– ಮಂಡ್ಯದ ಅರಕೇಶ್ವರ ದೇವಾಲಯದ ಬಳಿ ಘಟನೆ
ಮಂಡ್ಯ: ಇಲ್ಲಿನ ಅರಕೇಶ್ವರ ದೇವಾಲಯದ ಹುಂಡಿ ಕಳವು ಮಾಡುವ ವೇಳೆ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಗಣೇಶ್ (35), ಪ್ರಕಾಶ್ (36), ಆನಂದ್ (33) ಹತ್ಯೆಯಾದವರು. ಇವರು ದೇವರ ಪೂಜೆಯ ಉಸ್ತುವಾರಿ ಜೊತೆಗೆ ದೇವಾಲಯದ ಕಾವಲು ಕಾಯುತ್ತಿದ್ದರು.
ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಮೂವರು ಅರ್ಚಕರನ್ನು ಕೊಲೆ ಮಾಡಿ ಹುಂಡಿಯ ಹಣವನ್ನು ಕಳ್ಳರು ದೋಚಿದ್ದಾರೆ. ನಾಣ್ಯಗಳನ್ನು ಅಲ್ಲೇ ಬಿಸಾಡಿರುವ ಖದೀಮರು ನೋಟುಗಳನ್ನು ಮಾತ್ರ ಕದ್ದೊಯ್ದಿದ್ದಾರೆ.
ಅರಕೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಆರೋಪಿಗಳ ಪತ್ಯೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಕಳ್ಳರು ಹುಂಡಿಯೊಳಗಿದ್ದ ಚಿಲ್ಲರೆ ಹಣವನ್ನು ಬಿಸಾಡಿ ನೋಟುಗಳನ್ನಷ್ಟೇ ದೋಚಿದ್ದಾರೆ.