ಉಡುಪಿಯಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ ಆರೋಪ | ಕ್ರಮಕ್ಕೆ ಸಿಪಿಐಎಂ ಆಗ್ರಹ

ಉಡುಪಿ: ಕುಟುಂಬದ ಸ್ನೇಹಿತೆಯೊಂದಿಗೆ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದ ರಾಯಚೂರು ಯುವತಿಗೆ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾತ್ರಿ ಉಳಿದುಕೊಳ್ಳಲು ಅನುಮತಿ ನಿರಾಕರಿಸಿದ್ದು, ಮಠದ ವಸತಿ ಗೃಹದ ಅಧಿಕಾರಿಗಳ ಕೃತ್ಯವನ್ನು ಸಿಪಿಎಂ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಉಡುಪಿ

ಅಕ್ಟೋಬರ್‌ 3ರಂದು ರಾಯಚೂರು ಜಿಲ್ಲೆಯ ಯುವತಿ ತನ್ನ ಸ್ನೇಹಿತೆ ಶಕುಂತಲಾ ಹಾಗೂ ಅವರ ಕುಟುಂಬದೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು. ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ ಸುಮಾರು 8 ಗಂಟೆ ವೇಳೆಗೆ ಉಳಿದುಕೊಳ್ಳಲು ವಸತಿಗೃಹಕ್ಕೆ ತೆರಳಿದ್ದರು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್‌ ಕಲ್ಲಗಾರ ತಿಳಿಸಿದ್ದಾರೆ.

ವಸತಿಗೃಹದ ಸಿಬ್ಬಂದಿ ಎಲ್ಲರ ಆಧಾರ್‌ ಕಾರ್ಡ್‌ ಪರಿಶೀಲಿಸಿದ ಬಳಿಕ ಮುಸ್ಲಿಂ ಯುವತಿಗೆ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಯುವತಿಯ ಸ್ನೇಹಿತೆಯ ಕುಟುಂಬದ ಹಿರಿಯರು, ಆಕೆ ತಮ್ಮ ಮೊಮ್ಮಗಳಂತಿದ್ದು, ಅಪರಿಚಿತ ನಗರದಲ್ಲಿ ರಾತ್ರಿ ವೇಳೆ ಒಬ್ಬಳೇ ಎಲ್ಲಿಗೆ ಹೋಗಬೇಕು ಎಂದು ಮನವಿ ಮಾಡಿದರೂ ಸಿಬ್ಬಂದಿ ಒಪ್ಪಲಿಲ್ಲ ಎಂದು ಸಿಪಿಐ(ಎಂ) ಹೇಳಿದೆ. ಉಡುಪಿ

ಇದನ್ನೂ ಓದಿ : SIR ರದ್ದುಪಡಿಸಿ; ಪೊಲೀಸ್ ದೌರ್ಜನ್ಯ ಖಂಡಿಸಿ, ಕ್ರಮಕ್ಕೆ ಆಗ್ರಹ

ಘಟನೆಯನ್ನು ಖಂಡಿಸಿರುವ ಸಿಪಿಐ(ಎಂ), ಉಡುಪಿ ಸೌಹಾರ್ದ ಪರಂಪರೆಗೆ ಹೆಸರಾದ ಪ್ರದೇಶವಾಗಿದ್ದು, ಧರ್ಮದ ಆಧಾರದ ಮೇಲೆ ವಸತಿ ನಿರಾಕರಿಸುವಂತಹ ಘಟನೆಗಳು ನಡೆಯಬಾರದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮಠದ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ.

ಸಿಪಿಐ(ಎಂ) ತನ್ನ ಹೇಳಿಕೆಯಲ್ಲಿ ಪೇಜಾವರ ಮಠದ ಹಿಂದಿನ ಪೀಠಾಧಿಪತಿ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರು ಮುಸ್ಲಿಂ ಚಾಲಕನೊಂದಿಗೆ ಹೊಂದಿದ್ದ ಆತ್ಮೀಯ ಸಂಬಂಧ ಹಾಗೂ ಇಫ್ತಾರ್‌ ಕೂಟ ಆಯೋಜಿಸಿದ್ದನ್ನು ಉಲ್ಲೇಖಿಸಿದೆ. ಜೊತೆಗೆ ಉಡುಪಿಯ ದಾನಿ ಹಾಜಿ ಅಬ್ದುಲ್ಲಾ ಸಾಹೇಬ್‌ ಅವರು ಮಠದ ಭಕ್ತರಾಗಿದ್ದು, ದೀಪೋತ್ಸವದ ಸಂದರ್ಭದಲ್ಲಿ ಮಠಕ್ಕೆ ದೀಪದ ಎಣ್ಣೆ ಒದಗಿಸಿದ್ದನ್ನೂ ಪಕ್ಷ ನೆನಪಿಸಿದೆ. ಮುಸ್ಲಿಂ ಯುವತಿಗೆ ವಸತಿ ನಿರಾಕರಿಸಲಾಗಿದೆ ಎಂಬ ಆರೋಪ ಗಂಭೀರವಾಗಿದ್ದು, ಘಟನೆಯ ಕುರಿತು ಜಿಲ್ಲಾಡಳಿತ ಗಮನಹರಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ. ಉಡುಪಿ

ಇದನ್ನೂ ನೋಡಿ : ಧಾರವಾಡದಲ್ಲಿ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಪ್ರತಿರೋಧದ ಕಹಳೆ Janashakthi Media

Donate Janashakthi Media

Leave a Reply

Your email address will not be published. Required fields are marked *