ಪ್ರಶ್ನೋತ್ತರ ಕಾಲ’ ರದ್ದಾಗಿರುವ ಕೊವಿಡ್ ಕಾಲದ ಸಂಸದ್ ಅಧಿವೇಶನದಲ್ಲಿ ಸಂಸತ್ ಸದಸ್ಯರ ಅನಕ್ಷತ್ರಿತ(unstarred) ಪ್ರಶ್ನೆಗಳಿಗೆ ಸಿಕ್ಕ ಸರಕಾರದ ಲಿಖಿತ ಉತ್ತರಗಳಿಂದ ದೊರೆತಿರುವ ಮಾಹಿತಿ.
ವಲಸೆ ಕಾರ್ಮಿಕರ ಸಾವುಗಳ ದತ್ತಾಂಶ ಇಲ್ಲ
ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ನ್ಯೂಸ್ ಸ್ಟ್ರಿಂಗ್
ಪ್ರಶ್ನೆ1: ರಾಷ್ಟ್ರೀಯ ಲಾಕ್‍ಡೌನಿನಿಂದಾಗಿ ತಮ್ಮ ರಾಜ್ಯಗಳಿಗೆ ಮರಳಿದ ವಲಸೆ ಕಾರ್ಮಿಕರ ರಾಜ್ಯವಾರು ದತ್ತಾಂಶಗಳಿವೆಯೇ?
ಉತ್ತರ: ಒಟ್ಟು 1,04,66,152 ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ- ರಾಜ್ಯವಾರು ವಿವರಗಳನ್ನು ಕೊಡಲಾಗಿದೆ.
ಪ್ರಶ್ನೆ2: ಲಾಕ್‍ಡೌನಿನಿಂದಾಗಿ ತಮ್ಮ ಊರುಗಳಿಗೆ ಮರಳುವಾಗ ಪ್ರಾಣ ಕಳಕೊಂಡ/ ಗಾಯಗೊಂಡ ರಾಜ್ಯವಾರು ಸಂಖ್ಯೆ ಎಷ್ಟು?
ಉತ್ತರ: ಇಂತಹ ದತ್ತಾಂಶ ಲಭ್ಯವಿಲ್ಲ.
ಪ್ರಶ್ನೆ 3: ಸರಕಾರ ಇಂತವರ ಕುಟುಂಬಗಳಿಗೆ ಪರಿಹಾರ/ಆರ್ಥಿಕ ನೆರವು ನೀಡಿದ್ದರೆ ಅದರ ವಿವರಗಳು.
ಉತ್ತರ: ಇಂತಹ ದತ್ತಾಂಶ ಲಭ್ಯವಿಲ್ಲ.
ಪ್ರಶ್ನೆ 4: ಕೊವಿಡ್-19 ಬಿಕ್ಕಟ್ಟಿನಿಂದ ಆಗಿರುವ ಉದ್ಯೋಗ ನಷ್ಟದ ಅಂದಾಜನ್ನು ಸರಕಾರ ಮಾಡಿದೆಯೇ? ಮಾಡಿದ್ದರೆ ಅದರ ವಿವರಗಳು
ಉತ್ತರ: ಇಂತಹ ದತ್ತಾಂಶ ಲಭ್ಯವಿಲ್ಲ.
ನಮ್ಮ ಬಳಿ ಯಾಕಾದರೂ ಇರಬೇಕು, ಅದರಿಂದೇನು ಪ್ರಯೋಜನ?
ಬಹುಶಃ ಸೋನು ಸೂದ್ ಬಳಿ ಮಾಹಿತಿ ಇದ್ದರೂ ಇರಬಹುದು.
ಇವು ಅನಕ್ಷತ್ರಿತ(unstarred) ಪ್ರಶ್ನೆಗಳಾದ್ದರಿಂದ ಪೂರಕ ಪ್ರಶ್ನೆಗಳಿಗೆ ಅವಕಾಶವಿಲ್ಲ!
ಕೊವಿಡ್ ಕಾಲದ ಅಧಿವೇಶನದಲ್ಲಿ ನಕ್ಷತ್ರಿತ ಪ್ರಶ್ನೆಗಳಿಗೆ ಅವಕಾಶವಿಲ್ಲ
ಸತ್ತ ಜನಗಳು ನಕ್ಷತ್ರಗಳಾಗುತ್ತಾರೆ, ಅವರ ಪಕ್ಕದಲ್ಲಿರುವಂತದ್ದು ನಮ್ಮ ಸರಕಾರ ವಾಸಿಸುವ ಗೃಹ!
ಆದರೂ ಬೇಗನೇ ದತ್ತಾಂಶ ಹುಡುಕಿ,
ಚೀನಾ ಹುಡುಕಿಕೊಳ್ಳುವ ಮೊದಲು…
ದತ್ತಾಂಶ ಇದೆಯೋ ಇಲ್ಲವೋ, ಏನಾದ್ರೂ ಕೊಡಿ ಮಾರಾಯ್ರೇ,
ಒಂದೋ ಬದುಕಿದ್ದೇವೆ ಎಂದು ಆರ್ಥಿಕ ಪ್ಯಾಕೆಜ್ ಕೊಡಿ,
ಇಲ್ಲವೇ ಸತ್ತಿದ್ದಾರೆ ಎಂದು ಪರಿಹಾರ ಕೊಡಿ
ಕೊನೆಗೊಂದು ಸೂಪರ್ ಐಡಿಯಾ!
ಆದರೂ… ಕ್ಷಮಿಸಿ
ನಮ್ಮ ಬಳಿ ಇಂದು ಪದಗಳೇ ಇಲ್ಲ.. ಮುಂಬೈ ಮಿರರ್