ಬೆಂಗಳೂರು : ಕೋವಿಡ್ ಸಾಂಕ್ರಾಮಿಕ ವೈರಾಣುವಿನಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ದಿನಚರಿಗಳು ಬದಲಾಗಿ ಹೋಗಿದೆ. ಕಳೆದ 5 ತಿಂಗಳಿನಿಂದ ವಿದ್ಯಾರ್ಥಿಗಳು ಶಾಲೆಗಳಿಂದ ದೂರ ಉಳಿದಿದ್ದಾರೆ.
ಅಕ್ಟೋಬರ್ 15 ರ ನಂತರ ಶಾಲೆಗಳು ಪುನರ್ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯ ಭಾಗವಾಗಿ ಶಾಲೆಗೆ ತೆರಳಬಹುದು ಅಥವ ಆನ್ ಲೈನ್ ಶಿಕ್ಷಣ ಮುಂದುವರೆಸಬಹುದು ಶಾಲೆಗಳಿಗೆ ಬರಲೇ ಬೇಕು ಎಂದು ಕಡ್ಡಾಯ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ರಾಜ್ಯದ ಕಟೈನ್ಮೆಂಟ್ ವಲಯಗಳನ್ನು ಹೊರೆತುಪಡಿಸಿ ಉಳಿದ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಲು ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ನೀಡಿದೆ.
ಕಂಟೈನ್ಮೆಂಟ್ ವಲಯಗಳಲ್ಲಿನ ಲಾಕ್ ಡೌನ್ ಅವಧಿಯನ್ನು ಅಕ್ಟೋಬರ್ ಅಂತ್ಯದವರೆಗೆ ವಿಸ್ತರಿಸಲಾಗುತ್ತದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಆದೇಶವನ್ನು ಹೊರಡಿಸಿದೆ.