ಮಹಿಳಾ ಮೀಸಲಾತಿ ತಕ್ಷಣ ಜಾರಿ ಮಾಡಿ: ಫ್ರೀಡಂಪಾರ್ಕ್‌ನಲ್ಲಿ ಮಹಿಳಾ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ (ಡಿಲಿಮಿಟೇಶನ್) ಕಟ್ಟಿ ಹಾಕದೆ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟದ (NCWR) ಕರ್ನಾಟಕ ಘಟಕದ ನೇತೃತ್ವದಲ್ಲಿ ಸೋಮವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮಹಿಳಾ

ಮಹಿಳಾ ಮೀಸಲಾತಿ ಕಾಯ್ದೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, 2023ರಲ್ಲಿ ಸಂವಿಧಾನದ 106ನೇ ತಿದ್ದುಪಡಿಯ ಮೂಲಕ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬಂದಿದ್ದರೂ, ಅದರ ಅನುಷ್ಠಾನವನ್ನು ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಅವಲಂಬಿತವಾಗಿಸಿರುವುದು ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಅನಗತ್ಯವಾಗಿ ಮುಂದೂಡುತ್ತಿದೆ ಎಂದು ಆರೋಪಿಸಿದರು. ಮಹಿಳೆಯರು ಸುಮಾರು ಮೂರು ದಶಕಗಳಿಂದ ಈ ಹಕ್ಕಿಗಾಗಿ ಕಾಯುತ್ತಿದ್ದು, ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಷರತ್ತುಗಳನ್ನು ತೆಗೆದುಹಾಕಿ ತಕ್ಷಣವೇ ಶೇ.33ರಷ್ಟು ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಮಹಿಳಾ

ಇದನ್ನೂ ಓದಿ :ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ‘ಘೋರ ಪಾಪ’; ಮೌನ ಮುರಿದ ಪ್ರಧಾನಿ ಮೋದಿ

ಬಳಿಕ ರಾಜ್ಯಪಾಲರಿಗೆ ಉದ್ದೇಶಿಸಿದ ಮನವಿಪತ್ರವನ್ನು ಸಲ್ಲಿಸಿದ ಪ್ರತಿಭಟನಾಕಾರರು, ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಿಂದ ಬೇರ್ಪಡಿಸಲು ಅಗತ್ಯ ಸಂವಿಧಾನ ತಿದ್ದುಪಡಿ ತರಬೇಕು. ಮುಂಬರುವ ಚುನಾವಣೆಗಳಿಂದಲೇ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ (AIDWA) ಕೆ.ಎಸ್. ವಿಮಲಾ, ಚಂದ್ರಕುಮಾರಿ, ಗೌರಮ್ಮ, ದೇವಿ, ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟದ (NFIW) ಜ್ಯೋತಿ ಅನಂತಸುಬ್ಬರಾವ್, ಮಾಲಾ, ಮಲ್ಲಮ್ಮ, ಐಸಿಡಬ್ಲ್ಯುಎಂನ ಸೆಲಿನ್ ಥಾಮಸ್, ವೈಡಬ್ಲ್ಯುಸಿಎಯ ಪರ್ಲ್ ಡೋರ್ಕಾಸ್, ಸಬಲಾದ ಮಲ್ಲಮ್ಮ ಯಲವಾರ, ಮಹಿಳಾ ಧ್ವನಿ ಹಾಗೂ ರಾಷ್ಟ್ರೀಯ ದಲಿತ ಮಹಿಳಾ ಒಕ್ಕೂಟದ ರೂತ್ ಮನೋರಮಾ, ವಿಮೋಚನೆಯ ಆಶಾ ರಮೇಶ್, ಹೋರಾಟಗಾರ್ತಿ ಲೀಲಾ ಪಸ್ಸಾ ಹಾಗೂ ವಿದ್ಯಾರ್ಥಿ ಹೋರಾಟಗಾರ್ತಿ ಪ್ರಿಸಿಲ್ಲಾ ರಾವಡೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು. ಮಹಿಳಾ

ಇದನ್ನೂ ನೋಡಿ : ನೀಟ್ ಹಗರಣಕ್ಕೆ ದೇಶಾದ್ಯಂತ ಆಕ್ರೋಶ! ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *