ಬೆಂಗಳೂರು: ರಾಜ್ಯ ಸರ್ಕಾರದ ಹೊಸ ಘೋಷಣೆಯಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. KSRTC ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಬಸ್ಗಳಲ್ಲಿ ವಿದ್ಯಾರ್ಥಿಗಳು ಈಗಿನಿಂದ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸಿಹಿ
ಜೂನ್ 12ರ ಸಂಜೆ 4 ಗಂಟೆಗೆ ಹಾಸನದ ಕಾಲೇಜು ವಿದ್ಯಾರ್ಥಿಗೆ ಮೊದಲ ಉಚಿತ ಬಸ್ ಪಾಸ್ ನೀಡುವ ಮೂಲಕ ಯೋಜನೆಗೆ ಚಾಲನೆ ದೊರಕಿತು. ಇದರಿಂದಾಗಿ ರಾಜ್ಯದ ಮೊದಲ ಫಲಾನುಭವಿ ಎಂಬ ಗೌರವ ಆ ವಿದ್ಯಾರ್ಥಿಗೆ ಸಿಕ್ಕಿದೆ. ಕೇವಲ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಒಟ್ಟು 2,700ಕ್ಕೂ ಅಧಿಕ ಬಸ್ ಪಾಸ್ಗಳನ್ನು ವಿತರಿಸಲಾಗಿದೆ. ಸಿಹಿ
ಈ ಉಚಿತ ಬಸ್ ಪಾಸ್ಗಳು ವಿದ್ಯಾರ್ಥಿಗಳ ಗುರುತಿನ ಚೀಟಿ ಮಾದರಿಯಲ್ಲಿ ತಯಾರಾಗಿದ್ದು, ಅದರಲ್ಲಿ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ/ಕಾಲೇಜು ವಿವರಗಳು, ಪ್ರಯಾಣ ಮಾರ್ಗ ಹಾಗೂ ಮಾನ್ಯತಾ ಅವಧಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಪಾಸ್ಗಳು 2027ರ ಮಾರ್ಚ್ ಅಂತ್ಯದವರೆಗೆ ಮಾನ್ಯವಾಗಿರಲಿವೆ.
ಇದನ್ನೂ ಓದಿ: ಜೀನ್ ಮತ್ತು ಮೀಮ್ಗಳ ಜುಗಲಬಂದಿ
ಪಾಸ್ನ ಬಲಭಾಗದಲ್ಲಿ ವಿದ್ಯಾರ್ಥಿಯ ಫೋಟೋ ಹಾಗೂ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಮುಖ್ಯವಾಗಿ “ದರ: ಉಚಿತ” ಎಂದು ಸ್ಪಷ್ಟವಾಗಿ ಮುದ್ರಿಸಲಾಗಿದೆ. ಪಾಸ್ ವರ್ಗಾವಣೆ ಮಾಡುವುದು ಅಥವಾ ಅನಧಿಕೃತ ಪ್ರಯಾಣಕ್ಕೆ ಬಳಸುವುದು ಸಂಪೂರ್ಣವಾಗಿ ನಿಷೇಧವಾಗಿದೆ.
ಸಾರಿಗೆ ನಿಗಮಗಳ ಅಂಕಿಅಂಶಗಳ ಪ್ರಕಾರ, KSRTC ಎರಡು ದಿನಗಳಲ್ಲಿ 860 ಪಾಸ್ಗಳನ್ನು ವಿತರಿಸಿದೆ. BMTC ಮೊದಲ ದಿನ ವಿತರಣೆ ಮಾಡದಿದ್ದರೂ ಎರಡನೇ ದಿನ 268 ಪಾಸ್ಗಳನ್ನು ನೀಡಿದೆ. KKRTC ಒಟ್ಟು 641 ಪಾಸ್ಗಳನ್ನು ವಿತರಿಸಿದ್ದು, NWKRTC ಅತ್ಯಧಿಕವಾಗಿ 995 ಪಾಸ್ಗಳನ್ನು ವಿತರಿಸಿದೆ.
ಈ ಮೂಲಕ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಉಚಿತ ಸಾರಿಗೆ ಸೌಲಭ್ಯ ಮತ್ತಷ್ಟು ವಿಸ್ತಾರಗೊಂಡಿದೆ.
ಇದನ್ನೂ ನೋಡಿ: “ಅನ್ನದಾತನ ಬೆನ್ನಿಗೆ ಚೂರಿ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದೇ ನಿಲುವೇ?” | ಬಸವರಾಜ | ಗುರುರಾಜ ದೇಸಾಯಿ
