ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವಾಗಿ ರಚಿಸಲಾಗಿದೆ ಎಂದು ಸರ್ಕಾರ ವಾದಿಸಿದರೂ, ಅದು ಒಂದು ಸರ್ಕಾರಿ ಅಧಿಸೂಚನೆಯ ಮೂಲಕ ಸ್ಥಾಪಿಸಲಾದ ಸಂಸ್ಥೆ ಎಂಬ ಅದರ ಕಾನೂನಾತ್ಮಕ ಅಸ್ತಿತ್ವವೇನೂ ಬದಲಾಗುವುದಿಲ್ಲ. ಆರ್ಟಿಐ ಕಾಯ್ದೆಯ ನಿಬಂಧನೆಗಳ ಬೆಳಕಿನಲ್ಲಿ ಈ ಅಂಶವು ಹೊಸ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂಬ ತರ್ಕವನ್ನು ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಮುಂದಿಟ್ಟಿದ್ದಾರೆ. ಅದು ದೇಶದ ಮಹತ್ವದ ಸಾರ್ವಜನಿಕ ಸಂಸ್ಥೆಗಳಲ್ಲಿ ಒಂದನ್ನು ಮತ್ತು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ನಿರ್ವಹಿಸುತ್ತದೆ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಲಕ್ಷಾಂತರ ಭಕ್ತರಿಂದ ಕೊಡುಗೆಗಳನ್ನು ಪಡೆಯುತ್ತದೆ. ಟ್ರಸ್ಟ್ನಲ್ಲಿ ಸಾರ್ವಜನಿಕರ ಅಸಾಧಾರಣ ವಿಶ್ವಾಸಕ್ಕೆ ಅನುಗುಣವಾಗಿ ಸ್ವಾಭಾವಿಕವಾಗಿಯೇ ನಿರ್ವಹಣೆ, ಹಣಕಾಸು ಆಡಳಿತ, ಗುತ್ತಿಗೆಗಳು, ದೇಣಿಗೆಗಳ ಬಳಕೆ ಮತ್ತು ಸಾಂಸ್ಥಿಕ ನಿರ್ಧಾರ ತೆಗೆದುಕೊಳ್ಳುವ ವಿಷಯಗಳಲ್ಲಿ ಪಾರದರ್ಶಕತೆ ಇರಬೇಕೆಂಬ ಬಲವಾದ ನಿರೀಕ್ಷೆ ಇರುತ್ತದೆ ಎಂದು ಬ್ರಿಟ್ಟಾಸ್ ಹೇಳುತ್ತಾರೆ. ರಾಮ
ರಾಜ್ಯಸಭಾ ಸದಸ್ಯರು ಮತ್ತು ಸಿಪಿಐ(ಎಂ) ಸಂಸದೀಯ ಪಕ್ಷದ ನಾಯಕ ಜಾನ್ ಬ್ರಿಟ್ಟಾಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯ ವ್ಯಾಪ್ತಿಯಿಂದ ಹೊರಗಿರಬೇಕು ಎಂಬ ತನ್ನ ನಿಲುವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಏಕೆಂದರೆ ಕೋಟ್ಯಂತರ ಭಕ್ತರುಗಳ ದೇಣಿಗೆಗಳನ್ನು ನಿಭಾಯಿಸುವ ಒಂದು ಸಂಸ್ಥೆಗೆ ಹೆಚ್ಚಿನ ಪಾರದರ್ಶಕತೆ ಅಗತ್ಯ ಎಂದು ಅವರು ವಾದಿಸಿದ್ದಾರೆ. ಈ ಟ್ರಸ್ಟ್ ಅಡಿಯಲ್ಲಿ ಅಯೋಧ್ಯಾ ರಾಮ ಮಂದಿರಕ್ಕೆ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಅವರು ಜುಲೈ ೪ರಂದು ಈ ಪತ್ರವನ್ನು ಬರೆದಿದ್ದಾರೆ. ರಾಮ
ಕೇಂದ್ರ ಸರಕಾರ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ದ ಮುಂದೆ ತೆಗೆದುಕೊಂಡ ನಿಲುವನ್ನು ಮರುಪರಿಶೀಲಿಸುವಂತೆ ಮತ್ತು ಪರಿಷ್ಕೃತ ನಿಲುವನ್ನು ಪ್ರಸ್ತುತಪಡಿಸುವಂತೆ ಸರ್ಕಾರವನ್ನು ಜಾನ್ ಬ್ರಿಟ್ಟಾಸ್ ಕೋರಿದ್ದಾರೆ. ಆರ್ಟಿಐ ಕಾಯಿದೆಯ ಸೆಕ್ಷನ್ 2(ಎಚ್) ಅಡಿಯಲ್ಲಿ ಟ್ರಸ್ಟ್ “ಸಾರ್ವಜನಿಕ ಪ್ರಾಧಿಕಾರ” ಅಲ್ಲ ಎಂದು ಜೂನ್ 6, 2025 ರಂದು ಸಿಐಸಿ ತೀರ್ಪು ನೀಡಿತ್ತು. ರಾಮ
ಇದನ್ನೂ ಓದಿ: ಗಾಜಾ ಯುದ್ಧಕ್ಕೆ 1000 ದಿನ: ಧ್ವಂಸ, ಸಾವು ಮತ್ತು ಮಾನವೀಯ ದುರಂತ ಮುಂದುವರಿಕೆ
ಸುಪ್ರೀಂ ಕೋರ್ಟ್ ನವಂಬರ್ ೯, ೨೦೧೯ರಂದು ನೀಡಿದ ಅಯೋಧ್ಯಾ ಭೂಒಡೆತನದ ತೀರ್ಪನ್ನು ಅನುಸರಿಸಿ ಒಂದು ಕೇಂದ್ರ ಸರ್ಕಾರ-ಅನುಮೋದಿತ ಯೋಜನೆಯ ಮೂಲಕ ಈ ಟ್ರಸ್ಟನ್ನು ರಚಿಸಲಾಯಿತು. ಅದು ಕಾನೂನಾತ್ಮಕ ಅಸ್ತಿತ್ವ ಪಡೆದಿರುವುದು ʼಅಯೋಧ್ಯೆಯಲ್ಲಿ ಕೆಲವು ಪ್ರದೇಶದ ಸ್ವಾಧೀನ ಕಾಯ್ದೆ, ೧೯೯೩ʼರ ಅಡಿಯಲ್ಲಿ ಸರಕಾರದ ಕ್ರಮದ ಮೂಲಕ. ಕೇಂದ್ರ ಸರಕಾರ ಈ ಟ್ರಸ್ಟನ್ನು ನಡೆಸುವ ಯೋಜನೆಯನ್ನು ರೂಪಿಸಿತು, ಟ್ರಸ್ಟನ್ನು ರಚಿಸಿತು , ಅದರ 15 ಸದಸ್ಯರಲ್ಲಿ 12 ಸದಸ್ಯರನ್ನು ನಾಮನಿರ್ದೇಶನ ಮಾಡಿತು ಮತ್ತು ತಾನು ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಈ ಟ್ರಸ್ಟಿಗೆ ಒಂದು ರಾಜಪತ್ರದ(ಗಜೆಟ್) ಅಧಿಸೂಚನೆಯ ಮೂಲಕ ಹಸ್ತಾಂತರಿಸಿತು. ಟ್ರಸ್ಟನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವಾಗಿ ರಚಿಸಲಾಗಿದೆ ಎಂದು ಸರ್ಕಾರ ವಾದಿಸಿದರೂ, ಅದು ಒಂದು ಸರ್ಕಾರಿ ಅಧಿಸೂಚನೆಯ ಮೂಲಕ ಸ್ಥಾಪಿಸಲಾದ ಸಂಸ್ಥೆ ಎಂಬ ಅದರ ಕಾನೂನಾತ್ಮಕ ಅಸ್ತಿತ್ವವೇನೂ ಬದಲಾಗುವುದಿಲ್ಲ. ಆರ್ಟಿಐ ಕಾಯ್ದೆಯ ನಿಬಂಧನೆಗಳ ಬೆಳಕಿನಲ್ಲಿ ಈ ಅಂಶವು ಹೊಸ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂಬ ತರ್ಕವನ್ನು ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಮುಂದಿಟ್ಟಿದ್ದಾರೆ. ರಾಮ
ಟ್ರಸ್ಟ್ನ ಆಡಳಿತ ಚೌಕಟ್ಟು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ನಾಮನಿರ್ದೇಶಿತರು ಮತ್ತು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿದೆ. ಈ ನಿರಂತರ ಸಾಂಸ್ಥಿಕ ಸಂಯೋಜನೆಯು ಟ್ರಸ್ಟಿನ ಸಾರ್ವಜನಿಕ ಸ್ವರೂಪವನ್ನು ಬಿಂಬಿಸುತ್ತದೆ ಮತ್ತು ಇದು ಹೆಚ್ಚಿನ ಉತ್ತರದಾಯಿತ್ವದ ಅಗತ್ಯವಿದೆ ಎಂಬ ವಾದವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ರಾಮ
ಟ್ರಸ್ಟ್ ದೇಶದ ಮಹತ್ವದ ಸಾರ್ವಜನಿಕ ಸಂಸ್ಥೆಗಳಲ್ಲಿ ಒಂದನ್ನು ಮತ್ತು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ನಿರ್ವಹಿಸುತ್ತದೆ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಲಕ್ಷಾಂತರ ಭಕ್ತರಿಂದ ಕೊಡುಗೆಗಳನ್ನು ಪಡೆಯುತ್ತದೆ. ಟ್ರಸ್ಟ್ನಲ್ಲಿ ಸಾರ್ವಜನಿಕರ ಅಸಾಧಾರಣ ವಿಶ್ವಾಸಕ್ಕೆ ಅನುಗುಣವಾಗಿ ಸ್ವಾಭಾವಿಕವಾಗಿಯೇ ನಿರ್ವಹಣೆ, ಹಣಕಾಸು ಆಡಳಿತ, ಗುತ್ತಿಗೆಗಳು, ದೇಣಿಗೆಗಳ ಬಳಕೆ ಮತ್ತು ಸಾಂಸ್ಥಿಕ ನಿರ್ಧಾರ ತೆಗೆದುಕೊಳ್ಳುವ ವಿಷಯಗಳಲ್ಲಿ ಪಾರದರ್ಶಕತೆ ಇರಬೇಕೆಂಬ ಬಲವಾದ ನಿರೀಕ್ಷೆ ಇರುತ್ತದೆ.
ಡಿಎವಿ ಕಾಲೇಜ್ ಟ್ರಸ್ಟ್ ಅಂಡ್ ಮ್ಯಾನೇಜ್ಮೆಂಟ್ ಸೊಸೈಟಿ vs ಸಾರ್ವಜನಿಕ ಶಿಕ್ಷಣ ನಿರ್ದೇಶಕರು (2019) ಮತ್ತು ತಲಪ್ಪಲಂ ಸರ್ವೀಸ್ ಕೋಆಪರೇಟಿವ್ ಬ್ಯಾಂಕ್ ಲಿ. vs ಕೇರಳ ರಾಜ್ಯ (2013) ಪ್ರಕರಣಗಳಲ್ಲಿ ಸೇರಿದಂತೆ ಸುಪ್ರಿಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸುತ್ತ, ಬ್ರಿಟ್ಟಾಸ್, ಆರ್ಟಿಐ ಕಾಯ್ದೆಯ ಸೆಕ್ಷನ್ 2(ಎಚ್) ಅಡಿಯಲ್ಲಿ ವಿವಿಧ ಮಾನದಂಡಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ RTI ಕಾಯಿದೆಯಡಿ ಸಾರ್ವಜನಿಕ ಪ್ರಾಧಿಕಾರ ಎಂದಿರುವ ಇತ್ತೀಚಿನ ದೆಹಲಿ ಹೈಕೋರ್ಟ್ ತೀರ್ಪನ್ನು ಕೂಡ ಉಲ್ಲೇಖಿಸಿದ ಅವರು, ಸರ್ಕಾರಿ ಕ್ರಮದಿಂದ ತಮ್ಮ ಕಾನೂನು ಅಸ್ತಿತ್ವವನ್ನು ಪಡೆಯುವ ಸಂಸ್ಥೆಗಳು ಪಾರದರ್ಶಕತೆ ಹೊಂದಿರಬೇಕು ಎಂದು ಅರ್ಥೈಸಿಕೊಳ್ಳಬೇಕು ಎಂದು ಅವರು ವಾದಿಸಿದ್ದಾರೆ. ರಾಮ
ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯೊಂದಿಗೆ ಹೋಲಿಕೆಗಳನ್ನು ಮಾಡಿರುವ ಬ್ರಿಟ್ಟಾಸ್, ಸಾಂಸ್ಥಿಕ ಸ್ವಾಯತ್ತತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯು ಒಟ್ಟಿಗೇ ಇರಲು ಸಾಧ್ಯವಿದೆ, ಟ್ರಸ್ಟ್ ಅನ್ನು ಆರ್ಟಿಐ ಕಾಯ್ದೆಯಡಿ ತರುವುದರಿಂದ ಅದರ ಧಾರ್ಮಿಕ ಸ್ವಾಯತ್ತತೆಗೆ ಅಡ್ಡಿಯಾಗುವುದಿಲ್ಲ ಬದಲಿಗೆ ಅದು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಅವರು ಹೇಳುತ್ತಾರೆ. ರಾಮ
ಗೃಹ ಸಚಿವಾಲಯವು ತನ್ನ ನಿಲುವನ್ನು ಮರುಪರಿಶೀಲಿಸಬೇಕು ಮತ್ತು ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಮುಂದೆ ಸೂಕ್ತ ಕಾನೂನು ಸರಿಪಡಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ವಿನಂತಿಸುತ್ತ, ಈ ಮೂಲಕ RTI ಕಾಯಿದೆಯ ಅಡಿಯಲ್ಲಿ ಟ್ರಸ್ಟ್ನ ಸ್ಥಾನಮಾನದ ಪ್ರಶ್ನೆಯು ಆಧಿಕಾರಿಕ ನ್ಯಾಯಾಂಗ ನಿರ್ಣಯವನ್ನು ಪಡೆಯಬಹುದು ಎಂದು ಜಾನ್ ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು, ಸಿಪಿಐ ರಾಜ್ಯಸಭಾ ಸಂಸದ ಪಿ ಸಂತೋಷ್ ಕುಮಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮತ್ತು ಸ್ವತಂತ್ರ ನ್ಯಾಯಾಂಗ ತನಿಖೆಗೆ ಸಮಗ್ರ ಲೆಕ್ಕಪರಿಶೋಧನೆಯನ್ನು ಒಪ್ಪಿಸಬೇಕು ಎಂದು ಕೋರಿದ್ದರು.
ಇದನ್ನೂ ನೋಡಿ: ಡಿ.ಕೆ.ಶಿ. ಆಡಳಿತ: ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ಇಲಾಖೆ ಸಚಿವರಿಲ್ಲ… Janashakthi Media
