RTE ವಿಸ್ತರಣೆಗೆ ಒತ್ತಾಯಿಸಿ ರಾಜ್ಯ ವ್ಯಾಪಿ ಪ್ರತಿಭಟನೆ

ಬೆಂಗಳೂರು : RTE ಕಾಯ್ದೆಯನ್ನು 9 ಮತ್ತು 10 ನೆ ತರಗತಿಗೆ ವಿಸ್ತರಿಸಲು ಮತ್ತು RTE  ಡ್ರಾಪ್ ಔಟ್ ಕುರಿತು ತನಿಖೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ SFI ನಿಂದ ಇಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಯಿತು.

ಕೊವೀಡ್ ಸೋಂಕುನಿಂದಾಗಿ ಶಾಲೆಗಳು ಮುಚ್ಚಿರುವುದರಿಂದ ಅಕ್ಷರ ದಾಸೋಹ ಯೋಜನೆಯಡಿಯ ಆಹಾರ ಧಾನ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಿಸಲು ಒತ್ತಾಯಿಸಿ, ಹಾಗೂ 2015 ರಲ್ಲಿ ನೇಮಕಾತಿಯಾಗಿರುವ 1203  ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ಈ ಕೂಡಲೇ ಆದೇಶ ಪತ್ರವನ್ನು ನೀಡಲು ಒತ್ತಾಯಿಸಿ ಬೆಂಗಳೂರು, ಕೋಲಾರ, ಗಂಗಾವತಿ, ಬೀದರ್, ರಾಯಚೂರಿನ ಕವಿತಾಳ, ಜಾಲಹಳ್ಳಿ, ಗಜೇಂದ್ರಗಡ, ಯಲಬುರ್ಗಾ, ಮುಳಬಾಗಿಲು, ದಾವಣಗೆರೆಯ ಜಗಳೂರು, ಹೊಸಪೇಟೆ, ಹಗ್ಗರಿಬೊಮ್ಮನಹಳ್ಳಿ, ಹಾವೇರಿಯ ಮೆಡ್ಲೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ  ಸಂಬಂಧಿಸಿದ ಅಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ SFI ರಾಜ್ಯ ನಾಯಕರ ನಿಯೋಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಈ ನಿಯೋಗದಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ, ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವಾರಳ, ಎಸ್ಎಫ್ಐ ಮುಖಂಡರಾದ ಬಸವರಾಜ ಗುಳೇದಾಳ್, ಉಮೇಶ್ ನಾಯಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *