ಜಾತಿಗಣತಿ ಸಮೀಕ್ಷೆ: ಸರ್ವರ್ ಸಮಸ್ಯೆ ನಡುವೆಯೂ 13 ಲಕ್ಷ ಸಮೀಕ್ಷೆಗಳು ಪೂರ್ಣ

ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಸೆಪ್ಟೆಂಬರ್ 22ರಿಂದ ಆರಂಭವಾಗಿದೆ. ಶಿಕ್ಷಕರ ಜಾತಿ ಗಣತಿ ಸಮೀಕ್ಷೆಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರ ನಡುವೆ ಜಾತಿಗಣತಿ ಸಾಗಿದ್ದು, ಈವರೆಗೆ ಬರೋಬ್ಬರಿ 13 ಲಕ್ಷ ಸಮೀಕ್ಷೆಯನ್ನು ಮಾಡಲಾಗಿದೆ.

ಈ ಕುರಿತಂತೆ ಸಿಎಂ ಕಚೇರಿಯಿಂದ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸರ್ವರ್ ಸಮಸ್ಯೆ ನಡುವೆಯೂ ಹೆಣಗಾಡುತ್ತಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಸೆಪ್ಟೆಂಬರ್.22ರಿಂದ ಆರಂಭಗೊಂಡು, ಸೆಪ್ಟೆಂಬರ್.27ರ ಇಂದು ಸಂಜೆ 5.30ರವರೆಗೆ 12,87,087 ಮನೆಗಳ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಾಗಿದೆ.

ಇದನ್ನೂ ಓದಿ: ಎಜಿ ಆರ್‌ ವೆಂಕಟರಮಣಿ ಅಧಿಕಾರಾವಧಿ 2 ವರ್ಷಗಳ ಕಾಲ ವಿಸ್ತರಣೆ

ಹೀಗಿದೆ ಜಿಲ್ಲಾವಾರ ಜಾತಿಗಣತಿ ಸಮೀಕ್ಷೆಯ ವಿವರ

  1. ಬಾಗಲಕೋಟೆ – 55,459
  2. ಬಳ್ಳಾರಿ – 27,799
  3. ಬೆಳಗಾವಿ -96,167
  4. ಬೆಂಗಳೂರು ಗ್ರಾಮಾಂತರ – 22,984
  5. ಬೆಂಗಳೂರು ಸೌತ್ – 32,610
  6. ಬೆಂಗಳೂರು ನಗರ – 9,586
  7. ಬೀದರ್ – 26,345
  8. ಚಾಮರಾಜನಗರ – 24,688
  9. ಚಿಕ್ಕಬಳ್ಳಾಪುರ – 28,845
  10. ಚಿಕ್ಕಮಗಳೂರು -41,634
  11. ಚಿತ್ರದುರ್ಗ -55,531
  12. ದಕ್ಷಿಣ ಕನ್ನಡ – 24,309
  13. ದಾವಣಗೆರೆ – 62,055
  14. ಧಾರವಾಡ – 49,599
  15. ಗದಗ- 44,213
  16. ಹಾಸನ- 50,713
  17. ಹಾವೇರಿ -74,477
  18. ಕಲಬುರ್ಗಿ-54,048
  19. ಕೊಡಗು-15,686
  20. ಕೋಲಾರ-40,348
  21. ಕೊಪ್ಪಳ-52,773
  22. ಮಂಡ್ಯ-63,488
  23. ಮೈಸೂರು-45,883
  24. ರಾಯಚೂರು-33,753
  25. ಶಿವಮೊಗ್ಗ-48,590
  26. ತುಮಕೂರು-61,238
  27. ಉಡುಪಿ-13,841
  28. ಉತ್ತರ ಕನ್ನಡ -42,159
  29. ವಿಜಯನಗರ-29,748
  30. ವಿಜಯಪುರ-33,619
  31. ಯಾದಗಿರಿ-24,899

ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲಿ 9,586 ಅತೀ ಕಡಿಮೆ ಜಾತಿಗಣತಿ ಸಮೀಕ್ಷೆ ನಡೆದಿದ್ದರೇ, ಹಾವೇರಿಯಲ್ಲಿ 74,477 ಅತೀ ಹೆಚ್ಚು ಜಾತಿಗಣತಿ ಸಮೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.

ಇದನ್ನೂ ನೋಡಿ: ಜಾತಿ ಗಣತಿ : ʼಧರ್ಮ, ಜಾತಿʼ ಗೊಂದಲದಲ್ಲಿ ಲಿಂಗಾಯತ -ವೀರಶೈವ ! | #KarnatakaCasteCensus | Janashakthi Media

Donate Janashakthi Media

Leave a Reply

Your email address will not be published. Required fields are marked *