ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಕ್ಕೆ ಗುಡ್‌ಬೈ ಹೇಳಿದ ಕ್ರಿಸ್ಟಿಯಾನೊ ರೊನಾಲ್ಡೊ; 23 ವರ್ಷಗಳ ಪಯಣಕ್ಕೆ ತೆರೆ

  • ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಘೋಷಿಸಿದ ಕ್ರಿಸ್ಟಿಯಾನೊ ರೊನಾಲ್ಡೊ.
  •  ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ.
  • ರಾಷ್ಟ್ರೀಯ ತಂಡದ ನಂ.7 ಜರ್ಸಿಯನ್ನು ಹಿಂದಿರುಗಿಸುವ ಸಮಯ ಬಂದಿದೆ ಎಂದು ಭಾವುಕ ನುಡಿ.
Cristiano Ronaldo retires: ಪೋರ್ಚುಗಲ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು  ಅಂತರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಇಂದು (ನ.5)ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. Cರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ಪರ 234 ಪಂದ್ಯಗಳನ್ನು ಆಡಿದ್ದಾರೆ.  146 ಗೋಲುಗಳನ್ನು ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧಿಸಿ ಸಾರ್ವಕಾಲಿಕ ದಾಖಲೆಯನ್ನು  ಪಡೆದುಕಕೊಂಡಿದ್ದಾರೆ. ಸದ್ಯ  ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಹಂಚಿಕೊಂಡ ವಿಡಿಯೋ 5 ನಿಮಿಷಗಳಿದ್ದು,  ಗುಡ್‌ಬೈ  ಹೇಳುತ್ತಿರುವ ಹಿಂದೆ ಎಷ್ಟು ನೋವಿದೆ…ಹಾಗೂ ಇದರ ಹಿಂದಿನ ಕಾರಣ ಏನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಗುರುವಾರ ವಿಡಿಯೋ ಸಂದೇಶದ ಮೂಲಕ ಈ ನಿರ್ಧಾರ ಪ್ರಕಟಿಸಿದ ಕ್ರಿಸ್ಟಿಯಾನೊ ರೊನಾಲ್ಡೊ, ‘ ಪೋರ್ಚುಗಲ್‌ ಜನರೇ  ಇನ್ಮುಂದೆ ನಮ್ಮ ರಾಷ್ಟ್ರೀಯ ತಂಡದ ನಂ.7 ಜರ್ಸಿಯನ್ನು ಮುಂದಿನ ಪೀಳಿಗೆಗಾಗಿ ಹಿಂದಿರುಗಿಸುವ ಸಮಯ ಬಂದಿದೆ. ಈ ಜರ್ಸಿ ನನಗಷ್ಟೇ ಸೀಮಿತ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. 23 ವರ್ಷಗಳ ಕಾಲ ಅದನ್ನು ಧರಿಸಿ ಪ್ರಪಂಚದಾದ್ಯಂತ ತಿರುಗುವ ಅದ್ಭುತ ಅವಕಾಶ ನನಗಿತ್ತು. ಇಂದು, ಅದನ್ನು ಮುಂದಿನ ಭವಿಷ್ಯಕ್ಕೆ ರವಾನಿಸುವ ಸಮಯ ಬಂದಿದೆ. ಇದು ನನಗೆ ಸುಲಭದ ನಿರ್ಧಾರವಾಗಿರಲಿಲ್ಲ. ಏಕೆಂದರೆ ಕೆಲವು ನಿರ್ಧಾರ ಒಂಟಿಯಾಗಿ ಮೆದುಳಿನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ.  ಹೃದಯದಿಂದಲೂ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ರೊನಾಲ್ಡೊ

ಇದನ್ನೂ ಓದಿ: ಫಿಫಾ ವಿಶ್ವಕಪ್‌ 2026: ಫ್ರಾನ್ಸ್‌ಗೆ ಸೋಲು, ಸ್ಪೇನ್‌ ಫೈನಲ್‌ಗೆ

ನಾನು ಮುಂದೆಯೂ ಹುರಿದುಂಬಿಸುತ್ತೇನೆ

ರಾಷ್ಟ್ರೀಯ ತಂಡದೊಂದಿಗೆ ನನ್ನ ಇಡೀ ವೃತ್ತಿಜೀವನದುದ್ದಕ್ಕೂ ನಾನು ಮಿತಿ ಮೀರಿ ಆಡಿದ್ದೇನೆ. ನಾನು ಗೆಲ್ಲಲು ಬಯಸಿದ್ದೆ. ನಾನು ಅತ್ಯುತ್ತಮನಾಗಲು ಬಯಸಿದ್ದೆ. ನಾನು ಇತಿಹಾಸ ನಿರ್ಮಿಸಲು ಬಯಸಿದ್ದೆ.ನಾನು ಯಾವಾಗಲೂ ನನ್ನಿಂದಲೇ ಹೆಚ್ಚಿನದನ್ನು ಬೇಡಿಕೊಂಡೆ. ನಾವು ಇನ್ನೂ ಮುಂದೆ ಹೋಗಬಹುದು ಎಂದು ನಾನು ಯಾವಾಗಲೂ ನಂಬಿದ್ದೆ, ಮತ್ತು ಈ ಜರ್ಸಿಗಾಗಿ ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ.ಇಂದು ತಲೆಯೆತ್ತಿ, ಪೋರ್ಚುಗಲ್‌ಗಾಗಿ ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ ಎಂಬ ಹೆಮ್ಮೆಯೊಂದಿಗೆ ನಾನು ಈ ಜರ್ಸಿಯನ್ನು ಹಿಂದಿರುಗಿಸುತ್ತಿದ್ದೇನೆ.ಆದರೆ ನಾನು ನಿಮ್ಮಲ್ಲಿ ಒಬ್ಬನಾಗುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾನು ಇನ್ನು ಮುಂದೆಯೂ ಹುರಿದುಂಬಿಸುತ್ತಲೇ ಇರುತ್ತೇನೆ, ನೋವು ಪಡುತ್ತಲೇ ಇರುತ್ತೇನೆ, ಮತ್ತು SIUUU ಎಂದು ಕೂಗುತ್ತಾ ಪ್ರತಿ ಪೋರ್ಚುಗೀಸ್ ಗೆಲುವನ್ನು ಸಂಭ್ರಮಿಸುತ್ತೇನೆ ಎಂದು ಭಾವುಕರಾದರು.

ರಾಷ್ಟ್ರೀಯ ತಂಡದ ಶಿಬಿರವನ್ನು ತೊರೆದಿದ್ದಕ್ಕಾಗಿ ಪೋರ್ಚುಗೀಸ್ ಫುಟ್ಬಾಲ್ ಫೆಡರೇಷನ್ ರೊನಾಲ್ಡೊಗೆ 285 ಡಾಲರ್ ದಂಡ ವಿಧಿಸಿ, ರಾಷ್ಟ್ರೀಯ ತಂಡದಿಂದ 30 ದಿನಗಳ ಕಾಲ ಅಮಾನತುಗೊಳಿಸಿದ ಕೇವಲ ಎರಡು ವಾರಗಳ ನಂತರ ಈ ನಿವೃತ್ತಿ ಘೋಷಣೆ ಹೊರಬಿದ್ದಿದೆ.

ಕ್ರಿಸ್ಟಿಯಾನೊ ರೊನಾಲ್ಡೊ 2006, 2010, 2014, 2018, 2022 ಮತ್ತು 2026 – ಹೀಗೆ ವಿಶ್ವಕಪ್‌ನ ಎಲ್ಲಾ 6 ಆವೃತ್ತಿಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾದರು. ವಿಶ್ವಕಪ್‌ನಲ್ಲಿ ಒಟ್ಟು 11 ಗೋಲುಗಳನ್ನು ಗಳಿಸಿರುವ ಅವರು, ವಿಶ್ವಕಪ್‌ನಲ್ಲಿ ಪೋರ್ಚುಗಲ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದಾರೆ. ರೊನಾಲ್ಡೊ

ಇದನ್ನೂ ನೋಡಿ:  ಹೆಬ್ಬಾಳ ಟನಲ್‌ಗಾಗಿ 1,128 ಮರಗಳ ಬಲಿ? ‘ಚಿಪ್ಕೋ’ ಹೋರಾಟಕ್ಕೆ ಇಳಿದ ನಾಗರಿಕರು! Janashakthi Media

 

Donate Janashakthi Media

Leave a Reply

Your email address will not be published. Required fields are marked *