್ಯಂತರ ರೈತಾಪಿ ಜನಗಳು ಮತ್ತು ಕಾರ್ಮಿಕರ ಬಲವಂತದ ನೇಮಕಾತಿ ನಡೆಯಿತು. ಅವರನ್ನು ಗಡಿಗಳಲ್ಲಿ ಯುದ್ಧಮಾಡಲು ಕಳಿಸಲಾಯಿತು. ಈ ಯುದ್ಧದಲ್ಲಿ ರಷ್ಯನ್ ಪಡೆಗಳು ಜರ್ಮನರೆದರು ಸೋಲುಣ್ಣುತ್ತಿದ್ದವು, ಸಾವಿರ-ಸಾವಿರ ಮಂದಿ ಪ್ರಾಣ ಕಳಕೊಳ್ಳುತ್ತಿದ್ದರು. ದಾರಿದ್ರ್ಯ ಪೀಡಿತ ರೈತಾಪಿಗಳು ಭೂಮಾಲಕರ ಬಾರುಕೋಲುಗಳ ಅಡಿಯಲ್ಲಿ ನರಳುತ್ತಿದ್ದ  ಗುಲಾಮರಾಗಿದ್ದರು.

ಮೊದಲಿಗೆ ಫೆಬ್ರುವರಿ ಕ್ರಾಂತಿ

ಇAತಹ ಒಂದು ಸನ್ನಿವೇಶದಲ್ಲಿ ಸಾಮೂಹಿಕ ಅಸಂತೃಪ್ತಿ ಎದ್ದು ಬಂದಿತು, ಕ್ರಾಂತಿಕಾರಿ ಶಕ್ತಿಗಳು, ಮುಖ್ಯವಾಗಿ ಬೋಲ್ಶೆವಿಕ್ ಪಕ್ಷ ಝಾರ್‌ಶಾಹೀ ಆಳ್ವಿಕೆಯ ವಿರುದ್ಧ ಬಂಡಾಯ ಆರಂಭಿಸಿತು. ಈ ಸಾಮೂಹಿಕ ಉತ್ಕ್ರಾಂತಿ ಒಂದು ಕ್ರಾಂತಿಯ ಸ್ವರೂಪ ತಳೆಯಿತು. ಇದು ನಡೆದದ್ದು ಫೆಬ್ರುವರಿ( ಹಳೆಯ ರಷ್ಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್) ೧೯೧೭ರಲ್ಲಿ. ಝಾರ್‌ಶಾಹೀ ರಾಜಪ್ರಭುತ್ವವನ್ನು ಕಿತ್ತೊಗೆಯಲಾಯಿತು, ಅದರ ಜಾಗದಲ್ಲಿ ಒಂದು ಬಂಡವಾಳಶಾಹಿ ಪ್ರಾಬಲ್ಯದ ಸರಕಾರವನ್ನುರಚಿಸಲಾಯಿತು. ಇದರಲ್ಲಿ ಕೆಲವು ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷಗಳೂ ಭಾಗವಹಿಸಿದವು.

ಫೆಬ್ರುವರಿ ಕ್ರಾಂತಿಯ ನಂತರ ರಚನೆಗೊಂಡ ಈ ತಾತ್ಕಾಲಿಕ ಸರಕಾರ ಪ್ರತಿಗಾಮಿ ಶಕ್ತಿಗಳೊಂದಿಗೆ ರಾಜಿಗೆ ಪ್ರಯತ್ನ ನಡೆಸಿತು, ರಷ್ಯನ್ ಬಂಡವಾಳಶಾಹಿಗಳ ಹಿತಗಳನ್ನೇ ಪ್ರೋತ್ಸಾಹಿಸಲಾರಂಭಿಸಿತು. ಇದರಿಂದಾಗಿ, ಮತ್ತು ಮಹಾಯುದ್ಧದಲ್ಲಿ ಸೋಲುಗಳನ್ನು ಅನುಭವಿಸುತ್ತ ಸೈನಿಕರ ಸಾವುಗಳು ಹೆಚ್ಚಲಾರಂಭಿಸಿದAತೆ ಈ ಸರಕಾರ ಹೆಚ್ಚೆಚ್ಚು  ಜನಪ್ರಿಯತೆ ಕಳಕೊಳ್ಳಲಾರಂಭಿಸಿತು.

ಈ ಫೆಬ್ರುವರಿ ಕ್ರಾಂತಿಯಲ್ಲಿ ಜನಾಧಿಕಾರದ ಹೊಸದೊಂದು ಅಂಗವು ಹೊಮ್ಮಿ ಬಂದಿತ್ತು. ಅದನ್ನು ಸೋವಿಯೆತ್‌ಗಳು ಎನ್ನುತ್ತಿದ್ದರು. ಫೆಬ್ರುವರಿ ಕ್ರಾಂತಿಯ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ, ಸೈನಿಕರ ಮತ್ತು ರೈತರ ಸೋವಿಯೆತ್‌ಗಳು ಹುಟ್ಟಿಕೊಂಡುವು. ಬೊಲ್ಶೆವಿಕ್ ಪಕ್ಷ ಕಾರ್ಮಿಕರ ಸೋವಿಯೆತ್‌ಗಳಲ್ಲಿ ಮತ್ತು ಮಿಲಿಟರಿ ತುಕಡಿಗಳಲ್ಲಿ ರಚನೆಗೊಂಡ ಸೈನಿಕರ ಸೋವಿಯೆತ್‌ಗಳಲ್ಲಿ ಹೆಚ್ಚೆಚ್ಚು ಬೆಂಬಲ ಗಳಿಸಿ ಕೊಳ್ಳಲಾರಂಭಿಸಿತು. ಸಪ್ಟಂಬರ್ ಅಂತ್ಯದ ವೇಳೆಗೆ ತಾತ್ಕಾಲಿಕ ಸರಕಾರ ಕಾರ್ಮಿಕರು, ರೈತರು ಮತ್ತು ಸೈನಿಕರ ನಡುವೆ ಹೆಚ್ಚೆಚ್ಚು ಆಕ್ರೋಶವನ್ನು ಎದುರಿಸಲಾರಂಭಿಸಿತು.

ರಾಜಧಾನಿ ಪೆಟ್ರೋಗ್ರಾಡ್ ಮತ್ತು ಮಾಸ್ಕೋದಂತಹ ನಗರಗಳಲ್ಲಿ ಶ್ರಮಜೀವಿಗಳು ತಮ್ಮದೇ ಸೋವಿಯೆತ್‌ಗಳನ್ನು ರಚಿಸಿಕೊಂಡರು, ನಡೆಯುತ್ತಿದ್ದ ಕ್ರಾಂತಿಯನ್ನು ರಕ್ಷಿಸಿಕೊಳ್ಳಲು ಸಶಸ್ತ್ರ ತುಕಡಿಗಳನ್ನು ರಚಿಸಿಕೊಂಡರು. ಗ್ರಾಮೀಣ ರಷ್ಯಾದಲ್ಲಿ ರೈತರು ಮತ್ತು ಕೃಷಿ ಕೂಲಿಗಾರರು ಭೂಮಾಲಕರು ಮತ್ತು ಜಮೀಂದಾರರ ಭೂಮಿಗಳನ್ನು ವಹಿಸಿಕೊಳ್ಳಲಾರಂಭಿಸಿದರು.  ಸೇನೆಯಲ್ಲಿನ ಸೈನಿಕರು ತಮ್ಮದೇ ಸೋವಿಯೆತ್‌ಗಳನ್ನು ಚುನಾಯಿಸಿ ಯುದ್ಧ ಕೊನೆಗೊಳ್ಳಬೇಕು, ಶಾಂತಿ ನೆಲೆಸಬೇಕು ಎಂದು ಕರೆ ನೀಡಲಾರಂಭಿಸಿದರು.

ಬಹುಪಾಲು ಸೈನಿಕರು ಸಮವಸ್ತçದಲ್ಲಿರುವ ರೈತರು’ ಎಂಬ ಸಂಗತಿಯತ್ತ ಬೊಲ್ಶೆವಿಕ್ ಪಕ್ಷದ ನೇತಾರ ಲೆನಿನ್ ಬೊಟ್ಟು ಮಾಡಿದರು. ಸಮಾಜವಾದಿ ಕ್ರಾಂತಿಯತ್ತ-ಎಲ್ಲ ಅಧಿಕಾರಗಳು ಸೋವಿಯೆತ್‌ಗಳಿಗೆ ಇಂತಹ ಒಂದು ಸನ್ನಿವೇಶದಲ್ಲಿ ದೇಶ ಬೂರ್ಜ್ವಾ ಕ್ರಾಂತಿಯ ಮೊದಲ ಘಟ್ಟದಿಂದ ಎರಡನೇ ಘಟ್ಟಕ್ಕೆ ಸಾಗುತ್ತಿದೆ, ಈಗ ಅಧಿಕಾರವನ್ನು ಶ್ರಮಜೀವಿಗಳ ಮತ್ತು ರೈತರಲ್ಲಿ ಅತಿ ಬಡ ವಿಭಾಗಗಳ ಕೈಗಳಲ್ಲಿ ಇಡಬೇಕು ಎಂದು ಲೆನಿನ್ ಸಾರಿದರು.

“ಎಲ್ಲ ಅಧಿಕಾರಗಳು ಸೋವಿಯೆತ್‌ಗಳಿಗೆ”ಎಂಬ ಕರೆಯೊಂದಿಗೆ, ಅಂತಿಮವಾಗಿ ಅಕ್ಟೋಬರ್ ೨೫(ಈಗಿನ ಕ್ಯಾಲೆಂಡರಿನಲ್ಲಿ ನವಂವರ್ ೭) ರಂದು ಕಾರ್ಮಿಕರ ಸಶಸ್ತç ತುಕಡಿಗಳು (ರೆಡ್ ಗಾರ್ಡ್ಸ್ ಅಥವ ಕೆಂಪು ರಕ್ಷಕರು) ಮತ್ತು ಸೇನೆಯಲ್ಲಿನ ಕ್ರಾಂತಿಕಾರಿ ಸೈನಿಕರು ತಾತ್ಕಾಲಿಕ ಸರಕಾರವನ್ನು ಪದಚ್ಯುತಗೊಳಿಸಲು ಮುಂದಾದರು.  ರಾಜಧಾನಿ ಪೆಟ್ರೋಗ್ರಾಡ್‌ನಲ್ಲಿ ಅಧಿಕಾರವನ್ನು ಕೈಗೆ ತಗೊಳ್ಳುವಲ್ಲಿ ಕ್ರಾಂತಿ ಯಶಸ್ವಿಯಾಯಿತು. ನಂತರದ ವಾರಗಳಲ್ಲಿ, ಮಾಸ್ಕೋದಲ್ಲಿ ಮತ್ತು ಮತ್ತು ಇತರ

ಎಲ್ಲ ಕೇಂದ್ರಗಳಲ್ಲೂ ಇನ್ನೂ ಹಳೆಯ ಆಡಳಿತಕ್ಕೆ ನಿಷ್ಟರಾಗಿದ್ದ ಕ್ರಾಂತಿ-ವಿರೋಧಿ ಶಕ್ತಿಗಳ ಪ್ರತಿರೋಧವನ್ನು ಮೀರಿ ನಿಲ್ಲಲು ಸಾಧ್ಯವಾಯಿತು. ಇಡೀ ರಷ್ಯದಲ್ಲಿ ಮತ್ತು ಝಾರ್‌ಶಾಹಿ ಸಾಮ್ರಾಜ್ಯದ ಇತರ ಭಾಗಗಳಲ್ಲೂ ಸೋವಿಯೆತ್ ಅಧಿಕಾರವನ್ನು ಸ್ಥಾಪಿಸಲಾಯಿತು.

ಲೆನಿನ್ ಮುಖ್ಯಸ್ಥರಾಗಿದ್ದ ಒಂದು ಹೊಸ ಸರಕಾರ ಜನತಾ ಅಧಿಕಾರಿಗಳ(ಪೀಪಲ್ಸ್ ಕಾಮಿಸ್ಸಾರ್) ಮಂಡಳಿಯೊಂದಿಗೆ ರಚನೆಗೊಂಡಿತು.  ಬೊಲ್ಶೆವಿಕರು ಜನತೆಯನ್ನು ‘ಭೂಮಿ, ಶಾಂತಿ ಮತ್ತು ರೊಟ್ಟಿ’(ಬ್ರೆಡ್) ಎಂಬ ಘೋಷಣೆಯ ಮೇಲೆ ಅಣಿನೆರೆಸಿದ್ದರು. ಹೊಸ ಸರಕಾರ ಕೈಗೊಂಡ ಮೊದಲ ಕ್ರಮ ಎಂದರೆ ಅಖಿಲ ರಷ್ಯ ಕಾರ್ಮಿಕ, ಸೈನಿಕ ಮತ್ತು ರೈತ ಪ್ರತಿನಿಧಿಗಳ ಸೋವಿಯೆತ್‌ಗಳ ಸಮ್ಮೇಳನದ ಮುಂದೆ ಭೂಮಿಯ ಆಜ್ಞೆ ಮತ್ತು ಶಾಂತಿಯ ಆಜ್ಞೆಯÀನ್ನು ಮಂಡಿಸಿದ್ದು.

ಲೆನಿನ್ ರಿಂದ ಸೋವಿಯೆಟ್ ಪ್ರಭುತ್ವ ಮತ್ತು ಶಾಂತಿ ಘೋಷಣೆ

ಸಮ್ಮೇಳನ ಅಂಗೀಕರಿಸಿದ ಭೂಮಿಯ ಆಜ್ಞೆ ಎಲ್ಲ ಭೂಮಿ-ಎಸ್ಟೇಟ್‌ಗಳನ್ನು ಮತ್ತು ಎಲ್ಲ ಚರ್ಚ್ಗಳು ಮತ್ತು ಆಶ್ರಮಗಳ ಭೂಮಿಗಳನ್ನು ಅವುಗಳ ಜಾನುವಾರುಗಳು, ಸಲಕರಣೆಗಳು ಮತ್ತು ಕಟ್ಟಡಗಳೊಂದಿಗೆ ವಹಿಸಿಕೊಂಡು ಅವನ್ನು  ಸ್ಥಳೀಯ ಭೂಸಮಿತಿಗಳು ಮತ್ತು ಜಿಲ್ಲಾ ರೈತ ಪ್ರತಿನಿಧಿಗಳ ಸೋವಿಯೆತ್‌ಗಳ ಕೈಗಳಿಗೆ ಕೊಟ್ಟಿತು.

ಶಾಂತಿಯ ಆಜ್ಞೆ ತಕ್ಷಣವೇ ಯುದ್ಧದಲ್ಲಿ ತೊಡಗಿರುವ ಎಲ್ಲ ಸರಕಾರಗಳು ಮತ್ತು ಜನತೆಗಳ ನಡುವೆ ಮಾತುಕತೆಗಳೊಂದಿಗೆ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಕರೆ ನೀಡಿತು. ಹೊಸ ಸೋವಿಯೆತ್ ಸರಕಾರ ಯಾವುದೇ ಪ್ರದೇಶವನ್ನು  ವಶಪಡಿಸಿಕೊಳ್ಳದ ಮತ್ತು ನಷ್ಟಭರ್ತಿಯಿಲ್ಲದ ಒಂದು ಶಾಂತಿಗೆ ತಕ್ಷಣವೇ ಸಹಿ ಹಾಕಲು ದೃಢನಿರ್ಧಾರ ಮಾಡಿರುವುದಾಗಿ ಸಾರಿತು.

ಸಮ್ಮೇಳನ ಅಂಗೀಕರಿಸಿದ ಇತರ ಆದೇಶಗಳು ಅನಕ್ಷರತೆಯ ನಿರ್ಮೂಲನೆ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಪುಕ್ಕಟೆ ವೈದ್ಯಕೀಯ ಆರೋಗ್ಯ ಪಾಲನೆ ಮತ್ತು ಹೊಸದೊಂದು ಸೋವಿಯೆತ್ ಸಮಾಜವಾದಿ ಗಣತಂತ್ರಗಳ ಒಕ್ಕೂಟ  (ಯುಎಸ್‌ಎಸ್‌ಆರ್)ದ ರಚನೆ ಕುರಿತಾದವುಗಳು.

ಝಾರ್‌ಶಾಹೀ ರಷ್ಯ ‘ರಾಷ್ಟ್ರಗಳ ಸೆರೆಮನೆ’ಎಂದಿದ್ದರು ಲೆನಿನ್. ರಷ್ಯನ್ ಕ್ರಾಂತಿ ವಿವಿಧ ರಷ್ಯನೇತರ ರಾಷ್ಟ್ರೀಯತೆಗಳನ್ನು ವಸಾಹತುಶಾಹೀ ನೊಗದಿಂದ ವಿಮೋಚನೆಗೊಳಿಸಿ ಹೊಸ ಒಕ್ಕೂಟದೊಳಗೆ ಸಮಾಜವಾದಿ ಗಣತಂತ್ರಗಳಾಗಿರುವ ಒAದು ಸ್ವಾಯತ್ತ ವ್ಯವಸ್ಥೆಯನ್ನು ಕೊಟ್ಟಿತು.

ಹೊಸ ಸೋವಿಯೆತ್ ಪ್ರಭುತ್ವ ಸಮಾಜವಾದವನ್ನು ಕಟ್ಟುವ ಕೆಲಸಕ್ಕೆ ತೊಡಗುವ ಮೊದಲು ಕ್ರಾಂತಿ-ವಿರೋಧಿ ಶಕ್ತಿಗಳ ದಾಳಿಗಳನ್ನು ಎದುರಿಸಬೇಕಾಯಿತು. ಒಂದು ಕಟು ಅಂತರ್ಯುದ್ಧ ಭುಗಿಲೆದ್ದಿತು. ಕೆಂಪು ರಕ್ಷಕರು(ರೆಡ್ ಗಾರ್ಡ್) ಬಿಳಿ ರಕ್ಷಕರು(ವೈಟ್ ಗಾರ್ಡ್) ಮತ್ತು ಕ್ರಾಂತಿ-ವಿರೋಧಿ ಶಕ್ತಿಗಳ ವಿರುದ್ಧ ಸೆಣಸಬೇಕಾಯಿತು. ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಹತ್ತು ಬಂಡವಾಳಶಾಹಿ ದೇಶಗಳು ಕ್ರಾಂತಿ-ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡಿದವು, ಅವುಗಳಿಗೆ ನೆರವು ಮತ್ತು ಶಸ್ತಾçಸ್ತçಗಳನ್ನು ಒದಗಿಸಿದವು.

ನಾಲ್ಕು ವರ್ಷಗಳ ಕಾಲ ಅಂತರ್ಯುದ್ಧದಲ್ಲಿ ಹೋರಾಡಿದ ನಂತರ ಅAತಿಮವಾಗಿ ಕೆಂಪು ಸೇನೆಯ ಕೈಮೇಲಾಯಿತು, ಪ್ರತಿಗಾಮಿ ಶಕ್ತಿಗಳನ್ನು ಹತ್ತಿಕ್ಕಲಾಯಿತು. ಈ ಪ್ರಕ್ರಿಯೆಯಲ್ಲಿ ಭಾರೀ ಬೆಲೆ ತೆರಬೇಕಾಯಿತು, ಕೆಂಪುಸೇನೆಯಲ್ಲಿದ್ದ ಹತ್ತಾರು ಸಾವಿರ ವರ್ಗಪ್ರಜ್ಞೆಯಿಂದ ತುಂಬಿದ್ದ ಕಾರ್ಮಿಕರು ಮತ್ತು ರೈತರ ಪ್ರಾಣಾರ್ಪಣೆಯಾಯಿತು.

ಏಕೆ ಇದು ಮೊದಲ ಸಮಾಜವಾದಿ ಕ್ರಾಂತಿ?

ಅಕ್ಟೋಬರ್ ಕ್ರಾಂತಿ ಅದುವರೆಗೆ ಜಗತ್ತಿನಲ್ಲಿ ನಡೆದ ಕ್ರಾಂತಿಗಳಿಗಿಂತ ಭಿನ್ನವಾಗಿತ್ತು. ಪ್ರಭುತ್ವದ ಬದಲಾವಣೆಯ ಹಲವು ಕ್ರಾಂತಿಗಳು ನಡೆದಿವೆ. ೧೭೮೯ರ ಫ್ರೆಂಚ್ ಕ್ರಾಂತಿಯಿಂದ ಆರಂಭಿಸಿ ನಡೆದ ಕ್ರಾಂತಿಗಳಲ್ಲಿ ಬಂಡವಾಳಶಾಹಿ ವರ್ಗ ಹಳೆಯ ಪಾಳೆಯಗಾರಿ ವರ್ಗಗಳು ಮತ್ತು ಶ್ರೀಮಂತ ಜಮೀಂದಾರರಿAದ ಪ್ರಭುತ್ವದ ಅಧಿಕಾರವನ್ನು ವಹಿಸಿಕೊಂಡಿತ್ತು. ಈ ಹಿಂದೆ ಚರಿತ್ರೆಯ ವಿಭಿನ್ನ ಘಟ್ಟಗಳಲ್ಲಿ ಒಂದು ಹೊಸ ಉದೀಯಮಾನ  ಶೋಷಕರ ವರ್ಗ ಹಳೆಯ ಶೋಷಕ ವರ್ಗಗಳ ಆಳ್ವಿಕೆಯನ್ನು ಕಿತ್ತೊಗೆದ ಕ್ರಾಂತಿಗಳು ಸಂಭವಿಸಿವೆ. ಹಳೆಯ ಊಳಿಗಮಾನ್ಯ ಶೋಷಕ ವರ್ಗಗಳನ್ನು ಬಂಡವಾಳಶಾಹಿ- ನೇತೃತ್ವದ ಕ್ರಾಂತಿಗಳು ಕಿತ್ತೆಸೆದಾಗ ಇದೇ ನಡೆದದ್ದು.

ಆದರೆ ಅಕ್ಟೋಬರ್ ಕ್ರಾಂತಿ ಮಾತ್ರ ಭಿನ್ನವಾಗಿತ್ತು. ಮೊತ್ತ ಮೊದಲ ಬಾರಿಗೆ ಶೋಷಿತ ವರ್ಗಗಳು ಒಂದು ಕ್ರಾಂತಿ ನಡೆಸಿ ಶೋಷಕ ವರ್ಗಗಳ ಆಳ್ವಿಕೆಯನ್ನು ಕಿತ್ತೆಸೆದ ಘಟನೆಯಿದು. ಶೋಷಣೆಗೊಳಗಾಗಿದ್ದ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗದಂತಹ ಅದರ ಮಿತ್ರವರ್ಗಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಇತರ ಶೋಷಕ ವರ್ಗಗಳ ಆಳ್ವಿಕೆಯನ್ನು ಕಿತ್ತೆಸೆಯುವ ಕ್ರಾಂತಿ ನಡೆಸಿದರು.

ರಷ್ಯದಲ್ಲಿನ ಕ್ರಾಂತಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ನಡೆದದ್ದರಿಂದ ಅದನ್ನು ಜಗತ್ತಿನ ಮೊದಲ ಸಮಾಜವಾದಿ ಕ್ರಾಂತಿ ಎಂದು ವರ್ಣಿಸಲಾಗಿದೆ. ಹಳೆಯ ಪ್ರಭುತ್ವಶಕ್ತಿಯನ್ನು ಧ್ವಂಸ ಮಾಡಿ ಒಂದು ಹೊಸ ಸ್ವರೂಪದ ಪ್ರಭುತ್ವ ಅಧಿಕಾರವನ್ನು ಸ್ಥಾಪಿಸಿದಾಗಲೇ ಒಂದು ಕ್ರಾಂತಿ ಯಶಸ್ವಿಯಾಗುತ್ತದೆ ಎಂದಿದ್ದರು ಲೆನಿನ್.  ರಷ್ಯದ ಕ್ರಾಂತಿ ಇದನ್ನು ಸಾಧಿಸಿತು. ಅದು ಹಳೆಯ ಝಾರ್‌ಶಾಹೀ ಪ್ರಭುತ್ವದ ಅಧಿಕಾರವನ್ನು ಕಳಚಿ ಹಾಕಿ ಅದರ ಸ್ಥಾನದಲ್ಲಿ ಕಾರ್ಮಿಕರು ಮತ್ತು ಬಡರೈತರ ಹಿತಗಳನ್ನು ಪ್ರತಿನಿಧಿಸುವ ಸೋವಿಯೆತ್‌ಗಳ ಸ್ವರೂಪದಲ್ಲಿ ಹೊಸದೊಂದು ಪ್ರಭುತ್ವವನ್ನು ತಂದಿತು.

ಸಮಾಜವಾದದ ಅಡಿಯಲ್ಲಿ ಉತ್ಪಾದನಾ ಸಾಧನಗಳ ಸಾಮಾಜಿಕೀಕರಣವಾಗಬೇಕು. ಇದನ್ನು ಹೊಸ ಪ್ರಭುತ್ವ ಶಕ್ತಿಯ ಸ್ಥಾಪನೆಯ ನಂತರ ಕೈಗಾರಿಕೆ, ಭೂಮಿ ಮತ್ತು ಕೃಷಿ ಹಾಗೂ ಇತರ ಉತ್ಪಾದನಾ ಸಾಧನಗಳನ್ನು ಪ್ರಭುತ್ವವೇ ವಹಿಸಿಕೊಂಡು ಅವನ್ನು ಸಾಮೂಹಿಕ ಒಡೆತನಕ್ಕೆ ಒಳಪಡಿಸುವ ಮೂಲಕ ಸಾಧಿಸಲಾಯಿತು. ಈ ರೀತಿ ಜಗತ್ತಿನಲ್ಲಿ ಸಮಾಜವಾದಿ ಉತ್ಪಾದನಾ ವಿಧಾನವನ್ನು ಸ್ಥಾಪಿಸಿದ್ದು ಇದೇ ಮೊದಲನೇ ಬಾರಿ.

ಅಪೂರ್ವ ಸಾಧನೆಗಳು

ಸೋವಿಯೆತ್ ಒಕ್ಕೂಟ ೧೯೬೦ರ ದಶಕದ ವರೆಗೆ ಅಪೂರ್ವ ಆರ್ಥಿಕ ಸಾಧನೆಗಳನ್ನು ಮಾಡಿತು. ಅದರ ಅತ್ಯಂತ ಕಟು ವಿಮರ್ಶಕರೂ ಒಪ್ಪಿಕೊಂಡಿರುವ ಸAಗತಿ ಇದು. ಬಹಳ ಗೌರವ ಗಳಿಸಿರುವ ಬ್ತಿಟಿಶ್ ಆರ್ಥಿಕ ಚರಿತ್ರೆಕಾರ ಎಂಗಸ್ ಮ್ಯಾಡಿಸನ್ “೧೯೧೩ರಿಂದ ೧೯೬೫ರ ನಡುವೆ ಸೋವಿಯೆತ್ ಒಕ್ಕೂಟದ ತಲಾ ಆರ್ಥಿಕ ಬೆಳವಣಿಗೆ ಜಗತ್ತಿನ ಎಲ್ಲ ಪ್ರÀಮುಖ ಅಥವ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅತ್ಯಂತ ವೇಗದ್ದು-ಜಪಾನಿಗಿಂತಲೂ ವೇಗದ್ದು. ಜಪಾನೀ ಉತ್ಪನ್ನ ೪೦೦ಶೇ.ದಷ್ಟು ಬೆಳೆದರೆ, ಸೋವಿಯೆತ್ ಉತ್ಪನ್ನ ೪೪೦ಶೇ. ದಷ್ಟು ಬೆಳೆಯಿತು”ಎಂದು ಗುರುತಿಸಿದ್ದಾರೆ.

ನೀವು ನಿರಕ್ಷರತೆ ನಿರ್ಮೂಲನ ಚಳುವಳಿಯಲ್ಲಿ ಭಾಗಿಯಾಗಿದ್ದೀರಾ?’
1925 ಸಾಕ್ಷರತಾ ಚಳುವಳಿಯ ಪೋಸ್ಟರ್

* ಅಂತರ್ಯುದ್ದ ಮುಗಿದ ಒಂದು ದಶಕದೊಳಗೆ ಅನಕ್ಷರತೆ ನಿರ್ಮೂಲನಗೊಂಡಿತು.

* ಮೊದಲಿಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಅದರ ನಂತರ ಏಳು ವರ್ಷಗಳ ಸಾರ್ವತ್ರಿಕ ಶಿಕ್ಷಣ ಮತ್ತು ಸಾರ್ವತ್ರಿಕ ಮಾಧ್ಯಮಿಕ ಶಿಕ್ಷಣ(ಹತ್ತು ವರ್ಷಗಳದ್ದು)- ಆ ವೇಳೆಗೆ ಬೇರೆ ಯಾವ ಯುರೋಪಿಯನ್ ದೇಶ ಕೂಡ ಇದನ್ನು ಸಾಧಿಸಿರಲಿಲ್ಲ.

* ಭೂಮಾಲಕತ್ವವನ್ನು ರದ್ದು ಮಾಡಲಾಯಿತು ಮತ್ತು ಬಡ ರೈತರು ಹಾಗೂ ಕೃಷಿ ಕೂಲಿಕಾರರಿಗೆ ಸಾಮೂಹಿಕ ಕೃಷಿ ಕ್ಷೇತ್ರ(ಫಾರ್ಮ್)ಗಳಲ್ಲಿ ಮತ್ತು ಸಹಕಾರಿಗಳಲ್ಲಿ ಭಾಗೀದಾರಿಕೆ ನೀಡಲಾಯಿತು.

* ಕ್ರಾಂತಿಯಾದ ನಂತರ ತಕ್ಷಣವೇ ಎಲ್ಲ ನಾಗರಿಕರಿಗೆ ಪುಕ್ಕಟೆ ವೈದ್ಯಕೀಯ ಪಾಲನೆ ಒದಗಿಸಲಾಯಿತು.

* ಎಲ್ಲರಿಗೂ ಉದ್ಯೋಗ ಒದಗಿಸಲಾಯಿತು, ನಿರುದ್ಯೋಗದ ನಿರ್ಮೂಲನ ವಾಯಿತು.

* ಮಹಿಳೆಯರಿಗೆ ಸಮಾನ ಹಕ್ಕುಗಳು, ಸಮಾನ ಸಂಬಳ, ಹೆರಿಗೆ ಸೌಲಭ್ಯಗಳು ಮತ್ತು ವಿವಾಹ ವಿಚ್ಛೇದನದ ಹಕ್ಕುಗಳನ್ನು ಲಭ್ಯಗೊಳಿಸಿದ್ದು ಹೊಸ ಸರಕಾರದ ಮೊದಲ ನಿರ್ಧಾರಗಳಲ್ಲಿ ಒಂದು. ಅಕ್ಟೋಬರ್ ಕ್ರಾಂತಿ ಮಹಿಳೆಯರಿಗೆ ಮತದಾನ

ಹಕ್ಕು ನೀಡಿತು. ಬ್ರಿಟನ್ನಿನಲ್ಲಿ ಕೂಡ ಮಹಿಳೆಯರಿಗೆ ಮತದಾನದ ಹಕ್ಕು ಲಭ್ಯವಾದದ್ದು ಒಂದು ದಶಕದ ನಂತರ ೧೯೨೮ರಲ್ಲಿ ಎಂಬುದನ್ನು ಗಮನಿಸಬೇಕು.

* ಜನಗಳಿಗೆ ಲಭ್ಯವಿರುವ ಸಾಂಸ್ಕೃತಿಕ ಸಂಪನ್ಮೂಲಗಳಲ್ಲಿ ಅಪಾರ ವಿಸ್ತರಣೆಯಾಯಿತು. ಪುಸ್ತಕಗಳ ಪ್ರಕಟಣೆ, ಸಿನೆಮಾ, ಸಂಗೀತ , ಕಲೆ ಇತ್ಯಾದಿಗಳಿಗೆ ಅಪಾರ ನಿಧಿಗಳನ್ನು ಒದಗಿಸಲಾಯಿತು.

 

 

 

 

Donate Janashakthi Media

Leave a Reply

Your email address will not be published. Required fields are marked *