ಬಿಜೆಪಿ, RSS ಬೆಂಬಲಿಗರ ಮನಸ್ಸಲ್ಲಿ ಭಯ, ದ್ವೇಷ ತುಂಬಿದೆ: ಪ್ರೀತಿಸಲು ಕಲಿಯಿರಿ ಎಂದು ರಾಹುಲ್ ಟಾಂಗ್‌ | Rahul Shiva Parvati Post

Please follow and like us:
 Rahul Shiva Parvati Post: ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ನೀಡಿದ್ದ ಹೇಳಿಕೆಗೆ ಬಿಜೆಪಿ ಟೀಕೆ ಮಾಡಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೊಸ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ. ಶಿವ ಮತ್ತು ಪಾರ್ವತಿ ದೇವಿಯರು ಪ್ರೀತಿಯಿಂದ ಆಲಿಂಗಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ದ್ವೇಷ, ಭಯ ಮತ್ತು ಕೋಪ ತುಂಬಿದೆ ಎಂದು ಟೀಕಿಸಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರೀತಿ ಮತ್ತು ಆತ್ಮೀಯತೆಯನ್ನು ಅನುಭವಿಸಲು ದ್ವೇಷದ ಭಾವನೆಗಳು ಅಡ್ಡಿಯಾಗುತ್ತಿವೆ ಎಂದು ಹೇಳಿದ್ದಾರೆ.

“ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಹೃದಯದಲ್ಲಿ ಒಂದು ಜಾಲವನ್ನು ಹೆಣೆದಿವೆ. ಇದರಿಂದ ಅವರು ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನಿಜವಾದ ಹಿಂದೂವಾಗಿ, ಈ ಜಾಲದಿಂದ ಅವರನ್ನು ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರೂ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಆತ್ಮೀಯತೆಯ ಅದ್ಭುತ ಸೌಂದರ್ಯ ಹಾಗೂ ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

ತಮ್ಮ ಪೋಸ್ಟ್‌ನ ಕೊನೆಯಲ್ಲಿ ‘ಸತ್ಯಂ ಶಿವಂ ಸುಂದರಂ’ ಎಂಬ ಪದಗಳನ್ನು ಬಳಸಿದ್ದಾರೆ.

http://<blockquote class=”twitter-tweet”><p lang=”en” dir=”ltr”>Fear, anger and hatred have woven a web in the hearts of BJP and RSS supporters that stops them from experiencing and expressing love. As a true Hindu, it is my duty to free them from this web, so that they too can start to experience the breathtaking beauty and joy of love and belonging in their lives. Satyam Shivam Sundaram.</p>&mdash; Rahul Gandhi (@RahulGandhi) <a href=”https://x.com/RahulGandhi/status/2122626811637215676?ref_src=twsrc%5Etfw”>November 17, 2026</a></blockquote> <script async src=”https://platform.x.com/widgets.js” charset=”utf-8″></script>

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದೇನು?

ಸೋಮವಾರ ಸಂಜೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ʼಬಿಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು.

ಕುಟುಂಬದವರು ಒಟ್ಟಿಗೆ ಊಟಕ್ಕೆ ಕುಳಿತಾಗ ತಂದೆಯ ತೊಡೆಯ ಮೇಲೆ ತಾಯಿ ಕುಳಿತಿರುತ್ತಿದ್ದರು. ಬಾಲ್ಯದಲ್ಲಿ ಇದು ಸಹಜವಾದ ಸಂಗತಿ ಎಂದೇ ಭಾವಿಸಿದ್ದೆ ಎಂದು ರಾಹುಲ್ ವಿವರಿಸಿದ್ದರು. ನಂತರ ಸ್ನೇಹಿತರ ಮನೆಗೆ ಹೋದಾಗ ಅವರ ತಂದೆ-ತಾಯಿ ಹೀಗೆ ಕುಳಿತುಕೊಳ್ಳುವುದನ್ನು ನೋಡದಿದ್ದಾಗ, “ನಿಮ್ಮ ತಾಯಿ ಯಾಕೆ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿಲ್ಲ?” ಎಂದು ಸ್ನೇಹಿತರನ್ನು ಕೇಳುತ್ತಿದ್ದೆ ಎಂದು ತಮ್ಮ ಬಾಲ್ಯದ ಅನುಭವ ಹಂಚಿಕೊಂಡಿದ್ದರು.

ನಾವು ಬೆಳೆದಿದ್ದೇ ಹೀಗೆ

“ನಾವು ಬೆಳೆದಿದ್ದೇ ಹೀಗೆ. ನನ್ನ ತಾಯಿ ನನ್ನ ತಂದೆಗೆ ಸೇರಿದವರು, ನನ್ನ ತಂದೆ ನನ್ನ ತಾಯಿಗೆ ಸೇರಿದವರು” ಎಂದು ಪೋಷಕರ ನಡುವಿನ ಆತ್ಮೀಯ ಸಂಬಂಧವನ್ನು ವಿವರಿಸಿದ್ದರು. ಇದೇ ಸಂದರ್ಭದಲ್ಲಿ ತಾಯಿಯನ್ನು ಉದ್ದೇಶಿಸಿ, “ಅಮ್ಮ, ಅಪ್ಪ ನಿನ್ನನ್ನು ಪ್ರೀತಿಸುತ್ತಿದ್ದರು. ಆದರೆ ಅವರು ನಿನ್ನ ಬಗ್ಗೆ ಎಷ್ಟು ಹೆಮ್ಮೆಪಡುತ್ತಿದ್ದರು ಎಂಬುದನ್ನು ನಾನು ಹೇಳಲಾರೆ” ಎಂದು ಭಾವುಕವಾಗಿ ಮಾತನಾಡಿದ್ದರು.

ಇದನ್ನೂ ಓದಿ: ಕುಟುಂಬದ ಬಗ್ಗೆ ಹರಡಿರುವ ಸುಳ್ಳುಗಳಿಗೆ ಉತ್ತರಿಸಲು ಆತ್ಮಕಥೆ ಬರೆದೆ: ಸೋನಿಯಾ ಗಾಂಧಿ

ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕರ ಟೀಕೆ

ರಾಹುಲ್ ಗಾಂಧಿ ಅವರ ಈ ಹೇಳಿಕೆ ಬಿಜೆಪಿ ನಾಯಕರ ಟೀಕೆಗೆ ಕಾರಣವಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಯ ವಿಡಿಯೋ ಹಂಚಿಕೊಂಡಿದ್ದ ಶರ್ಮಾ, ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲೂ ಇಂತಹ ಹೇಳಿಕೆ ನೀಡಿರುವುದನ್ನು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಇದೀಗ ರಾಹುಲ್ ಗಾಂಧಿ ಶಿವ-ಪಾರ್ವತಿ ದೇವಿಯರ ಚಿತ್ರ ಹಂಚಿಕೊಂಡು ಪ್ರೀತಿ, ಆತ್ಮೀಯತೆ ಮತ್ತು ದ್ವೇಷದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೋಷಕರ ನಡುವಿನ ಪ್ರೀತಿಯ ಬಗ್ಗೆ ಆರಂಭವಾದ ರಾಜಕೀಯ ವಾಗ್ವಾದ ಇದೀಗ ಧಾರ್ಮಿಕ ಸಂಕೇತಗಳು ಮತ್ತು ಪ್ರೀತಿಯ ಕುರಿತ ಸಂದೇಶದೊಂದಿಗೆ ಮತ್ತಷ್ಟು ಗಮನ ಸೆಳೆದಿದೆ.

ಇದನ್ನೂ ನೋಡಿ: ಗೋವಿಂದ ರಾವ್ ಸಮಿತಿ ಶಿಫಾರಸ್ಸುಗಳ ಹಣೆಬರಹವೇನು? ವಾರದ ನೋಟ ಬಿ. ಶ್ರೀಪಾದ ಭಟ್ ಜೊತೆಗೆ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *