22 ಮಕ್ಕಳ ಸಾವಿಗೆ ಕಾರಣವಾದ ಸಿರಪ್: ಶೇ.10 ಕಮಿಷನ್‌ಗೆ ಶಿಫಾರಸು ಮಾಡಿದ ವೈದ್ಯರು

Please follow and like us:
ಭೋಪಾಲ್‌: ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿ‌ರಪ್ ಅನ್ನು ಶಿಫಾರಸು ಮಾಡಲು ಶೇ.10ರಷ್ಟು ಕಮಿಷನ್‌ನನ್ನು ಡಾ. ಪ್ರವೀಣ್‌ ಸೋನಿ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದೂ, ಮಕ್ಕಳಿಗೆ ಸಿರಪ್‌ ಶಿಫಾರಸು ಮಾಡಿದ್ದಆತನನ್ನು ಬಂಧಿಸಿದ್ದರು. ಕಾರಣ

ಪ್ರಕರಣದ ವಿಚಾರಣೆ ವೇಳೆ, ಕೋಲ್ಡ್ರಿಫ್‌ ಸಿರಫ್‌ ಶಿಫಾರಸು ಮಾಡಲು ಶ್ರೀಶನ್‌ ಕಂಪನಿಯಿಂದ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದೆ ಎಂಬುದನ್ನು ಡಾ. ಸೋನಿ ಒಪ್ಪಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 6 ವರ್ಷಗಳ ಕೂಲಿಯನ್ನು ಪಾವತಿಸಿ – ಬೀಡಿ ಲೇಬಲ್ ಯೂನಿಯನ್ ಪ್ರತಿಭಟನೆ

ಕೋಲ್ಡ್ರಿಫ್‌ ಔಷಧ ಸೇವಿಸಿದ ಹಲವು ಮಕ್ಕಳಲ್ಲಿ ಮೂತ್ರ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಬಳಿಕವೂ ಡಾ.ಸೋನಿ ಸೇರಿದಂತೆ ಹಲವು ವೈದ್ಯರು ಮಕ್ಕಳಿಗೆ ಕೋಲ್ಡ್ರಿಫ್‌ ಸಿರಪ್‌ ಶಿಫಾರಸು ಮುಂದುವರೆಸಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿಕ್ಕಮಕ್ಕಳಿಗೆ ಕೋಲ್ಡ್ರಿಫ್‌ ಸೂಕ್ತವಲ್ಲ ಎಂದು ಗೊತ್ತಿದ್ದರೂ ಆ.24ರಿಂದ ಅ.4ರ ಅವಧಿಯಲ್ಲಿ ಹಲವು ಮಕ್ಕಳಿಗೆ ಡಾ.ಸೋನಿ ಅದೇ ಸಿರಫ್‌ ಶಿಫಾರಸು ಮಾಡಿದ್ದರು ಎಂದೂ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಈ ನಡುವೆ ಜಾಮೀನು ಕೋರಿ ನ್ಯಾಯಾಲಕ್ಕೆ ವೈದ್ಯ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನೂ ನೋಡಿ: KIADB | ಸುವರ್ಣ ಚಾನೆಲ್ ರಾಜೀವ್‌ ಚಂದ್ರಶೇಖರ್ ಕುಟುಂಬದ ಹಗರಣಗಳ ಬಗ್ಗೆ ದೂರು ದಾಖಲಿಸಿದ ವಕೀಲ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *