ಟಿವಿಕೆ ಸರ್ಕಾರಕ್ಕೆ ಎಡಪಕ್ಷಗಳ ಬಾಹ್ಯ ಬೆಂಬಲ : ಡಿಎಂಕೆಯೊಂದಿಗೆ ಸಂಬಂಧ ಮುಂದುವರಿಯಲಿದೆ ಎಂದ ಎಡಪಕ್ಷಗಳು

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆ ನಟ ವಿಜಯ್ ನೇತೃತ್ವದ ತಮಿಳು ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ಸಿಪಿಐ ಮತ್ತು ಸಿಪಿಐ(ಎಂ) ಬಾಹ್ಯ ಬೆಂಬಲ ಘೋಷಿಸಿವೆ. ಆದರೆ, ರಾಜ್ಯದ ಹಿತಾಸಕ್ತಿ ಮತ್ತು ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಡಿಎಂಕೆಯೊಂದಿಗೆ ಸಹಕಾರ ಮುಂದುವರಿಯಲಿದೆ ಎಂದು ಎಡಪಕ್ಷಗಳು ಸ್ಪಷ್ಟಪಡಿಸಿವೆ. ಟಿವಿಕೆ 

ಚೆನ್ನೈನಲ್ಲಿ ನಡೆದ ಚರ್ಚೆಗಳ ಬಳಿಕ ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತ್ತರಸನ್ ಹಾಗೂ ಇತರೆ ಎಡಪಕ್ಷ ನಾಯಕರು ಈ ನಿರ್ಧಾರ ಪ್ರಕಟಿಸಿದರು. ಟಿವಿಕೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಒದಗಿಸುವ ದೃಷ್ಟಿಯಿಂದ ಬೆಂಬಲ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಟಿವಿಕೆ 107, ಸಿಪಿಐ(ಎಂ) 02, ಸಿಪಿಐ 02, ವಿಸಿಕೆ 02 , ಕಾಂಗ್ರೆಸ್‌ 05 ಒಟ್ಟು 118 ಸ್ಥಾನಗಳಾಗಲಿವೆ. ನಹುಮತಕ್ಕೆ 117 ಸ್ಥಾನ ಬೇಕಿದೆ. ಟಿವಿಕೆ 

ಇದನ್ನೂ ಓದಿ : ಚುನಾವಣಾ ಫಲಿತಾಂಶ | 1967ರ ರಾಜಕೀಯ ಕ್ಷಣ ಮತ್ತೆ ಮರುಕಳಿಸುತ್ತಿದೆಯೇ?

ವಿಜಯ್ ನೇತೃತ್ವದ ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯನ್ನು ತಲುಪಿರಲಿಲ್ಲ. ಕಾಂಗ್ರೆಸ್ ಈಗಾಗಲೇ ಬೆಂಬಲ ಘೋಷಿಸಿದ್ದರೆ, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಟಿವಿಕೆ ಇನ್ನಷ್ಟು ಬಲ ಪಡೆದಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಎಡಪಕ್ಷಗಳ ಈ ನಿರ್ಧಾರ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಿದೆ. ರಾಜ್ಯಪಾಲರು ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂಬ ಒತ್ತಾಯವೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಟಿವಿಕೆ 

ಇದನ್ನೂ ನೋಡಿ : ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *