ತುಮಕೂರಿನ ಮುಸ್ಲಿಂ ಕಾಲೋನಿಗೆ ಪ್ರಕಾಶ್‌ ರೈ ಭೇಟಿ: SIR ಸಮಸ್ಯೆ ಆಲಿಕೆ

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ನಟ ಹಾಗೂ ಹೋರಾಟಗಾರ ಪ್ರಕಾಶ್‌ ರೈ ಅವರು ತುಮಕೂರಿನ ವೀರಸಾಗರದ ಮುಸ್ಲಿಂ ಕಾಲೋನಿಗೆ ಭೇಟಿ ನೀಡಿ, ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ತುಮಕೂರಿನ

ಕಾಲೋನಿಯ ವಿವಿಧ ಗಲ್ಲಿಗಳಲ್ಲಿ ಮನೆಮನೆಗೆ ತೆರಳಿದ ಪ್ರಕಾಶ್‌ ರೈ, ನಿವಾಸಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿ SIR ಪರಿಶೀಲನಾ ಪ್ರಕ್ರಿಯೆಯಿಂದ ಎದುರಾಗಿರುವ ಸಮಸ್ಯೆಗಳು, ಅಗತ್ಯ ದಾಖಲೆಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಆತಂಕಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಬೀದಿಗಳಲ್ಲೇ ಚರ್ಚೆ ನಡೆಸಿದ ಅವರು, ಜನರು ತಮ್ಮ ಮತದಾನದ ಹಕ್ಕು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕ್ರಿಯೆಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ : SIR ರದ್ದುಪಡಿಸಿ, ಗ್ಯಾನೇಶ್‌ ಕುಮಾರ್ ವಜಾಗೊಳಿಸಿ: SIR ವಿರೋಧಿ ಒಕ್ಕೂಟ ಆಗ್ರಹ

“ನಿಮ್ಮ ಊರಿನ, ನಿಮ್ಮ ಗಲ್ಲಿಯ SIR ಸಮಸ್ಯೆಗಳ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿ. ಜನರ ಸಮಸ್ಯೆಗಳನ್ನು ಜನರ ಗಮನಕ್ಕೆ ತರುವುದು ಕೂಡ ದೇಶ ಸೇವೆಯೇ. ಸದ್ಯ ಇದಕ್ಕಿಂತ ದೊಡ್ಡ ದೇಶ ಸೇವೆ ಮತ್ತೊಂದಿಲ್ಲ” ಎಂದು ಪ್ರಕಾಶ್‌ ರೈ ಹೇಳಿದರು.

ಸ್ಥಳೀಯರು ತಮ್ಮ ಸಮಸ್ಯೆಗಳನ್ನು ವಿವರಿಸಿದ ವೇಳೆ ಅವುಗಳನ್ನು ಆಲಿಸಿದ ಅವರು, ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ, ಎದುರಾಗುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ವೀರಸಾಗರದ ಗಲ್ಲಿ-ಗಲ್ಲಿಗಳಲ್ಲಿ ನಡೆದ ಭೇಟಿಯ ವೇಳೆ ನಿವಾಸಿಗಳು SIR ಪ್ರಕ್ರಿಯೆಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಹಂಚಿಕೊಂಡರು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಪರಿಶೀಲನೆ ಹಾಗೂ ಜಾಗೃತಿ ಅಗತ್ಯ ಎಂಬ ವಿಚಾರವೂ ಚರ್ಚೆಗೆ ಬಂತು.

ಇದನ್ನೂ ನೋಡಿ :“20 ವರ್ಷದಿಂದ ಓಟ್‌ ಹಾಕೀನಿ… ಈಗ ನೋಟೀಸ್‌ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media

 

 

Donate Janashakthi Media

Leave a Reply

Your email address will not be published. Required fields are marked *