ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದ ಮೇಲಿನ ದಾಳಿಯು ಎರಡು ಮೂಲಗಳಿಂದ ಬರುತ್ತದೆ: ಮೊದಲನೆಯದು, ನಮಗೆ ಪರಿಚಿತವಿರುವ ‘ನವ–ಉದಾರವಾದೀ‘ ದಾಳಿ– ಶಿಕ್ಷಣವನ್ನು ಒಂದು ಸರಕನ್ನಾಗಿ ಪರಿವರ್ತಿಸಿ ವಿಮರ್ಶಾತ್ಮಕ ಶೋಧನೆಯ ಪ್ರಕ್ರಿಯೆಯಾಗಬೇಕಿದ್ದ ಶಿಕ್ಷಣವು ಕೇವಲ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿಸುವುದು; ಎರಡನೆಯದು, ಯಾವುದೇ ರೀತಿಯ ವಿಮರ್ಶಾತ್ಮಕ ಶೋಧನೆಯನ್ನೂ ಅಪಾಯಕಾರಿ ಎಂದೇ ಪರಿಗಣಿಸುವ ‘ನವ–ಫ್ಯಾಸಿಸ್ಟ್‘ ಗುಂಪುಗಳಿಂದ ನಡೆಯುವ ದಾಳಿ. ಇವರು ಜನಸಮುದಾಯದ ಬಹು ಪಾಲು ಮಂದಿಗೆ ಶಿಕ್ಷಣ ದೊರಕದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಶಿಕ್ಷಣವು ಕೇವಲ ಕೆಲವು ನಿರ್ದಿಷ್ಟ ಕೌಶಲಗಳನ್ನು ಗಳಿಸಿಕೊಳ್ಳುವ ಸಾಧನವಾಗಿ ಬದಲಾಗುವುದನ್ನೂ ಸಹ ಮೌನವಾಗಿ ಸಮ್ಮತಿಸುತ್ತಾರೆ. ಇದುವೇ ಬಿಜೆಪಿ ನೇತೃತ್ವದ ಸರ್ಕಾರದ ‘ಹೊಸ ಶಿಕ್ಷಣ ನೀತಿ’ಯ ಹೂರಣ ಎಂಬುದು ನಮಗೆ ತಿಳಿದದ್ದೇ. ನವ-ಫ್ಯಾಸಿಸಂ
ಅನು: ಕೆ.ಎಂ.ನಾಗರಾಜ್
ನವ-ಫ್ಯಾಸಿಸಂ ನಿರ್ದಿಷ್ಟವಾಗಿ, ತದೇಕಚಿತ್ತದಿಂದ ಮತ್ತು ನಾಚಿಕೆಯಿಲ್ಲದೆ ನಾಶಮಾಡ ಬಯಸುವ ಸಾಮಾಜಿಕ ಜೀವನದ ಒಂದು ಕ್ಷೇತ್ರವೆಂದರೆ, ಅದು ಶಿಕ್ಷಣ ಕ್ಷೇತ್ರ. ಶಿಕ್ಷಣದ ವಿನಾಶವೆಂದರೆ ಅದು ಶಿಕ್ಷಣವನ್ನು ನಿರ್ಲಕ್ಷಿಸುವ, ಅದನ್ನು ಖಾಸಗೀಕರಣಗೊಳಿಸುವ ಅಥವಾ ಸಾರ್ವಜನಿಕ ಅನುದಾನದಿಂದ ವಂಚಿತವಾಗಿಸುವ ವಿಷಯವಷ್ಟೇ ಅಲ್ಲ. ಬದಲಾಗಿ, ಅದು ಉದ್ದೇಶಪೂರ್ವಕವಾಗಿ ಮತ್ತು ಬೇಕೆಂದೇ ಮಾಡುತ್ತಿರುವ ವಿನಾಶ.
ಈ ವಿಷಯದಲ್ಲಿ ನವ-ಫ್ಯಾಸಿಸಂನ ನಿಲುವು ಎಡಪಂಥೀಯರ, ವಿಶೇಷವಾಗಿ ಕಮ್ಯುನಿಸ್ಟರ ನಿಲುವಿಗೆ ಸಂಪೂರ್ಣ ವಿರುದ್ಧವಾಗಿದೆ. ಕಮ್ಯುನಿಸ್ಟ್ ನಾಯಕರು ಪ್ರಾರಂಭಿಸಿದ ಹಲವಾರು ಶಿಕ್ಷಣ ಸಂಸ್ಥೆಗಳು ದೇಶಾದ್ಯಂತವೂ ಇವೆ. ಜನರು ಶಿಕ್ಷಣ ಪಡೆದರೆ, ಸಹಜವಾಗಿಯೇ ಅವರು ಕಮ್ಯುನಿಸಂನತ್ತ ಆಕರ್ಷಿತರಾಗುತ್ತಾರೆ ಎಂಬ ಒಂದು ದೃಢವಾದ ನಂಬಿಕೆಯನ್ನು ಪಥ ಪ್ರವರ್ತಕ ಕಮ್ಯುನಿಸ್ಟರು ಹೊಂದಿದ್ದರು. ಏಕೆಂದರೆ, ಕಮ್ಯುನಿಸಂ ಎಂಬುದು ಸಾಮಾಜಿಕ ಪ್ರಜ್ಞೆಯ ಒಂದು ಅತ್ಯುನ್ನತ ಅಭಿವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಆದ್ದರಿಂದ, ಕಮ್ಯುನಿಸಂನ್ನು ಅರ್ಥಮಾಡಿಕೊಳ್ಳಬೇಕಾದರೆ ಕೇವಲ ಬೂರ್ಜ್ವಾ (ಬಂಡವಾಳಶಾಹಿ) ಸಮಾಜವನ್ನು ಮಾತ್ರವಲ್ಲ, ಬೂರ್ಜ್ವಾ ಸಿದ್ಧಾಂತವನ್ನೂ ಅರಿಯಬೇಕು ಎಂಬ ಒಂದು ಗಾಢ ನಂಬಿಕೆಯು, ಶಿಕ್ಷಣದ ಬಗ್ಗೆ ಕಮ್ಯುನಿಸ್ಟರಲ್ಲಿ ಒಂದು ವ್ಯಾಪಕವಾದ ಆಸಕ್ತಿಯನ್ನು ಹುಟ್ಟುಹಾಕಿತ್ತೇ ವಿನಃ ಅದು ತಮ್ಮ ಸಿದ್ಧಾಂತವನ್ನು ಕೇವಲ ಪ್ರಚಾರ ಮಾಡುವ ಸಂಕುಚಿತ ಆಸಕ್ತಿಯಾಗಿರಲಿಲ್ಲ. ಶಿಕ್ಷಣದ ಬಗ್ಗೆ ಕಮ್ಯುನಿಸ್ಟರು ಹೊಂದಿದ್ದ ಈ ಒಲವು ಅವರನ್ನು ವಸಾಹತುಶಾಹಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಇತರರಿಗಿಂತ ಭಿನ್ನವಾದ ಒಂದು ನೆಲೆಯಲ್ಲಿ ಇರಿಸಿತ್ತು.
ಫ್ಯಾಸಿಸ್ಟರು ಮತ್ತು ನವ-ಫ್ಯಾಸಿಸ್ಟರು ಯಾವ ಸಾಕ್ಷ್ಯಾಧಾರಗಳಿಗೂ ಬೆಲೆ ಕೊಡುವವರಲ್ಲ. ಅವರಿಗೂ ಸಾಕ್ಷ್ಯಾಧಾರಗಳಿಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಎಲ್ಲ ಸಾಕ್ಷ್ಯಾಧಾರಗಳನ್ನು ದೂರವಿಡುವ ಮೂಲಕ ಮತ್ತು ವೈಜ್ಞಾನಿಕ ಶೋಧನೆಗೆ ತಮ್ಮ ಮನಸ್ಸಿನ ಬಾಗಿಲುಗಳನ್ನು ಮುಚ್ಚಿಕೊಳ್ಳುವ ಮೂಲಕ ಅವರು ತಮ್ಮ ವಿನಾಶಕರ “ಸಿದ್ಧಾಂತ”ಕ್ಕೆ ಅಂಟಿಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ವೈಜ್ಞಾನಿಕ ಶೋಧನೆಯ ಕಾರಣಕ್ಕಾಗಿಯೇ ಪಡೆದಿರುವುದರಿಂದ ನಿಜಕ್ಕೂ ಅವು ಫ್ಯಾಸಿಸಂ ಮತ್ತು ನವ-ಫ್ಯಾಸಿಸಂನ ಈ “ಸಿದ್ಧಾಂತ”ಕ್ಕೆ ಬಹಳ ಅಪಾಯಕಾರಿಯಾಗುತ್ತವೆ. ಆದ್ದರಿಂದ, ಶಿಕ್ಷಣ ಸಂಸ್ಥೆಗಳನ್ನು ಫ್ಯಾಸಿಸ್ಟರು ಕೇವಲ ಅನುಮಾನದಿಂದ ಮಾತ್ರವೇ ಅಲ್ಲ, ಅತೀವ ದ್ವೇಷದಿಂದಲೂ ಕಾಣುತ್ತಾರೆ.
ಫ್ಯಾಸಿಸ್ಟ್ ಮತ್ತು ನವ-ಫ್ಯಾಸಿಸ್ಟ್ ನಿಲುವು ಕಮ್ಯುನಿಸ್ಟರ ನಿಲುವಿಗೆ ತದ್ವಿರುದ್ಧವಾಗಿದೆ. ತಮ್ಮದೇ ಆದ ಒಂದು “ಸಿದ್ಧಾಂತ”ವನ್ನು ಹೊಂದಿರುವ ಕಾರಣದಿಂದ ಫ್ಯಾಸಿಸಂ ಮತ್ತು ನವ-ಫ್ಯಾಸಿಸಂ ಇತರ ಬಲಪಂಥೀಯ ಚಳುವಳಿಗಳಿಗಿಂತ ಭಿನ್ನವಾಗಿರುತ್ತದೆ. ಫ್ಯಾಸಿಸ್ಟರ ಈ “ಸಿದ್ಧಾಂತ”ವು ಬಹುಸಂಖ್ಯಾತರ ಮನಸ್ಸಿನಲ್ಲಿ ಒಂದು ಅದೃಷ್ಟಹೀನ ಅಲ್ಪಸಂಖ್ಯಾತರನ್ನು ಗುರುತಿಸುತ್ತದೆ ಅವರನ್ನು ‘ಅನ್ಯರು’ (ಬೇರೆಯವರು) ಎಂದು ಬಿಂಬಿಸುತ್ತದೆ ಮತ್ತು ಈ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವ ಆಧಾರವನ್ನು ಬಹುಸಂಖ್ಯಾತರಿಗೆ ಒದಗಿಸುತ್ತದೆ. ಈ ದ್ವೇಷವು ಫ್ಯಾಸಿಸಂಅನ್ನು ಹುಟ್ಟುಹಾಕಿದ ನಾಯಕ ಶಿಖಾಮಣಿಗಳ ಹೇಳಿಕೆಗಳನ್ನು ಆಧರಿಸಿವೆಯೇ ವಿನಃ, ಅದಕ್ಕೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಹಾಗೆ ನೋಡಿದರೆ, ಫ್ಯಾಸಿಸ್ಟರು ಮತ್ತು ನವ-ಫ್ಯಾಸಿಸ್ಟರು ಯಾವ ಸಾಕ್ಷ್ಯಾಧಾರಗಳಿಗೂ ಬೆಲೆ ಕೊಡುವವರಲ್ಲ. ಅವರಿಗೂ ಸಾಕ್ಷ್ಯಾಧಾರಗಳಿಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಎಲ್ಲ ಸಾಕ್ಷ್ಯಾಧಾರಗಳನ್ನು ದೂರವಿಡುವ ಮೂಲಕ ಮತ್ತು ವೈಜ್ಞಾನಿಕ ಶೋಧನೆಗೆ (ವಿಜ್ಞಾನವು ಸಾಕ್ಷ್ಯಾಧಾರಗಳನ್ನು ಹುಡುಕುವ ಮತ್ತು ವಿಶ್ಲೇಷಿಸುವ ಪ್ರಕ್ರಿಯೆ) ತಮ್ಮ ಮನಸ್ಸಿನ ಬಾಗಿಲುಗಳನ್ನು ಮುಚ್ಚಿಕೊಳ್ಳುವ ಮೂಲಕ ಅವರು ತಮ್ಮ ವಿನಾಶಕರ “ಸಿದ್ಧಾಂತ”ಕ್ಕೆ ಅಂಟಿಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ವೈಜ್ಞಾನಿಕ ಶೋಧನೆಯ ಕಾರಣಕ್ಕಾಗಿಯೇ ಪಡೆದಿರುವುದರಿಂದ ನಿಜಕ್ಕೂ ಅವು ಫ್ಯಾಸಿಸಂ ಮತ್ತು ನವ-ಫ್ಯಾಸಿಸಂನ ಈ “ಸಿದ್ಧಾಂತ”ಕ್ಕೆ ಬಹಳ ಅಪಾಯಕಾರಿಯಾಗುತ್ತವೆ. ಆದ್ದರಿಂದ, ಶಿಕ್ಷಣ ಸಂಸ್ಥೆಗಳನ್ನು ಫ್ಯಾಸಿಸ್ಟರು ಕೇವಲ ಅನುಮಾನದಿಂದ ಮಾತ್ರವೇ ಅಲ್ಲ, ಅತೀವ ದ್ವೇಷದಿಂದಲೂ ಕಾಣುತ್ತಾರೆ.
ದಾಳಿಯ ಎರಡು ಮೂಲಗಳು
ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದ ಮೇಲಿನ ದಾಳಿಯು ಎರಡು ಮೂಲಗಳಿಂದ ಬರುತ್ತದೆ: ಮೊದಲನೆಯದು, ನಮಗೆ ಪರಿಚಿತವಿರುವ ‘ನವ-ಉದಾರವಾದೀ’ ದಾಳಿ. ಇದು ‘ಮಿತವ್ಯಯ’ದಂತಹ ಕಠಿಣ ಕ್ರಮವನ್ನು ಸರ್ಕಾರದ ಮೇಲೆ ಹೇರುವ ಮೂಲಕ ಶಿಕ್ಷಣವನ್ನು ಖಾಸಗೀಕರಣಗೊಳಿಸುತ್ತದೆ ಮತ್ತು ಈ ಖಾಸಗೀಕರಣವು ಶಿಕ್ಷಣವನ್ನು ಒಂದು ಸರಕನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ, ವಿಮರ್ಶಾತ್ಮಕ ಶೋಧನೆಯ ಪ್ರಕ್ರಿಯೆಯಾಗಬೇಕಿದ್ದ ಶಿಕ್ಷಣವು ಕೇವಲ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿ ಪರಿಣಮಿಸುತ್ತದೆ. ಎರಡನೆಯದು, ‘ನವ-ಫ್ಯಾಸಿಸ್ಟ್’ ಗುಂಪುಗಳಿಂದ ನಡೆಯುವ ದಾಳಿ. ಯಾವುದೇ ರೀತಿಯ ವಿಮರ್ಶಾತ್ಮಕ ಶೋಧನೆಯನ್ನೂ ಅಪಾಯಕಾರಿ ಎಂದೇ ಪರಿಗಣಿಸುವ ಈ ಫ್ಯಾಸಿಸ್ಟರು ಜನಸಮುದಾಯದ ಬಹು ಪಾಲು ಮಂದಿಗೆ ಶಿಕ್ಷಣ ದೊರಕದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಶಿಕ್ಷಣವು ಕೇವಲ ಕೆಲವು ನಿರ್ದಿಷ್ಟ ಕೌಶಲಗಳನ್ನು ಗಳಿಸಿಕೊಳ್ಳುವ ಸಾಧನವಾಗಿ ಬದಲಾಗುವುದನ್ನೂ ಸಹ ಮೌನವಾಗಿ ಸಮ್ಮತಿಸುತ್ತಾರೆ. ಜ್ಞಾನೋದಯದ ಒಂದು ಸಾಧನವಾಗಿದ್ದ ಶಿಕ್ಷಣವು ಈ ರೀತಿಯಲ್ಲಿ ಕೇವಲ ಗಣ್ಯವರ್ಗದ ಮಕ್ಕಳಿಗಷ್ಟೇ ಮುಡಿಪಾದ ಕೌಶಲ್ಯಗಳನ್ನು ಗಳಿಸಿಕೊಳ್ಳುವ ಚಟುವಟಿಕೆಯಾಗಿ ಮಾರ್ಪಡುತ್ತದೆ. ಇದುವೇ ಬಿಜೆಪಿ ನೇತೃತ್ವದ ಸರ್ಕಾರದ ‘ಹೊಸ ಶಿಕ್ಷಣ ನೀತಿ’ಯ ಹೂರಣ ಎಂಬುದು ನಮಗೆ ತಿಳಿದದ್ದೇ.
ಶಿಕ್ಷಣವನ್ನು ನಾಶಪಡಿಸುವ ನವ-ಫ್ಯಾಸಿಸ್ಟ್ ಪ್ರಯತ್ನಗಳ ಹಿಂದೆ ಇನ್ನೊಂದು ಗುಪ್ತ ಪ್ರೇರಣೆಯೂ ಇದೆ ಮತ್ತು ಭಾರತದ ಸಂದರ್ಭದಲ್ಲಿ ಇದು ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ತಾವು ಹೇಳಿದ್ದೇ ಸರಿ ಎನ್ನುವ ನವ-ಫ್ಯಾಸಿಸ್ಟರು ಹಠವಾದಿಗಳು ಮಾತ್ರವಲ್ಲ, ಭೋಳೇ ಸ್ವಭಾವದವರೂ ಆಗಿರುವ ಈ ವ್ಯಕ್ತಿಗಳು ಕೆಟ್ಟ ಪರಿಣಾಮಗಳನ್ನು ಬೀರಬಲ್ಲ ಒಂದು ಬುದ್ಧಿ ಶೂನ್ಯ ‘ಸಿದ್ಧಾಂತ’ವೊಂದಕ್ಕೆ ಜಗ್ಗದೇ ಅಂಟಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಒಂದು ಗಮನಾರ್ಹವಾದ ಸಂಗತಿಯನ್ನು ಹೇಳುವುದಾದರೆ, ತಮ್ಮ ‘ಸಿದ್ಧಾಂತ’ವು ಒಂದು ಬುರುಡೆ ಎಂಬುದು ನವ-ಫ್ಯಾಸಿಸ್ಟ್ ನಾಯಕತ್ವದ ಪ್ರಮುಖ ವ್ಯಕ್ತಿಗಳಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೂ, ಅವರು ತಮ್ಮ ಈ ಸಿದ್ಧಾಂತವನ್ನು ತಮ್ಮ ಅನುಯಾಯಿಗಳು ಹಾಗೂ ಸಾರ್ವಜನಿಕರು ಒಪ್ಪಿಕೊಳ್ಳುವಂತೆ ಪ್ರಭಾವಿಸುವ ಉದ್ದೇಶದಿಂದ ಮತ್ತು ಅವರನ್ನು ತಮ್ಮ ಈ ಸಿದ್ಧಾಂತಕ್ಕೆ ನಿಷ್ಠರಾಗಿ ಉಳಿಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅದೇ ಹಳಸಲು ವಿಷಯಗಳನ್ನು ನಿರಂತರವಾಗಿ ಪ್ರಚಾರ ಮಾಡುತ್ತಲೇ ಇರುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನವ-ಫ್ಯಾಸಿಸಂ ಎಂಬುದು ಕೇವಲ ಒಂದು ಕೆಟ್ಟ ಮತ್ತು ಭ್ರಾಮಕ ನಿರೂಪಣೆಯಿಂದ ಮಾತ್ರವೇ ಕೂಡಿಲ್ಲ; ಅದಕ್ಕಿಂತ ಮುಖ್ಯವಾಗಿ, ‘ದುರುದ್ದೇಶದಿಂದ’ ಕೂಡಿದ ಈ ಸುಳ್ಳು ನಿರೂಪಣೆಯನ್ನು ಜನರು ನಂಬುವಂತೆ ಮಾಡುವ ಉದ್ದೇಶದಿಂದ ಕುತಂತ್ರಗಳ ಮೂಲಕ ಅವರನ್ನು ನವ-ಫ್ಯಾಸಿಸ್ಟ್ ನಾಯಕರು ಪ್ರಭಾವಿಸುತ್ತಾರೆ. ಆದ್ದರಿಂದ, ನವ-ಫ್ಯಾಸಿಸಂ ಎಂಬುದು ಒಂದು ಅನಿಷ್ಟ ಎಂಬುದಷ್ಟೇ ಅಲ್ಲ; ಅದು ಒಂದು ಕೇಡು ಎಂಬುದು ತಿಳಿದಿದ್ದರೂ, ಈ ಕೇಡಿಗ-ಸುಳ್ಳು ನಿರೂಪಣೆಯನ್ನು ಜನರಿಗೆ ‘ಮಾರಾಟ’ ಮಾಡುವ ಕೆಲಸದಲ್ಲಿ ನಿರಂತರವಾಗಿ ಅದು ತೊಡಗಿರುತ್ತದೆ. ನವ-ಫ್ಯಾಸಿಸಂ
ಇದನ್ನೂ ಓದಿ : ಹವಾಮಾನ ಬಿಕ್ಕಟ್ಟು ಎಂದರೆ ಮನಸ್ಸಿನ ಬಿಕ್ಕಟ್ಟೂ ಕೂಡ
ಯಾವುದೇ ರೀತಿಯ ವಿಮರ್ಶಾತ್ಮಕ ಶೋಧನೆಯನ್ನೂ ಅಪಾಯಕಾರಿ ಎಂದೇ ಪರಿಗಣಿಸುವ ಈ ಫ್ಯಾಸಿಸ್ಟರು ಜನಸಮುದಾಯದ ಬಹು ಪಾಲು ಮಂದಿಗೆ ಶಿಕ್ಷಣ ದೊರಕದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಶಿಕ್ಷಣವು ಕೇವಲ ಕೆಲವು ನಿರ್ದಿಷ್ಟ ಕೌಶಲಗಳನ್ನು ಗಳಿಸಿಕೊಳ್ಳುವ ಸಾಧನವಾಗಿ ಬದಲಾಗುವುದನ್ನೂ ಸಹ ಮೌನವಾಗಿ ಸಮ್ಮತಿಸುತ್ತಾರೆ. ಜ್ಞಾನೋದಯದ ಒಂದು ಸಾಧನವಾಗಿದ್ದ ಶಿಕ್ಷಣವು ಈ ರೀತಿಯಲ್ಲಿ ಕೇವಲ ಗಣ್ಯವರ್ಗದ ಮಕ್ಕಳಿಗಷ್ಟೇ ಮುಡಿಪಾದ ಕೌಶಲ್ಯಗಳನ್ನು ಗಳಿಸಿಕೊಳ್ಳುವ ಚಟುವಟಿಕೆಯಾಗಿ ಮಾರ್ಪಡುತ್ತದೆ. ಇದುವೇ ಬಿಜೆಪಿ ನೇತೃತ್ವದ ಸರ್ಕಾರದ ‘ಹೊಸ ಶಿಕ್ಷಣ ನೀತಿ’ಯ ಹೂರಣ…
ಇಂತಹ ಕುತಂತ್ರಗಳಿಗೆ ಶಿಕ್ಷಣ ಪಡೆದ ಬಹಳ ಮಂದಿ ಸುಲಭವಾಗಿ ಬಲಿಯಾಗುವುದಿಲ್ಲ. ಶಿಕ್ಷಿತರಲ್ಲಿ ಅನೇಕರು ನವ-ಫ್ಯಾಸಿಸ್ಟರೊಂದಿಗೆ ಹೋಗುತ್ತಾರೆ, ಏಕೆಂದರೆ ಅವರನ್ನು ಯಾವುದೋ ಒಂದು ರೀತಿಯ ಒತ್ತಾಯಕ್ಕೆ ಒಳಪಡಿಸಲಾಗಿರುತ್ತದೆ. ಇನ್ನು ಕೆಲವರು, ನವ-ಫ್ಯಾಸಿಸ್ಟರು ನೀಡುವ ಆಮಿಷಗಳಿಗೆ ಮರುಳಾಗಿ ಅವರನ್ನು ಬೆಂಬಲಿಸುತ್ತಾರೆ. ಮತ್ತೂ ಕೆಲವರು ನವ-ಫ್ಯಾಸಿಸ್ಟರು ಪ್ರತಿಪಾದಿಸುವ ವರ್ಗ-ದೃಷ್ಟಿಕೋನಗಳು ಮತ್ತು ವರ್ಗ-ನಿಲುವುಗಳು ಇಷ್ಟವಾಗುವ ಕಾರಣದಿಂದ ಅವರನ್ನು ವರ್ಗ ನೆಲೆಯಲ್ಲಿ ಬೆಂಬಲಿಸುತ್ತಾರೆ. ಆದರೂ, ನವ-ಫ್ಯಾಸಿಸ್ಟರ “ಸಿದ್ಧಾಂತ”ದ ಬಗ್ಗೆ ಇವರು ಹೊಂದಿರುವ ಅಭಿಪ್ರಾಯವು ಸಂದೇಹದಿಂದ ಹಿಡಿದು ವೈಷಮ್ಯದವರೆಗಿನ ವ್ಯಾಪ್ತಿಯನ್ನು ಹೊಂದಿದೆ. ಬಹಳ ಮುಖ್ಯವಾಗಿ, ನವ-ಫ್ಯಾಸಿಸ್ಟರ ವರ್ಗ-ನಿಲುವುಗಳನ್ನು ಬೆಂಬಲಿಸುವ ಬಹುತೇಕರಿಗೆ, ನವ-ಫ್ಯಾಸಿಸ್ಟರ “ದುರುದ್ದೇಶ” ಮತ್ತು ಕುತಂತ್ರ ಸ್ವಭಾವದ ಅರಿವಿದೆ.
“ತುಕ್ಡೆ ತುಕ್ಡೆ ಗ್ಯಾಂಗ್” ಇತ್ಯಾದಿ
ಈ “ದುರುದ್ದೇಶ” ಮತ್ತು ಕುತಂತ್ರದ ನಡವಳಿಕೆಯು ಶಿಕ್ಷಿತ ಜನಸಮುದಾಯದ ದೊಡ್ಡ ವಿಭಾಗಗಳಲ್ಲಿ ನವ-ಫ್ಯಾಸಿಸ್ಟರ ಬಗ್ಗೆ ಒಂದು ಜುಗುಪ್ಸೆಯ ಭಾವನೆಯನ್ನು (ಅದು ಬಹಿರಂಗವಾಗಿ ವ್ಯಕ್ತವಾಗಿರಲಿ ಅಥವಾ ಬಿಡಲಿ) ಉಂಟುಮಾಡುತ್ತದೆ ಎಂಬುದು ನವ-ಫ್ಯಾಸಿಸ್ಟರಿಗೂ ಗೊತ್ತಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ತಮ್ಮ ದುರುದ್ದೇಶವನ್ನು ಸುಶಿಕ್ಷಿತ ವರ್ಗಗಳು ಅರಿತುಕೊಂಡಿವೆ ಎಂಬುದು ನವ-ಫ್ಯಾಸಿಸ್ಟ್ ನಾಯಕರಿಗೆ ತಿಳಿದಿದೆ. ಅವರು ಪ್ರದರ್ಶಿಸುವ ಸತ್ಯದ ಸೋಗನ್ನು (ತೋರಿಕೆಗಾದರೂ ಅದರಲ್ಲಿ ಸತ್ಯದ ಲವಲೇಶವೂ ಇರುವುದಿಲ್ಲ) ಶಿಕ್ಷಿತ ವರ್ಗಗಳು ಗುರುತಿಸಿವೆ. ಈ ದುರುದ್ದೇಶದ ಅರಿವು ಸುಶಿಕ್ಷಿತ ವರ್ಗದಲ್ಲಿದೆ ಎಂಬುದು ನವ-ಫ್ಯಾಸಿಸ್ಟ್ ನಾಯಕರಿಗೆ ತಿಳಿದಿದೆ ಮತ್ತು ಅದು ಅವರಲ್ಲಿ ಒಂದು ರೀತಿಯ ಕೀಳರಿಮೆಯ ಭಾವನೆಯನ್ನು ಮತ್ತು ಮಾತೆತ್ತಿದರೆ ಮೇಲೆ ಬೀಳುವ ಜಗಳಗಂಟತನವನ್ನು ಹುಟ್ಟುಹಾಕುತ್ತದೆ.
ಶಿಕ್ಷಿತ ವರ್ಗಗಳ ಎದುರು ಹಿಂದುತ್ವ ನಾಯಕತ್ವವು ಅನುಭವಿಸುವ ವೈಯಕ್ತಿಕ ಅಭದ್ರತೆಯ ಮತ್ತು ಕೀಳರಿಮೆಯ ಭಾವನೆಯನ್ನು ಸುಲಭವಾಗಿ ಗ್ರಹಿಸಬಹುದಾಗಿದೆ ಮತ್ತು ಇದು ಭಾರತದ ಒಂದು ಮಹತ್ವದ ವಿದ್ಯಮಾನವಾಗಿದೆ. “ನಾಯಕ”ನ ಬಗ್ಗೆ ಜನಸಮುದಾಯದ ಇತರ ವರ್ಗಗಳು ಹೊಂದಿರುವ ಆರಾಧನಾ ಭಾವನೆಗೆ ಹೋಲಿಸಿದರೆ, ಸುಶಿಕ್ಷಿತ ವರ್ಗಗಳ ತಾತ್ಸಾರ ನಿಲುವು ನವ-ಫ್ಯಾಸಿಸ್ಟ್ ನಾಯಕತ್ವವನ್ನು ಕೆರಳಿಸುತ್ತದೆ.
ಶಿಕ್ಷಿತ ವರ್ಗಗಳ ಬಗ್ಗೆ ಹಿಂದುತ್ವ ನಾಯಕತ್ವವು ಹೊಂದಿರುವ ಮತ್ಸರವು, ಈ ವರ್ಗದವರು ಹಿಂದುತ್ವವಾದಿಗಳ ದುರುದ್ದೇಶ ಮತ್ತು ಕುತಂತ್ರಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲವರಾಗಿರುವ ಕಾರಣದಿಂದ ಉದ್ಭವಿಸುತ್ತದೆ. ಈ ಸುಶಿಕ್ಷಿತ ವರ್ಗಗಳ ವಿರುದ್ಧ ಹಿಂದುತ್ವ ನಾಯಕತ್ವದ, ಅದರಲ್ಲೂ ವಿಶೇಷವಾಗಿ “ನಾಯಕ”ನ ಕೋಪವು, ಬುದ್ಧಿಜೀವಿಗಳನ್ನು ಅಥವಾ ಸುಶಿಕ್ಷಿತರನ್ನು ಕುರಿತು ಅವರು ಬಳಸುವ “ಖಾನ್ ಮಾರ್ಕೆಟ್ ಗ್ಯಾಂಗ್” ಅಥವಾ “ತುಕ್ಡೆ ತುಕ್ಡೆ ಗ್ಯಾಂಗ್”ನಂತಹ ಪದಪ್ರಯೋಗಗಳಲ್ಲಿ ವ್ಯಕ್ತವಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೂ ಇದೆ. ಒಂದು ಶಿಕ್ಷಣ ಸಂಸ್ಥೆಯು ಎಷ್ಟು ಪ್ರತಿಷ್ಠಿತ ಎನಿಸಿದೆಯೋ ಮತ್ತು ಅಲ್ಲಿಂದ ಹೊರಬರುವ ವಿದ್ಯಾರ್ಥಿಗಳು ಎಷ್ಟು ಪ್ರಖರವಾಗಿ ಇದ್ದಾರೆಯೋ, ಅಷ್ಟೇ ಸುಲಭವಾಗಿ ಅವರು ನವ-ಫ್ಯಾಸಿಸ್ಟ್ ಹಿಂದುತ್ವವಾದಿಗಳ ಕುಯುಕ್ತಿ, ವಿತಂಡವಾದ, ಬೌದ್ಧಿಕ ಶೂನ್ಯತೆ, “ದುರುದ್ದೇಶ” ಮತ್ತು ಕುತಂತ್ರಗಳನ್ನು ಗುರುತಿಸಬಲ್ಲರು. ಆದ್ದರಿಂದ, ತಮ್ಮ ಏಳಿಗೆಗೆ ಇಂತಹ ಶಿಕ್ಷಣ ಸಂಸ್ಥೆಗಳೇ ಒಂದು ಅಡೆತಡೆ ಎಂದು ಭಾವಿಸುವ ಹಿಂದುತ್ವವಾದಿಗಳು ಅವುಗಳ ಬಗ್ಗೆ ಹೆಚ್ಚು ದ್ವೇಷ ಕಾರುತ್ತಾರೆ ಮತ್ತು ಅವುಗಳ ಮೇಲೆ ದಾಳಿ ನಡೆಸಲು ಹೆಚ್ಚು ಉತ್ಸುಕರಾಗಿರುತ್ತಾರೆ. ಹಾಗಾಗಿಯೇ, ನವ-ಫ್ಯಾಸಿಸ್ಟರು ಮತ್ತು ಅವರ ನಿಯಂತ್ರಣದಲ್ಲಿರುವ ಸರ್ಕಾರವು, ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅವುಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಾ ಬಂದಿರುವುದು ವಿರೋಧಾಭಾಸ ಮತ್ತು ಹೆಚ್ಚು ವಿಪರ್ಯಾಸವಾಗಿ ಕಾಣುತ್ತದೆ . ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜಾಧವ್ಪುರ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ವಿಶ್ವಭಾರತಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ – ಇವು ನಿಸ್ಸಂದೇಹವಾಗಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳೇ ಹೌದು. ಇವುಗಳ ಬಗ್ಗೆ ದೇಶವು ನಿಜಕ್ಕೂ ಹೆಮ್ಮೆಪಡಬಹುದಾದರೂ, ಹಿಂದುತ್ವದ ದಾಳಿಗೆ ತುತ್ತಾಗಿರುವ ಮುಂಚೂಣಿಯ ಸಂಸ್ಥೆಗಳು ಇವೇ ಆಗಿವೆ. ಈ ಸಂಸ್ಥೆಗಳ ಮೇಲೆ ನಡೆಸಿದ ದಾಳಿಯಿಂದ ತೃಪ್ತರಾಗದ ಹಿಂದುತ್ವವಾದಿ ಶಕ್ತಿಗಳು ತಮ್ಮ ದಾಳಿಯನ್ನು ಇತರ ಪ್ರತಿಷ್ಠಿತ ಸಂಸ್ಥೆಗಳಿಗೂ ವಿಸ್ತರಿಸಿವೆ. ಇವು ಶೈಕ್ಷಣಿಕ ಸಂಸ್ಥೆಗಳಲ್ಲದಿದ್ದರೂ, ಸಮಾಜವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವಲ್ಲಿ ತೊಡಗಿಕೊಂಡಿರುವ ಸೃಜನಶೀಲ ಮನಸ್ಸುಗಳ ತಾಣಗಳಾಗಿವೆ. ಉದಾಹರಣೆಗೆ, ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ಮತ್ತು ಸತ್ಯಜಿತ್ ರೇ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಸ್ಟಡೀಸ್. ಇವುಗಳಲ್ಲಿ ನಿರ್ದಿಷ್ಟವಾಗಿ ಸತ್ಯಜಿತ್ ರೇ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಸ್ಟಡೀಸ್ ಪ್ರಕರಣವಂತೂ ಅತ್ಯಂತ ಆಘಾತಕಾರಿಯಾಗಿದೆ. ಏಕೆಂದರೆ, ಆ ಸಂಸ್ಥೆಯ ಆವರಣಕ್ಕೆ ನುಗ್ಗಿದ ಆರ್ಎಸ್ಎಸ್ನೊಂದಿಗೆ ಸಂಯೋಜನೆ ಹೊಂದಿದ ಹಿಂದುತ್ವವಾದಿ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಸುಮ್ಮ ಸುಮ್ಮನೇ ಹಲ್ಲೆ ನಡೆಸಿದ್ದಾರೆ!
ಶಿಕ್ಷಿತ ವರ್ಗಗಳ ಎದುರು ಹಿಂದುತ್ವ ನಾಯಕತ್ವವು ಅನುಭವಿಸುವ ವೈಯಕ್ತಿಕ ಅಭದ್ರತೆಯ ಮತ್ತು ಕೀಳರಿಮೆಯ ಭಾವನೆಯನ್ನು ಸುಲಭವಾಗಿ ಗ್ರಹಿಸಬಹುದಾಗಿದೆ ಮತ್ತು ಇದು ಭಾರತದ ಒಂದು ಮಹತ್ವದ ವಿದ್ಯಮಾನವಾಗಿದೆ. “ನಾಯಕ”ನ ಬಗ್ಗೆ ಜನಸಮುದಾಯದ ಇತರ ವರ್ಗಗಳು ಹೊಂದಿರುವ ಆರಾಧನಾ ಭಾವನೆಗೆ ಹೋಲಿಸಿದರೆ, ಹಿಂದುತ್ವವಾದಿಗಳ ದುರುದ್ದೇಶ ಮತ್ತು ಕುತಂತ್ರಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲ ಸುಶಿಕ್ಷಿತ ವರ್ಗಗಳ ತಾತ್ಸಾರ ನಿಲುವು ನವ-ಫ್ಯಾಸಿಸ್ಟ್ ನಾಯಕತ್ವವನ್ನು ಕೆರಳಿಸುತ್ತದೆ. ಅವರ ವಿರುದ್ಧ ಹಿಂದುತ್ವ ನಾಯಕತ್ವದ, ಅದರಲ್ಲೂ ವಿಶೇಷವಾಗಿ “ನಾಯಕ”ನ ಕೋಪವು, ಬುದ್ಧಿಜೀವಿಗಳನ್ನು ಅಥವಾ ಸುಶಿಕ್ಷಿತರನ್ನು ಕುರಿತು ಅವರು ಬಳಸುವ “ಖಾನ್ ಮಾರ್ಕೆಟ್ ಗ್ಯಾಂಗ್” ಅಥವಾ “ತುಕ್ಡೆ ತುಕ್ಡೆ ಗ್ಯಾಂಗ್”ನಂತಹ ಪದಪ್ರಯೋಗಗಳಲ್ಲಿ ವ್ಯಕ್ತವಾಗುತ್ತದೆ.
“ಶಿಕ್ಷಣ ವಿರೋಧಿ” ಸರಕಾರ
ಹಿಂದುತ್ವ ಸರ್ಕಾರವು ಭಾರತದ ಪಾರಂಪರಿಕ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಧುನಿಕ ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ ಎಂದು ಭಾವಿಸುವವರು ಈ ಸರ್ಕಾರವನ್ನು “ಶಿಕ್ಷಣ ವಿರೋಧಿ” ಎಂದು ಕರೆಯುವುದು ಸರಿಯಲ್ಲ ಮತ್ತು ನ್ಯಾಯವಲ್ಲ ಎಂದು ವಾದಿಸಬಹುದು. ಆದರೆ, ಹಿಂದುತ್ವ ಆಡಳಿತದ ಕಳೆದ ಹನ್ನೆರಡು ವರ್ಷಗಳಲ್ಲಿ, ದೆಹಲಿಯ ಜೆಎನ್ಯು, ಕೊಲ್ಕತಾದ ಜಾಧವ್ಪುರ್ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಂತಹ ವಿಖ್ಯಾತ ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ನಿರಂತರ ದಾಳಿಗೆ ಒಳಪಡಿಸಿದಾಗ, ಭಾರತದ ಸಂಪ್ರದಾಯ-ಪರಂಪರೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಬೋಧಿಸುವ (ಅಥವಾ ಅದಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ಕೈಗೊಳ್ಳುವ) ಮತ್ತು ಆ ನಿಟ್ಟಿನಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಗುರಿ ಹೊಂದಿರುವ ಒಂದೇ ಒಂದು ಹೊಸ ಸಂಸ್ಥೆಯನ್ನೂ ಸ್ಥಾಪಿಸಲಾಗಿಲ್ಲ ಅಥವಾ ಅಂತಹ ಸಂಸ್ಥೆಯನ್ನು ಬೆಳೆಸಲಾಗಿಲ್ಲ ಎಂಬ ಸಂಗತಿಯು ಗಮನಾರ್ಹವಾಗಿದೆ. ಸಂಸ್ಥೆಯೊಂದು ಶ್ರೇಷ್ಠತೆಯನ್ನು ಸಂಪಾದಿಸಬೇಕು ಎಂದಾದರೆ, ಅದಕ್ಕೆ ಬಹಳ ಸಮಯವೇನೂ ಹಿಡಿಯುವುದಿಲ್ಲ: ಸ್ಥಾಪನೆಯಾದ ಒಂದೇ ಒಂದು ದಶಕದೊಳಗೆ ಜೆಎನ್ಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಹಾಗಾಗಿ, ಭಾರತದ ಸಂಪ್ರದಾಯ-ಪರಂಪರೆಗಳ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಸಂಸ್ಥೆಯೊಂದನ್ನು ಹಿಂದುತ್ವ ಆಳ್ವಿಕೆಯು ಸ್ಥಾಪಿಸಿದ್ದರೆ, ಈ ಹೊತ್ತಿಗೆ ಅದರ ಖ್ಯಾತಿ ಎಲ್ಲೆಡೆ ಹರಡಬೇಕಿತ್ತು. ಅದು ಆಗಲಿಲ್ಲ ಏಕೆಂದರೆ, ಹಿಂದುತ್ವದ ಆಡಳಿತಾವಧಿಯಲ್ಲಿ ಆ ಮಟ್ಟದ ಯಾವುದೇ ಸಂಸ್ಥೆಯನ್ನೂ ಸ್ಥಾಪಿಸಲಾಗಿಲ್ಲ.
ಮೇಲ್ಕಾಣಿಸಿದ ಅಂಶಗಳು ಒಂದು ಪ್ರಮುಖ ವಿಷಯವನ್ನು ಸೂಚಿಸುತ್ತವೆ. ಹಿಂದುತ್ವ ಸರ್ಕಾರವು ಅಧಿಕಾರದಲ್ಲಿರುವ ಪ್ರತಿ ದಿನವೂ, ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. “ಬಿಜೆಪಿ ಸರ್ಕಾರಕ್ಕೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡಿದರೆ, ಅವರು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ವಲ್ಪವಾದರೂ ಕೆಲಸ ಮಾಡಬಹುದು” ಎಂಬ ಪ್ರಶ್ನೆಯೇ ಇಲ್ಲ. ಏಕೆಂದರೆ, ಅವರು ಶಿಕ್ಷಣ ವ್ಯವಸ್ಥೆಯ ಬಗ್ಗೆ ಏನೇ ಮಾಡಿದರೂ, ಅದು ಆ ವ್ಯವಸ್ಥೆಯನ್ನು ಮತ್ತಷ್ಟು ವಿನಾಶದತ್ತ ಕೊಂಡೊಯ್ಯುತ್ತದೆಯೇ ಹೊರತು ಬೇರೇನೂ ಅಲ್ಲ. ಪಶ್ಚಿಮ ಬಂಗಾಳದಾದ್ಯಂತ ಪೂಜಾ ಪೆಂಡಾಲ್ಗಳ ಬಳಿ ಎಡ ಪಕ್ಷಗಳು ತೆರೆದಿದ್ದ ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿಸುತ್ತಿದ್ದ ದುಷ್ಕರ್ಮಿಗಳಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ನೀಡಿದ ಖಂಡನಾರ್ಹ ಬೆಂಬಲವು, ಸಾಹಿತ್ಯ ಲೋಕದ ಬಗ್ಗೆ ಹಿಂದುತ್ವವು ಹೊಂದಿರುವ ಮನೋಭಾವವನ್ನು ಎತ್ತಿ ತೋರಿಸುತ್ತದೆ. ನವ-ಫ್ಯಾಸಿಸಂ
—
ಇದನ್ನೂ ನೋಡಿ : ಬೆಲೆ ಏರಿಕೆ ಬರೆ: ಕಾಂಗ್ರೆಸ್ ಸರ್ಕಾರಕ್ಕೆ CPI(M) ಖಡಕ್ ಎಚ್ಚರಿಕೆ! Janashakthi Media
