135 ವರ್ಷದ ಹಳೆಯ ಬ್ಯಾಂಕಿಂಗ್ ಕಾನೂನಿಗೆ ವಿದಾಯ: ಹೊಸ ಡಿಜಿಟಲ್ ಸಾಕ್ಷ್ಯ ಕಾನೂನು ಅಂಗೀಕಾರ
ನವದೆಹಲಿ: ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ವಲಯವನ್ನು ಡಿಜಿಟಲ್ ಯುಗಕ್ಕೆ ಹೊಂದಿಸಲು ಕೇಂದ್ರ ಸರ್ಕಾರ ಮಹತ್ವದ ಶಾಸನಾತ್ಮಕ ಸುಧಾರಣೆ ಕೈಗೊಂಡಿದ್ದು, ಲೋಕಸಭೆಯಲ್ಲಿ ‘ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಬಿಲ್ 2026’ ಅಂಗೀಕರಿಸಲಾಗಿದೆ. ಲೋಕಸಭೆ
ಈ ಮಸೂದೆ 1891ರ ಬ್ರಿಟಿಷ್ ಕಾಲದ ‘ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್’ ಅನ್ನು ಬದಲಿಸುವ ಉದ್ದೇಶ ಹೊಂದಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಹಾರಗಳನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆಯನ್ನು ಮಂಡಿಸಿದ್ದರು.
ಡಿಜಿಟಲ್ ದಾಖಲೆಗಳಿಗೆ ಕಾನೂನು ಮಾನ್ಯತೆ
ಹೊಸ ಕಾನೂನು ಪ್ರಕಾರ, ಯುಪಿಐ, ನೆಟ್ ಬ್ಯಾಂಕಿಂಗ್, ಡಿಜಿಟಲ್ ಡೇಟಾ, ಕ್ಲೌಡ್ ಸ್ಟೋರೇಜ್ ಹಾಗೂ ವಿಪತ್ತು ಚೇತರಿಕೆ ಸರ್ವರ್ಗಳಲ್ಲಿ ಸಂಗ್ರಹಿತ ಮಾಹಿತಿಯನ್ನು ನ್ಯಾಯಾಲಯದಲ್ಲಿ ಪ್ರಾಥಮಿಕ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಡುಪ್ಲಿಕೇಟ್, ಮೃತರ ಹೆಸರು ತೆರವು: ಮತದಾರರ ಪಟ್ಟಿಯಲ್ಲಿ ದೊಡ್ಡ ಶುದ್ಧೀಕರಣ ಕಾರ್ಯ
ಜೊತೆಗೆ, ಐಟಿ ಕಾಯ್ದೆ-2000 ಅಡಿಯಲ್ಲಿ ಪ್ರಮಾಣೀಕೃತ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಸಹಿಗಳಿಗೆ ಪೂರ್ಣ ಕಾನೂನುಬದ್ಧತೆ ನೀಡಲಾಗಿದೆ.ಇದರಿಂದ ಆರ್ಥಿಕ ಅಪರಾಧ, ಚೆಕ್ ಬೌನ್ಸ್ ಮತ್ತು ಸಾಲ ವಸೂಲಾತಿ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆ ವೇಗಗೊಳ್ಳಲಿದೆ.
ಬ್ಯಾಂಕ್ ಸಿಬ್ಬಂದಿಗೆ ನಿರಾಳತೆ
ಹೊಸ ಕಾನೂನು ಅನ್ವಯ, ಬ್ಯಾಂಕ್ ನೌಕರರು ಪ್ರತಿಯೊಂದು ಪ್ರಕರಣದಲ್ಲೂ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿಲ್ಲ. ನ್ಯಾಯಾಲಯವು ವಿಶೇಷ ಆದೇಶ ನೀಡಿದರೆ ಮಾತ್ರ ಹಾಜರಾತಿ ಅಗತ್ಯವಾಗುತ್ತದೆ. ಇದರಿಂದ ಬ್ಯಾಂಕ್ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗುವ ಜೊತೆಗೆ, ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣಗಳನ್ನು ಶೀಘ್ರದಲ್ಲಿ ಮುಗಿಸುವುದು ಸಾಧ್ಯವಾಗಲಿದೆ.
ಇದನ್ನೂ ನೋಡಿ: ನಾಲ್ಕು ದಶಕಗಳ ಕೋಮುವಾದ: ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಮುಂದಿನ ದಾರಿ | ನವೀನ್ ಸೂರಿಂಜೆ, ಪತ್ರಕರ್ತರು
