ಸಾರ್ವಜನಿಕ ಆರೋಗ್ಯ ಸಂರಕ್ಷಣೆಗೆ ಹೂಡಿಕೆ ಮಾಡಿ: ಟೆಡ್ರೊಸ್ ಫೆಬ್ರೆಯೆಸಸ್

–  ಕೊರೊನಾ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ

ಜಿನೀವಾ: ಜಗತ್ತನ್ನು ಕಾಡುತ್ತಿರುವ ಕೊರೊನಾ ಸೋಂಕು ಇದೇ ಕೊನೆಯಲ್ಲ. ಮುಂದೆ ಇಂತಹ ಸೋಂಕುಗಳು ಕಾಣಿಸಿಕೊಳ್ಳುವುದು ಸಹಜ ವಿದ್ಯಮಾನ. ಇಂತಹ ಸೋಂಕುಗಳು ಕಾಣಿಸಿಕೊಂಡಾಗ ಎದುರಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚು ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ ಕರೆ ನೀಡಿದ್ದಾರೆ.

ಜಿನೇವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಬ್ರೆಯೆಸಸ್,  2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲು ಕೊರೊನಾ ಪತ್ತೆಯಾಯಿತು. ಇಲ್ಲಿಯವರೆಗೂ ಜಾಗತಿಕವಾಗಿ 27.19  ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಹಾಗೆಯೇ 8.9 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ ಎಂದು ಹೇಳಿದರು.
ಇದು ಕೊನೆಯ ಸಾಂಕ್ರಾಮಿಕ ರೋಗವಾಗುವುದಿಲ್ಲ. ಏಕಾಏಕಿ ಸಾಂಕ್ರಾಮಿಕ ರೋಗಗಳು ಬರುವುದು ಬದುಕಿನ ವಾಸ್ತವವೆಂದು ಇತಿಹಾಸ ನಮಗೆ ಪಾಠ ಕಲಿಸುತ್ತದೆ. ಆದ್ದರಿಂದ, ಮುಂದಿನ ಸಾಂಕ್ರಾಮಿಕ ರೋಗ ಹರಡುವಿಕೆ ತಪ್ಪಿಸುವ ನಿಟ್ಟಿನಲ್ಲಿ ನಮ್ಮ “ಸಾರ್ವಜನಿಕ ಆರೋಗ್ಯ ಸಂರಕ್ಷಣೆಗೆ ” ಹೆಚ್ಚು ಹೂಡಿಕೆ ಮಾಡಲು ದೇಶಗಳಿಗೆ ಅವರು ಕರೆ ನೀಡಿದರು.
ಮುಂದೆ ಸಾಂಕ್ರಾಮಿಕ ರೋಗ ಬಂದಾಗ, ಎದುರಿಸಲು ಜಗತ್ತು ಇದಕ್ಕಿಂಲೂ ಹೆಚ್ಚು ಸಿದ್ದವಾಗಿರಬೇಕು ಎಂದು  WHO ಮುಖ್ಯಸ್ಥ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ ಎಚ್ಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *