‘ಚೆ’ ಒಂದು ವಿಶಿಷ್ಟ ಪುಸ್ತಕ, ಅದರ ವಿಷಯವಾದ ಅಪ್ರತಿಮ ಕ್ರಾಂತಿಕಾರಿಯಂತೆ. ಅಕ್ಟೋಬರ್ 9, 2020 ಚೆ ಯನ್ನು ಸಿಐಎ ಏಜೆಂಟರು ಹತ್ಯೆಗೈದ ದಿನದ 53ನೆಯ ವಾರ್ಷಿಕ. ಈ ವರ್ಷ ಈ ದಿನದ ಸುತ್ತ ಸಾಮ್ರಾಜ್ಯಶಾಹಿ-ವಿರೋಧಿ ವಾರವನ್ನು ಆಚರಿಸಲಾಗುತ್ತಿದೆ.
https://images.app.goo.gl/ftE68uJjEyUhh4Dk8
ಜಗತ್ತಿನ ವಿವಿಧ ದೇಶ- ಪ್ರದೇಶಗಳ ಭಾಷೆಗಳ 20 ಪ್ರಗತಿಪರ ಪ್ರಕಾಶನಗಳು ಅಂದೇ ಜಂಟಿಯಾಗಿ ಚೆ ಕುರಿತ ಒಂದು ಪುಸ್ತಕವನ್ನು ಪ್ರಕಟಿಸುತ್ತಿವೆ. ಭಾರತದ ‘ಲೆಫ್ಟ್ ವರ್ಡ್’ ಮತ್ತು ಅಮೆರಿಕದ ‘ಟ್ರೈಕಾಂಟಿನೆಂಟಲ್ ಇನ್ಸ್ಟಿಟ್ಯೂಟ್’ ಗಳು, ಕ್ರಿಯಾ ಸೇರಿದಂತೆ 20 ಪ್ರಕಾಶನಗಳ ವೇದಿಕೆ ರಚಿಸಿ ಅಂತಾರಾಷ್ಟ್ರೀಯ ಸೌಹಾರ್ದತೆಯ ಈ ವಿಶಿಷ್ಟ ಕಾರ್ಯಾಚರಣೆಯನ್ನು ಸಂಘಟಿಸಿವೆ. ಇಂತಹ ಹಲವು ಜಂಟಿ ಕಾರ್ಯಾಚರಣೆಗಳು ಮುಂಬರಲಿವೆ.
20 ಪ್ರಕಾಶನಗಳ ಪುಸ್ತಕಗಳು ಇಲ್ಲಿ ಲಭ್ಯವಿರುತ್ತವೆ.
ಈ ಪುಸ್ತಕದಲ್ಲಿ ತ್ರಿಖಂಡೀಯ (ಆಫ್ರಿಕಾ, ಏಶ್ಯಾ, ಲ್ಯಾಟಿನ್ ಅಮೆರಿಕ) ಸಮ್ಮೇಳನದಲ್ಲಿ ‘2-3 ವಿಯೆಟ್ನಾಂ ಗಳನ್ನು ಸೃಷ್ಟಿಸಬೇಕು’ ಎಂದು ಚೆ ಕರೆ ಕೊಟ್ಟಿದ್ದ ಖ್ಯಾತ ಭಾಷಣವಿದೆ. ಕ್ಯೂಬಾದಲ್ಲಿ ಸಮಾಜವಾದಿ ಮನುಷ್ಯನನ್ನು ಬೆಳೆಸುವ ಕುರಿತ ಚೆ ಅವರ ಖ್ಯಾತ ಲೇಖನವಿದೆ. ಇವಲ್ಲದೆ ಚೆ ಅವರ ಚಿಂತನೆಗಳ ಸಮಕಾಲೀನ ಪ್ರಸ್ತುತತೆ ಕುರಿತು ಬೆಳಕು ಚೆಲ್ಲುವ ಐಜಾಜ್ ಅಹ್ಮದ್, ವಿಜಯ ಪ್ರಶಾದ್ ಅವರ ಪ್ರಖರ ಲೇಖನಗಳು ಸಹ ಇವೆ.