ಉಪನ್ಯಾಸಕರ ನೇಮಕಾತಿ ವಿಳಂಬ: ಉನ್ನತ ಶಿಕ್ಷಣ ಇಲಾಖೆಯಿಂದ ಪದವಿ ವೇಳಾಪಟ್ಟಿ ಪರಿಷ್ಕರಣೆ

Please follow and like us:
ಬೆಂಗಳೂರು: 2025- 26 ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವೇಳಾಪಟ್ಟಿಯನ್ನು ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬವಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿದೆ. ನೇಮಕಾತಿ 

25 ಸಾರ್ವಜನಿಕ ವಿಶ್ವವಿದ್ಯಾಲಯಗಳು, 440 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪಠ್ಯ ಬೋಧನೆಗೆ ಒಂದೆರಡು ತಿಂಗಳು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ವಿವಿಗಳಿಗೆ ಬೇರೆಯಾಗಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ರಾಜಸ್ಥಾನ | ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು

ಮೈಸೂರು ವಿವಿ ಆರಂಭಿಕ ಸೆಮಿಸ್ಟರ್ ಅವಧಿ ಜುಲೈ 30 ರಿಂದ ಅಕ್ಟೋಬರ್ 23ರ ವರೆಗೆ ಇತ್ತು. ಇದನ್ನು ನವೆಂಬರ್ 22 ರವರೆಗೆ ವಿಸ್ತರಿಸಲಾಗಿದೆ. ಇದೇ ರೀತಿ ಪ್ರತಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅವಧಿ ಪ್ರಾರಂಭವಾಗುವ ದಿನಾಂಕದ ಆಧಾರದ ಮೇಲೆ ಮುಕ್ತಾಯದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಸರ್ಕಾರಿ ಪದವಿ ಕಾಲೇಜುಗಳಿಗೆ ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ ತಾತ್ಕಾಲಿಕವಾಗಿ ಹಾಲಿ ಸೆಮಿಸ್ಟರ್ ಅವಧಿಗೆ ಮುಂದುವರೆಸುವಂತೆ ಸರ್ಕಾರ ಸೂಚನೆ ನೀಡಿದೆ.

ಇದನ್ನೂ ನೋಡಿ: ಕೋಲಾರ | ಅಂಗೈ ಮೂಳೆ ಮುರಿದು ಆರು ದಿನ ಆದ್ರು ಚಿಕಿತ್ಸೆ ನೀಡದ ಸರ್ಕಾರಿ ಆಸ್ಪತ್ರೆ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *