ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ರಾಷ್ಟ್ರೀಕೃತ ಮತ್ತು ಸರಕಾರ ಬ್ಯಾಂಕುಗಳು ಸೇರಿದಂತೆ ಧರ್ಮಸ್ಥಳ ಸಹಕಾರ ಸಂಘದಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಕಾರ್ಯಕರ್ತರು ರಾಜ್ಯ ಸರಕಾರದಿಂದ ಮೈಕ್ರೋ ಫೈನಾನ್ಸ್ ಸಮಸ್ಯೆಗಳು ಧರ್ಮಸ್ಥಳ ಸಂಘಗಳ ಅಡಿಯಲ್ಲಿ ಉಳಿತಾಯ ಯೋಜನೆಯಲ್ಲಿ ತೊಡಗಿರುವ ಲಕ್ಷಾಂತರ ಸ್ವ ಸಹಾಯ ಸಂಘಗಳಿಂದ ಸ್ವಯಂ ಉದ್ಯೋಗ ಕೃಷಿ ಚಟುವಟಿಕೆಗಳು ವಿಧ್ಯಾಭ್ಯಾಸ ಕುಟುಂಬ ಆರೋಗ್ಯ ನಿರ್ವಹಣೆಗೆ ಸಾಲ ಪಡೆದಿದ್ದು ಕೋವಿಡ್ ಸಂದರ್ಭದಲ್ಲಿ ಸಾಲವನ್ನು ತೀರಿಸಲು ಸಾಧ್ಯವಿಲ್ಲದ ಕಾರಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ಎಲ್ಲಾ ಕ್ಷೇತ್ರದಲ್ಲಿ ಆರ್ಥಿಕತೆ ನೆಲಕಚ್ಚಿರುವಾಗ ದುಡಿದು ತಿನ್ನುವ ಬಡಕೂಲಿಕಾರರು ಊಟ ಇಲ್ಲವಾಗಿರುವಾಗ ಬ್ಯಾಂಕ್ ಗಳಲ್ಲಿ ಹಣ ಕಟ್ಟಲು ಸಾಧ್ಯವಾಗುತ್ತಾ ಇಲ್ಲ ಇಂತಹ ಸಂದರ್ಭಗಳಲ್ಲಿ ಸಾಲದ ಹೆಸರಿನಲ್ಲಿ ಸಾಲಕ್ಕೆ ಪ್ರತಿಯಾಗಿ ಚಕ್ರಬಡ್ಡಿ ಹಾಕುವುದು ಸೇರಿದಂತೆ ಜನರನ್ನು ಶೋಷಣೆ ಮಾಡುತ್ತಾ ಇದ್ದಾರೆ ಇದನ್ನು ಆದೇಶದ ಮೂಲಕ ಜನರನ್ನು ರಕ್ಷಿಸಬೇಕಾಗಿದೆ ಎಂದರು.
ಕೇಂದ್ರ ಸರಕಾರ ಕೋವಿಡ್ ಸಂದರ್ಭದಲ್ಲಿ ಸಾಲ ವಸೂಲಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದರು ಅದರ ಉಲ್ಲಂಘನೆಯಾಗುತ್ತಾ ಇದೆ ಸಾಲವನ್ನು ಮುಂದೂಡವ ಆದೇಶವನ್ನು ಬಿಟ್ಟು ಸಾಲದ ಜೊತೆಗೆ ಬಡ್ಡಿಯನ್ನು ಮನ್ನಾ ಮಾಡುಲು ಸರಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ ಕೇಂದ್ರ ಸರಕಾರ ದೊಡ್ಡ ಉದ್ದಿಮೆದಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದ್ದು ಬಡಕೂಲಿಕಾರು ದಿನಪ್ರತಿ ದುಡಿದು ತಿನ್ನುವರಿಗೆ ಸೌಲಭ್ಯಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದೆ ಇಂತಹ ಸಂದರ್ಭಗಳಲ್ಲಿ ದುಡಿಯುವ ವರ್ಗದ ಜನರಿಗೆ ಮಾನವೀಯ ದೃಷ್ಟಿಯಿಂದ ಸರಕಾರ ನೇರವಿಗೆ ದಾವಿಸುವ ಅಗತ್ಯ ಇದೆ ಎಂದರು.
ದೇಶದಲ್ಲಿ ಕೋವಿಡ್ ಸಂದರ್ಭದಲ್ಲಿ ಪರಿಹಾರ ನೀಡಲು 20 ಲಕ್ಷ ಕೋಟಿ ರೂಪಾಯಿಗಳನ್ನು ಪ್ಯಾಕೇಜ್ ಘೋಷಣೆ ಮಾಡಿದ್ದು ನೈಜವಾಗಿ ಇದರ ಪಾಲು ದೊಡ್ಡ ಕಂಪನಿಗಳ ಪರವಾಗಿದೆ ಈ ಘೋಷಣೆ ಮಾಡಿರುವ ಹಣದಲ್ಲಿ ಸ್ವ ಸಹಾಯ ಮತ್ತು ಸ್ತೀಶಕ್ತಿ ಸಂಘಗಳ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ಹಣಕಾಸಿನ ನೆರವನ್ನು ಸರಕಾರ ಬಿಡುಗಡೆ ಮಾಡಬೇಕು ಶೂನ್ಯ ಬಡ್ಡಿದರದಲ್ಲಿ ಮರು ಸಾಲ ನೀಡಬೇಕು ಎಂದು ಒತ್ತಾಯಿಸಿದರು
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸೌಭಾಗ್ಯಮ್ಮ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರಿ, ಮುಖಂಡರಾದ ಮಂಜುಳಾ, ಸುಜಾತಾ, ಶಿಲ್ಪ, ರೇಣುಕಾ, ಸರೋಜಮ್ಮ ಇದ್ದರು