ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ನ ರಮೇಶ್ ಬಾಬು ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್ ಪದವಿಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ : ಬೆಂಗಳೂರು | ತೇಜಸ್ವಿ ಜೀವನದ ಸ್ಮರಣೆಗೆ ಹೂವಿನ ಹಬ್ಬ: ದಾಖಲೆ 8.10 ಲಕ್ಷ ಮಂದಿಯಿಂದ ವೀಕ್ಷಣೆ
ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇತ್ತಿಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಸಿಕ್ಕಸಿಕ್ಕವರಿಗೆಲ್ಲಾ ಈ ಪದವಿ ನೀಡುತ್ತಿವೆ. ಈ ಮೊದಲು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿತ್ತು. ಕೆಲವು ವಿಶ್ವವಿದ್ಯಾಲಯಗಳು ಹಣ ಪಡೆದು ನೀಡುತ್ತಿವೆ. ಇದರಿಂದ ಈ ಪದವಿಯ ಘನತೆ ಕುಗ್ಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಗೌರವ ಡಾಕ್ಟರೇಟ್ ನೀಡಲು ಒಂದು ಮಾನದಂಡ ರೂಪಿಸಬೇಕು. ವಿಶ್ವವಿದ್ಯಾಲಯವು ವರ್ಷವೊಂದರಲ್ಲಿ ನೀಡಬಹುದಾದ ಗೌರವ ಡಾಕ್ಟರೇಟ್ ಪದವಿಗಳಿಗೆ ಮಿತಿ ಹೇರಬೇಕು’ ಎಂದು ಆಗ್ರಹಿಸಿದರು.
ಇದನ್ನೂ ನೋಡಿ : ಕೋಗಿಲು ಗಣರಾಜ್ಯೋತ್ಸವ | ” ನಾವು ದುಡಿಯಲು ಬಂದವರು, ಯಾರ ಆಸ್ತಿಯನ್ನು ಕಸಿಯಲು ಬಂದವರಲ್ಲ” Janashakthi Media
