ವಾರಕ್ಕೆ 90 ಗಂಟೆಗಳ ಕೆಲಸದ ಆಗ್ರಹ!- ಕಾರ್ಮಿಕರನ್ನು ಹಿಂಡಲು ಕಾರ್ಪೊರೇಟ್ ‘ಉದ್ಧಾರಕ’ರ ನಡುವೆ ಧೂರ್ತ ಸ್ಪರ್ಧೆ-ಸಿಐಟಿಯು ಖಂಡನೆ

‘ವಾರಕ್ಕೆ 5 ದಿನಗಳ, 35 ಗಂಟೆಗಳ ಕೆಲಸದ ಅವಧಿ’ ಎಂಬ ಆಗ್ರಹದೊಂದಿಗೆ ಕಾರ್ಮಿಕರ ಪ್ರತಿದಾಳಿಗೆ ಕರೆ

ನವದೆಹಲಿ: ಕೆಲಸದ ಅವಧಿಯನ್ನು ವಾರಕ್ಕೆ 90 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುವ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷರ ಹೇಳಿಕೆಗೆ ಸಿಐಟಿಯು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತ ಅದನ್ನು ಖಂಡಿಸಿದೆ. ಇದೇ ರೀತಿಯ ಪೈಶಾಚಿಕ ಹೇಳಿಕೆಯನ್ನು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣ ಮೂರ್ತಿ ಅವರು ಈ ಹಿಂದೆ ನೀಡಿದ್ದರು, ಒಂದು ಶಾಸನ ತರುವ ಮೂಲಕ ಕೆಲಸದ ಅವಧಿಯನ್ನು ವಾರಕ್ಕೆ 70 ಗಂಟೆಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದರು ಎಂದು ನೆನಪಿಸಿರುವ ಸಿಐಟಿಯು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರನ್ನು ಹಿಂಡಿ ಹಾಕಲು ಕಾರ್ಪೊರೇಟ್ ಉದ್ಧಾರಕರ ನಡುವೆ ಒಂದು ಧೂರ್ತ ಸ್ಪರ್ಧೆ ನಡೆದಿರುವಂತೆ ಕಾಣುತ್ತದೆ,ಮತ್ತು ಅವರಿಗೆ ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಯ ಸಕ್ರಿಯ ಶಾಮೀಲು ದೊರೆತಿರುವಂತೆ ತೋರುತ್ತದೆ ಎಂದು ಹೇಳಿದೆ.

ಚೀನಾ, ಯುರೋಪ್ ಮತ್ತು ಯುಎಸ್ ನಂತಹ ಹೆಚ್ಚು ಉತ್ಪಾದಕ ದೇಶಗಳಿಗೆ ಹೋಲಿಸಿದರೆ ಭಾರತೀಯ ಕಾರ್ಮಿಕರು, ಔಪಚಾರಿಕ ವಲಯದಲ್ಲಿ ಖಾಯಂ ಉದ್ಯೋಗಗಳಲ್ಲಿ ನಿಯೋಜಿತರಾದವರು ಕೂಡ ಎಷ್ಟೋ ಹೆಚ್ಚು ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಕೆಲಸದ ಸಮಯವನ್ನು ವಿಸ್ತರಿಸುವುದು ಭಾರತೀಯ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಬಹಳ ವಿನಾಶಕಾರಿ ಪರಿಣಾಮ ಬೀರುತ್ತಿದೆ. ಆದಾಗ್ಯೂ, ಈ ರೀತಿಯ ಪೈಶಾಚಿಕ ಕಸರತ್ತುಗಳ ಮೂಲಕ ಕಾರ್ಪೊರೇಟ್ ವರ್ಗವು ಉದ್ಯೋಗಗಳನ್ನು ಕನಿಷ್ಟ ಮಟ್ಟಕ್ಕೆ ಇಳಿಸುವ ಮತ್ತು ಶ್ರಮ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುವ ಕ್ರೂರ ಕೆಲಸದ ಪರಿಸ್ಥಿತಿಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ, ಇದು ದಕ್ಷತೆ ಮತ್ತು ಉತ್ಪಾದಕತೆಯ ನೆಪದಲ್ಲಿ ಹೆಚ್ಚಿನ ಲಾಭ ಪೇರಿಸಿಕೊಳ್ಳಲು ಕಾರ್ಮಿಕರನ್ನು ಹೆಚ್ಚು ತೀವ್ರವಾದ ಶೋಷಣೆಗೆ ಗುರಿಪಡಿಸಲು ಅನುಕೂಲ ಮಾಡಿಕೊಳ್ಳುವುದಕ್ಕಾಗಿ ಮತ್ತು ವೆಚ್ಚ ಕಡಿತಕ್ಕಾಗಿ.

ಇದನ್ನೂ ಓದಿ: ಗೌರಿಬಿದನೂರು| ದೇವಾಲಯಕ್ಕೆ ಹೋದ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಪ್ರವೇಶ ನಿರಾಕರಣೆ

ಅಪರಾಧ ಬ್ಯೂರೋದ ದಾಖಲೆಗಳ ಪ್ರಕಾರ 2022 ರಲ್ಲಿ 11486 ಆತ್ಮಹತ್ಯೆಗಳಿಗೆ ಇದು ಕಾರಣವಾಗಿದೆ. ಕಾರ್ಮಿಕರಿಂದ ಎಷ್ಟೊಂದು ಅಮಾನವೀಯವಾಗಿ ಶ್ರಮವನ್ನು ಹೊರತೆಗೆಯಲಾಗಿದೆ ಎಂಬುದನ್ನು ನಿವ್ವಳ ಮೌಲ್ಯ ಸೇರ್ಪಡೆಯಲ್ಲಿ ವೇತನದ ಪಾಲು 1990-91 ರಲ್ಲಿ 27.64% ಇದ್ದದ್ದು, 2022-23 ರಲ್ಲಿ 15.94% ಕ್ಕೆ ತೀವ್ರವಾಗಿ ಇಳಿದಿದೆ ಮತ್ತು ಅದೇ ಅವಧಿಯಲ್ಲಿ ನಿವ್ವಳ ಲಾಭದ ಪಾಲು 19.06% ರಿಂದ 51.92% ಕ್ಕೆ ಏರಿದೆ ಎಂದು ಕೈಗಾರಿಕಾ ವಾರ್ಷಿಕ ಸಮೀಕ್ಷೆ ವರದಿಯ ಅಂಕಿ-ಅಂಶಗಳಲ್ಲಿ ಕಾಣಬಹುದು. ಜತೆಗೆ ನಿರುದ್ಯೋಗವನ್ನೂ ಅದು ಉಲ್ಬಣಗೊಳಿಸಿದೆ.

ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಒಂದರ ನಂತರ ಒಂದರಂತೆ ಕೆಲಸದ ಅವಧಿಯನ್ನು ಹೆಚ್ಚಿಸಲು ಇಂತಹ ಹತಾಶ ಮತ್ತು ಹೊಲಸು ಸ್ಪರ್ಧೆಗಿಳಿಯುವ ಪ್ರಯತ್ನವನ್ನು ನಡೆಸುತ್ತಿರುವುದು ಕೇಂದ್ರದಲ್ಲಿರುವ ತಮಗೆ ವಿಧೇಯವಾದ ಸರ್ಕಾರದ ಶಾಮೀಲಿನ ಪಿತೂರಿಯೊಂದಿಗೆ ಎಂದು ಸಿಐಟಿಯು ಮುಂದುವರೆದು ಹೇಳಿದೆ. ಕಾರ್ಮಿಕ ಸಂಹಿತೆಗಳು ಈಗಾಗಲೇ ಸರ್ಕಾರಗಳು ಅದೇಶ ಹೊರಡಿಸಿ ಕೆಲಸದ ಸಮಯವನ್ನು ಹೆಚ್ಚಿಸಲು ಅವಕಾಶವನ್ನು ಮಾಡಿಕೊಟ್ಟಿವೆ. ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಗಳ ಚಳುವಳಿಯ ಪ್ರತಿರೋಧದಿಂದಾಗಿ ಇನ್ನೂ ಅಧಿಸೂಚಿತವಾಗಿರದಿದ್ದರೂ, ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಮತ್ತು ಕೆಲವು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಸಹ ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗಳಿಗೆ ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು / ಕ್ರಮಗಳನ್ನು ಕೈಗೊಂಡಿರುವುದನ್ನು ನಾವು ನೋಡಿದ್ದೇವೆ, ಇದನ್ನು ಕೂಡ ಅನೇಕ ರಾಜ್ಯಗಳಲ್ಲಿ ಐಕ್ಯ ಕಾರ್ಮಿಕ ಆಂದೋಲನ ವಿರೋಧಿಸುತ್ತಿದೆ ಎಂಬ ಸಂಗತಿಯತ್ತವೂ ಸಿಐಟಿಯು ಗಮನ ಸೆಳೆದಿದೆ.

ಬಂಡವಾಳಶಾಹಿ ವರ್ಗದ ಇಂತಹ ಹೊಲಸು ಸ್ಪರ್ಧೆಗಳ ದುರಹಂಕಾರಗಳ ವಿರುದ್ಧ ಕಾರ್ಮಿಕ ವರ್ಗದ ಎಲ್ಲ ವಿಭಾಗಗಳು ಸಿಡಿದೇಳಬೇಕು ಮತ್ತು ಒಗ್ಗಟ್ಟಿನಿಂದ ಇವನ್ನು ಖಂಡಿಸಬೇಕು, ಶ್ರಮಿಕರ ಹಕ್ಕುಗಳು ಮತ್ತು ಸಾಮಾಜಿಕ ಬದುಕಿನ ಮೇಲೆ ಇಂತಹ ಪೈಶಾಚಿಕ ದಾಳಿಗಳ ಪಿತೂರಿಗಳ ವಿರುದ್ಧ ಮುಂಬರುವ ದಿನಗಳಲ್ಲಿ ಕೆಲಸದ ಸ್ಥಳದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಐಕ್ಯ ಪ್ರತಿರೋಧ ಮತ್ತು ಹೋರಾಟದ ಕ್ರಮಗಳಿಗೆ ದೇಶಾದ್ಯಂತ ಸಿದ್ಧರಾಗಬೇಕು ಎಂದು ಸಿಐಟಿಯು ಕರೆ ನೀಡಿದೆ.

ಮಾಲಕ ವರ್ಗದ ಈ ಹೊಲಸು ದಾಳಿಗಳನ್ನು ಕಾರ್ಮಿಕ ವರ್ಗ ಕೆಲಸದ ಅವಧಿಯನ್ನು ಇಳಿಸಬೇಕು ಎಂಬ ಪ್ರತಿಧಾಳಿಯೊಂದಿಗೆ ಎದುರಿಸಬೇಕು, ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟ (WFTU) ಆಗ್ರಹಿಸಿರುವಂತೆ ದಿನಕ್ಕೆ 7 ಗಂಟೆಗಳ ಮತ್ತು ವಾರಕ್ಕೆ 5 ದಿನಗಳ ಕೆಲಸ ದ ಆಗ್ರಹವನ್ನು ಎತ್ತಬೇಕು ಎಂದು ಸಿಐಟಿಯು ಹೇಳಿದೆ.

ಇದನ್ನೂ ನೋಡಿ: ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *