ಹಾವೇರಿ | ಜಿಲ್ಲೆಯಲ್ಲಿ 64 ಸರ್ಕಾರಿ ಶಾಲೆ ಮುಚ್ಚುವ ತೀರ್ಮಾನ ಖಂಡನೀಯ: ಎಸ್ಎಫ್ಐ ಆಕ್ರೋಶ

ಒಂದೇ ಒಂದು ಶಾಲೆ ಮುಚ್ಚಿದ್ದರೂ 7 ಜನ ಕಾಂಗ್ರೆಸ್ ಶಾಸಕರ ಹೊಣೆ!
ಹಾವೇರಿ: ಜಿಲ್ಲೆಯಲ್ಲಿ 18 ಕೆಪಿಎಸ್ ಶಾಲೆ ಮಂಜೂರು ಹಿನ್ನೆಲೆಯಲ್ಲಿ, 64 ಸರ್ಕಾರಿ ಶಾಲೆಗಳನ್ನು ಮುಚ್ಚುವ ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆ

ನಗರದ ಶಿವಾಜಿ ನಗರದಲ್ಲಿರುವ ಎಸ್ಎಫ್ಐ ಕಚೇರಿಯಲ್ಲಿ ನಡೆದ ಜಿಲ್ಲಾ ಕೇಂದ್ರ ಪದಾಧಿಕಾರಿಗಳ ಸಭೆಯಲ್ಲಿ ಫಲಕಗಳನ್ನು ಹಿಡಿದು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿದ ಅವರು, ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ರಾಜ್ಯ ಸರ್ಕಾರದ ಹುನ್ನಾರ ವಿರೋಧಿಸಿ ಎಸ್ಎಫ್ಐ ನೇತೃತ್ವದಲ್ಲಿ ಈಗಾಗಲೇ ದುಂಡು ಮೇಜಿನ ಸಭೆಗಳು, ಬೃಹತ್ ಪ್ರತಿಭಟನೆಗಳನ್ನು ನಡೆಸಿ, ಪ್ರತಿರೋಧ ಸಭೆಗಳನ್ನು ನಡೆಸಿ, ಸರ್ಕಾರಿ ಶಾಲಗಳ ಉಳಿವಿಗಾಗಿ ಜನರನ್ನು ಜಾಗೃತಗೊಳಿಸಿ, ಬೃಹತ್ ಚಳುವಳಿ ರೂಪಿಸಲು ಬೀದಿ ನಾಟಕಗಳನ್ನು, ರಾಜ್ಯಾದ್ಯಂತ ಜಾಥಾ, ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ.

ಇಷ್ಟೆಲ್ಲಾಗಳ ಮಧ್ಯೆಯು ರಾಜ್ಯ ಸರ್ಕಾರದ ನಿರ್ದೇಶನದಂತೆ ಹಾವೇರಿ ಜಿಲ್ಲೆಯಲ್ಲಿ 18 ಕೆಪಿಎಸ್ ಶಾಲೆಗಳಿಗೆ ವಿಲೀನದ ಹೆಸರಿನಲ್ಲಿ 64 ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನವನ್ನು ಸಹಿಸಲು ಸಾದ್ಯವಿಲ್ಲ. ಕೆಪಿಎಸ್ ಶಾಲೆಯ ಮಂಜೂರು ಹೆಸರಿನಲ್ಲಿ ನಮ್ಮ ಜಿಲ್ಲೆಯ ಶಾಸಕರ ಪೋಸ್ಟರ್ ಗಳಿಗೆ ಪೋಸ್ ಗಳನ್ನು ಕೊಡುತ್ತಿದ್ದರು ಈಗ ಶಾಲೆ ಮುಚ್ಚುವ ತೀರ್ಮಾನವನ್ನು ನೀವೆ ಮಾಡಿಸಿ ಎಲ್ಲಿಗೆ? ಹೋಗಿದ್ದಿರಿ? ಬಾಯಿ ಬಿಡಬೇಕು ಯಾವುದೇ ಕಾರಣಕ್ಕೂ ಒಂದೇ ಶಾಲೆಗಳನ್ನು ಮುಚ್ಚಲು ಎಸ್ಎಫ್ಐ ಬಿಡುವುದಿಲ್ಲ ರಾಜ್ಯ ಸರ್ಕಾರ ಒಂದು ವೇಳೆ ತೀರ್ಮಾನ ಹಿಂದೆ ಸರಿಲ್ಲಿಲ್ಲ ಅಂದರೆ ಬೃಹತ್ ತೆರನಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಭಾರತದ ಚುನಾವಣಾ ಪ್ರಜಾಪ್ರಭುತ್ವವು ಸೀಜ್ ಆಗಿದೆ: ಪ್ರಶಾಂತ್ ಭೂಷಣ್

ಕೆಪಿಎಸ್ ಉನ್ನತಿಕರಣದ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ನೆಪಹೇಳಿ ಶಾಲೆಗಳನ್ನು ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡದೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಸರ್ಕಾರ ಮುಂದಾಗಿರುವುದುದನ್ನು ಖಂಡನೀಯ.

ಎಸ್ಎಫ್ಐ ಮುಖಂಡ ಅರುಣ್ ನಗವತ್ ಮಾತನಾಡಿ, ಖಾಸಗಿ ಶಾಲಾ ಕಾಲೇಜುಗಳಿಗೆ ಕಡಿವಾಣ ಹಾಕುವ ಬದಲಾಗಿ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಬಂದ್ ಮಾಡಲು ಮುಂದಾಗುತ್ತಿರುವುದು ನಾಚಿಕೆಗೆಡ್ಡಿನ ಸಂಗತಿ. ರಾಜ್ಯ ಸರ್ಕಾರಕ್ಕೆ ತಕತ್ತು ಇದ್ದರೆ ಸರ್ಕಾರಿ ಶಾಲೆಯ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಿ, ಖಾಸಗಿ ಶಾಲೆಗಳ ಶುಲ್ಕ, ಹೊಸ ಶಾಲೆಗಳು ಅನುಮತಿಗಳಿಗೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಕೈ ಹಾಕಿದ್ದು ಸರಿಯಲ್ಲ ಎಂದರು.

ಕಾಂಗ್ರೆಸ್ ಸರ್ಕಾರವು ಕೆಪಿಎಸ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮುಂದಾಗಿದೆ. ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಾಗುತ್ತದೆ. ಸರ್ಕಾರಿ ಕನ್ನಡ ಶಾಲೆಗಳನ್ನು ನೇರವಾಗಿ ಕೊಲೆ ಮಾಡುವ ಬದಲಾಗಿ ಸಮಾನ ಶಿಕ್ಷಣ ಜಾರಿಗೆ ತನ್ನಿ. ರಾಜ್ಯ ಎಲ್ಲಾ ಶಾಲೆಗಳನ್ನು ಪಬ್ಲಿಕ್ ಶಾಲೆಗಳ ರೀತಿಯ ಅಭಿವೃದ್ಧಿ ಪಡಿಸಿ ಎಂದು ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ, ಮುಖಂಡ ಕೃಷ್ಣ ನಾಯ್ಕ್, ಧನುಷ್ ದೊಡ್ಡಮನಿ ಆಗ್ರಹಿಸಿದರು.

ಇದನ್ನೂ ನೋಡಿ: ದು.ಸರಸ್ವತಿಯವರ ಹೋರಾಟದ ಯಶೋಗಾಥೆ Janashakthi Media

Donate Janashakthi Media

Leave a Reply

Your email address will not be published. Required fields are marked *