ಥಾಣೆಯಲ್ಲಿ ನಾಲ್ಕು ಮಹಡಿ ಕಟ್ಟಡ ಕುಸಿತ: 8 ಮಂದಿ ಸಾವು

ಅವಶೇಷಗಳಡಿ ಇನ್ನೂ ಸಿಲುಕಿರುವವರ ಆತಂಕ; ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಾಲಾಜಿ ನಗರದಲ್ಲಿರುವ ನಾಲ್ಕು ಮಹಡಿ ನಿವಾಸಿ ಕಟ್ಟಡ ಕುಸಿದು ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳಡಿ ಇನ್ನೂ 4ರಿಂದ 5 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.

ಈ ಘಟನೆ ಜುಲೈ 30ರ ರಾತ್ರಿ ಸುಮಾರು 11.30ರ ವೇಳೆಗೆ ‘ಕೊಹಿನೂರ್’ ಕಟ್ಟಡದ ಒಂದು ಭಾಗ ಕುಸಿದಾಗ ಸಂಭವಿಸಿದೆ.

“ಇಲ್ಲಿಯವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ,” ಎಂದು ನಿವಾಸಿ ಉಪ ಸಂಗ್ರಹಾಧಿಕಾರಿ ಸಂದೀಪ್ ಮಾನೆ ತಿಳಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್ 1ರಂದು ‘ಅಳವು ಅರಿಯದ ಭಾಷೆ: ಕರಾವಳಿಯ ಸಾಂಸ್ಕೃತಿಕ ರಾಜಕಾರಣ’ – ಒಂದು ದಿನದ ವಿಚಾರ ಮಥನ

ಈ ನಡುವೆ ಗಾಯಗೊಂಡ ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಲಿಕೆ ಅಧಿಕಾರಿಗಳ ಪ್ರಕಾರ, ಈ ಕಟ್ಟಡದಲ್ಲಿ ಒಟ್ಟು 48 ಕೊಠಡಿಗಳಿದ್ದು, ಪ್ರತಿಯೊಂದು ಮಹಡಿಗೂ 12 ಕೊಠಡಿಗಳಿವೆ. ಕಟ್ಟಡವನ್ನು ಈಗಾಗಲೇ ‘ಅಪಾಯಕಾರಿ’ ಎಂದು ಘೋಷಿಸಲಾಗಿತ್ತು. ದುರಂತ ಸಂಭವಿಸಿದಾಗ ದುರಸ್ತಿ ಕಾಮಗಾರಿಗಳು ನಡೆಯುತ್ತಿತ್ತು.

ಗುರುವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕಟ್ಟಡದಿಂದ ಭಾರೀ ಬಿರುಕು ಶಬ್ದಗಳು ಕೇಳಿಬಂದಿದ್ದರಿಂದ ಸ್ಥಳೀಯರು ಎಚ್ಚರಗೊಂಡು ಹಲವು ಕುಟುಂಬಗಳನ್ನು ಹೊರಗೆ ಕರೆತಂದರು. ಆದರೆ ಕೆಲವರು ಇನ್ನೂ ಹೊರಬರುತ್ತಿರುವ ವೇಳೆ ಕಟ್ಟಡದ ‘ಬಿ’ ವಿಭಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF), ಥಾಣೆ ವಿಪತ್ತು ಪಡೆ ಹಾಗೂ ಅಗ್ನಿಶಾಮಕ ದಳ ಸೇರಿದಂತೆ ಹಲವು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಶ್ವಾನ ದಳ, ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಭಾರಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಇದನ್ನೂ ನೋಡಿ: NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್‌ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ

Donate Janashakthi Media

Leave a Reply

Your email address will not be published. Required fields are marked *