ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ನಿಧನ

ನವದೆಹಲಿ: ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ  89ನೇ ವಯಸ್ಸಿನಲ್ಲಿ ನವೆಂಬರ್‌ 24ರಂದು ಮುಂಬೈನ ನಿವಾಸದಲ್ಲಿ  ನಿಧನರಾಗಿದ್ದಾರೆ. ಇದೇ ಡಿಸೆಂಬರ್‌ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು. ಹಿರಿಯ

ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನೇಕ ಬಾಲಿವುಡ್‌ ತಾರೆಯರು ಅವರನ್ನ ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದರು. ಹಿರಿಯ

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಗೋವಿಂದ, ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ದೇಶ್‌ಮುಖ್‌, ಅಮೀಷಾ ಪಟೇಲ್‌ ಸೇರಿದಂತೆ ಮುಂತಾದ ಸ್ಟಾರ್‌ ನಟ-ನಟಿಯರು ಮುಂಬೈನ್‌ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ ಧರ್ಮೇಂದ್ರ ಅವರ ಆರೋಗ್ಯವನ್ನ ವಿಚಾರಿಸಿದ್ದರು. ಇದಾದ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು.

ಇದನ್ನೂ ಓದಿ: ನ್ಯಾಯಾಂಗವು ಪ್ರಜಾಪ್ರಭುತ್ವದ ರಕ್ಷಣೆಯ ಕವಚವಾಗಿ ಕೆಲಸ ಮಾಡಬೇಕು – ಶ್ರೀ P V‌ ಸುರೇಂದ್ರನಾಥನ್

ಧರ್ಮೇಂದ್ರ ಅವರ ಕಿರಿಯ ಮಗ, ನಟ ಬಾಬಿ ಡಿಯೋಲ್, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ʻಮುಂಬೈ ಸಮೀಪದ ಖಂಡಾಲಾದಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ತಂದೆ ಧರ್ಮೇಂದ್ರ ಅವರು ವಾಸಿಸುತ್ತಿದ್ದಾರೆʼ ಎಂದು ಬಹಿರಂಗಪಡಿಸಿದ್ದರು.

ಸೂಪರ್ ಹಿಟ್ ಸಿನಿಮಾ ನೀಡಿದ್ದ ಧರ್ಮೇಂದ್ರ

ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿ ಮರೆದಿದ್ದ ಧರ್ಮೇಂದ್ರ ಅವರು ದಶಕಗಳ ಕಾಲ ಸಿನಿಮಾ ರಂಗವನ್ನ ಆಳಿದ್ದರು ಅಂದ್ರೂ ತಪ್ಪಾಗಲಾರದು. ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ, ಇದಕ್ಕೆ ಸಾಕ್ಷಿ ಎನ್ನುವಂತೆ ತನ್ನ ಸಿನಿರಂಗದ ಪ್ರಯಾಣದಲ್ಲಿ ಏನೆಲ್ಲಾ ಅಂದರೂ ಕೂಡ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ʻಶೋಲೆʼ, ʻಚುಪ್ಕೆ ಚುಪ್ಕೆʼ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಗೆ ಇವರದ್ದಾಗಿತ್ತು.

ಸಿನಿಮಾಗಳಲ್ಲಿ ಮುಂದುವರಿದ ನಟನೆ

ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’ ಚಿತ್ರದಲ್ಲಿ ಧರ್ಮೇಂದ್ರ ಅವರು ಕೊನೆಯದಾಗಿ ನಟಿಸಿದ್ದರು. ಇದು ಡಿಸೆಂಬರ್‌ 25ರಂದು ತೆರೆ ಕಾಣಬೇಕಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟಿಸುತ್ತಿದ್ದಾರೆ. ‘ಇಕ್ಕೀಸ್’ ಚಿತ್ರದಲ್ಲಿ ಭಾರತದ ಅತಿ ಕಿರಿಯ ಪರಮ ವೀರ ಚಕ್ರ ಪ್ರಶಸ್ತಿ ವಿಜೇತ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಪಾತ್ರದಲ್ಲಿ ಅಗಸ್ತ್ಯ ನಂದ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅರುಣ್ ಅವರ ನಿಜ ಜೀವನದ ಕಥೆಯನ್ನು ಹೇಳಲಾಗುತ್ತಿದೆಯಂತೆ. 2023ರಲ್ಲಿ ತೆರೆಕಂಡ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ ಮತ್ತು ಆಲಿಯಾ ಭಟ್ ಅವರೊಂದಿಗೆ ಧರ್ಮೇಂದ್ರ ಅವರು ನಟಿಸಿದ್ದರು. 2024ರಲ್ಲಿ ‘ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಶಹೀದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ಧರ್ಮೇಂದ್ರ ಕಾಣಿಸಿಕೊಂಡಿದ್ದರು.

ಇದನ್ನೂ ನೋಡಿ: ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತಂದ ನಾಟಕಕಾರ ಪಿ.ಬಿ.ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *