ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ವು NEET-UG 2026 ಪರೀಕ್ಷಾ ಶುಲ್ಕ ಮರುಪಾವತಿಗಾಗಿ ಬ್ಯಾಂಕ್ ಖಾತೆ ವಿವರ ಸಲ್ಲಿಸುವ ಅವಧಿಯನ್ನು ಜೂನ್ 22ರವರೆಗೆ ವಿಸ್ತರಿಸಿದೆ. ಈಗಾಗಲೇ ಸುಮಾರು 13 ಲಕ್ಷ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಿರುವುದಾಗಿ ಎನ್ಟಿಎ ತಿಳಿಸಿದೆ.
ಪ್ರಶ್ನೆಪತ್ರ ಸೋರಿಕೆ ಆರೋಪಗಳ ಹಿನ್ನೆಲೆ NEET-UG 2026 ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುತ್ತದೆ. ಮರುಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಎನ್ಟಿಎ ಈಗಾಗಲೇ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೊದಲೇ ಪಾವತಿಸಿದ್ದ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಲಾಗುತ್ತಿದೆ.
ಇದನ್ನೂ ಓದಿ : ₹24 ಕೋಟಿ ಸೇತುವೆಯಲ್ಲಿ ಬಿರುಕು: ಗುಜರಾತ್ ಬಿಜೆಪಿ ಒಳಗೆ ಅಸಮಾಧಾನ, ಭ್ರಷ್ಟಾಚಾರ ಆರೋಪ
ಈ ಮೊದಲು ಮೇ 22ರಿಂದ ಮೇ 27ರವರೆಗೆ ಬ್ಯಾಂಕ್ ವಿವರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಅನೇಕ ಅಭ್ಯರ್ಥಿಗಳು ಪ್ರಕ್ರಿಯೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಗಡುವು ವಿಸ್ತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ಗೆ ಲಾಗಿನ್ ಆಗಿ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಸೇರಿದಂತೆ ಅಗತ್ಯ ವಿವರಗಳನ್ನು ಸಲ್ಲಿಸಬೇಕಾಗಿದೆ. ಅಗತ್ಯವಿದ್ದರೆ ರದ್ದುಗೊಂಡ ಚೆಕ್ನ ಪ್ರತಿಯನ್ನೂ ಅಪ್ಲೋಡ್ ಮಾಡಬಹುದು.
ಒಮ್ಮೆ ಸಲ್ಲಿಸಿದ ಬ್ಯಾಂಕ್ ವಿವರಗಳನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ. ನಂತರ ಯಾವುದೇ ತಿದ್ದುಪಡಿ ಅವಕಾಶ ಇರುವುದಿಲ್ಲ ಎಂದು ಎನ್ಟಿಎ ಸ್ಪಷ್ಟಪಡಿಸಿದೆ. ಕೊನೆಯ ಕ್ಷಣದವರೆಗೆ ಕಾಯದೆ ವಿದ್ಯಾರ್ಥಿಗಳು ಬೇಗನೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಇದನ್ನೂ ನೋಡಿ : “ಗ್ರಾಮಗಳ ಸ್ವಚ್ಛತೆಗೆ ಶ್ರಮ, ಬದುಕಿಗೆ ಸಂಕಷ್ಟ: ಸ್ವಚ್ಛವಾಹಿನಿ ನೌಕರರ ಅಳಲು” Janashakthi Media
