ಉಪಚುನಾವಣೆಯಲ್ಲಿ ಎಲ್ಲರೂ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ: ಡಿ.ಕೆ ಶಿವಕುಮಾರ್

Please follow and like us:

ಬೆಂಗಳೂರು: ‘ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರೂ ವೀಕ್ಷಕರಿಲ್ಲ. ನನ್ನನ್ನೂ ಸೇರಿದಂತೆ ಎಲ್ಲರೂ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು ‘ಉಪಚುನಾವಣೆಯಲ್ಲಿ ಯಾರೂ ವೀಕ್ಷಕರಿಲ್ಲ. ಎಲ್ಲರೂ ಕಾರ್ಯಕರ್ತರೆ. ನಾನು ಕಾರ್ಯಕರ್ತನೆ. ಎಲ್ಲರೂ ಹೋಗಿ ಕೆಲಸ ಮಾಡುವವರೇ. ಯಾರೂ ವೀಕ್ಷಣೆ ಮಾಡುವವರಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸರಳವಾಗಿ ರೈತರ ಸಮಾವೇಶ:

ಕೋವಿಡ್ ಇರುವುದರಿಂದ ನಾಳೆ ಸಾಧಾರಣವಾಗಿ ರೈತರ ಸಮಾವೇಶವನ್ನು ಮಂಡ್ಯದಲ್ಲಿ ನಡೆಸುತ್ತಿದ್ದೇವೆ. ಜತೆಗೆ ಸಹಿ ಸಂಗ್ರಹ ಆಂದೋಲನ ಆರಂಭಿಸುತ್ತಿದ್ದೇವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರು ಬರುತ್ತಿದ್ದಾರೆ. ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಕಾಂಗ್ರೆಸ್ ನನ್ನ ಜಾತಿ:

ನನಗೆ ಕಾಂಗ್ರೆಸ್ ಪಕ್ಷವೇ ಜಾತಿ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ಸಮುದಾಯ? ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ಕಾಂಗ್ರೆಸ್ ಪಕ್ಷವೇ ನನ್ನ ಜಾತಿ. ಅವರು ದೊಡ್ಡವರು, ಏನು ಬೇಕಾದರೂ ಮಾತನಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಶಾಲೆ ಆರಂಭ ವಿಚಾರದಲ್ಲಿ ಸರ್ಕಾರ ಶಾಲೆಗಳು, ಪೋಷಕರ ಜತೆ ಮಾತನಾಡಿ ತೀರ್ಮಾನ ಕೈಗೊಳ್ಳಲಿ. ಸರ್ಕಾರದ ವಿಚಾರದಲ್ಲಿ ನಾನು ಹಸ್ತಕ್ಷೇಪ ಏಕೆ ಮಾಡಲಿ ಎಂದು ಡಿಕೆ ಶಿವಕುಮಾರ ಪ್ರತಿಕ್ರಿಯನ್ನು ವ್ಯಕ್ತಪಡಿಸಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *