ಮೈಕ್ರೋ ಫೈನಾನ್ಸ್ ಕಿರುಕುಳ: ಗ್ರಾಮ ತೊರೆದ 100 ಕ್ಕೂ ಹೆಚ್ಚು ಕುಟುಂಬಗಳು

ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಿರುಕುಳ ರಾಜ್ಯದಲ್ಲಿ ಹೆಚ್ಚಾಗಿದ್ದು, ಬಡವರಿಗೆ ಅತಿ ಹೆಚ್ಚು ತೊಂದರೆ ನೀಡುತ್ತದೆ. ಎಷ್ಟೊ ಜನರು ಆ ಕಂಪನಿಗಳ ಟಾರ್ಚರ್‌ಗೆ ಊರು ಬಿಡುತ್ತಿದ್ದಾರೆ. ಪೋಷಕರು ಇದ್ದಕ್ಕಿದ್ದಂತೆ ಊರು ಬಿಡುತ್ತಿದ್ದಾರೆ, ಇದರಿಂದ ಎಷ್ಟೋ ಮಕ್ಕಳು ಅನಾಥರಾಗುತ್ತಿದ್ದಾರೆ.

ಅದರಲ್ಲೂ ಚಾಮರಾಜನಗರ ಜಿಲ್ಲೆಯ ಹಲವೆಡೆ 100 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌ನಿಂದ ಸಾಲ ಪಡೆದು ಆ ಸಾಲ ತೀರಿಸಲಾಗದೆ ಎಷ್ಟೋ ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿವೆ. ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಕುಟುಂಬಗಳು ತಲೆಮರೆಸಿಕೊಂಡಿವೆ. ಹಲವೆಡೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಂಡಿದೆ. ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ ಗ್ರಾಮದಲ್ಲಿ ಅಳಿದು ಉಳಿದ ಜನರು.

ಇದನ್ನೂ ಓದಿ: ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವೇ? ಜನಸಾಮಾನ್ಯರಿಗೆ ಹೊರೆಯಾಗದಂತೆ ದರ ನಿಗದಿಮಾಡಲು ಬೇರೆ ಮಾರ್ಗ ಇಲ್ಲವೇ?

ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದ್ರೂ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳ

ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಜಾಲಕ್ಕೆ ಸಿಲುಕಿ ಕುಟುಂಬಗಳು ಊರನ್ನೆ ತೊರೆದುಹೋಗಿದ್ದಾರೆ. ಗೃಹ ಬಳಕೆಯ ಖರ್ಚು ವೆಚ್ಚಗಳಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದಾರೆ., ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡಲು ಆರಂಭಿಸಿದ್ದಾರೆ. ಹಾಗಾಗಿ ಜನರು ಅವರಿಂದ ತಪ್ಪಿಸಿಕೊಳ್ಳಲು ಊರಿಗೆ ಊರೇ ಖಾಲಿ ಮಾಡಿದ್ದಾರೆ.

ಚಾಮರಾಜನಗರ ತಾಲೂಕಿನ‌ ಹೆಗ್ಗವಾಡಿಪುರದ ಮೋಹನ್ ಎಂಬ ಬಾಲಕ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್ ಕುರಿತು ಅಳಲು ತೋಡಿಕೊಂಡಿದ್ದಾನೆ.

ಆ ಬಾಲಕ ಹೇಳಿದ್ದೇನು?

ನಮ್ಮಮ್ಮನನ್ನು ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್.. ಕೈ ಮುಗಿದು ಕೇಳ್‌ಕೊಳ್ತೀನಿ ನನ್ನ ಒಂದು ಕಿಡ್ನಿ ಮಾರೋಕ್ಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ. ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸ್ತೀನಿ ಎಂದು ಕಂಪನಿಗಳ‌ ಕಿರುಕುಳಕ್ಕೆ ಬೇಸತ್ತ ಬಾಲಕನ ಕಣ್ಣೀರು ಹಾಕಿದ್ದಾನೆ.

ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರೆ, ಕಿರುಕುಳ ಕೊಡ್ತಾರೆ. ನಾವು ಸತ್ತೋಗ್ತೀವಿ ಬದುಕಲ್ಲ, ನಿಮ್ಮ ಎಜುಕೇಷನ್ ನೀವು ನೋಡ್ಕೊಂಡು ಹೋಗಿ ಅಂತ ಅಪ್ಪ ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ ಅಮ್ಮನನ್ನು ಬಿಟ್ಟು ನಾನು ನನ್ನ ತಂಗಿ ಬದ್ಕೋಕ್ಕೆ ಆಗುತ್ತಾ ಸರ್? ಎಂದು ಪುಟ್ಟ ಬಾಲಕ ಪ್ರಶ್ನೆ ಮಾಡುತ್ತದೆ.

ನಾವೆಲ್ರೂ ಸಾಯ್ಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್.. ಎಂದು ಅಳಲು ತೋಡಿಕೊಂಡಿದ್ದಾನೆ. ಇದು ಒಂದು ಕುಟುಂಬದ ಕಥೆಯಲ್ಲ ಊರಿಗೆ ಊರಿಗೆ ಇಂತಹ ಪರಿಸ್ಥಿತಿಗೆ ಬಂದಿವೆ. ಈ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಮುಕ್ತಿ ಯಾವಾಗ? ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ನೋಡಿ: ದೇಶದ ಮೊದಲ ಮುಸ್ಲಿಂ ಶಿಕ್ಷಕಿ | ಫಾತಿಮಾ ಶೇಖ್ : ಶಿಕ್ಷಣಕ್ಕೆ ಅವರ ಕೊಡುಗೆಗಳೇನು? ವಿಶ್ಲೇಷಣೆ : ಕೆ. ಪರೀಫಾ

Donate Janashakthi Media

Leave a Reply

Your email address will not be published. Required fields are marked *