ಮಹಾರಾಷ್ಟ್ರ | ಡಹಾಣುವಿನಲ್ಲಿ ವಿದ್ಯುತ್ ದರ ಏರಿಕೆ, ಸ್ಮಾರ್ಟ್ ಮೀಟರ್ ವಿರುದ್ಧ ಸಿಪಿಐ(ಎಂ) ಭಾರಿ ಪ್ರತಿಭಟನೆ

ಪಾಲ್ಘರ್ :  ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಡಹಾಣು ತಾಲ್ಲೂಕಿನ ಚರೋಟಿ ನಾಕಾದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳು ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಗುರುವಾರ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಮುಂಬೈ–ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ತಡೆ ನಡೆಸಿದರು. ಮಹಾರಾಷ್ಟ್ರ

ಸ್ಮಾರ್ಟ್ ಮೀಟರ್‌ಗಳನ್ನು ಬಲವಂತವಾಗಿ ಅಳವಡಿಸಲಾಗುತ್ತಿದೆ ಹಾಗೂ ಮೀಟರ್ ಅಳವಡಿಸಿದ ಬಳಿಕ ಸಾಮಾನ್ಯ ಗ್ರಾಹಕರ ವಿದ್ಯುತ್ ಬಿಲ್‌ಗಳು ಅತಿಯಾಗಿ ಹೆಚ್ಚಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈಗಾಗಲೇ ಅಳವಡಿಸಿರುವ ಸ್ಮಾರ್ಟ್ ಮೀಟರ್‌ಗಳನ್ನು ತೆಗೆದುಹಾಕಬೇಕು, ಹೆಚ್ಚುವರಿ ವಿದ್ಯುತ್ ಬಿಲ್‌ಗಳ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಆಂದೋಲನದಲ್ಲಿ ಅಖಿಲ ಭಾರತ ಕಿಸಾನ್ ಸಭಾ, ಸಿಐಟಿಯು, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ, ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು. ಭಾರಿ ಮಳೆಯ ನಡುವೆಯೂ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು. ಸಿಪಿಐ(ಎಂ) ಪೊಲಿಟ್‌ಬ್ಯೂರೋ ಸದಸ್ಯ ಡಾ. ಅಶೋಕ್ ಧವಳೆ, ಶಾಸಕ ವಿನೋದ್ ನಿಕೋಲೆ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯನ್ನು ಮುನ್ನಡೆಸಿದರು. ಮಹಾರಾಷ್ಟ್ರ

ಇದನ್ನೂ ಓದಿ : ಸರ್ಕಾರಿ ಶಾಲಾ ಮಕ್ಕಳ ಶೂ, ಸಾಕ್ಸ್‌ ಕಳಪೆ ಆರೋಪ: ತನಿಖೆಗೆ ಶಿಕ್ಷಣ ಇಲಾಖೆ ಆದೇಶ; ಉಪಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ

ಪ್ರತಿಭಟನೆಯ ಬಳಿಕ ವಿದ್ಯುತ್ ವಿತರಣಾ ಸಂಸ್ಥೆಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಂದೋಲನವನ್ನು ಹಿಂಪಡೆಯಲಾಯಿತು. ಸೆಪ್ಟೆಂಬರ್ 11ರಿಂದ ಜಿಲ್ಲೆಯ ವಿದ್ಯುತ್ ಕಚೇರಿಗಳಲ್ಲಿ 15 ದಿನಗಳ ವಿಶೇಷ ಅಭಿಯಾನ ನಡೆಸಿ, ಹೆಚ್ಚಿದ ವಿದ್ಯುತ್ ಬಿಲ್‌ಗಳ ಕುರಿತು ಗ್ರಾಹಕರ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಡಹಾಣು ಮತ್ತು ಪಾಲ್ಘರ್ ಪ್ರದೇಶದಲ್ಲಿ ಸ್ಮಾರ್ಟ್ ಮೀಟರ್ ಹಾಗೂ ವಿದ್ಯುತ್ ದರದ ವಿಚಾರವಾಗಿ ಸಿಪಿಐ(ಎಂ) ನಡೆಸುತ್ತಿರುವ ಹೋರಾಟಕ್ಕೆ ಇದು ಹೊಸ ಹಂತವಾಗಿದೆ. ಇದೇ ವರ್ಷ ಜನವರಿಯಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಚರೋಟಿಯಿಂದ ಪಾಲ್ಘರ್‌ವರೆಗೆ ಸುಮಾರು 55 ಕಿ.ಮೀ. ಪಾದಯಾತ್ರೆ ನಡೆಸಲಾಗಿತ್ತು. ಆಗಲೂ ಸ್ಮಾರ್ಟ್ ಮೀಟರ್ ಯೋಜನೆ ರದ್ದುಪಡಿಸುವುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.

ಇದನ್ನೂ ನೋಡಿ : “ಆಪರೇಷನ್‌ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *