ಸ್ವರ್ಗ ಹಾಗೂ ನರಕದ ಸುಳಿಯಲ್ಲಿ… ದೇವರು ಹಾಗೂ ದೇವರ ಸೃಷ್ಟಿಕರ್ತರು ಯಾರು.? ಸ್ವರ್ಗ ನರಕ ಎಂಬುವುದು ಇದೆಯೇ..?. ಸ್ವರ್ಗವನ್ನು ಕಂಡವರು ಇದ್ದಾರೆಯೇ..? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಅದೇ ರೀತಿಯಲ್ಲಿ ನೀವೆಲ್ಲರೂ ಪಾರಂಪರಿಕವಾಗಿ ದೇವರ ಜಪ ಮಾಡಬೇಕು ಎಂದು ದೇವರ ಹೆಸರಿನಲ್ಲಿ ಸ್ವರ್ಗ ಕಾಣಲು ಬಯಸಿದವರ ಮಾತನ್ನು ಕೇಳಿ ಶತಶತಮಾನಗಳಿಂದಲೂ ದೇವರ ಜಪ ಮಾಡಿದವರಿಗೆ ಸಿಕ್ಕ ಸ್ವರ್ಗ “ಮೌಡ್ಯ” ಎಂಬ ಶಾಶ್ವತ ನರಕ. ಈ ನರಕವನ್ನೇ ತಮ್ಮ ಬದುಕಿನ ಬಹುದೊಡ್ಡ ಅಂಗವನ್ನಾಗಿಸಿಕೊಂಡು ಪಾರಂಪರಿಕವಾಗಿ ಶಾಶ್ವತ ನರಕವನ್ನು ಕಂಡವರು ಮಾತ್ರ ದೇವರ ಜಪ ಮಾಡಿದವರೇ. ಇಂದಿಗೂ ಮಾಡುತ್ತಿರುವವರೆ. ಸಿದ್ಧಾಂತ
-ಎನ್ ಚಿನ್ನಸ್ವಾಮಿ ಸೋಸಲೆ
ಇವರ ಈ ಪಾರಂಪರಿಕ ದೇವರ ಜಪ ಇವರನ್ನು ಸ್ವರ್ಗದ ಕಡೆ ಯಾವ ಕ್ಷಣದಲ್ಲೂ ಕೊಂಡೊಯ್ಯಲೇ ಇಲ್ಲ. ದೇವರ ಜಪವನ್ನು ಮಾಡಿ ಪಾರಂಪರಿಕವಾಗಿ ದೇವಾಲಯದ ಒಳಗೆ ಇದ್ದು ಮೌಢ್ಯರಾಗಿದ್ದವರ ಮಾತನ್ನು ಕೇಳಿ – ದೇವಾಲಯಕ್ಕೆ ಪ್ರವೇಶ ಮಾಡಬಾರದೆಂಬ ದಿಗ್ಬಂಧನೆಗೆ ಒಳಗಾಗಿ ಹೊರಗಿದ್ದ ಇವರು ಸಹ ದೇವರ ಜಪವನ್ನು ಮಾಡಿ ಮಾಡಿ ಕಂಡದ್ದು – ಅನುಭವಿಸಿದ್ದು ಹಾಗೂ ಇಂದಿಗೂ ಅನುಭವಿಸುತ್ತಿರುವುದು ಬರೀ ನರಕವೇ. ದೇವರ ಜಪದಿಂದಾಗಿ ಇವರು ಅನುಭವಿಸಿದ ನರಕ ಯಾತನೆ ಒಂದ ಎರಡ… ಸಾವಿರಾರು. ಪ್ರಮುಖವಾದ ಕೆಲವನ್ನು ಮಾತ್ರ ಉದಾಹರಣೆಗೆ ನೀಡುವುದಾದರೆ,
*ಶಿಕ್ಷಣದಿಂದ ವಂಚನೆಯ ‘ನರಕ ‘
*ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಶಾಶ್ವತ ಅಸ್ಪೃಶ್ಯತೆ ಸಂಕೋಲೆಯ ‘ನರಕ ‘
*ಭೂ ಹೀನರಾಗಿ – ಬದುಕಿಗಾಗಿ ಭೂ-ಒಡೆಯರನ್ನೇ ನಂಬಿ ಜೀವನಕ್ಕೆ ಬೇಕಾದ ಕ್ಷಣಿಕ ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಿ ಜೀವಿಸುವ ‘ನರಕ’.
* ಈ ಹಿನ್ನಲೆಯ ಶಾಶ್ವತ ಜೀತಗಾರಿಕೆಯ ‘ನರಕ’
*ಶಾಶ್ವತವಾಗಿ ಮಾನವನಿಗೆ ಬದುಕಿಗೆ ಬೇಕಾದಂತಹ ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಿ ನರಕ ಯಾತನೆಯಿಂದ
ಬದುಕುವ ಶಾಶ್ವತ ‘ನರಕ’
*ಇವೆಲ್ಲವನ್ನೂ ಪ್ರಶ್ನೆ ಮಾಡಿದರೆ ಕಂಡು ಕೇಳರಿಯದ ದೌರ್ಜನ್ಯಕ್ಕೆ ಒಳಗಾಗಿ ಪ್ರತಿಕ್ಷಣ ಜೀವಿಸುವ ‘ನರಕ’ .
*ಮಹಿಳೆ ಹಾಗೂ ಪುರುಷರ ಶೀಲಾ ಹಾಗೂ ದೇಹಗಳಿಗೆ ಕಿಂಚಿತ್ತು ಬೆಲೆ ಇಲ್ಲದೆ ಪ್ರಾಣಿ ಪಕ್ಷಿಗಳಿಗೂ ಇರುವಷ್ಟು ಬೆಲೆ ಇಲ್ಲದಂತೆ ಜೀವಿಸುವಂತಿದ್ದ ‘ನರಕ’ .
*ಈ ನೆಲದ ಮೂಲ ನಿವಾಸಿತನದ ವಾರಸುದಾರರಾದರು ಸಹ ತನ್ನ ನೆಲದಲ್ಲಿಯೇ ಅಪರಂಜಿತರಾಗಿ ಬದುಕುವ ‘ನರಕ’.
*ಅಮಾನವೀಯ ಪದ್ಧತಿಗಳಿಗೆ ಗುರಿಯಾಗಿ ನರಕ ಯಾತನೆ ಅನುಭವಿಸಿ ಜೀವಿಸಿದ ‘ನರಕ’ .
ಇತ್ಯಾದಿ ಇತ್ಯಾದಿ….
ಇದನ್ನೂ ಓದಿ: ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಇದೆ , “ದೇವರು” ಎಂಬ ಮೂರಕ್ಷರ ಹಾಗೂ ಈ ದೇವರ ಆಧಾರದ ಪುರಾಣ ಹಿನ್ನೆಲೆಯ ಅಲಿಖಿತ ಸಂವಿಧಾನವನ್ನೇ ತಮ್ಮ ಬದುಕಿಗೆ ಆಧಾರವಾಗಿಟ್ಟುಕೊಂಡವರು ತಮ್ಮ ಪಾರಂಪರಿಕ ಹಿನ್ನೆಲೆಯ ದುಡಿಯದೇ ಹೊಟ್ಟೆ ತುಂಬಾ ಉಣ್ಣುವ ಹಿನ್ನೆಲೆಯಿಂದ ಪಡೆದ ಶಾಶ್ವತ ಜೀವನದ ಸ್ವರ್ಗಕ್ಕಾಗಿ, ದುಡಿಯುವ ಈ ನೆಲ ಮೂಲ ಸಂಸ್ಕೃತಿಯ ಬಹುದೊಡ್ಡ ಶ್ರಮಿಕ ವರ್ಗದವರಿಗೆ ದೇವರ ಹೆಸರಿನಲ್ಲಿ ಶಾಶ್ವತ ನರಕದ ದಾರಿ ತೋರಿಸಿದ ಪರಿ ಈ ನೆಲದ ಬಹುದೊಡ್ಡ ಚಾರಿತ್ರಿಕ ಅಂಶವಾಗಿದೆ.
ಈ ದೇವರ ಜಪದಿಂದ ಸ್ವರ್ಗ ಸಿಗುತ್ತದೆ ಎಂಬ ಅಜ್ಞಾನದ ನರಕದಿಂದ ಶಾಶ್ವತವಾಗಿ ಮುಕ್ತಗೊಳಿಸಿದ್ದು ಮಾತ್ರ ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನ. ಈ ಸಂವಿಧಾನ ಭಾರತದ ಪ್ರತಿಯೊಬ್ಬ ಮನುಷ್ಯ ಮನುಷ್ಯತ್ವದ ಹಿನ್ನೆಲೆಯಿಂದ ಬದುಕಿದರೆ ನನಗೆ ತಾನೇ ಸ್ವರ್ಗದ ದಾರಿಯನ್ನು ಮುಕ್ತವಾಗಿ ಕಾಣುತ್ತಾನೆ ಎಂದು ಹೇಳಿತು. ಈ ನೆಲದ ಸಾಕ್ಷಿ ಪ್ರಜ್ಞೆಗಳಾಗಿರುವ ಬುದ್ಧ- ಬಸವ- ಬಸವಾದಿ ಶರಣ, ಶರಣೀಯರು ಹಾಗೂ ಇವರೆಲ್ಲರ ವಾರಸುಗಾರಿಕೆಯ ಏಕೈಕ ಪ್ರಜ್ಞಾವಂತ ಭಾರತೀಯ ಡಾ. ಬಿ ಆರ್ ಅಂಬೇಡ್ಕರ್ ಅವರು ಇದನ್ನೇ ಹೇಳಿದ್ದು ಹಾಗೂ ಪಾಲಿಸಿದ್ದು. ಅಂಬೇಡ್ಕರ್ ಅವರು ಈ ದೇಶವನ್ನು ಒಡಲಾಳದ ಸೂಷ್ಮ ಪ್ರಜ್ಞೆಯಿಂದ ಗ್ರಹಿಸಿ ರಚಿಸಿದ ಸಂವಿಧಾನ ಇದನ್ನೇ ಪ್ರತಿಪಾದನೆ ಮಾಡುವುದು. ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಸಂವಿಧಾನ ತೋರಿಸಿದ ಸ್ವರ್ಗದ ದಾರಿ ವಾಸ್ತವವಾದದ್ದು. ಇದಕ್ಕೆ ದೇವರ ಜಪದ ಪುರಾಣ ಹಿನ್ನೆಲೆ ಇಲ್ಲ. ಸಿದ್ಧಾಂತ
ಅಂಬೇಡ್ಕರ್ ಮತ್ತು ಸಂವಿಧಾನದ “ಜಪ” ತೋರಿಸಿದ ಸ್ವರ್ಗ ಏನೆಂದರೆ…
*2,000 ವರ್ಷಗಳಿಂದ ದೊರಕದ ಶಿಕ್ಷಣವನ್ನು “ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು” ಎಂಬ ಸ್ವಾತಂತ್ರ್ಯ- ಸಮಾನತೆ ಹಾಗೂ ಭಾತೃತ್ವ ಸಿದ್ಧಾಂತದ ಅಡಿಯಲ್ಲಿ ಭಾರತದ ಸರ್ವ ಜನರಿಗೂ” ಶಿಕ್ಷಣದ ಮೂಲಭೂತ ಹಕ್ಕ” ಎಂಬ ಕಾನೂನನ್ನು ನೀಡಿ ಪ್ರತಿಯೊಬ್ಬ ಭಾರತೀಯರ ಜ್ಞಾನದ ಸ್ವರ್ಗದ ಶಾಶ್ವತವಾದ ಬಾಗಿಲನ್ನು ತೆರೆಸಿದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ.
*ಶತಶತಮಾನಗಳಿಂದ ಭೂಹೀನರಾಗಿದ್ದವರಿಗೆ ಸ್ವಂತ ಭೂಮಿಯನ್ನು ನೀಡಿ, ಆರ್ಥಿಕತೆಯಿಂದ ಸಬಲರನ್ನಾಗಿಸಿ ಘನತೆಯಿಂದ ಜೀವಿಸಲು ಅನು ಮಾಡಿಕೊಟ್ಟದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ.
*ಶತಶತಮಾನಗಳಿಂದ ದೇವರ ಹೆಸರಿನಲ್ಲಿ ಅಸ್ಪೃಶ್ಯತೆಗೆ ಗುರಿಯಾಗಿದ್ದವರನ್ನು ಅಸ್ಪೃಶ್ಯತೆಯ ಸಂಕೋಲೆಯಿಂದ ಮುಕ್ತಿಗೊಳಿಸಿದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ.
*ಈ ನೆಲದ ಸಾಂಸ್ಕೃತಿಕ ನಾಯಕರಾಗಿದ್ದರೂ ಸಹ ಸಂಸ್ಕೃತಿ ಹೀನರನ್ನಾಗಿ ಬದುಕುತ್ತಿದ್ದ ಬಹುದೊಡ್ಡ ವರ್ಗವನ್ನು ಈ ನೆಲದ ಸಾಂಸ್ಕೃತಿಕ ನಾಯಕರನ್ನಾಗಿ ರೂಪಿಸಿದ್ದು ಅಂಬೇಡ್ಕರ್ ಹಾಗೂ ಅವರ ಸಂವಿಧಾನ.
*ಶತಶತಮಾನಗಳಿಂದಲೂ ಈ ನೆಲದ ಅಧಿಕಾರ ಹಾಗೂ ಅಧಿಕಾರದ ಕೈಹಿಡಿತವನ್ನು ಶಾಶ್ವತವಾಗಿ ಏಕಮುಖ ಸಿದ್ಧಾಂತದ ದೇವರ ವಾರಸುದಾರರೊಂದಿಗೆ ಹೇಳಿಕೊಂಡವರು ಸಂವಿಧಾನಾತ್ಮಕವಾಗಿ ಬಿಡುಗಡೆಗೊಳಿಸಿ ಸರ್ವರಿಗೂ ಪ್ರಜಾಪ್ರಭುತ್ವ ಹಿನ್ನಲೆಯಿಂದ ಸಮನಾಗಿ ಅಧಿಕಾರದ ಹಂಚಿಕೆ ಮಾಡಿದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ.
*ಬಹುದೊಡ್ಡ ದುಡಿಯುವ ಈ ನೆಲ ಮೂಲ ಸಂಸ್ಕೃತಿಯ ಶ್ರಮಿಕ ವರ್ಗವು ಸಹ ಉನ್ನತ ಶಿಕ್ಷಣವನ್ನು ಸಂವಿಧಾನಾತ್ಮಕವಾಗಿ ಪಡೆದು, ಸಂವಿಧಾನಾತ್ಮಕ ಉನ್ನತ ಉನ್ನತ ಹುದ್ದೆಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟದ್ದು ಅಂಬೇಡ್ಕರ್ ಹಾಗೂ ಅವರ ಸಂವಿಧಾನ.
*ದೇವರ ಹೆಸರಿನಲ್ಲಿ ಶಾಶ್ವತವಾಗಿ ಶೋಷಣೆಯ ಬಲೆಯಲ್ಲಿ ಸಿಲುಕಿ ತಮ್ಮ ಬದುಕಿನ ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಿದ್ದ ಬಹುದೊಡ್ಡ ಮಹಿಳಾ ಸಮಾಜಕ್ಕೆ ಅವರ ಬದುಕಿನ ಮೂಲಭೂತ ಹಕ್ಕುಗಳನ್ನು ನೀಡಿ ನಿಜ ಸ್ವರ್ಗದ ದಾರಿಯನ್ನು ತೋರಿಸಿದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ.
*ದೇವರ ಹೆಸರಿನಲ್ಲಿ ಮಾನವ ಸಮಾಜವೇ ನಾಚಿಸುವಂತಹ ಅಮಾನವೀಯ ಪದ್ಧತಿಗಳನ್ನು ಜಾರಿಗೆ ತಂದು (ಬೆತ್ತಲೆ ಸೇವೆ – ಅರೆ ಬೆತ್ತಲೆ ಸೇವೆ – ದೇವದಾಸಿ ಸೇವೆ … ಇತ್ಯಾದಿ ಇತ್ಯಾದಿ ) ಈ ವಿಷಯದಲ್ಲಿ ಮಾತ್ರ ಸಾವಿರಾರು ವರ್ಷಗಳಿಂದ ಮಾತನಾಡದೆ ಮೌನವಾಗಿದ್ದ ಭಾರತವನ್ನು ತನ್ನ ನೆಲದಲ್ಲಿಯೇ ತಲೆಯೆತ್ತಿ ನಿಂತುಕೊಂಡು ಸಂವಿಧಾನಾತ್ಮಕವಾಗಿ ಪ್ರಶ್ನೆ ಮಾಡಿದ್ದು ಹಾಗೂ ಈ ಅಮಾನಿಯ ಪದ್ಧತಿಗಳನ್ನು ಕಾನೂನಾತ್ಮಕವಾಗಿ ನಿರ್ಮೂಲನೆ ಮಾಡಿದ್ದು ಅಂಬೇಡ್ಕರ್ ಮತ್ತು ಅವರ ಸಂವಿಧಾನ. ಸಿದ್ಧಾಂತ
ಹೀಗೆ ಅಂಬೇಡ್ಕರ್ ಮತ್ತು ಅವ್ರು ರಚಿಸಿದ ಸಂವಿಧಾನ ಭಾರತ ಹಾಗೂ ನಿಜ ಭಾರತೀಯರಿಗೆ ಶಾಶ್ವತವಾಗಿ ತೋರಿಸಿದ ಸ್ವರ್ಗದ ದಾರಿಯನ್ನು ಪುಂಖಾನು ಪುಂಖವಾಗಿ ಮಾತನಾಡುತ್ತಾ ವಾಸ್ತವ ಹಿನ್ನೆಲೆಯಿಂದಲೇ ಹೋಗಬಹುದು. ಇದೆಲ್ಲವನ್ನು ಮಾಡಿದ್ದು ಹಾಗೂ ಇಂದಿಗೂ ಮಾಡುತ್ತಿರುವುದು ಪುರಾಣ ಸೃಷ್ಟಿಯ ದೇವರು ಹಾಗೂ ದೇವರ ಜಪ ಅಲ್ಲಾ ಎಂಬುದನ್ನು ಬಹು ಸೂಕ್ಷ್ಮವಾಗಿ ಭಾರತದ ಸಾಮಾಜಿಕ ಹಾಗು ಧಾರ್ಮಿಕ ಚರಿತ್ರೆಯ ಸೂಕ್ಷ್ಮ ಗ್ರಹಿಕೆಯ ಹಿನ್ನೆಲೆಯಿಂದ ತಿಳಿಯಬೇಕಾಗಿದೆ. ಸಿದ್ಧಾಂತ
ಆದರೆ, ಭಾರತದಲ್ಲಿ ದೇವರ ಜಪದಿಂದಲೇ ಸ್ವರ್ಗವನ್ನು ಬಯಸಿದ್ದು ಹಾಗೂ ಬಯಸುವವರಿಗೆ ಅವರೇ ದೇವರನ್ನು ಮುಂದಿಟ್ಟುಕೊಂಡು ಸೃಷ್ಟಿ ಮಾಡಿದ “ಅಸ್ಪೃಶ್ಯ” ಸಮಾಜಕ್ಕೆ ಸೇರಿದ ಅಂಬೇಡ್ಕರ್ ಅವರು ಸಂವಿಧಾನ ಬರೆದು ಕಾನೂನಾತ್ಮಕವಾಗಿ ಜಾರಿಗೊಳಿಸಿದ್ದೆ ಬಹುದೊಡ್ಡ ಅಪರಾಧ ಹಾಗೂ ಸಹಿಸಲಾಗದ ತಪ್ಪಾಯ್ತು. ತಮ್ಮ ಸ್ವಾರ್ಥಪರ ಬದುಕಿಗಾಗಿ ತಮ್ಮ ಪಾರಂಪರಿಕ ಅಜ್ಞಾನದ ಮೂಲಕ “ದೇವರ” ಹೆಸರಿಳಿಕೊಂಡು ಈ ಭೂಮಿಯಲ್ಲಿ ಸ್ವರ್ಗವನ್ನು ಬಯಸುವವರಿಗೆ, ಇದನ್ನು ಸಂಪೂರ್ಣ ನಿರಾಕರಿಸಿದ – ಈ ದೇವರ ಜಪವೇ ದೇಶವನ್ನು ಎರಡು ಸಾವಿರ ವರ್ಷಗಳಿಗೂ ಹಿಂದಕ್ಕೆ ಕೊಂಡೊಯ್ಯುತ್ತಿರುವುದು ಎಂದು ಹೇಳಿದ ಅಂಬೇಡ್ಕರ್ ಒಬ್ಬ ರಾಕ್ಷಸನಂತೆ ಕಂಡರು . ಅಂಬೇಡ್ಕರ್ ಅವರನ್ನು ಅವರ ಜಾತಿಯ ಹಿನ್ನೆಲೆಯಿಂದ ಅವರ ಹೆಸರನ್ನು ಹೇಳುವುದಕ್ಕೂ ಮುಂದಾಗದವರು ಪ್ರಜಾಪ್ರಭುತ್ವ ಭಾರತದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಬಯಸುತ್ತಾರೆಯೇ… ಇಲ್ಲ ಎಂಬುದು ಸ್ಪಷ್ಟ. ಅದಕ್ಕಾಗಿಯೇ ದೇವರ ಜಪ ಮಾಡಲು ನಮ್ಮೆಲ್ಲರಿಗೂ ಹೇಳುತ್ತಿರುವುದು. ಸಿದ್ಧಾಂತ
ಆದರೆ, ದೇವರ ಹಿನ್ನೆಲೆಯಿಂದಲೇ ಪಾರಂಪರಿಕವಾಗಿ ಶಾಶ್ವತ ಸ್ವರ್ಗ ಕಂಡವರು – ದೇವರ ಹಿನ್ನೆಲೆಯಿಂದ ದೇವರ ಮಕ್ಕಳು ಎಂದು ಹೇಳಿಕೊಂಡವರು ಸೃಷ್ಟಿ ಮಾಡಿರುವ “ಅಸ್ಪೃಶ್ಯ” ಸಮಾಜದ ಅಂಬೇಡ್ಕರ್ ಅವರು ಬರೆದು- ಜಾರಿಗೆ ತಂದಿರುವ ಸಂವಿಧಾನದ ಮಾದರಿಯಂತೆಯೇ ದೇವರ ಹೆಸಳಿಕೊಂಡು ಸ್ವರ್ಗವನ್ನು ಕಾಣುತ್ತಿರುವವರು ಈ ಮಾದರಿಯಲ್ಲಿಯೇ ಬರೆದಿದ್ದರೆ ಅವರನ್ನು ಧೈವಿ ಶಂಭೂತರನ್ನಾಗಿಸಿ ( ಇವರಿಂದ ಇಂತಹ ಸಂವಿಧಾನವನ್ನು ಬರೆಯಲು ಸಾಧ್ಯವೇ ಇಲ್ಲ ಎಂಬುದು ಬೇರೆ ಮಾತು ಬಿಡಿ, ಅವರು ಇವತ್ತು ತಮ್ಮ ಸ್ವಾರ್ಥಕ್ಕಾಗಿ ಆರಾಧಿಸುತ್ತಿರುವ ರಾಮಾಯಣ – ಮಹಾಭಾರತ ಬರೆದವರು ಹಾಗೂ ಭಗವದ್ಗೀತೆಗಳನ್ನು ಬೋಧಿಸಿದವನು ಸಹ ಶೂದ್ರರೆ ಎಂಬುದು ಚಾರಿತ್ರಿಕ ಸತ್ಯವಾಗಿದೆ ) ದೇವರ ಸ್ಥಾನವನ್ನು ನೀಡಿ ಪ್ರತಿನಿತ್ಯ ಜಪ ಮಾಡುತ್ತಿದ್ದರು. ಸಿದ್ಧಾಂತ
ಮುಂದುವರೆದು ಇಂತಹ ವ್ಯಕ್ತಿಯ ಹೆಸರಿನ ದೇವರ ಜಪದ ಆಧಾರದ ಮೇಲೆಯೇ ಚುನಾವಣೆಗಳು ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ಸಾಂಪ್ರದಾಯಿಕವಾಗಿ ನಡೆದು ಪ್ರಜಾಪ್ರಭುತ್ವ ಭಾರತವನ್ನು ಸಹ ಎರಡು ಸಾವಿರ ವರ್ಷಗಳ ಹಿಂದಿನ ಮಾನವ ಜೀವನದ ಹರಾಜುಕಥೆಯ ರಾಜಪ್ರಭುತ್ವದ ಮಾದರಿಯಲ್ಲಿಯೇ ಭಕ್ತಿ ಭಾವದಿಂದ ಮುನ್ನಡೆಯುವಂತೆ ಮಾಡುತ್ತಿದ್ದವು. ಮೊದಲೇ ವೈದಿಕೀಕರಣಗೊಂಡವರ ದೈವೀಕರಣವು ಸಂವಿಧಾನ ಹಾಗೂ ಸಂವಿಧಾನ ಬರೆದವರ
” ಜಪವು” ನಿರಂತರವಾಗಿ ದೇವರಿಗೆ ಸಮನಾದ ಜಪವಾಗುತ್ತಿತ್ತು. ಸಿದ್ಧಾಂತ
ಇಂತಹ ಅವಾಸ್ತವದ ಹೆಸರಿನಲ್ಲಿ ಸ್ವರ್ಗಕ್ಕೆ ಹೋಗಲು ಬಯಸುವವರೇ ನಮ್ಮ ಸಂವಿಧಾನವನ್ನು ಬರೆದಿದ್ದರೆ ಅವರನ್ನು ಆಧುನಿಕ ಭಾರತದ – ಶಂಕರಾಚಾರ್ಯರು – ರಾಮಾನುಜ ಚಾರ್ಯರು -ಮಧ್ವಾಚಾರ್ಯರು – ರಾಘವೇಂದ್ರರು ಎಂದು ದೈವಸಂಭೂತರ ಹೆಸರಿಗೆ ಸಮೀಕರಿಸಿ, ಅವರನ್ನು ಭಗವಾನ್ ವಿಷ್ಣುವಿನ 25ನೇ ಅವತಾರ ಎಂದು ಶಾಶ್ವತವಾಗಿ ನಂಬಿಸಿ ಜನಪರವಾದ ವಾಸ್ತವದ ಸಂವಿಧಾನವನ್ನು ಸಹ ಪುರಾಣದ ಹಿನ್ನೆಲೆಯಿಂದ ದೈವೀಕರಿಸಿ ಮೌನವನ್ನಾಗಿಸುತ್ತಿದ್ದರು. ಈಗಲೂ ಈ ಕೆಲಸ ನಡೆಯುತ್ತಿದೆ. ಸಿದ್ಧಾಂತ
ಅಷ್ಟೇ ಅಲ್ಲದೆ , ಇಂತಹ ಸಂವಿಧಾನವನ್ನು ಬರೆದ ದೇವರ ಜಪ ಮಾಡುವ ವರ್ಗದ ದೇವಮಾನವನ ಕುರಿತು ಸಾವಿರಾರು ಸಿನಿಮಾಗಳು, ಅವನ ಮಹತ್ ಕಾರ್ಯಗಳ ಕುರಿತ ಭಕ್ತಿಗೀತೆಗಳ ಕ್ಯಾಸೆಟ್ಗಳು ಭಕ್ತಿ ಭಾವದ ರಾಗವನ್ನು ಹೊಂದಿ ಹೊರಬರುತ್ತಿದ್ದವು. ದೇವರ ಹಿನ್ನೆಲೆಯಿಂದಲೇ ಭಕ್ತಿ ಭಾವದಿಂದ ಹಾಡಿಕೊಂಡು ಬಂದ ಅಖಂಡ ಶಾಸ್ತ್ರೀಯ ಸಂಗೀತಗಾರರು ಇವುಗಳಿಗೆ ಶಾಸ್ತ್ರ ಬುದ್ಧ ಸಂಗೀತವನ್ನು ನೀಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆ ಮೂಲಕ ನಿಮ್ಮನ್ನು ಮುಖ್ಯವಾಹಿನಿಗೆ ತಂದು ಸ್ವರ್ಗದ ಬಾಗಿಲನ್ನು ತೆರಿಸಿದ್ದೆ ಈ ವ್ಯಕ್ತಿಯ ರೂಪದಲ್ಲಿ ದೇವರೇ ಕಳುಹಿಸಿದ್ದ ” ದೇವಮಾನವ ” ಎಂದು ಹೇಳಿ ಮತ್ತೆ ಭಾರತವನ್ನು ಎರಡು ಸಾವಿರ ವರ್ಷಗಳಿಗೂ ಹಿಂದಿನ ಕಾಲಕ್ಕೆ ಕೊಂಡೊಯ್ಯುತ್ತಿದ್ದರು. ಸಿದ್ಧಾಂತ
ಇಂದಿನ ಸಂದರ್ಭದಲ್ಲಿ ಇರುವ ಹಾಗೆಯೇ ದೇವರ ಹೆಸರನ್ನು ಹೇಳಿ ತಮ್ಮ ಜೀವನದಲ್ಲಿ ಸ್ವರ್ಗವನ್ನು ಕಾಣುತ್ತಿದ್ದ ವೈದಿಕರಣದ ಆಕಾಂಕ್ಷಿಗಳು – ತಮ್ಮಂತೆ ಇರುವ ಈ ನೆಲ ಮೂಲ ಸಂಸ್ಕೃತಿಯ ಶ್ರಮ ಸಿದ್ಧಾಂತ ಪಾಲನೆಯ ಮಾನವರನ್ನೇ ದೇವರ ಸಮಾನರೆಂದು ಪರಿಗಣಿಸಿ ಇವರನ್ನು ಕಾಲದುದ್ದಕ್ಕೂ “ಹಗಲು ಕಂಡ ಬಾವಿಗೆ- ರಾತ್ರಿ ಬೀಳಿಸಿದಂತೆ ” ಶಾಶ್ವತವಾಗಿ ಬೀಳಿಸಿದ್ದು- ಅವರು ಬೀಳುತ್ತಿರುವುದು ಸ್ವ ಘೋಷಿತ ದೇವರ ಜಪದ ಮೂಲಕ ಬದುಕನ್ನು ಸ್ವರ್ಗವನ್ನು ಇರಿಸಿಕೊಂಡು ಜೀವಿಸುತ್ತಿದ್ದವರಿಗೆ ಹೆಚ್ಚು ರಂಜಿಸುತ್ತಿತ್ತು – ಹಾಗೂ ಅವರಿಗೆ ದೇವರ ಜಪ ಕಾಲ ಕಾಲಕ್ಕೆ ನೂತನ ನೂತನ ಬಟ್ಟೆಯನ್ನು ತೊಟ್ಟು ಉಪಯೋಗಕ್ಕೆ ಬಂತು .
ಈ ಹಂತದಲ್ಲಿ ಕೇವಲ ದೇವರ ಜಪ ಅಜ್ಞಾನಕ್ಕೆ ಮುನ್ನುಡಿ ಬರೆದಿದೆ ಹಾಗೂ ಬರೆಯುತ್ತದೆ ಎಂದ ಅಂಬೇಡ್ಕರ್ ರವರು ಇಲ್ಲಿ ದೇಶದ್ರೋಹಿಯೂ ಆದರು. ಆದರೆ ಅಂಬೇಡ್ಕರ್ ಬದಲು ದೇವರ ಜಪ ಮಾಡಿ ಎಂದು ಹೇಳಿದವರು ರಾಷ್ಟ್ರ ಪ್ರೇಮಿಗಳಾಗುತ್ತಾರೆ. ಮೇಲಿನ ವಿವರಣೆಯ ಹಿನ್ನೆಲೆಯಿಂದ ಹೇಳುವುದಾದರೆ
” ದುಡಿದು, “ಬೆವರ ಸುರಿಸಿ” ಹೊಟ್ಟೆ ತುಂಬ ಉಣ್ಣದೆ – ಅರೆ ನಿದ್ರೆಯಲ್ಲಿ ಮಲಗಿ ಬದುಕಿನುದ್ದಕ್ಕೂ ನರಕ ಕಂಡ ಬಹುದೊಡ್ಡ ಜನ ವರ್ಗ ಒಂದಿದ್ದರೆ – ದುಡಿಯದೇ, ಕೇವಲ ದೇವರ ಹೆಸರಿನ “ತೀರ್ಥ ಕುಡಿಸಿ” ಯೇ ಹೊಟ್ಟೆ ತುಂಬ ಉಂಡು -ಸ್ವರ್ಗ ಕಂಡ ಅಲ್ಪ ಜನ ಇನ್ನೊಂದು ” ಇವರಿಬ್ಬರ ಜ್ಞಾನ ಮತ್ತು ಅಜ್ಞಾನದ ನಡುವಿನ ಬಹುದೊಡ್ಡ ತಿಕಾಟವೇ ಭಾರತದ ಜನ ಚರಿತ್ರೆಯ ಜೀವಾಳ. ಇದೆ ಅಂಬೇಡ್ಕರ್ ಅವರು ಭಾರತದ ಚರಿತ್ರೆಯನ್ನು ಒಡಲಾಳದಿಂದ ಗ್ರಹಿಸಿದ ಪರಿ. ಈ ಸೂಕ್ಷ್ಮ ಗ್ರಹಿಕೆಯಲ್ಲಿ ಭಾರತದ ಜನ ವರ್ಗಗಳ ಸ್ವರ್ಗ ಹಾಗು ನರಕಗಳ ತಾತ್ವಿಕತೆ ಅಡಗಿದೆ. ಒಟ್ಟಾರೆ ಇವತ್ತಿನ ಪ್ರಜಾಪ್ರಭುತ್ವ ಭಾರತದಲ್ಲಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರು ಬರೆದ ಲಿಖಿತ ಸಂವಿಧಾನದ ಕಟ್ಟುನಿಟ್ಟಿನ ಪಾಲನೆ ಈ ನೆಲದ ಸ್ವರ್ಗವಾಗಿದೆ. ಸಿದ್ಧಾಂತ
ಆಧುನಿಕ ಭಾರತದಲ್ಲಿ
“ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್” ಎಂಬ ಹೆಸರೇ ನಿಜ ಭಾರತ ಹಾಗೂ ಭಾರತೀಯರನ್ನು ಶಾಶ್ವತವಾದ ಅಜ್ಞಾನದ ನರಕದಿಂದ ಬಿಡುಗಡೆಗೊಳಿಸಿತು. ಈ ಹೆಸರು ಸುಜ್ಞಾನದ ಮೂಲಕ ನಿಜ ಸ್ವರ್ಗದ ದರ್ಶನವನ್ನು ಭಾರತ ಹಾಗೂ ಭಾರತೀಯರಿಗೆ ಮಾಡಿಸಿತು. ಭಾರತಕ್ಕೆ ಅಂಬೇಡ್ಕರ್, ಅಂಬೇಡ್ಕರ್ ವಾದ ಹಾಗೂ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಿಗೆ ತಮ್ಮ ಒಡಲಾಳದಿಂದ ಅನುಭವಿಸಿ – “ಅನುಭಾವ” ದಿಂದ ಬರೆದ ಪ್ರಪಂಚಕ್ಕೆ ಮಾದರಿಯಾದ ನಮ್ಮ ಸಂವಿಧಾನದ ದಾರಿಯೇ ಪಾರಂಪರಿಕ ಅಜ್ಞಾನದ ಭಾರತೀಯರನ್ನು ಶಾಶ್ವತವಾದ ನಿಜ ಸ್ವರ್ಗದ ದಾರಿಗೆ ಕರಡಿಯುತ್ತಿರುವುದು. ಇದಕ್ಕೆ ಪ್ರಮುಖ ಕಾರಣ ದೇವರಲ್ಲ ಬದಲಿಗೆ ಅಂಬೇಡ್ಕರ್. ಅಂಬೇಡ್ಕರ್ ಎಂಬ ಈ ಹೆಸರೇ ಭಾರತ ಹಾಗೂ ಭಾರತೀಯರನ್ನು ಶಾಶ್ವತವಾದ ಸುಜ್ಞಾನದ ಸ್ವರ್ಗದ ಜೀವನ ಹಾಗೂ ಬದುಕಿನಡೆಗೆ ಕೊಂಡೊಯ್ಯುವುದು. ಸಿದ್ಧಾಂತ
ದೇವಾನು, ದೇವತೆಗಳಿಂದ ಅಥವಾ ದೇವರ ಜಪದಿಂದ ಭಾರತ ಹಾಗೂ ಭಾರತೀಯರು ಶತಶತಮಾನಗಳಿಂದ ಅನುಭವಿಸಿದ್ದು ಕೇವಲ ನರಕವೇ ಹೊರತು, ಸ್ವರ್ಗ ಅಲ್ಲವೇ ಅಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಬಹುಜನರ ಬದುಕಿನ ನರಕದ ಜೀವನವನ್ನೇ ತಮ್ಮ ಸ್ವರ್ಗದ ಜೀವನಕ್ಕೆ ಮೆಟ್ಟಲನ್ನಾಗಿಸಿಕೊಂಡು ಬದುಕಲು ಅಪೇಕ್ಷೆ ಪಟ್ಟವರಿಗೆ ಹಾಗೂ ಪಡುತ್ತಿರುವವರಿಗೆ ಸ್ವರ್ಗ ಜೀವನ ಮಾತ್ರ ಗೊತ್ತಿತ್ತೆ ಹೊರತು – ನರಕದ ಅರ್ಥವನ್ನೇ ತಿಳಿಯದಾಗಿತ್ತು. ಮುಂದುವರೆದು ಹೇಳುವುದಾದರೆ, ಅವರ ಅಜ್ಞಾನದ ಸ್ವರ್ಗದ ಕಾಲ್ಪನಿಕ ಲೋಕದಲ್ಲಿ ನಾವು ಬದುಕುತ್ತಿರುವುದು ದೇವಾನುದೇವತೆಗಳ ಸುಳಿಗೆ ಸಿಲುಕಿದ ಶಾಶ್ವತ ನರಕದಲ್ಲಿ ಎಂಬ ಪರಿಜ್ಞಾನವೇ ಇರಲಿಲ್ಲ. ಏಕೆಂದರೆ, ಇವರ ದೇವರು- ದೇವರು ಎಂಬ ” ಜಪ ” ಇವರಲ್ಲಿ ಪ್ರಜ್ಞಾಪೂರ್ವಕ ಪ್ರಶ್ನೆಯನ್ನೇ ಹುಟ್ಟಹಾಕಲಿಲ್ಲ. ದೇವರು ಎಂಬುವುದು ಎಲ್ಲಾದರೂ ಪ್ರಶ್ನೆ ಹುಟ್ಟು ಹಾಕಲು ಸಾಧ್ಯವೇ..?. ನಾವು ಬೇಕಿದ್ದರೆ ದೇವರ ಮೇಲೆ ಅನೇಕ ಪ್ರಶ್ನೆಗಳ ಸುರಿಮಳೆಯನ್ನು ಸೂಚಿಸುತ್ತೇವೆ. ನಮ್ಮ ಯಾವ ಪ್ರಶ್ನೆಗೂ ದೇವರಿಂದ ಉತ್ತರ ಸಿಕ್ಕಿಲ್ಲ. ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಸಂವಿಧಾನದಿಂದ ನಮ್ಮ ಪ್ರಶ್ನೆಗಳಿಗೆ ನಿಖರವಾದ ಉತ್ತರ ದೊರಕಿದೆ. ಸಿದ್ಧಾಂತ
ಬದಲಿಗೆ, ಇವರು ದೇವಾನು ದೇವತೆಗಳ ಹೆಸರಿನಲ್ಲಿ ತಮಗೆ ತಾವೇ ಸೃಷ್ಟಿಸಿಕೊಂಡಿದ್ದ ನರಕದ ಕ್ರೂರ ವರ್ಣನೆಯ ಬದುಕಿನ ಅಮಾನುಷವಾದ ಚಿತ್ರಣ ಕೇವಲ ದೇವರನ್ನು ನಿರಾಕರಿಸಿದ ದಟ್ಟದರಿದ್ರರಿಗೆ – ಚಾಂಡಾಳರಿಗೆ – ಅಸ್ಪೃಶ್ಯರಿಗೆ ಮೀಸಲಾದದ್ದು.ಇವರ ಹುಟ್ಟು- ಜೀವನ -ಸಾವು ಎಲ್ಲವೂ ಸಹ ನರಕದಲ್ಲಿ ಆಗಬೇಕು ಎಂದು ದೇವರ ಹೆಸರಿನಲ್ಲಿ ರೂಪಿಸಲಾದ ಪುರಾಣದ ಶಾಸನದಲ್ಲಿ ಉಲ್ಲೇಖಿಸಿದರು. ಇವರು ಏಕೆ ಶಾಶ್ವತವಾಗಿ ನರಕದಲ್ಲಿ ಜೀವಿಸಬೇಕು ಎಂಬುದಕ್ಕೆ ದೇವರ ಜಪ ಮಾಡುವವರು ನೀಡಿದ ಕಾರಣ ಈ ಜನ ವರ್ಗ ಸೇವಿಸುವ ಆಹಾರ – ವಾಸಿಸುವ ಸ್ಥಳ – ಪೂಜಿಸುವ ದೇವರು – ಮಾಡುವ ವೃತ್ತಿಗಳು ನಿಗದಿಪಡಿಸಿದವು.
ದೇವರ ನಿರಂತರ ಜಪದ ಹಿನ್ನೆಲೆಯಿಂದ ಸ್ವರ್ಗಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದವರಿಗೆ ನಿಜವಾಗಲೂ ದುಡಿಮೆಯ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಿರುವ ಇವರದೇ ಸ್ವರ್ಗದ ಜೀವನ ಎಂಬ ಅರ್ಥವೂ ತಿಳಿಯಲಿಲ್ಲ. ನಾವು ದುಡಿಯದೇ ಕೇವಲ ದೇವರ ಜಪದ ಹಿನ್ನೆಲೆಯಿಂದಲೇ ಸ್ವರ್ಗದ ಜೀವನದ ಬದುಕನ್ನು ಕಟ್ಟಿಕೊಳ್ಳಲು ಅಪೇಕ್ಷಿಸುತ್ತಿರುವುದು ಅಜ್ಞಾನದ ನರಕದ ಯಾತನೆ ಎಂಬ ಪರಿಜ್ಞಾನವೇ ಇವರಿಗೆ ಬರಲಿಲ್ಲ. ಇವರಿಗೆ ಅ ಪರಿಜ್ಞಾನ ಬಂದರೂ ಸಹ ಇವರ ಸ್ವಾರ್ಥ ಸಾಧನೆಯಾ ಪಾರಂಪರಿಕ “ದೇವರ ಜಪ ” ಅದಕ್ಕೆ ಒಪ್ಪಲಿಲ್ಲ. ಸಿದ್ಧಾಂತ
ಈ ಹಂತದಲ್ಲಿ ನಿಜ ಕಾಯಕ ಸಿದ್ಧಾಂತದ ಆರಾಧಕರು – ದೇವರ ಜಪ ಮಾಡಿ ಸ್ವರ್ಗಕ್ಕೆ ಹೋಗುತ್ತೇವೆ ಎಂದುಕೊಂಡವರ ನರಕದ ಜೀವನವನ್ನು ಪ್ರಜಾಪ್ರಭುತ್ವ ಭಾರತದಲ್ಲಿ ತೋರಿಸಿದರು – ಬೂಟಾಟಿಕೆಯ ದೇವರ ಆರಾಧಕರು ಸ್ವರ್ಗಕ್ಕೆ ಹೋದರು. ಆದರೂ ಸಹ ಈ ಅನ್ಯಾಯವನ್ನು ದೇವರು ಎಂದಿಗೂ ಖಂಡಿಸಲೇ ಇಲ್ಲ. ಏಕೆಂದರೆ ದೇವರು ಇದ್ದರೆ ತಾನೆ ಖಂಡಿಸುವುದು. ಆ ಹೆಸರಿನಿಂದ ಪಡೆಯುತ್ತಿರುವ ಸ್ವರ್ಗ ಸುಖಕ್ಕಾಗಿ ಅದನ್ನು ಸೃಷ್ಟಿ ಮಾಡಿದವನು ನಾನೇ, ಅದನ್ನು ನಿಯಂತ್ರಿಸುವವನು ನಾನೇ. ಹೀಗಿರುವಾಗ ಕೇವಲ ಅಜ್ಞಾನದ ದೇವರ ಜಪದಿಂದ ಮಾನವ ಸ್ವರ್ಗಕ್ಕೆ ಹೋಗಲು ಸಾಧ್ಯವೇ….? ಇಲ್ಲವೇ ಇಲ್ಲ ಎಂಬುದು ವಾಸ್ತವ . ಹೌದು ಹೋಗುತ್ತೇನೆ ಎಂಬುದು ಪುರಾಣ. ಸಿದ್ಧಾಂತ
ಇಂತಹ ಪಾರಂಪರಿಕ ಅಜ್ಞಾನದ ಕೊಂಪೆಯ ಪ್ರತಿನಿಧಿಯಾಗಿರುವ “ದೇವರ” ಹೆಸರನ್ನು ಹೇಳಿ, ಪ್ರತಿನಿತ್ಯ ಜಪ ಮಾಡಿ ಸ್ವರ್ಗಕ್ಕೆ ಹೋಗಲು ಪ್ರಜಾಪ್ರಭುತ್ವ ಭಾರತದಲ್ಲಿಯೂ ಚರ್ಚೆಗೆ ಒಳಗಾಗುತ್ತಿರುವುದು ಬಹುದೊಡ್ಡ ದುರಂತವೇ ಸರಿ. ಇದು ನಿಜಕ್ಕೂ ಪ್ರಜಾಪ್ರಭುತ್ವ ಭಾರತವನ್ನು ಎರಡುವರೆ ಸಾವಿರ ವರ್ಷಗಳ ಹಿಂದಿನ ಅಜ್ಞಾನದ ಪಾರಂಪರಿಕ ಭಾರತಕ್ಕೆ ಕುಂಡೊಯ್ಯಲು ಅಪೇಕ್ಷಿಸುತ್ತಿರುವ ಸ್ಪಷ್ಟ ಮಾದರಿಯೇ ಆಗಿದೆ. ಸಿದ್ಧಾಂತ
ಹೀಗೆ ಅಪೇಕ್ಷೆ ಪಡುವವರಿಗೆ ಅಂಬೇಡ್ಕರ್ ಅವರ ಮಾತಿನ ಹಿನ್ನೆಲೆಯಲ್ಲಿಯೇ ಒಡಲಾಳದಿಂದ ಹೇಳುವುದಾದರೆ “ದೇವರ ಜಪ ಮಾಡಿ, ಸ್ವರ್ಗದಲ್ಲಿ ಜೀವಿಸಲು ಅಪೇಕ್ಷೆ ಪಡುತ್ತಿರುವ ಜನ ವರ್ಗ -ತಾವು ಸತ್ತಾಗ ಕಂಡು ಅನುಭವಿಸಲು ಕಣ್ಣಿಗೆ ಕಾಣದ ಸ್ವರ್ಗಕ್ಕೆ ಹೋಗುವ ಬದಲು – ಸಂವಿಧಾನದ ಆಶಯದಂತೆ ಸರ್ವ ಜನರನ್ನು ಸಮನಾಗಿ ಕಂಡು – ಸಂವಿಧಾನದ ಅಡಿಯಲ್ಲಿ ಸರ್ವ ಭಾರತೀಯ ಜನರಿಗೂ ಮೂಲಭೂತ ಹಕ್ಕುಗಳು – ಸಂವಿಧಾನ ಬದ್ಧವಾಗಿ ದೊರಕುವಂತೆ ಮಾಡಿ ಧರ್ಮ ನಿರಪೇಕ್ಷತೆ ಹಾಗೂ ಜಾತ್ಯತೀತ ಹಿನ್ನೆಲೆಯಿಂದ ಒಟ್ಟಾಗಿ ಬದುಕಿದರೆ ಅದೇ ಭಾರತದ ಸ್ವರ್ಗ ” ಎಂದು ಒಡಲಾಳದಿಂದ ಸಂವಿಧಾನಾತ್ಮಕವಾಗಿ ಹೇಳಿದ ಅಂಬೇಡ್ಕರ್ ಅವರ ಚಿಂತನೆಗಳನ್ನು ಕಾನೂನಾತ್ಮಕವಾಗಿ ಜಾರಿಗೆಗೊಳಿಸಿ – ಸಂವಿಧಾನ ಬದ್ಧ ನೀತಿ ನಿಯಮಗಳನ್ನು ಜಪ ಮಾಡುತ್ತಾ ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಈ ಭೂಲೋಕದಲ್ಲಿ ಬದುಕಿದರೆ , ಅ ಸಾಮರಸ್ಯ ಜೀವನವೇ ಸ್ವರ್ಗವನ್ನು ಕಾಣುವಂತೆ ಮಾಡುತ್ತದೆ ಎಂಬುವುದೇ ಅಂಬೇಡ್ಕರ್ ಅವರು ಬಯಸಿದ ಭಾರತದ ಜನಜೀವನದ ಸ್ವರ್ಗದ ಕನಸು.
ಆದರೆ, ಮೇಲೆ ಉಲ್ಲೇಖಿಸಿರುವ ಹಾಗೆ ಅಂಬೇಡ್ಕರ್ ಅವರು ನಾವು ದೇವರ ಹೆಸರಿನಲ್ಲಿ ಸೃಷ್ಟಿ ಮಾಡಿದ ಅಸ್ಪೃಶ್ಯರು. ಇಂತಹ ಅಸ್ಪೃಶ್ಯರು ಬರೆದ ಸಂವಿಧಾನವು ಸಹ ಅಸ್ಪೃಶ್ಯತೆಯಿಂದಲೇ ಕೂಡಿದೆ. ಸಂವಿಧಾನವನ್ನು ಹಾಗೂ ಸಂವಿಧಾನ ಬರೆದ ಅಂಬೇಡ್ಕರ್ ಅವರನ್ನು ಜಪಿಸುವುದು ಎಂದರೆ ನಾವು ಪಾರಂಪರಿಕವಾಗಿ ನಂಬಿರುವ ದೇವರಿಗೆ ಮಾಡುವ ಬಹುದೊಡ್ಡ ದ್ರೋಹ ಎಂಬ ಅರ್ಥದಲ್ಲಿ ಚಿಂತಿಸಿದರು. ಇದಕ್ಕೆ ಸೂಕ್ತ ಪರಿಹಾರ ರೂಪದಲ್ಲಿ ಬುದ್ಧನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಹೊಡೆದಾಳುವ ನೀತಿಯ ಸಾರ ಅಂಬೇಡ್ಕರ್ ಅವರನ್ನೇ ದೇವರನ್ನಾಗಿಸಿದರೆ ಹೇಗೆ ಎಂಬ ಪರಿಕಲ್ಪನೆ ಇಲ್ಲಿ ದೇವಮಾನರಿಗೆ ಸುಲಭವಾಗಿ ಕಂಡಿತು.
ಈ ಮಾದರಿ ದೇವರ ಹೆಸರಿನಲ್ಲಿ ಸ್ವರ್ಗ ಕಾಣಲು ಬಯಸುವವರಿಗೆ ಸುಲಭವಾಗಿ ಸ್ವರ್ಗದ ಜೀವನದ ದಾರಿಯ ಪರಿಕಲ್ಪನೆಯಾಗಿದೆ. ಭಾರತ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ . ಏಕೆಂದರೆ ಶತಶತಮಾನಗಳ ಇಂದಿಗೆ ಅಂಬೇಡ್ಕರ್ ಮಾದರಿಯಲ್ಲಿ ಭಾರತವನ್ನು ನೋಡಿದ ಬುದ್ಧ ಹಾಗೂ ಬಸವಣ್ಣನನ್ನು ದೇವರನ್ನಾಗಿಸಿದವರಿಗೆ ಮುಂದೊಂದು ದಿನ ಅಂಬೇಡ್ಕರ್ ಅವರನ್ನು ಸಹ ದೇವರನ್ನಾಗಿ ಪರಿವರ್ತಿಸುವುದಿಲ್ಲ ಎಂದು ಶತಶತಮಾನಗಳ “ನಿಜ” ನರಕದ ವಾರಸುದಾರರು ನಂಬದಿದ್ದರೆ, ತಪ್ಪಾಗುತ್ತದೆ. ಇದನ್ನು ನಂಬದಿರುವಂತೆ ಮಾಡಲು ಇರುವ ಬಹುದೊಡ್ಡ ಪರಿಹಾರವೇ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಸಂವಿಧಾನ. ಸಿದ್ಧಾಂತ
ಇಂದು ಜ್ಞಾನದ ಸಂಕೇತವಾಗಿರುವ ಅಂಬೇಡ್ಕರ್ ಅವರ ಜಾಗದಲ್ಲಿ – ಅಜ್ಞಾನದ ಸಂಕೇತವಾಗಿರುವ ದೇವರನ್ನು ತಂದು ಇರಿಸಿದರೆ ಮಾತ್ರ ಸಂವಿಧಾನದ ಭಾರತದಲ್ಲಿಯೂ ತಮ್ಮ ಪ್ರಜ್ಞಾಪೂರ್ವಕ ಬದುಕನ್ನು ಅನೇಕ ಕಿತ್ತಾಟಗಳ ಮೂಲಕವೂ ನರಕದಲ್ಲಿಯೇ ಕಾಣುತ್ತಾರೆ ಹಾಗೂ ಕಾಣುತ್ತಿರುತ್ತಾರೆ ಎಂಬ ಅಚಲವಾದ ನಂಬಿಕೆ ದೇವರ ಜಪ ಮಾಡುವವರಿಗೆ . ಇದಕ್ಕೆ ಅವರಿಗೆ ಇರುವ ಮಾರ್ಗ ಅಂಬೇಡ್ಕರ್ ಅವರನ್ನು ದೇವರ ರೂಪವಾಗಿ ಪರಿವರ್ತಿಸುವುದು ಮಾತ್ರ. ಅದಕ್ಕಾಗಿ ಅಂಬೇಡ್ಕರ್ ಎಂಬ ಜ್ಞಾನದ ಜಪ ಮಾಡಲೇಬೇಕಾದವರಿಗೆ ದೇವರು ಹೆಸರಿನ ಅಜ್ಞಾನದ ಹನುಮ- ಅಯ್ಯಪ್ಪ – ತಿರುಪತಿ – ವಿಠಲ – ರಾಮ – ರಾಘವೇಂದ್ರ ಇತ್ಯಾದಿ ಇತ್ಯಾದಿ ದೇವಾನುದೇವತೆಗಳ ಜಪ ಮಾಡಿಸಲು ಮುಂದಾಗುತ್ತಿರುವುದು. ಸಿದ್ಧಾಂತ
ಈ ಅಜ್ಞಾನಿಗಳ ಅಜ್ಞಾನದ ನರಕರೂಪದ ಸ್ವಾರ್ಥಪರ ದೇವರ ಜಪದ ಸ್ವರ್ಗದಲ್ಲಿ ಬದುಕಿನ ಬದಲಾವಣೆಗಾಗಿ ಯಾವುದೇ ಪ್ರಶ್ನೆಯನ್ನು ಮಾಡಬಾರದು. ಬದಲಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಇರಿಸಿರುವ ದೇವಾನುದೇವತೆಗಳನ್ನು ಸ್ಮರಿಸುತ್ತ ನಮ್ಮ “ಪಾಲಿಗೆ ಬಂದದ್ದೇ ಪಂಚಾಮೃತ”, ” ನಮ್ಮ ಬದುಕು ಹಾಗೂ ಜೀವನವನ್ನು ರೂಪಿಸಿದ್ದೆ ಈ ದೇವರು “, “ಇದೆ ದೇವರು ನಮಗೆ ಶಾಶ್ವತವಾಗಿ ಕೊಟ್ಟಿರುವ ಜೀವನ ಫಲ ” ಎಂದು ನಂಬಿಕೊಂಡು “ದೇವರು” ಶಾಶ್ವತವಾಗಿ ಇವರಿಗೆ ಸೃಷ್ಟಿ ಮಾಡಿದ ನರಕವನ್ನೇ ಸ್ವರ್ಗವೆಂದು ನಂಬಿ ಜೀವಿಸುವಂತೆ ನಂಬಿಸಿದೆ – ನಂಬಿಸುತ್ತಿದೆ. ಸಿದ್ಧಾಂತ
ಇದನ್ನು ವಾಸ್ತವದ ಹಿನ್ನೆಲೆಯಿಂದ ಪ್ರಜ್ಞಾಪೂರ್ವಕವಾಗಿ ಪ್ರಶ್ನೆ ಮಾಡಿದ ಅಂಬೇಡ್ಕರ್ ಅವರ ಜಪ ಯಾರೂ ಮಾಡಬಾರದಾಗಿದೆ. ಏಕೆಂದರೆ ಅಂಬೇಡ್ಕರ್ ಅವರು ಭಾರತದಲ್ಲಿ ಸಾಂಪ್ರದಾಯಿಕ ಹಿನ್ನೆಲೆ ವೈದಿಕ ಸಂಸ್ಕೃತಿ ಹಾಗೂ ಅದು ಶತಶತಮಾನಗಳಿಂದಲೂ ಕಾಲ ಕಾಲಕ್ಕೆ ಮಾಡಿರುವ ಜನವಿರೋಧಿ ಅನ್ಯಾಯವನ್ನು ಸಾಕ್ಷಿ ಸಹಿತ ಬಯಲಿಗೆ ತಂದರು. ಅವರ ಧರ್ಮ ಗ್ರಂಥವಾದ ಮನು ಸ್ಮೃತಿಯನ್ನು ಬಹಿರಂಗವಾಗಿ ಸುಟ್ಟರು. ಇದರಿಂದ ಅಂಬೇಡ್ಕರ್ ಅವರು ವೈದಿಕರ ದೃಷ್ಟಿಯಲ್ಲಿ ಧರ್ಮ ದ್ರೋಹಿ ಆ ಮೂಲಕ ರಾಷ್ಟ್ರದ್ರೋಹಿಯು ಆದರು. ಸಿದ್ಧಾಂತ
ಇದನ್ನೂ ನೋಡಿ: ನಿವೃತ್ತ ವಿಮಾ ನೌಕರರ ಪ್ರತಿಭಟನೆ : ಪಿಂಚಣಿ ನೌಕರರ ಬಿಕ್ಷೆಯಲ್ಲ, ಹಕ್ಕು Janashakthi Media
ವಾಸ್ತವ ಪ್ರತಿಪಾದನೆ ಮಾಡಿರುವ ಅಂಬೇಡ್ಕರ್ ಅವರನ್ನು ರಾಷ್ಟ್ರ ದ್ರೋಹಿ ಎಂದು ಹೇಳಿ ನಿಜ ಅಂಧಕಾರದ ರಾಷ್ಟ್ರಧ್ವಹಿಗಳು ತಮ್ಮ ಬದುಕಿಗಾಗಿ “ನೀವು ಬದುಕಿದ್ದಾಗಲೇ ಕಾಣುತ್ತಿರುವ ನರಕದಯಾತ್ರೆಯಿಂದ ಹೊರಬರಲು ದೇವರ ಜಪ ಮಾಡುತ್ತಾ ಸ್ವರ್ಗ ಕಾಣಬೇಕು ಎಂದು ನಂಬಿಸಿ ನಿಜ ಭಾರತ ಹಾಗೂ ಭಾರತೀಯರನ್ನು ಎರಡು ಸಾವಿರ ವರ್ಷಗಳಷ್ಟು ಹಿಂದಕ್ಕೆ ಶಾಶ್ವತವಾಗಿ ಕಳುಹಿಸಲು ಮುಂದಾಗುತ್ತಿದ್ದಾರೆ “. ಸಿದ್ಧಾಂತ
ತಾವು ಬದುಕಿದ್ದಾಗಲೇ ದೇವರ ಹೆಸರಿನಿಂದ ಸ್ವರ್ಗದ ಜೀವನ ಮಾಡಿದವರು ಹಾಗೂ ಮಾಡುತ್ತಿರುವವರು ಈ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ. ಎಲ್ಲಾ ಸೂಕ್ಷ್ಮಾತಿ ಸೂಕ್ಷ್ಮ ಅಂಶಗಳನ್ನು ಅಂಬೇಡ್ಕರ್ ತಮ್ಮ ಮಹತ್ವದ ಕೃತಿಗಳಾದ “ಅಸ್ಪೃಶ್ಯರು” ಹಾಗೂ ” ಶೂದ್ರರು ಯಾರು..?” ” ರಾಮ-ಕೃಷ್ಣ “ಎಂಬ ಕೃತಿಯಲ್ಲಿ ಹೇಳಿರುವಂತೆ ನೆಲ ಮೂಲ ಸಂಸ್ಕೃತಿಯ ಗ್ರೀಕೆಯಿಂದ ಚಿಂತಿಸಿ ದೇವರ ಜಪದ ಮೂಲಕ ಸ್ವರ್ಗ ಕಾಣುವುದನ್ನು ಧಿಕ್ಕರಿಸಬೇಕಾಗಿದೆ. ಸಿದ್ಧಾಂತ
ದೇವರು- ದೇವರು ಎಂಬ ಜಪ ಮಾಡುತ್ತಾ ಒಂದು ವರ್ಗ ಅಜ್ಞಾನದಲ್ಲಿ ಇರುವುದನ್ನೇ ತಮ್ಮ ಸ್ವಾರ್ಥಸಾಧನೆಗಾಗಿ ಅಪೇಕ್ಷಿಸುವವರು ಪ್ರಶ್ನೆ ಮಾಡದ ದೇವಾನುದೇವತೆಗಳ ಹಿನ್ನೆಲೆಯ ಅಜ್ಞಾನದ ಕ್ಷಣಿಕ ಸ್ವರ್ಗವನ್ನೇ ಬಯಸುತ್ತಾರೆಯೇ ಹೊರತು – ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರೇಳಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಸಾಂಸ್ಕೃತಿಕವಾಗಿ ಮುನ್ನಡೆದು ಬದುಕು ಕಟ್ಟಿಕೊಳ್ಳುವುದನ್ನು ಅಪೇಕ್ಷೆ ಪಡುವುದಿಲ್ಲ.
ಅಂಬೇಡ್ಕರ್ ಎಂಬ ಧೀಮಂತ ವ್ಯಕ್ತಿತ್ವದ ಜ್ಞಾನಜ್ಯೋತಿ ಈ ನೆಲದಲ್ಲಿ ಉದಯಿಸಿದ ನಂತರವೇ ಈ ನೆಲದ ಬಹು ಜನರಿಗೆ ಸ್ವರ್ಗದ ನಿಜ ದರ್ಶನವಾಯಿತು. ಮುಕ್ಕೋಟಿ ದೇವಾನುದೇವತೆಗಳಿಂದಲ್ಲ ಎಂಬುದನ್ನು ದೇವರ ಜಪವನ್ನು ಮಾಡಲು ಹೇಳುವವರು ಅರ್ಥಮಾಡಿಕೊಳ್ಳಬೇಕಾಗಿದೆ.
ಅಂಬೇಡ್ಕರ್ ಅವರ ಪೂರ್ವದಲ್ಲಿ ಧಾರ್ಮಿಕ, ಧಾರ್ಮಿಕ ಹಿನ್ನೆಲೆಯ ಸಾಮಾಜಿಕ, ಸಾಮಾಜಿಕ ಹಿನ್ನೆಲೆಯ ಬದುಕು, ಈ ಎಲ್ಲಾ ಹಿನ್ನೆಲೆಯ ಬದುಕಿನ ಕಟ್ಟುಪಾಡುಗಳು ಅಜ್ಞಾನದ ಶಾಸನಗಳಾಗಿ ಜಾರಿಗೆ ಬಂದು ಬಹು ಜನರನ್ನು ದೂಡಿದ್ದು ಮಾತ್ರ ಪಾರಂಪರಿಕ ಅಜ್ಞಾನದ ವಾಸ್ತವದ ನರಕದಲ್ಲಿ.
ಆದರೆ, ಭಾರತದಲ್ಲಿ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ತಮ್ಮ ಸ್ವಾರ್ಥಪರ ಹಿನ್ನೆಲೆಗಾಗಿ ನಾವು ಮಾತ್ರ ಶ್ರೇಷ್ಠರು ಎಂದು ಹೇಳಿಕೊಂಡು ಶತಶತಮಾನಗಳಿಂದಲೂ ಸ್ವರ್ಗದ ಬದುಕನ್ನೇ ಬದುಕಿ ಸತ್ತಾಗ ಮಾತ್ರ ನರಕಯಾತನೆಯನ್ನು ಅನುಭವಿಸಿದ್ದು ಮಾತ್ರ ಭೂಮಿ ಮೇಲೆ ಜೀವಿಸಿದ್ದಾಗ “ಸ್ವರ್ಗ ಕಂಡವರು ನಾವು” ಎಂದು ಹೇಳಿಕೊಂಡವರೇ.
ಒಂದು ವರ್ಗ ಸೃಷ್ಟಿ ಮಾಡಿದ ದೇವಾನುದೇವತೆಗಳು, ಅವು ಸೃಷ್ಟಿಯಾಗಿ ಬದುಕಿ ಜೀವಿಸಿದ್ದು ಮಾತ್ರ ಕಲ್ಪನಾ ಲೋಕದ ವರ್ಣ ರಂಜಿತ ಸ್ವರ್ಗದಲ್ಲಿ
ಆದರೆ ಅವುಗಳನ್ನು ಆರಾಧಿಸುವ ಜನ ವರ್ಗ ನಿಜವಾಗಲೂ ಜೀವಿಸಿದ್ದು ಹಾಗೂ ಜೀವಿಸುತ್ತಿರುವುದು ಮಾತ್ರ ಅಜ್ಞಾನ ಹಿನ್ನೆಲೆಯ ದೇವರ ಹೆಸರಿನಲ್ಲಿಯೇ ಅಸ್ಪೃಶ್ಯರಾಗಿ ಜೀವಿಸಿದ ವಾಸ್ತವದ ನರಕದಲ್ಲಿ. ಈ ನರಕದಿಂದ ಭೌತಿಕ ಹಾಗೂ ಬೌದ್ಧಿಕವಾಗಿ ಹೊರಬಂದದ್ದು ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಹೆಸರಿನ ಶಾಶ್ವತ ಜ್ಞಾನಜ್ಯೋತಿಯ ಜಪದಿಂದಲೇ ಹೊರತು. ಕಾಲ್ಪನಿಕ ದೇವರಿಂದಲ್ಲ ಎಂಬುದನ್ನು ಮರೆಯಬಾರದು.
ಇದನ್ನೂ ಓದಿ: ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಾವತಿಸಿ: ಹೈಕೋರ್ಟ್ ಮಹತ್ವದ ತೀರ್ಪು