- ಬೋಧನಾ ವರ್ಷ ಕಳೆದುಕೊಳ್ಳದಂತೆ ವೇಳಾಪಟ್ಟಿ ರೂಪಿಸುವಂತೆ ಸಲಹೆ
ನವದೆಹಲಿ: ದೇಶಾದ್ಯಂತ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶಕ್ಕೆ ಜೆಇಇ-ಎನ್‍ಇಇಟಿ ಪರೀಕ್ಷೆಗಳನ್ತ್ತನು ನಡೆಸಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸರ್ಕಾರದ ನಡೆಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಎಂ, ಕೊರೊನಾ ಸಾಂಕ್ರಾಮಿಕದಿಂದ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿರುವಾಗ ಮತ್ತು ಸಾವುಗಳ ಸಂಖ್ಯೆಯೂ ಏರುತ್ತಿರುವ ಸಮಯದಲ್ಲಿ ದೇಶಾದ್ಯಂತ ಭೌತಿಕವಾಗಿಯೇ ಈ ಪರೀಕ್ಷೆಗಳನ್ನು ನಡೆಸಬೇಕೆನ್ನುವುದು ವಿದ್ಯಾರ್ಥಿಗಳು ಮತ್ತು ಈ ಕೋರ್ಸ್‍ಗಳ ಭವಿಷ್ಯದ ದೃಷ್ಟಿಯಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಅವಧಿಯನ್ನು ಆರಂಭಿಸಬೇಕೆನ್ನುವ ಹಠದ ಹಿಂದಿನ ಕಾರಣವೇನು ಎಂದು ಸಿಪಿಎಂ ಪ್ರಶ‍್ನಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಒಂದು ಸಾಹಸಕ್ಕೆ ಕೈಹಾಕುವುದು ಆತುರದ ಕೃತ್ಯವಾಗುತ್ತದೆ. ಇದು ನಮ್ಮ ಸುಮಾರು ಒಂದು ದಶಲಕ್ಷ ಪ್ರತಿಭಾವಂತ ಯುವ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸುತ್ತದೆ ಎಂದು ಹೇಳಿರುವ ಸಿಪಿಎಂ, ಈ ಪರೀಕ್ಷೆ ನಡೆಸುವುದನ್ನು ಸೋಂಕಿನ ಹರಡಿಕೆಯ ಮೇಲೆ ಸ್ವಲ್ಪ ಹತೋಟಿ ಹೊಂದಲು ಸಾಧ್ಯವಾಗುವ ವರೆಗೆ ಸದ್ಯಕ್ಕೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿದೆ. ಒಂದು ಬೋಧನಾ ವರ್ಷವನ್ನು ಕಳೆದುಕೊಳ್ಳದಂತೆ ವಿದ್ಯಾರ್ಥಿಗಳನ್ನು ರಕ್ಷಿಸುವ ರೀತಿಯಲ್ಲಿ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ಅದು ಹೇಳಿದೆ.