ಬೆಂಗಳೂರು ಕರ್ನಾಟಕದಲ್ಲಿ ಮಾರಕ ಕೊರೋನಾ ಆರ್ಭಟ ಜೋರಾಗಿದೆ. ಇಂದು 5,030 ಹೊಸ ಪ್ರಕರಣಗಳು ಪತ್ತೆಯಾದ ಪರಿಣಾಮ ಸೋಂಕಿತರ ಸಂಖ್ಯೆಯೂ 80 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
ಇದುವರೆಗೂ ಒಟ್ಟು 80,863 ಕೊರೋನಾ ಕೇಸುಗಳ ದಾಖಲಾಗಿವೆ. ಈ ಪೈಕಿ 30,932 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ಧಾರೆ. ಸದ್ಯ 49,931 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಮಾರಕ ಕೊರೋನಾಗೆ ಇಂದು ಒಂದೇ ದಿನ 97 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್-19 ಮೃತರ ಸಂಖ್ಯೆಯೂ 1616ಕ್ಕೆ ಏರಿಕೆಯಾಗಿದೆ. ಇನ್ನು, ಬೆಂಗಳೂರುವೊಂದರಲ್ಲೇ 2,027 ಮಂದಿಗೆ ಕೊರೋನಾ ಬಂದಿದೆ. ಸದ್ಯ 29,091 ಮಂದಿಗೆ ಕೋವಿಡ್-19 ಚಿಕಿತ್ಸೆ ನೀಡಲಾಗುತ್ತಿದೆ.
ಜತೆಗೆ ರಾಜಧಾನಿಯಲ್ಲಿ ಮಾತ್ರ ಮಾರಕ ಕೊರೋನಾಗೆ 47 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಇಂದು 20,71 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇದುವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 12,38635ಕ್ಕೆ ಏರಿಕೆಯಾಗಿದೆ. ಡೆಡ್ಲಿ ಕೊರೋನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 29861 ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೋನಾ ನಿಯಂತ್ರಣಕ್ಕೆ ಸಿಗದಷ್ಟು ಅಧಿಕವಾಗುತ್ತಿದೆ. ಸೋಂಕಿತರ ಸಂಖ್ಯೆ ಪ್ರತಿನಿತ್ಯ 2,000 ಗಡಿ ದಾಟುತ್ತಿದೆ. ಹೀಗಾಗಿ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು.