ಪ್ರತಿರೋಧದ ಅಂತರರಾಷ್ಟ್ರೀಯ ಉತ್ಸವ

ಒಗ್ಗಟ್ಟಿನ ಸಜ್ಜುಗೊಳ್ಳುವಿಕೆ ಮತ್ತು ವಿಶಾಲ ಆಂದೋಲನಕ್ಕೆಕರೆ

ಅಕ್ಟೋಬರ್ 5 ರಿಂದ 10 ರ ವರೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿನ ಡಜನ್ಗಟ್ಟಲೆ ಎಡ ರಾಜಕೀಯ ಪಕ್ಷಗಳು, ಜನತಾ ಚಳುವಳಿಗಳು, ಕಾರ್ಮಿಕ ಸಂಘಗಳು ಮತ್ತು ಅಂತರರಾಷ್ಟ್ರೀಯ ನೆಟ್‌ವರ್ಕ್ಗಳು, ಸಾಮ್ರಾಜ್ಯಶಾಹಿ ದಬ್ಬಾಳಿಕೆಯ ವಿರುದ್ಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕ್ರಿಯಾಶೀಲವಾಗಿ ನಡೆಸುತ್ತಿವೆ. ಇದರಲ್ಕಿ, ಆನ್‌ಲೈನ್ ಸೆಮಿನಾರ್‌ಗಳು, ಕಾರ್ಯಾಗಾರಗಳು, ಸೋಷಿಯಲ್ ಮೀಡಿಯಾ ಅಭಿಯಾನಗಳು ಮತ್ತು ಕೆಲವು ಕಡೆಗಳಲ್ಲಿ, ಬೀದಿ ಬದಿ ಹೋರಾಟಗಳು ಇತ್ಯಾದಿಯಾಗಿ, ಈ ಕ್ರಿಯೆಯಲ್ಲಿ ಕ್ರಿಯಶೀಲಾ ಸಂಘಟನೆಗಳು, ಪ್ರಗತಿಪರರು  ಒಳಗೊಂಡಿದ್ದಾರೆ. ಚರ್ಚೆಯ ವಿಷಯಗಳಲ್ಲಿ ಪ್ರಮುಖವಾಗಿ, ಸಾಮ್ರಾಜ್ಯಶಾಹಿಯ ಇತಿಹಾಸ ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು, ಇಂದಿನ ಜನರ ಜೀವನದ ಮೇಲೆ ಅದರ ಕೆಟ್ಟ ಪ್ರಭಾವ ಕುರಿತ್ತಾದಾಗಿದೆ. ಆ ಮೂಲಕ, ಶಿಕ್ಷಣ, ಒಗ್ಗಟ್ಟಿನ ಸಜ್ಜುಗೊಳ್ಳುವಿಕೆ ಮತ್ತು ವಿಶಾಲ ಮತ್ತು ಬೃಹತ್ ಆಂದೋಲನದ ಕರೆ ಇದರ  ಮೂಲ ಉದ್ದೇಶಗಳಾಗಿವೆ.

ಇದರ ಸಂಘಟಕರು, ಇಂಟರ್ ನ್ಯಾಷನಲ್ ಪೀಪಲ್ಸ್ ಅಸೆಂಬ್ಲಿ, ಲಾ ವಿಯಾ ಕ್ಯಾಂಪೆಸಿನಾ, ವರ್ಲ್ಡ್ ಮಾರ್ಚ್ ಆಫ್ ವುಮೆನ್, ಫೋರೊ ಡಿ ಸಾವೊ ಪಾಲೊ, ಆಲ್ಬಾದ ಸಾಮಾಜಿಕ ಚಳುವಳಿಗಳು, ಟ್ರೈಕೊಂಟಿನೆಂಟಲ್ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ರಿಸರ್ಚ್, ದಿ ಮಹಿಳಾ ಅಂತರರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಯುರೋಪಿಯನ್ ಎಡ ಪಕ್ಷಗಳು ಮತ್ತು ಡಜನ್ಗಟ್ಟಲೆ ಇತರೆ ಸಾಮಾನ್ಯ ಚಳುವಳಿಗಳ ಸಂಘಟನೆಗಳು ಸೇರಿವೆ.

ಸಾಮ್ರಾಜ್ಯ ಶಾಹಿ ವಿರೋಧಿ. ಕ್ರಿಯೆಯ‘   ವಾರದಲ್ಲಿ  “ಭವಿಷ್ಯಕ್ಕಾಗಿ ಪ್ರಣಾಳಿಕೆಯನ್ನು ಸಂಘಟಕರು ಬಿಡುಗಡೆ ಮಾಡಿದ್ದಾರೆ :-  ಅದು ಹೀಗಿದೆ:
“ಪ್ರಸಕ್ತ  ಜಗತ್ತು ಬೆಂಕಿಯಲ್ಲಿದೆ, ವೈರಸ್‌ಗಳು ಮೆರವಣಿಗೆಯಲ್ಲಿವೆ, ಹಸಿವು ಭೂಮಿಯನ್ನು ಕಾಡುತ್ತಿದೆ, ಮತ್ತು ಈ ಅವ್ಯವಸ್ಥೆಯಲ್ಲೂ, ನಾವು – ವಿಶಾಲವಾದ  ಜಗತ್ತಿನ ಬಹುಪಾಲು ಜನರು – ಭವಿಷ್ಯದ ಸಾಧ್ಯತೆಯನ್ನು ಬಿಟ್ಟುಕೊಟ್ಟಿಲ್ಲ.  ಇದಕ್ಕಿಂತ ಉತ್ತಮವಾದದ್ದನ್ನು, ಲಾಭ ಮತ್ತು ಸವಲತ್ತುಗಳನ್ನು ಮೀರಿದ ಜಗತ್ತಿಗಾಗಿ ಅಂದರೆ, ಪ್ರಸ್ತುತ ತನ್ನ ಯುದ್ದಕೋರ ನೀತಿಯಿಂದ ಜಗತ್ತನ್ನು ದಬ್ಬಾಳಿಕೆಯ ಮೂಲಕ, ಹಾದಿ ತಪ್ಪಿಸುತ್ತಿರುವ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯನ್ನು ಮೀರಿದ ಜಗತ್ತು, ನಮ್ಮ ಭವಿಷ್ಯದ ಜಗತ್ತು. ನಮ್ಮದು ಮಾನವೀಯತೆ’ ಹಾಡನ್ನು ಹಾಡುವ ಜಗತ್ತು ಎಂದು ನಾವು ಭಾವಿಸುತ್ತೇವೆ.

ನಮ್ಮ ಹೃದಯಗಳು ಅವರ ಬಂದೂಕುಗಳಿಗಿಂತ ವಿಶಾಲವಾಗಿವೆ;  ನಮ್ಮ ಪ್ರೀತಿ ಮತ್ತು ನಮ್ಮ ಹೋರಾಟವು ಅವರ ದುರಾಸೆ ಮತ್ತು ಉದಾಸೀನತೆಯನ್ನು  ಮೆಟ್ಟಿ ನಿಲ್ಲುತ್ತದೆ ಮತ್ತು ಹೋಗಲಾಡಿಸುತ್ತದೆ. ನಮ್ಮ ಚಳುವಳಿಗಳಲ್ಲಿ  ನಮಗೆ ಅಪಾರ ನಂಬಿಕೆ ಇದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಇಂತಹ ಹೋರಾಟಗಳಲ್ಲಿ ನಾವು ಗೆದ್ದಿದ್ದೇವೆ ಎಂಬುದು ವಾಸ್ತವ.

COVID-19 ಸಾಂಕ್ರಾಮಿಕ ಮಹಾಮಾರಿ ರೋಗದ ಅಪಾಯಕಾರಿಯಾದ, ಈ ಸಮಯದಲ್ಲೂ,ಮತ್ತು ಸಾಮ್ರಾಜ್ಯ ಶಾಹಿ ಜಗತ್ತಿನಿಂದ, ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ  ಅಡೆತಡೆಗಳ ನಡುವೆಯೂ, ಸಾಮ್ರಾಜ್ಯ ಶಾಹಿ ವಿರೋಧಿ ಈ ವಾರ ಕ್ರಿಯೆ’ ಯನ್ನು ನಡೆಸುತ್ತಿರುವುದು, ಜನತೆಯ ಚಳುವಳಿಗಳಲ್ಲಿ ನಮಗಿರುವ ಅಚಲವಾದ ನಂಬಿಕೆಗೆ ಹಿಡಿದ ಕನ್ನಡಿಯಾಗಿದೆ.

ಕೋಟ್ಯಾಂತರ ಜನರು ನಿರುದ್ಯೋಗ, ಹಸಿವು ಮತ್ತು ಇತರ ರೀತಿಯ ಅಭದ್ರತೆಯಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿಯೇ, ಬಂಡವಾಳಶಾಹಿ ವ್ಯವಸ್ಥೆಯ ವಿರೋಧಾಭಾಸಗಳು ತೀಕ್ಷ್ಣಗೊಂಡಿವೆ”.  ಈ ಪರಿಸ್ಥಿತಿಯನ್ನು ಸಾಮ್ರಾಜ್ಯಶಾಹಿಗಳು ತಮ್ಮ ಲಾಭವನ್ನು  ಅಕ್ರಮವಾಗಿ  ಹೆಚ್ಚಿಸಿಕೊಳ್ಳುವಲ್ಲಿ ಮುಂದುವರಿಯುತ್ತಿದ್ದಾರೆ. ಇದು ಅವರ ವರ್ಗಗುಣವಾಗಿದೆ. ಶೋಷಣೆ ಸಾಮ್ರಾಜ್ಯ ಶಾಹಿಯ ಮೂಲಗುಣ. ಈ ಸಂದರ್ಭದಲ್ಲಿ ಏಕಪಕ್ಷೀಯ ದಬ್ಬಾಳಿಕೆಯ ಕ್ರಮಗಳನ್ನು ದ್ವಿಗುಣ ಗೊಳಿಸುತ್ತಾರೆ. ಮಿಲಿಟರಿ ಮತ್ತು ಪ್ರಾದೇಶಿಕ ನಿಯಂತ್ರಣವನ್ನು ಹೆಚ್ಚಿಸಿ ಕೊಂಡು, ಯುದ್ಧಕ್ಕೆ ಬೆದರಿಕೆ ಹಾಕುತ್ತಾರೆ.

ಈ ಹಿನ್ನೆಲೆಯಲ್ಲಿ ನಾವುಗಳು, ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ.  ಈ ನಿಟ್ಟಿನಲ್ಲಿ ಅವರ ಇತಿಹಾಸದ ಬಗ್ಗೆ, ಶಿಕ್ಷಣ ಹೊಂದಬೇಕು, ಜೊತೆಗೆ ಒಗ್ಗಟ್ಟಾಗಿ ಸಜ್ಜಾಗಬೇಕು, ಮತ್ತು ಆಂದೋಲನ ನಡೆಸಬೇಕು ಇದು ಅತ್ಯಂತ ಮಹತ್ವದ್ದಾಗಿದೆ. ಈ  ಶಿಕ್ಷಣದ ಪ್ರಕ್ರಿಯೆಯಲ್ಲಿ, ನೇಪಾಳದಿಂದ -ಕೀನ್ಯಾಕ್ಕೆ ಮತ್ತು ದಕ್ಷಿಣ ಆಫ್ರಿಕಾದಿಂದ -ಅರ್ಜೆಂಟೀನಾ ಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಈ ಕ್ರಿಯೆಯಲ್ಲಿ ಪ್ರಮುಖವಾಗಿ, ಒಂದಾದ ಘಾನಾದ ಸಮಾಜವಾದಿ ವೇದಿಕೆ, ಪ್ಯಾನ್ ಆಫ್ರಿಕನ್ ಟೆಲಿವಿಷನ್ ಮತ್ತು “ಪಶ್ಚಿಮ ಆಫ್ರಿಕಾದಲ್ಲಿ ಸಾಮ್ರಾಜ್ಯಶಾಹಿಯ ಅಭಿವ್ಯಕ್ತಿಗಳು” ಎಂಬ ಅಮಿಲ್ಕಾರ್ ಕ್ಯಾಬ್ರಲ್ ಶಾಲೆಯು ಬುಧವಾರ ಚರ್ಚೆಯನ್ನು ಆಯೋಜಿಸಿತ್ತು.

ಸಾಮ್ರಾಜ್ಯಶಾಹಿ ಮಿಲಿಟರಿ ಉದ್ಯೋಗಗಳು ಮತ್ತು ಮಧ್ಯಸ್ಥಿಕೆಗಳ ಚರ್ಚೆಗಳಲ್ಲಿ ಆಗಾಗ್ಗೆ ನಿರ್ಲಕ್ಷ್ಯಕ್ಕೊಳಗಾಗಿದ್ದರೂ, ಆಫ್ರಿಕಾದ ಖಂಡ ಮತ್ತು ನಿರ್ದಿಷ್ಟವಾಗಿ ಪಶ್ಚಿಮ ಆಫ್ರಿಕಾ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಹೆಚ್ಚಿನ ಕಾರ್ಯತಂತ್ರದ ಪ್ರಾಮುಖ್ಯತೆಯ ಪ್ರದೇಶವಾಗಿ ಮುಂದುವರೆದಿದೆ ಮತ್ತು ಸಾಮ್ರಾಜ್ಯಶಾಹಿ ಮಿಲಿಟರೀಕರಣದ ನೊಗದಲ್ಲಿ ಬಳಲುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ಖಂಡದಲ್ಲಿ ಅತಿ ಹೆಚ್ಚು ಸೈನಿಕರನ್ನು ಹೊಂದಿದ್ದು, ಆಫ್ರಿಕಾದ ಖಂಡದಲ್ಲಿ ಕನಿಷ್ಠ 34 ಯುಎಸ್ ಮಿಲಿಟರಿ ನೆಲೆಗಳು ಹೆಚ್ಚಾಗಿ ಸಹೇಲ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ.  ಈ ಚರ್ಚೆಯು ಪಶ್ಚಿಮ ಆಫ್ರಿಕಾದ ಪ್ರದೇಶದ ಮೇಲೆ ಸಾಮ್ರಾಜ್ಯಶಾಹಿ ಪ್ರಭಾವ ಕುರಿತಂತೆ ಹೆಚ್ಚು ಪರಿಣಾಮಕಾರಿಯಾಗಿತ್ತು ಎನ್ನಲಾಗಿದೆ.

ಈ ವಾರದುದ್ದಕ್ಕೂ, ವೆನೆಜುವೆಲಾ ಮತ್ತು ಬೊಲಿವೇರಿಯನ್ ಕ್ರಾಂತಿಯ ಒಗ್ಗಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಮ್ರಾಜ್ಯಶಾಹಿ ಆಕ್ರಮಣಶೀಲತೆಯ ಸಂಘಟಿತ ಅಭಿಯಾನದಿಂದ ವೆನೆಜುವೆಲಾ ಅತ್ಯಂತ ತೀವ್ರ ಹೊಡೆತಕ್ಕೆ ಒಳಗಾಗಿದೆ, ಇದನ್ನು ಅನೇಕರು ಹೈಬ್ರಿಡ್ ಯುದ್ಧ ಎಂದು ವರ್ಗೀಕರಿಸಿದ್ದಾರೆ.  ಈ ಯುದ್ಧವು ಪೂರ್ಣ ಮಿಲಿಟರಿ ನಿಶ್ಚಿತಾರ್ಥವನ್ನು ಕಂಡಿಲ್ಲವಾದರೂ, ಇದರ ಪರಿಣಾಮವು ಕಡಿಮೆ ವಿನಾಶಕಾರಿ ಏನಲ್ಲಾ? ಈ ವಿಷಯವು ವಾರದ ಮೊದಲ ದಿನದಂದು ಟ್ರೈಕಾಂಟಿನೆಂಟಲ್: ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ರಿಸರ್ಚ್ ಮತ್ತು ಸಿಮೋನ್ ಬೊಲಿವಾರ್ ಇನ್ಸ್ಟಿಟ್ಯೂಟ್ ಆಯೋಜಿಸಿದ “ಲೆಟ್ ಅಸ್ ಬ್ರೀಥ್” ಎಂಬ ವಿಚಾರ ಸಂಕಿರಣದ ವಿಷಯವಾಗಿತ್ತು.

ವೆನೆಜುವೆಲಾದ ವಿದೇಶಾಂಗ ಮಂತ್ರಿ ಜಾರ್ಜ್ ಅರೆಜಾ, ವೆನೆಜುವೆಲಾದ ಸ್ತ್ರೀಸಮಾನತಾವಾದಿ ಕಾರ್ಯಕರ್ತೆ ರೆಬೆಕಾ ಮ್ಯಾಡ್ರಿಜ್, ಆಹಾರದ ಹಕ್ಕಿನ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಹಿಲಾಲ್ ಎಲ್ವರ್ ಮತ್ತು ವೆನಿಜುವೆಲಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂತರರಾಷ್ಟ್ರೀಯ ಸಂವಹನ ಉಪಾಧ್ಯಕ್ಷ ವಿಲಿಯಂ ಕ್ಯಾಸ್ಟಿಲ್ಲೊ ಇದರಲಿ ಭಾಗವಹಿಸಿದ್ದರು. “ದಿಗ್ಬಂಧನಗಳು ಮತ್ತು ನಿರ್ಬಂಧಗಳ ” ಅಡಿಯಲ್ಲಿ ದೇಶಗಳಲ್ಲಿ ವಾಸಿಸುವ ಮಹಿಳೆಯರೊಂದಿಗೆ ‘ ವಲ್ಡ್ ಮಾರ್ಚ್ ಆಫ್ ವುಮೆನ್’ ಸಂಘಟನೆ ಬುಧವಾರ ಸಭೆ ನಡೆಸಿದೆ. ಕ್ಯೂಬಾ, ವೆನೆಜುವೆಲಾ, ಇರಾನ್, ಸಿರಿಯಾ ಮತ್ತು ಪ್ಯಾಲೆಸ್ಟೈನ್ ಯನ್ನಿನ  ಮಹಿಳೆಯರ ಮತ್ತು ಅವರ ಜನರ ಜೀವನದ ಮೇಲೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ ನ ಪ್ರಬಲ ರಾಷ್ಟ್ರಗಳು ಹೇಗೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತಂತೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ ಲಿಂಕ್ ಕ್ಲಿಕ್ ಮಾಡಿ :ನ್ಯಾಯ ಬೇಡುತ್ತಿದೆ ನ್ಯಾಯವ

ಅಕ್ಟೋಬರ್ 9, ಶುಕ್ರವಾರ, ಅರ್ನೆಸ್ಟೊ “ಚೆ” ಗುವೇರಾ’. ಅವರ ಹತ್ಯೆಯ ವಾರ್ಷಿಕೋತ್ಸವ, ಲೆಫ್ಟ್ ವರ್ಡ್ ಬುಕ್ಸ್ ಮತ್ತು ಇತರ 17 ಪ್ರಕಾಶನ ಸಂಸ್ಥೆಗಳು, ಲ್ಯಾಟಿನ್ ಅಮೆರಿಕನ್ ಕ್ರಾಂತಿಕಾರಿ ಕುರಿತು ಪುಸ್ತಕವನ್ನು ಬಿಡುಗಡೆ ಮಾಡುತ್ತಿವೆ. ಈ ಪುಸ್ತಕವು ಚೆ ಅವರ “ವಿಶ್ವದ ಜನರಿಗೆ ಸಂದೇಶ” ದ ಮರು-ಸಂಪಾದಿತ ಆವೃತ್ತಿಯನ್ನು ಹೊಂದಿದೆ, ಅದರಲ್ಲಿ ಅವರು “ಎರಡು- ಮೂರು ಅಥವಾ  ಅನೇಕ ವಿಯೆಟ್ನಾಂಗಳನ್ನು ರಚಿಸಬೇಕು” ಎಂದು ಕರೆಯುತ್ತಾರೆ ಮತ್ತು ಎಲ್ಲಾ ರೀತಿಯ ಪ್ರಾಬಲ್ಯ ಮತ್ತು ವಸಾಹತುಶಾಹಿಯನ್ನು ಎದುರಿಸಲು ಏಕತೆಯನ್ನು ಸೃಷ್ಟಿಸುವ ಅವರ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 10 ರಂದು ಜನರ ಪ್ರತಿರೋಧದ ಅಂತರರಾಷ್ಟ್ರೀಯ ಉತ್ಸವವನ್ನು ಆಯೋಜಿಸಲಾಗುತ್ತಿದೆ, ಇದು ವಾಸ್ತವಿಕ ಅಂತರರಾಷ್ಟ್ರೀಯವಾದಿ ರಾಜಕೀಯ-ಸಾಂಸ್ಕೃತಿಕ ಉತ್ಸವವಾಗಿದ್ದು, ಇದು “ಕಲಾತ್ಮಕ ಪ್ರಸ್ತುತಿಗಳ ಮೂಲಕ (ಸಂಗೀತ, ವೀಡಿಯೊಗಳು, ದೃಶ್ಯ ಕಲೆಗಳು, ಸಾಹಿತ್ಯ).” ಉತ್ಸವವು ಜನರ ಚಳುವಳಿಗಳು, ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು ಮತ್ತು ಇತರ ವ್ಯಕ್ತಿಗಳ ಸಂದೇಶಗಳನ್ನು ಪ್ರದರ್ಶಿಸುತ್ತದೆ.
ಒಟ್ಟಾರೆಯಾಗಿ, ಸಾಮ್ರಾಜ್ಯ ಶಾಹಿ ದಬ್ಬಾಳಿಕೆ ಮತ್ತು ಅದರ ಅಮಾನವೀಯ ವರ್ಗ ಮೂಲ ತತ್ವಗಳ ವಿರುದ್ದದ ಬಗ್ಗೆ, ಸೂಕ್ತ ಶಿಕ್ಷಣ, ಒಗ್ಗಟ್ಡಿನ ಸಜ್ಜುಗೊಳ್ಳುವಿಕೆ ಮತ್ತು ವಿಶಾಲ ಆಂದೋಲನಕ್ಕೆ ಕರೆ ನೀಡುವ, “ಸಾಮ್ರಾಜ್ಯ ಶಾಹಿ ವಿರೋಧಿ ಈ ವಾರ ಕ್ರಿಯೆಯು’ ಅಶಾದಾಯಕ ಬೆಳಕು ಚೆಲ್ಲುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಪೀಪಲ್ಸ್ ಡಿಸ್ ಪ್ಯಾಚ್ನಿಂದ

ಸಂಗ್ರಹ ಅನುವಾದ: ನಾಗರಾಜ ನಂಜುಂಡಯ್ಯ

Donate Janashakthi Media

Leave a Reply

Your email address will not be published. Required fields are marked *