ಬಿಹಾರ ಚುನಾವಣೆ : ವಿರೋಧಿ ಅಲೆಯಲ್ಲಿ ನೀತೀಶ್-ಮೋದಿ, ಗೆಲ್ಲುತ್ತಾ ಮಹಾಮೈತ್ರಿ?

ಬಿಹಾರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಗಳ ಪ್ರಚಾರ ಜೋರಾಗಿ ಶುರುವಾಗಿದೆ. ಜೆಡಿಯು ಮತ್ತು ಎನ್,ಡಿ.ಎ ಮೈತ್ರಿಕೂಟಕ್ಕೆ ಸೋಲಾಗಲಿದೆ ಎಂದು ಅನೇಕ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ನೀತಿಶ್ ಕುಮಾರ್ ಗೆ ಸೋಲಿನ ಭೀತಿ ಎದುರಾಗಿದೆಯಾ? ಈ ಬಾರಿ ಬಿಹಾರ್ ಆರ್.ಜೆ.ಡಿ ಕಾಂಗ್ರೆಸ್, ಎಡಪಕ್ಷಗಳ ಮಹಾಮೈತ್ರಿಯ ಪಾಲಾಗಲಿದೆಯಾ? ಕಿಂಗ್ ಮೇಕರ್ ಆಗುತ್ತಾ ಎಲ್.ಜೆಪಿ? ಬಿಹಾರದಲ್ಲಿ ಎದ್ದಿದೆಯಾ ಮೋದಿ ವಿರೋಧಿ ಅಲೆ? ಮುಂದೆ ಓದಿ !

ರಾಜಕಾರಣದಲ್ಲಿ ಜಾತಿ ಪ್ರಭಾವ ದಟ್ಟವಾಗಿರುವ ಪ್ರದೇಶಗಳಲ್ಲಿ ಬಿಹಾರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿ ಪ್ರತಿಭಾರಿಯು ಜಾತಿವಾರು ಮತಗಳ ದೃವಿಕರಣ ಬಲಗೊಳ್ಳುತ್ತಿರುವುದನ್ನು ನೋಡ್ತಾ ಇದ್ದೇವೆ. ಬಿಹಾರ್ ದಲ್ಲಿ ಪ್ರದೇಶಿಕ ಪಕ್ಷಗಳದ್ದೆ ಹವಾ ಜೋರಾಗಿದೆ. ಆರ್, ಜೆ,ಡಿ ಯನ್ನೊಳಗೊಂಡಂತೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಮಹಾಮೈತ್ರಿಯನ್ನು ಮಾಡಿಕೊಂಡಿವೆ.

ಜೆಡಿಯು ಜೊತೆ ಬಿಜೆಪಿ ಮೈತ್ರಿಕೂಟ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.  243 ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಯು 122 ಸ್ಥಾನ, ಬಿಜೆಪಿ  121 ಸ್ಥಾನವನ್ನು ಹಂಚಿಕೊಂಡು ಸ್ಪರ್ಧೆ ನಡೆಸುತ್ತಿವೆ. ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ 20 ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಯು ಪರವಾಗಿಯೂ ಮೋದಿ ರ್ಯಾಲಿ ಮಾಡಲಿದ್ದು  ಸ್ಥಳೀಯ ಬಿಜೆಪಿ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದೆ. ಕಳೆದ ಬಾರಿ ಮೋದಿ 35 ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿ ಬಾರಿ ಮುಖಂಭಂಗ ಅನುಭವಿಸಿದ್ದರು.  ಇತ್ತ ದಲಿತ ವರ್ಗದ ಮತಗಳನ್ನು ಸೆಳೆಯುಲು ತಂತ್ರಗಳನ್ನು ಹೂಡಿರುವ ನಿತಿಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸ್ಸನ್ನು ಹೊತ್ತಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ದೊಡ್ಡ ವಿಫಲತೆ ಕಂಡಿರುವ ಬಿಜೆಪಿ  ಬಿಹಾರ ಚುನಾವಣೆಯಲ್ಲಿ ಕೊರೊನಾ ರಾಜಕೀಯ ಮಾಡುತ್ತಿದೆ.  ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಬಿಜೆಪಿಯ ಈ ಘೋಷಣೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ನಿರ್ಮಲಾ ಸೀತಾರಾಮನ್ ರವರಿಗೆ ಬಿಹಾರದ ಜನ ಮಾತ್ರ ಕೊರೊನಾದಿಂದ ಮುಕ್ತವಾಗಬೇಕು ಎಂಬ ಆಶಯ ಇದ್ದಂತೆ ಇದೆ.  ಇತರೆ ರಾಜ್ಯದ ಜನ ಕೊರೊನಾದಿಂದ ನರಳುತ್ತಿರುವುದು ಕಾಣುತ್ತಿಲ್ಲವೆ ಎಂದು ಕಿಡಿ ಕಾರಿದ್ದಾರೆ. ಮತ ನೀಡಿದವರಿಗೆ ಮಾತ್ರ ಲಸಿಕೆ ನೀಡುತ್ತೇವೆ ಎಂದು ಬಿಜೆಪಿ ಹೇಳುತ್ತಿರುವುದು ಸಿನಿಕತನದಿಂದ ಕೂಡಿದೆ. ಕೂಡಲೇ ಚುನಾವಣಾ ಆಯೋಗ ನಿರ್ಮಲಾ ಸಿತಾರಾಂ ನ ಮೇಲೆ ದೂರನ್ನು ದಾಖಲಿಸಬೇಕು ಎಂದು ಸಂಸದ ಶಶಿ ತರೂರ್ ಆಗ್ರಹಿಸಿದ್ದಾರೆ.

ವಿರೋಧ ಪಕ್ಷಗಳನ್ನು ಒಗ್ಗುಡಿಸುವ ಮೂಲಕ ಮಹಾಮೈತ್ರಿ ಮಾಡಿಕೊಂಡಿರುವ ಆರ್.ಜೆ.ಡಿ  ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಈ ಚುನಾವಣೆಯಲ್ಲಿ ಒಗ್ಗೂಡಿಸುವ ಮೂಲಕ ಬದಲಾವಣೆಗಾಗಿ ನಮ್ಮ ಪ್ರತಿಜ್ಞೆ ಎಂಬ ಘೋಷಣೆಯಡಿ ಚುನಾವಣೆ ಧುಮಿಕಿದೆ.  ಕೃಷಿ ಮಸೂದೆಗಳನ್ನು ರದ್ದುಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ. 163 ಕ್ಷೇತ್ರಗಳಲ್ಲಿ ಆರ್.ಜೆ.ಡಿ. ಸ್ಪರ್ಧೆ ಮಾಡುತ್ತಿದ್ದು, 80 ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ.  80 ರಲ್ಲಿ 51 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸ್ಪರ್ಧಿಸುತ್ತಿವೆ. 29 ಕ್ಷೇತ್ರಗಳಲ್ಲಿ ಎಡಪಕ್ಷಗಳು ಸ್ಪರ್ಧೆ ಮಾಡುತ್ತಿವೆ. ಈಗಾಗಲೇ ಮೂರು ಜನ ಎಂ.ಎಲ್.ಎ ಗಳನ್ನು ಹೊಂದಿರುವ ಸಿಪಿಐಎಂಲ್ 19 ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತಿದೆ. ಸಿಪಿಐ 6 ಕ್ಷೇತ್ರಗಳಲ್ಲಿ, ಸಿಪಿಐಎಂ ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿವೆ. ಈ ಮೂಲಕ ಬಿಹಾರದಲ್ಲಿ ಎಡ ಪಕ್ಷಗಳು ಪುನಶ್ಚೇತನಗೊಳ್ಳುವ ಮೂಲಕ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

ಎನ್.ಡಿ.ಎ  ಮಿತ್ರ ಪಕ್ಷ ಎಲ್.ಜೆ.ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಕೇಂದ್ರದಲ್ಲಿ ಮಾತ್ರ ನಮಗೆ ಎಲ್.ಜೆ.ಪಿ ಬೆಂಬಲ ನೀಡಿದೆ, ಬಿಹಾರದಲ್ಲಿ ಇದು ಸಾಧ್ಯವಿಲ್ಲ ಹಾಗಾಗಿ ಚುನಾವಣೆಯಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಪ್ರಸ್ಥಾಪ ಮಾಡುವುದಾಗಲಿ ಅಥವಾ ಮೋದಿಯವ ಫೋಟೊವನ್ನು ಬಳಸುವುದಾಗಲಿ ಮಾಡಬಾರದು ಎಂದು ಬಿಜೆಪಿ ಬಿಹಾರ ರಾಜ್ಯ ಘಟಕ ಎಲ್.ಜೆಪಿ ಗೆ ಎಚ್ಚರಿಕೆ ನೀಡಿದೆ. ಇವೆಲ್ಲದರಿಂದ  ರೋಸಿ ಹೋಗಿರುವ ಎಲ್.ಜಿ.ಪಿ 143 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು. ಎಲ್.ಜೆಪಿ ಯನ್ನು ಮುಂದಿಟ್ಟುಕೊಂಡು  ಜಿಡೆಯು ಸೀಟಿಗಳನ್ನು ತಗ್ಗಿಸುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಇನ್ನು ಕೆಲ ಸೀಟುಗಳನ್ನು ಪಡೆಯುವ ಮೂಲಕ ಕಿಂಗ್ ಮೇಕರ್ ಆಗಿ ಡಿಸಿಎಂ ಇಲ್ಲವೇ ಕೇಂದ್ರದಲ್ಲಿ ಮಂತ್ರಿಯಾಗುವ ಕನಸನ್ನು ಕಾಣುತ್ತಿದ್ದರೆ. ಇದೊಂದು ರೀತಿ ಅರಾಜಕತೆಯಿಂದ ಕೂಡಿರುವ ರಾಜಕಾರಣವಾಗಿದೆ. ನಮ್ಮ ರಾಜ್ಯದಲ್ಲಿ ಜೆಡಿಎಸ್ ನಂತೆ ಅವಕಾಶವಾದಿ ರಾಜಕಾರಣವನ್ನು ಎಲ್ ಜೆ.ಪಿ ಮಾಡುತ್ತಿದೆ.

ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಸಿಪಿಐಎಂ  15 ವರ್ಷದಿಂದ ಜೆಡಿಯು ಮತ್ತು ಬಿಜೆಪಿ ಆಡಳಿತ ನಡೆಸುತ್ತಿದ್ದು  ಜನವಿರೋಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆಯನ್ನು ನಾಶ ಮಾಡಲಾಗಿದೆ. ಎಂದು ಸಿಪಿಐಎಂ ಆರೋಪಿಸಿದೆ. ಮತದಾರ ಆಶಯಗಳನ್ನು ಈಡೇರಿಸುವ ಮತ್ತು ಬಿಹಾರದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ ಹಕ್ಕುಗಳನ್ನು ಉಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ. ಮಹಾಮೈತ್ರಿಯನ್ನು ಬೆಂಬಲಿಸುವಂತೆ ಸಿಪಿಐಎಂ ಮನವಿ ಮಾಡಿದೆ.

ಜಾತಿ ರಾಜಕಾರಣ ಬಿಹಾರದಲ್ಲಿ ದಟ್ಟವಾಗಿದ್ದು ಪ್ರತಿ ಚುನಾವಣೆಯಲ್ಲಿ ಜಾತಿ ರಾಜಕಾರಣ  ಇಲ್ಲಿ ಮುನ್ನಲಗೆ ಬರುತ್ತದೆ. ಮೇಲ್ಜಾತಿ  ಮತ್ತು ಬನಿಯಾ  ಜನಾಂಗದವರು ಬೆಜೆಪಿ ಬೆನ್ನಿಗಿದ್ದರೆ. ಮುಸ್ಲಿಂ  ಮತ್ತು ಯಾಧವ ಜನಾಂಗದವರು  ಆರ್ಜೆಡಿ ಬೆನ್ನಿಗಿದ್ದಾರೆ,  ಒಬಿಸಿಗಳು  ಜೆಡಿಯು ಬೆನ್ನಿಗಿದ್ದು ದಲಿತರು ಮತುಗಳು ಎಡಪಕ್ಷದ ಜೊತೆಗಿವೆ.

ಇದೆಲ್ಲ ಗಮನಿಸುತ್ತಿದ್ದರೆ ಬಿಹಾರದ ಗದ್ದುಗೆ ಯಾರ ಮಡಿಲಿಗೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಅತೀಯಾದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಯಿಂದಾಗಿ ಈ ಬಾರಿ ಜೆಡಿಯು ನೆಲಕ್ಕಿಚ್ಚುವ ಮೂಲಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಪದವಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿ ವಿರೋಧಿ ಅಲೆ ವ್ಯಾಪಕವಾಗಿದ್ದು ಮ್ಯೋದಿಯ ಮ್ಯಾಜಿಕ್ ಇಲ್ಲಿ  ನಡೆಯುವುದಿಲ್ಲ ಎಂದು ರಾಜಕೀಯ ತಜ್ಷರು ಹೇಳುತ್ತಿದ್ದಾರೆ. ಹಾಗಾದರೆ  ಬಿಹಾರದಲ್ಲಿ ಗರಿಗೆದರಬಹುದಾ  ಹೊಸ ರಾಜಕೀಯ ಸಮೀಕರಣ? ನವಂಬರ್ 10 ರ ವರೆಗೆ ಕಾದು ನೋಡಬೇಕಿದೆ.

 

 

Donate Janashakthi Media

One thought on “ ಬಿಹಾರ ಚುನಾವಣೆ : ವಿರೋಧಿ ಅಲೆಯಲ್ಲಿ ನೀತೀಶ್-ಮೋದಿ, ಗೆಲ್ಲುತ್ತಾ ಮಹಾಮೈತ್ರಿ?

Leave a Reply

Your email address will not be published. Required fields are marked *