ಅಂದು ಜೆಸ್ಸಿಕಾಳನ್ನು ಯಾರು ಕೊಂದಿಲ್ಲ, ಇಂದು ಯಾರೂ ಮಸೀದಿಯನ್ನು ಕೆಡವಿಲ್ಲ’: ಚಿದಂಬರಂ ವ್ಯಂಗ್ಯ‌

ಹೊಸದಿಲ್ಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು ಲಕ್ನೋ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿಗೆ ದೇಶಾದ್ಯಂತ ಆಕ್ರೋಶ ಮತ್ತು ವ್ಯಂಗ್ಯ ವ್ಯಕ್ತವಾಗುತ್ತಿದೆ.
ಸಿಬಿಐ ನ್ಯಾಯಾಲಯದ ತೀರ್ಪಿಗೆ ವ್ಯಂಗ್ಯವಾಡಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, 
ತೀರ್ಪಿಗೆ ಜೆಸ್ಸಿಕಾ ಹತ್ಯೆ ಪ್ರಕರಣವನ್ನು ಹೋಲಿಸಿದ್ದಾರೆ. 
ಇಡೀ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಜೆಸ್ಸಿಕಾ ಹತ್ಯೆ ಪ್ರಕರಣದಲ್ಲಿ ಹತ್ಯೆ ಆರೋಪಿಗಳು ಖುಲಾಸೆಗೊಂಡಿದ್ದರು. “ಅಂದು ನೋ ವನ್‌ ಕಿಲ್ಲ್‌ಡ್‌ ಜೆಸ್ಸಿಕಾ(ಯಾರೂ ಜೆಸ್ಸಿಕಾಳನ್ನು ಕೊಂದಿಲ್ಲ) ಎನ್ನುವ ಬೇಗುದಿಯ ಕೂಗು ಇಡೀ ದೇಶವ್ಯಾಪಿ ಕೇಳಿ ಬರುತ್ತಿತ್ತು. ಇಂದು ನೋ ವನ್‌ ಡೆಮಾಲಿಷ್‌ಡ್‌ ಮಾಸ್ಕ್(ಯಾರು ಮಸೀದಿ ಕೆಡವಿಲ್ಲ) ಅನ್ನುವ ಬೇಗುದಿಯ ಕೂಗು ಇದೀಗ ದೇಶ ವ್ಯಾಪಿಯಾಗಿ ಕೇಳಿಬರುತ್ತಿದೆ”  ಎಂದು ಕೋರ್ಟ್‌ ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ವಿಚಾರಣಾ ನ್ಯಾಯಾಲಯದ ತೀರ್ಪು ತರ್ಕ ಮತ್ತು ಸಾಮಾನ್ಯ ಜ್ಞಾನಕ್ಕೆ ಸವಾಲು ಒಡ್ಡಿದಂತಿದೆ. ಅಲ್ಲದೆ ಸುಪ್ರೀಂಕೋರ್ಟ್‌ ನಿರ್ಣಯಗಳನ್ನು ಇದು ತಳ್ಳಿಹಾಕಿದೆ ಎಂದು ಹೇಳಿದ್ದಾರೆ.
ಮತ್ತೆ ನಮಸ್ತೆ ಟ್ರಂಪ್‌ ಮಾಡುತ್ತೀರಾ?
ಇನ್ನು ಟ್ರಂಪ್‌ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರಕ್ಕೆ ಟಾಂಗ್‌ ನೀಡಿದ ಚಿದಂಬರಂ, ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾ ಮತ್ತು ರಷ್ಯಾದೊಂದಿಗೆ ಸೇರಿಸಿ ಈ ಮೂರು ದೇಶಗಳು ಕೊರೊನಾ ಸಾವಿನ ಸಂಖ್ಯೆಯನ್ನು ಮರೆಮಾಡಿದೆ ಎಂದು ಆರೋಪಿಸಿದ್ದಾರೆ.ಈ ಮೂರು ದೇಶಗಳು ಹೆಚ್ಚು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಕೂಡ ಟ್ರಂಪ್‌ ಆರೋಪಿಸಿದ್ದಾರೆ. ಮೋದಿಯವರೇ ಈಗ ತಮ್ಮ ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೊಂದು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೀರಾ? ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಬುಧವಾರ ಟ್ರಂಪ್‌ ಹಾಗೂ ಬಿಡೆನ್‌ ಅವರ ನಡುವೆ ಬಹಿರಂಗ ಚರ್ಚೆ ನಡೆದಿತ್ತು. ಈ ವೇಳೆ ಭಾರತವನ್ನು ಟ್ರಂಪ್‌ ಪ್ರಸ್ತಾಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *