ಮೈಸೂರು: ಹೊಸ ವರ್ಷಕ್ಕೆ ಕೇಕ್ ಎಸೆನ್ಸ್ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಮತ್ತಿಬ್ಬರು ಖೈದಿಗಳು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಚಾಮರಾಜನಗರದ ನಾಗರಾಜು ಹಾಗೂ ನಾಗರಾಜ್ ಮೃತಪಟ್ಟವರು. ನಿನ್ನೆ ಒಬ್ಬ ಸಾವನ್ನಪ್ಪಿದ್ದ.
ಮೈಸೂರಿನ ಕೆಆರ್ ಆಸ್ಪತ್ರೆಗೆ ಕೇಕ್ ತಯಾರಿಕೆಗೆ ತರಿಸಲಾಗಿದ್ದ ಎಸೆನ್ಸ್ ಕುಡಿದು ಅಸ್ವಸ್ಥರಾಗಿದ್ದ ಖೈದಿಗಳನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದ. ಇಂದು ರಮೇಶ್ ಹಾಗೂ ನಾಗರಾಜ್ ಮೃತಪಟ್ಟಿದ್ದಾರೆ. ಮೈಸೂರು
ಕಾರಾಗೃಹದ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹೊಸ ವರ್ಷಕ್ಕೆ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ನ್ನು ಕಳೆದ ಡಿ. 28ರಂದು ಸೇವಿಸಿ ಯಾರಿಗೂ ಹೇಳದೆ ಸುಮನಾಗಿದ್ದರು. ಮೂವರಿಗೂ ಕೂಡ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಲಖನೌ| ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು
ಹೊಟ್ಟೆನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಕೆಆರ್ ಆಸ್ಪತ್ರೆಗೆ ದಾಖಲೆ ಮಾಡಲಾಗಿತ್ತು. ಅಲ್ಲಿಯೂ ಎಸೆನ್್ಸ ಸೇವಿಸಿದ್ದರ ಬಗ್ಗೆ ವಿಷಯ ಮುಚ್ಚಿಟ್ಟಿದ್ದರು. ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ ಎಸೆನ್್ಸ ಸೇವಿಸಿರುವುದಾಗಿ ತಿಳಿಸಿದ್ದಾರೆ.
ಅಷ್ಟರೊಳಗಾಗಿ ಸಾಕಷ್ಟು ವಿಳಂಬವಾಗದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸ್ವಸ್ಥಗೊಂಡಿದ್ದ ಮೂವರು ಕೂಡ ಮೃತಪಟ್ಟಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಎಚ್ಡಿಕೆಗೆ ಸಿಎಂ ಸಿದ್ದರಾಮಯ್ಯ ಸವಾಲು Janashakthi Media