-
ಇರಾನ್ಗೆ ನೆರವು ನೀಡಿದ್ದಕ್ಕೆ ಮೇಲೆ ಭಾರತೀಯ ದಂಪತಿಗೆ ಅಮೆರಿಕ ನಿರ್ಬಂಧ
-
ಸುನೀಲ್ ಕುಮಾರ್ ಶರ್ಮಾ, ಜಸ್ಪ್ರೀತ್ ಪ್ರೀತಿ ಶಾಹಿದ್ ವಿರುದ್ಧ ಕ್ರಮ
-
ದಂಪತಿಗೆ ಸಂಬಂಧಿಸಿದ 9 ಸಂಸ್ಥೆಗಳಿಗೂ ನಿರ್ಬಂಧ ಹೇರಿದ ಅಮೆರಿಕ
-
ಹಡಗುಗಳಿಗೆ ನಕಲಿ ಧ್ವಜ ಮತ್ತು ಪ್ರಮಾಣಪತ್ರ ಒದಗಿಸಿದ ಆರೋಪ
US sanctions Indian couple: ಇರಾನ್ ಮೇಲಿನ ತೈಲ ನಿರ್ಬಂಧಗಳನ್ನು ತಪ್ಪಿಸಲು ನೆರವು ನೀಡಿದ ಆರೋಪದ ಮೇಲೆ ಅಮೆರಿಕ ಸರ್ಕಾರ ಭಾರತದ ದಂಪತಿ ಸೇರಿದಂತೆ ಹಲವು ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕ
ಭಾರತ ಮೂಲದ ಸುನೀಲ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಜಸ್ಪ್ರೀತ್ ಪ್ರೀತಿ ಶಾಹಿದ್ ಈ ಕ್ರಮಕ್ಕೆ ಗುರಿಯಾಗಿದ್ದಾರೆ. ಇವರಿಗೆ ಸಂಬಂಧಿಸಿದ ಒಂಬತ್ತು ಸಂಸ್ಥೆಗಳು ಹಾಗೂ ಇಬ್ಬರು ಭಾರತೀಯ ಉದ್ಯಮಿಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ. ಅಮೆರಿಕದ ಪ್ರಕಾರ, ಈ ಜಾಲವು ಇರಾನ್ನ ನೆರಳು ಹಡಗುಗಳ (Shadow Fleet) ಮೂಲಕ ತೈಲ ಸಾಗಣೆಗೆ ನೆರವಾಗುತ್ತಿತ್ತು. ಹಡಗುಗಳಿಗೆ ನಕಲಿ ದೇಶದ ಧ್ವಜ ಮತ್ತು ಪ್ರಮಾಣಪತ್ರಗಳನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡಲಾಗುತ್ತಿತ್ತು ಎಂಬುದು ಆರೋಪ.
ನಕಲಿ ದಾಖಲೆ ಸೃಷ್ಟಿಸಿದ ಆರೋಪ
ಚಂಡೀಗಢದಲ್ಲಿ ನೆಲೆಸಿರುವ ಶರ್ಮಾ ಮತ್ತು ಶಾಹಿದ್, ಗಯಾನಾ, ಎಸ್ವಾಟಿನಿ ಮತ್ತು ಲಾವೋಸ್ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳಂತೆ ಬಿಂಬಿಸಿಕೊಂಡು ಹಡಗುಗಳಿಗೆ ಧ್ವಜ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತಿದ್ದರು ಎಂದು ಅಮೆರಿಕ ಆರೋಪಿಸಿದೆ. ಇದಕ್ಕಾಗಿ ವಿವಿಧ ವೆಬ್ಸೈಟ್ಗಳು ಮತ್ತು ಸಂಸ್ಥೆಗಳ ಜಾಲವನ್ನು ಸೃಷ್ಟಿಸಲಾಗಿತ್ತು. ಹಡಗುಗಳ ನೋಂದಣಿ, ನಾವಿಕರ ತರಬೇತಿ, ಪ್ರಮಾಣೀಕರಣ ಮತ್ತು ವರ್ಗೀಕರಣ ಸೇವೆಗಳನ್ನು ನೀಡುವ ಹೆಸರಿನಲ್ಲಿ ಈ ಚಟುವಟಿಕೆಗಳು ನಡೆದಿದ್ದವು ಎಂದು ಖಜಾನೆ ಇಲಾಖೆ ಹೇಳಿದೆ. ಈ ನಕಲಿ ದಾಖಲೆಗಳ ನೆರವಿನಿಂದ ಇರಾನ್ ಸೇನೆ ಮತ್ತು ಅದರ ಬೆಂಬಲಿತ ಸಂಘಟನೆಗಳಿಗೆ ಸಂಬಂಧಿಸಿದ ಹಡಗುಗಳು ನಿರ್ಬಂಧಗಳ ನಡುವೆಯೂ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿತ್ತು ಎಂಬುದು ಅಮೆರಿಕದ ಆರೋಪ. ಅಮೆರಿಕ
ಇದನ್ನೂ ಓದಿ: ಬ್ರೆಜಿಲ್ – ಅಪಾರ ಸವಾಲುಗಳ ನಡುವೆ ಐತಿಹಾಸಿಕ ವಿಜಯ
ಟರ್ಕಿ ಕಂಪನಿಗೂ ನಿರ್ಬಂಧ
ಭಾರತೀಯರ ವಿರುದ್ಧದ ಕ್ರಮದ ಜೊತೆಗೆ ಟರ್ಕಿ ಮೂಲದ ಫುಗೊ ಗ್ರೌಂಡ್ ಸರ್ವೀಸಸ್ ಇಂಕ್ (Fugo Ground Services Inc) ಕಂಪನಿಯ ಮೇಲೆಯೂ ಅಮೆರಿಕ ನಿರ್ಬಂಧ ವಿಧಿಸಿದೆ. ಈ ಸಂಸ್ಥೆಯು ಅಮೆರಿಕದ ನಿರ್ಬಂಧಕ್ಕೆ ಒಳಗಾಗಿರುವ ಇರಾನ್ನ ಹಲವು ವಿಮಾನಯಾನ ಸಂಸ್ಥೆಗಳಿಗೆ ವಿಮಾನ ನಿಲ್ದಾಣದ ನೆಲಮಟ್ಟದ ಸೇವೆಗಳನ್ನು ಒದಗಿಸುತ್ತಿತ್ತು ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ. ಇರಾನ್ ಏರ್ ಟೂರ್, ಸಾಹಾ ಏರ್ಲೈನ್ಸ್, ತಬಾನ್ ಏರ್ಲೈನ್ಸ್ ಮತ್ತು ಅಟಾ ಏರ್ಲೈನ್ಸ್ ಸಂಸ್ಥೆಗಳು ಈ ಪಟ್ಟಿಯಲ್ಲಿವೆ.
‘ಇರಾನ್ ಪರ ಇದ್ದರೆ ಕ್ರಮ ತಪ್ಪಿದ್ದಲ್ಲ‘
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಇರಾನ್ ಸರ್ಕಾರಕ್ಕೆ ನೆರವು ನೀಡುವವರ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ. ‘ನೀವು ನಮ್ಮ ಜೊತೆ ಇರಬೇಕು, ಇಲ್ಲವೇ ನಮ್ಮ ವಿರುದ್ಧ ಇರಬೇಕು‘ ಎಂಬ ಕಠಿಣ ಸಂದೇಶವನ್ನು ಅಮೆರಿಕ ನೀಡಿದೆ. ಭೂಮಿ, ಸಮುದ್ರ ಅಥವಾ ವಾಯು ಮಾರ್ಗದ ಮೂಲಕ ಇರಾನ್ಗೆ ನೆರವು ನೀಡುವವರನ್ನು ಪತ್ತೆಹಚ್ಚಿ ನಿರ್ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕ್ರಮವು ಇರಾನ್ನ ತೈಲ ಮಾರಾಟ ಮತ್ತು ಆರ್ಥಿಕ ವಹಿವಾಟುಗಳ ಮೇಲೆ ಒತ್ತಡ ಹೆಚ್ಚಿಸುವ ಅಮೆರಿಕದ ಪ್ರಯತ್ನವಾಗಿದೆ.
ಇದನ್ನೂ ನೋಡಿ : 3 ಕೋಟಿ ನುಸುಳುಕೋರರು ಎಲ್ಲಿ? ಅಮಿತ್ ಶಾ ಅವರದ್ದೂ ಮತ್ತೊಂದು ಜುಮ್ಲಾನಾ? | ಕೆ.ಎಸ್ ವಿಮಲಾ Janashakthi Media
