ಬೆಂಗಳೂರು: ಟ್ರಾನ್ಸ್ಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಭೂಗತ ವಿದ್ಯುತ್ ಕೇಬಲ್ ದುರಸ್ತಿ ಮಾಡುತ್ತಿದ್ದ ವೇಳೆ ಬೆಸ್ಕಾಂ ಸಿಬ್ಬಂದಿ ಆಕಸ್ಮಿಕವಾಗಿ ಭೂಗತ ಕಾವೇರಿ ನೀರಿನ ಪೈಪ್ಲೈನ್ಗೆ ಹಾನಿ ಮಾಡಿರುವ ಘಟನೆ ಹುಳಿಮಾವು ಬಳಿಯ ಬಿಡಿಎ ಲೇಔಟ್ನಲ್ಲಿ ಮೇ 9ರ ಬೆಳಿಗ್ಗೆ 8 ಗಂಟೆಗೆ ಸಂಭವಿಸಿದೆ.
ಈ ಪ್ರದೇಶದಲ್ಲಿ ನೀರು ವ್ಯರ್ಥವಾಗುವುದನ್ನುತಪ್ಪಿಸಲು ಪೈಪ್ಲೈನ್ಗೆ ಬರುತ್ತಿದ್ದ ನೀರಿನ ಸಂಪರ್ಕ ಕಡಿತಗೊಳಿಸಲಾಯಿತು. ಅದಾದ ನಂತರ ಕೇಬಲ್ ಸರಿಪಡಿಸಲಾಯಿತು. ಬೆಳಿಗ್ಗೆ 11.30 ರ ಸುಮಾರಿಗೆ ವಿದ್ಯುತ್ ಪೂರೈಸಲಾಯಿತು. ಇದರಿಂದಾಗಿ ಇಡೀ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿತ್ತು.
ಇದನ್ನೂ ಓದಿ: ಬೆಂಗಳೂರು| ಮಳೆಗಾಲ ಆರಂಭವಾಗುವ ಮೊದಲೇ ಬಾವಿ ತೋಡುವವರಿಗೆ ಬೇಡಿಕೆ ಹೆಚ್ಚಳ
ಆದರೆ ಅಕ್ಷಯನಗರದ ಆಕ್ಸಿಸ್ ಅಂತರಾ ಅಪಾರ್ಟ್ಮೆಂಟ್ಗಳ 20 ಮನೆಗಳಿಗೆ ನೀರು ಸರಬರಾಜು ಇರಲಿಲ್ಲ. ವಿದ್ಯುತ್ ಲೈನ್ ಅನ್ನು ಪ್ರವೇಶಿಸಲು ಮಣ್ಣು ತೆಗೆಯುವ ಯಂತ್ರವು ಕಾವೇರಿ ಪೈಪ್ಲೈನ್ ಮುರಿದು ಹಾಕಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಾರಕ್ಕೆ ಎರಡು ಬಾರಿ ಈ ಪ್ರದೇಶಕ್ಕೆ ನೀರು ಪೂರೈಸುವ 4 ಇಂಚಿನ ಕಾವೇರಿ ಪೈಪ್ಲೈನ್ ಗೆ ಹಾನಿಯಾಗಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗೆದ ಪ್ರದೇಶದ ಗೋಡೆಯನ್ನು ರಾತ್ರಿ 10 ಗಂಟೆಗೆ ಸರಿ ಪಡಿಸಲಾಯಿತು. ಮಧ್ಯರಾತ್ರಿಯ ಸುಮಾರಿಗೆ ಪೈಪ್ಲೈನ್ ಗೆ ತೇಪೆ ಹಾಕಲಾಯಿತು. ದುರಸ್ತಿ ನಂತರ, ಮನೆಗಳಿಗೆ ನೀರು ಸರಬರಾಜು ಪುನರಾರಂಭವಾಯಿತು.
ಇದನ್ನೂ ನೋಡಿ: ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media
