ಕಮಿಷನರ್ ಅನುಪಮ್ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೇರಾವ್ ಹಾಕಲು ಪ್ರಯತ್ನ: ಡಿವೈಎಫ್ಐ ಕಾರ್ಯಕರ್ತರ ಬಂಧನ

ಮಂಗಳೂರು: ಕಳಂಕಿತ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೇರಾವ್ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರನ್ನು ಪೊಲೀಸರು ಬಂಧನ ಮಾಡಿದರು.

ಜನಪರ ಹೋರಾಟಗಳನ್ನು ಹತ್ತಿಕ್ಕುತ್ತಾ, ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡುತ್ತಾ ಮಂಗಳೂರನ್ನು ಮಾಫಿಯಾದವರ ಕೈಗೆ ನೀಡಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಕಾರ್ಯಕರ್ತರು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ಶರಣಾದ ನಕ್ಸಲರ ಶಸ್ತ್ರಾಸ್ತ್ರ ನಾಪತ್ತೆ: ಮಹಜರು ಮಾಡಿ ಶಸ್ತ್ರಾಸ್ತ್ರಗಳನ್ನು ತರುತ್ತಾರೆ – ಸಿಎಂ ಸಿದ್ದರಾಮಯ್ಯ

ಘೇರಾವ್ ಹಾಕಲು ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುತ್ತಿದ್ದಂತೆ ನಗರದ ನಂತೂರು ಪದುವ ಜಂಕ್ಷನ್ ಬಳಿ ಘೋಷಣೆ ಕೂಗುತ್ತಾ ಭಿತ್ತಿ ಪತ್ರ ಪ್ರದರ್ಶಿಸುತ್ತಾ ಮುಖ್ಯಮಂತ್ರಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಲು ಪ್ರಯತ್ನ ಮಾಡಿದ ಡಿವೈಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ನಗರದಿಂದ ಹೊರಬಾಗದಲ್ಲಿರುವ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಂಧಿಸಿಲಾಯಿತು.

ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ಕುಮಾರ್ ವಾಮಂಜೂರ್, ಮುಖಂಡರಾದ ನವೀನ್ ಕೊಂಚಾಡಿ, ರಿಜ್ವಾನ್ ಹರೆಕಳ, ಅಶ್ರಫ್ ಹರೇಕಳ,ರಝಕ್ ಮುಡಿಪು, ಜಗದೀಶ್ ಬಜಾಲ್,ಸಾದಿಕ್ ಮೂಲ್ಕಿ, ಕೃಷ್ಣ ತಣ್ಣೀರುಬಾವಿ, ಇಬ್ರಾಹಿಂ ಮದಕ, ಸೈಫರ್ ಆಲಿ, ಅನ್ಸಾರ್ ಬಜಾಲ್, ನೌಷದ್ ಬಾವ ಪಂಜಿಮೊಗರು, ಅಸುಂತ ಡಿಸೋಜ, ನೌಷಾದ್ ಕಣ್ಣೂರ್, ಯೋಗೀತಾ ಸುವರ್ಣ, ರಫೀಕ್ ಪಾಂಡೇಶ್ವರ ಮುಂತಾದವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ನೋಡಿ : ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *