ರೈತ, ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಗಂಗಾವತಿ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೂಲಿಕಾರರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ರೈತರ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ಅದರ ಬಾಡಿಗೆಯನ್ನು ನೀಡಬೇಕೆಂದು ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘವು ಜಂಟಿಯಾಗಿ ಗಂಗಾವತಿಯ ಸಹಾಯಕ ಕಾರ್ಯನಿರ್ವಾಹಕ ಅ ಧಿಕಾರಿಗಳ ಕಚೇರಿ ಮುಂದೆ ಮೂರನೇ ದಿನಕ್ಕೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದ್ದಾರೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕೆಲಸವನ್ನು ಮಾರ್ಚ್ ಜುಲೈ ಆಗಸ್ಟ್ 2019- 20 ಸಾಲಿನಲ್ಲಿ ಗುಂಡೂರು, ಹೊಸಳ್ಳಿ, ಚಿಕ್ಕಜಂತಕಲ್, ಚಿಕ್ಕಬೆಣಕಲ್, ಡಣಾಪುರ್, ಮುಸ್ಟೂರು ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೆಲಸ ಮಾಡಲಾಗಿದೆ. ಕೂಲಿಕಾರರು ಕೆಲಸಕ್ಕೆ ಕರೆದುಕೊಂಡು ಹೋದರೆ ಟ್ರ್ಯಾಕ್ಟರ್ ಬಾಡಿಗೆಗೆ ಒತ್ತಾಯಿಸಿ ಕಾರ್ಯಾಲಯಕ್ಕೆ ಮತ್ತು ಜಿಲ್ಲಾ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.

ಈ ಹಿಂದೆಯೇ ರೈತರ ಟ್ರ್ಯಾಕ್ಟರ್ ಬಾಡಿಗೆಯನ್ನು ನೀಡುತ್ತೇವೆ ಎಂದು ಹಿಂಬರಹವನ್ನು ನೀಡಲಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಹಣ ಪಾವತಿ ಮಾಡಲಾಗಿಲ್ಲ, ಎಂ ಎಸ್ ನಲ್ಲಿ ಅಳವಡಿಸಲಾಗಿಲ್ಲ ಆದ್ದರಿಂದ ರೈತರು ಟ್ರ್ಯಾಕ್ಟರ್ ಬಾಡಿಗೆಯನ್ನು ನೀಡಬೇಕೆಂದು, 2019-20 ನೇ ಸಾಲಿನಲ್ಲಿ ಕೂಲಿಕಾರರು ಕೆಲಸಕ್ಕೆ ಕರೆದುಕೊಂಡುಹೋದರು ಟ್ಯಾಕ್ಟರ್ ಬಾಡಿಗೆ ನೀಡಬೇಕು, ಯರಡೋಣ ಗುಂಡೂರು ಹೊಸಕೇರಾ ಚಿಕ್ಕಜಂತಕಲ್ ಚಿಕ್ಕಬಣಕಲ್, ಮುಸ್ಟೂರು, ಕೆಸರಹಟ್ಟಿ ಪಂಚಾಯತಿಯ ಟ್ರ್ಯಾಕ್ಟರ್ ಬಾಡಿಗೆಯನ್ನು ನೀಡಬೇಕು, ಎಂಐಎಸ್ ನಲ್ಲಿ ಅಳವಡಿಸಿದೆ ಇರುವ ಕಾಮಗಾರಿಗಳನ್ನು ಎಂಐಎಸ್ ನಲ್ಲಿ ಅಳವಡಿಸಿ ರೈತರ ಟ್ರ್ಯಾಕ್ಟರ್ ಬಾಡಿಗೆಯನ್ನು ಕೊಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘಗಳು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಪ್ರತಿಭಟನೆ ಧರಣಿಯಲ್ಲಿ AIAWU ಅಧ್ಯಕ್ಷರಾದ ಮರಿ ನಾಗಪ್ಪ ಡಗ್ಗಿ, ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಜಿಲ್ಲಾ ಅಧ್ಯಕ್ಷರಾದ ಎಂ ಬಸವರಾಜ್, KPRS ಅಧ್ಯಕ್ಷರಾದ ಶಿವಣ್ಣ ಬೆಣಕಲ್, ಕಾರ್ಯದರ್ಶಿ ಶ್ರೀನಿವಾಸ್ ಹೊಸಳ್ಳಿ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *