ಸುಂಕದ ಗೋಡೆ ಕಟ್ಟುವ ಟ್ರಂಪ್‌ ಬೆದರಿಕೆ

ಆಮದು ಸುಂಕಗಳನ್ನು ಒಂದು ಅಸ್ತ್ರವಾಗಿ ಬಳಸುವ ಟ್ರಂಪ್‌ ಬೆದರಿಕೆ ನವ ಉದಾರವಾದಿ ನೀತಿಗಳಿಂದ ಒಂದು ರೀತಿಯ ಪಲ್ಲಟವಾಗಿದ್ದರೂ ಸಹ, ಅದರಲ್ಲಿಯೂ ಗಡಿಗಳ ಆಚೀಚೆ ಹಣಕಾಸು ಬಂಡವಾಳದ ಮುಕ್ತ ಚಲನೆ ಇದ್ದೇ ಇರುತ್ತದೆ. ಹಣಕಾಸು ಬಂಡವಾಳದ ಮೇಲೆ ನಿಯಂತ್ರಣದ ಬಗ್ಗೆ ಟ್ರಂಪ್ ಒಂದು ಶಬ್ದವನ್ನೂ ಹೇಳಿಲ್ಲ ಎಂಬುದು ಗಮನಾರ್ಹ. ಹೀಗಿರುವಾಗ ಹಣಕಾಸು ಬಂಡವಾಳವು ಒಡ್ಡುವ ಬೆದರಿಕೆಗೆ ಎಲ್ಲ ದೇಶಗಳೂ ಒಳಗಾಗುತ್ತವೆ. ಮುಂದೆ ದಾರಿಕಾಣದಂತಾಗಿರುವ ಬಂಡವಾಳಶಾಹಿಯ ಪ್ರಸಕ್ತ ನವ-ಉದಾರವಾದಿ ಹಂತದಲ್ಲಿ ಅದು ಮನುಕುಲವನ್ನು ಎಲ್ಲೆಡೆಯಿಂದಲೂ ಆವರಿಸಿಕೊಳ್ಳುವ ಮತ್ತು ಪಾಶವೀ ಸ್ವರೂಪದ ನವ-ಫ್ಯಾಸಿಸಂನ ಒಂದು ಸನ್ನಿವೇಶಕ್ಕೆ ತರುತ್ತಿದೆ. ಅದರಿಂದ ಹೊರಬರುವ ದಾರಿಯನ್ನು ಸಮಾಜವಾದಕ್ಕೆ ಹಂತ ಹಂತವಾಗಿ ಪರಿವರ್ತನೆ ಮಾತ್ರವೇ ತೋರಬಲ್ಲದು. ಅಂತಿಮವಾಗಿ ಮಾನವ ಕುಲ ಒಂದೋ ಸಮಾಜವಾದವನ್ನು ಆಯ್ದುಕೊಳ್ಳಬೇಕು, ಇಲ್ಲವೇ ಪಾಶವೀಯತೆಯನ್ನು ಆಯ್ದುಕೊಳ್ಳಬೇಕು ಎಂಬ ರೋಸಾ ಲಕ್ಸೆಂಬರ್ಗ್ ಹೇಳಿಕೆ ಅತ್ಯಂತ ಕರಾಳ ರೀತಿಯಲ್ಲಿ ನಿಜವಾಗುತ್ತಿದೆ. ಸುಂಕದ

-ಪ್ರೊ. ಪ್ರಭಾತ್ಪಟ್ನಾಯಕ್

-ಅನು:ಕೆ.ಎಂ.ನಾಗರಾಜ್

ಯು.ಎಸ್‌.ಗೆ ರಫ್ತು ಮಾಡುವ ದೇಶಗಳ ವಿರುದ್ಧ ಆಮದು ಸುಂಕಗಳನ್ನು ಒಂದು ಅಸ್ತ್ರವಾಗಿ ಬಳಸುವ ಬೆದರಿಕೆಯನ್ನು ಡೊನಾಲ್ಡ್ ಟ್ರಂಪ್ ಹಾಕುತ್ತಿದ್ದಾರೆ. ಅವರು ಈಗಾಗಲೇ ಬೆದರಿಕೆಯ ಮೂರು ಹೇಳಿಕೆಗಳನ್ನು ನೀಡಿದ್ದಾರೆ: ಮೊದಲನೆಯದು, ಅಂತಾರಾಷ್ಟ್ರೀಯ ವ್ಯಾಪಾರಗಳ ಸಂದರ್ಭದಲ್ಲಿ ಡಾಲರ್‌ ಬಳಕೆಯಿಂದ ದೂರ ಸರಿಯುವ ಧೈರ್ಯ ತೋರುವ ದೇಶಗಳು ಆನಂತರ ಯುಎಸ್ ಮಾರುಕಟ್ಟೆಯಲ್ಲಿ ಶೇ. ನೂರರಷ್ಟು ಆಮದು ಸುಂಕವನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬ್ರಿಕ್ಸ್ ದೇಶಗಳಿಗೆ ಹಾಕಿದ ಬೆದರಿಕೆ. ಸುಂಕದ

ಎರಡನೆಯದು, ಯೂರೋಪಿಯನ್‌ ಒಕ್ಕೂಟವು ಯು.ಎಸ್‌ದೊಂದಿಗಿನ ತನ್ನ ವ್ಯಾಪಾರ ಮೀಸಲನ್ನು (ಅಂದರೆ, ಅಧಿಕ ರಫ್ತುಗಳಿಂದ ಕಡಿಮೆ ಆಮದುಗಳನ್ನು ಕಳೆದಾಗ ದೊರಕುವ ಉಳಿಕೆ-ಯೂರೋಪಿಯನ್‌ ಒಕ್ಕೂಟವು 2023ರಲ್ಲಿ ಸರಕುಗಳ ವ್ಯಾಪಾರದ ಮೂಲಕ ಸಂಪಾದಿಸಿದ ನಿವ್ವಳ ಗಳಿಕೆಯು $208.7 ಶತ ಕೋಟಿಯಷ್ಟಿತ್ತು) ಅಮೇರಿಕದಿಂದ ತೈಲ ಮತ್ತು ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಮೂಲಕ ಕಡಿಮೆ ಮಾಡಿಕೊಳ್ಳದಿದ್ದಲ್ಲಿ,ಅದು ಯುಎಸ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಮಟ್ಟದ ಆಮದು ಸುಂಕದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಯುರೋಪಿಯನ್ ಒಕ್ಕೂಟಕ್ಕೆ ಬೆದರಿಕೆ ಹಾಕಿದ್ದಾರೆ.

ಮೂರನೆಯದು, ಉಳಿದ ದೇಶಗಳು ಯುಎಸ್‌ಗೆ ಮಾಡುವ ರಫ್ತುಗಳ ಮೇಲೆ ಶೇ. 10ರಷ್ಟು ಆಮದು ಸುಂಕ ಇದ್ದೇ ಇದೆ, ಚೀನೀ ಸರಕುಗಳ ಮೇಲೆ ಇದು ಶೇ. 60ರಷ್ಟು ಇರುತ್ತದೆ ಎಂಬುದಾಗಿ ಅವರು ಘೋಷಣೆ ಮಾಡಿದ್ದಾರೆ. (ಚೀನಾವು ಅಮೆರಿಕದೊಂದಿಗೆ ಸರಕು ವ್ಯಾಪಾರದ ಮೂಲಕ ಸಂಪಾದಿಸಿದ ನಿವ್ವಳ ಗಳಿಕೆಯು (ರಫ್ತುಗಳಿಂದ ಆಮದುಗಳನ್ನು ಕಳೆದಾಗ ದೊರಕುವ ಉಳಿಕೆ) 2023ರಲ್ಲಿ $279.4ಶತಕೋಟಿಯಷ್ಟಿತ್ತು; 2018ರಲ್ಲಿ ಇದು $418ಶತಕೋಟಿಯಷ್ಟಿದ್ದು, 2023 ರಲ್ಲಿಮೊದಲಿಗಿಂತಕಡಿಮೆಯಾಗಿದ್ದರೂಕೂಡ, ಈಗಲೂಗಮನಾರ್ಹಪ್ರಮಾಣದಲ್ಲಿದೆ. ಸುಂಕದ

ಇದನ್ನೂ ಓದಿ: ಮಂಗಳೂರು ನಗರ ಪಾಲಿಕೆ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ : ವಿಶೇಷ ತನಿಖಾ ತಂಡ ರಚನೆಗೆ ಸಿಪಿಐ(ಎಂ) ಒತ್ತಾಯ

ಈ ಪ್ರತಿಯೊಂದೂ ಪ್ರಸ್ತಾವಿತ ಕ್ರಮಗಳೂ ಬಹಳ ಮುಖ್ಯವಾದ ಆರ್ಥಿಕ ಪರಿಣಾಮಗಳನ್ನು ಹೊಂದಿವೆ. ಉದಾಹರಣೆಗೆ, ಯೂರೋಪಿಯನ್‌ ಒಕ್ಕೂಟವು ರಷ್ಯಾದ ಅನಿಲದ ಮೇಲಿನ ಅವಲಂಬನೆಯನ್ನು ಅಮೆರಿಕದ ಅನಿಲವನ್ನು ಖರೀದಿಸುವ ಮೂಲಕ ಬದಲಿಸಿಕೊಳ್ಳುವುದರಿಂದ ಯೂರೋಪಿಯನ್‌ ಒಕ್ಕೂಟದೊಳಗೆ ವೆಚ್ಚದ ಹೆಚ್ಚಳವಾಗದಿರಬಹುದು. ಆದರೆ, ಅದು ಖಂಡಿತವಾಗಿಯೂ ಯುಎಸ್‌ನಲ್ಲಿ ಅನಿಲ ಬೆಲೆಗಳನ್ನು ಹೆಚ್ಚಿಸುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಯು.ಎಸ್‌. ಅನಿಲ ಬೆಲೆಗಳು ಶೇ. 30ರಷ್ಟು ಏರಿಕೆಯಾಗುವುದು ಸಂಭವನೀಯ ಎಂದು ಅಂದಾಜು ಮಾಡಲಾಗಿದೆ. ಈ ಸಂಬಂಧವಾಗಿ, ಹೆಚ್ಚಿದ ಬೇಡಿಕೆಯನ್ನು ನಿಭಾಯಿಸಲು ಯುಎಸ್‌ನಲ್ಲಿ ಅನಿಲ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂಬುದು ಟ್ರಂಪ್‌ ಅವರ ಪ್ರತಿಕ್ರಿಯೆ. ಸುಂಕದ

ಆದರೆ, ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಹೂಡಿಕೆಯನ್ನು ಹೆಚ್ಚಿಸುವುದು ಅಗತ್ಯವಾಗುತ್ತದೆ. ಯು.ಎಸ್‌.ನಂಥಹ ಒಂದು ದೇಶದಲ್ಲಿ ಹೂಡಿಕೆಯು ಖಾಸಗಿ ಹೂಡಿಕೆಯೇ ಆಗಬೇಕಾಗುತ್ತದೆ. ಆದರೆ, ಹೂಡಿಕೆ ಮಾಡುವಂತೆ ಖಾಸಗಿಯವರಿಗೆ ಆದೇಶ ಮಾಡಲಾಗದು.ಜೊತೆಗೆ, ತೈಲ ಮತ್ತು ಅನಿಲ ಬಳಕೆಯಿಂದ ಉಂಟಾಗುವ ಪರಿಸರ ಹಾನಿ ಮತ್ತು ಆ ಕಾರಣದಿಂದ ಅವುಗಳಿಂದ ದೂರ ಸರಿಯುವ ಒಲವನ್ನು ಗಮನಿಸಿದರೆ, ಇಂಥಹ ಒಂದು ಹೂಡಿಕೆಯು ನಿಜಕ್ಕೂ ಸಂಭವಿಸುವುದಿಲ್ಲ ಎನ್ನಬಹುದು. ಒಂದು ವೇಳೆ ಅದು ಸಂಭವಿಸಿದರೂ ಸಹ, ಪರಿಸರ ಹಾನಿಯ ಬಗ್ಗೆ ಜನರು ಹೊಂದಿರುವ ಕಾಳಜಿಗಳು ಇನ್ನೂ ಹೆಚ್ಚು ತೀವ್ರಗೊಳ್ಳುತ್ತವೆ. ಅಂತೆಯೇ, ಬ್ರಿಕ್ಸ್ ದೇಶಗಳ ಮೇಲೆ ಶೇ. ನೂರಕ್ಕೆ ನೂರು ಸುಂಕಗಳನ್ನು ವಿಧಿಸಿದರೆ, ಖಂಡಿತವಾಗಿಯೂ ಅವು ಸೇಡು ತೀರಿಸಿಕೊಳ್ಳುತ್ತವೆ. ಅದರ ಪರಿಣಾಮಗಳು ಅಮೆರಿಕ ಕೈಗೊಳ್ಳುವ ರಫ್ತುಗಳ ಮೇಲೆ ಸಾಕಷ್ಟು ಗಂಭೀರ ಪರಿಣಾಮ ಬೀರುತ್ತವೆ. ಸುಂಕದ

ಸ್ಫುಟವಾದ ಪ್ರಭಾವ

ಇವೆಲ್ಲವೂ ಇನ್ನೂ ಬರಿಯ ಸಾಧ್ಯತೆಗಳು ಮಾತ್ರ. ಸದ್ಯಕ್ಕೆ ಖಚಿತವಾಗಿರುವುದು ಏನೆಂದರೆ, ಜಾಗತಿಕ ಆಮದುಗಳ ಮೇಲೆ ಶೇ. 10ಸುಂಕ(ಆಮದು ತೆರಿಗೆ) ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 60 ತೆರಿಗೆ ವಿಧಿಸಲಾಗುವುದು ಎಂಬುದು. ಈ ತೆರಿಗೆಗಳು ವಿಶ್ವ ಅರ್ಥವ್ಯವಸ್ಥೆಯ ಮೇಲೆ ಬೀರುವ ಒಂದು ಸ್ಫುಟವಾದ ಪ್ರಭಾವವನ್ನು ನಾನು ಇಲ್ಲಿ ಚರ್ಚಿಸ ಬಯಸುತ್ತೇನೆ.ಈ ಸುಂಕಗಳಿಗೆ ಇತರ ದೇಶಗಳು ಪ್ರತೀಕಾರದ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ ಎಂದು ನಾವು ಊಹಿಸಿಕೊಳ್ಳೋಣ (ಮತ್ತು ಒಂದು ವೇಳೆ ಅವರು ಪ್ರತೀಕಾರ ಕೈಗೊಂಡರೆ, ಅದು ಈ ವಾದದ ವಿವರವನ್ನು ಮಾತ್ರ ಮಾರ್ಪಡಿಸುತ್ತದೆಯಲ್ಲದೆ ಅದರ ಸತ್ವವನ್ನು ನಿರಾಕರಿಸುವುದಿಲ್ಲ). ಸುಂಕದ

ಅಮೆರಿಕದಲ್ಲಿ ಆಮದು ಸುಂಕಗಳನ್ನು ಹೇರಿದಾಗ ಅದು ಅಮೇರಿಕನ್ ಸರಕುಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ತತ್ಪರಿಣಾಮವಾಗಿ ಆ ದೇಶದೊಳಗೆ ಉತ್ಪಾದನೆಯ ಮತ್ತು ಉದ್ಯೋಗದ ಮಟ್ಟದಲ್ಲಿ ಏರಿಕೆಯಾಗಬೇಕು. ಅಮೆರಿಕನ್ನರು ಯುರೋಪಿಯನ್ ಕಾರುಗಳನ್ನು ಹೆಚ್ಚು ಖರೀದಿಸುತ್ತಾರೆ, ಆದರೆ ಯುರೋಪಿಯನ್ನರು ಅಮೆರಿಕನ್‌ ಕಾರುಗಳನ್ನು ಹೆಚ್ಚು ಖರೀದಿಸುತ್ತಿಲ್ಲ ಎಂದು ಟ್ರಂಪ್‌ ದೂರುತ್ತಿದ್ದಾರೆ. ಯುರೋಪಿಯನ್ ಕಾರುಗಳ ಮೇಲೆ ಯು.ಎಸ್‌.ನಲ್ಲಿ ಸುಂಕಗಳನ್ನು ಹೇರುವ ಕ್ರಮವು ಅಮೆರಿಕದಲ್ಲಿ ಅಮೇರಿಕನ್ ಕಾರುಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಅವುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆ ಉದ್ಯಮದಲ್ಲಿ ಉದ್ಯೋಗಗಳೂ ಹೆಚ್ಚುತ್ತವೆ. ಸುಂಕದ

ಈ ಪರಿಸ್ಥಿತಿಗೆ ವಿರುದ್ಧವಾಗಿ, ಆಮದು ಮಾಡಿಕೊಂಡ ಸರಕುಗಳ ಮೇಲೆ ಸುಂಕವನ್ನು ಹೇರಿದ ಕಾರಣದಿಂದಾಗಿ ಈ ವಸ್ತುಗಳ ಬೆಲೆಗಳು ಏರುತ್ತವೆ. ಅವುಗಳನ್ನು ಕೊಳ್ಳುವವರ ಜೀವನ ವೆಚ್ಚಗಳು ಏರುತ್ತವೆ. ಜೀವನ ವೆಚ್ಚಗಳ ಹೆಚ್ಚಳವು ಗ್ರಾಹಕರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದು ಉದ್ಯೋಗ-ಕುಗ್ಗಿಸುವ ಪರಿಣಾಮವನ್ನು ಹೊಂದಿರುತ್ತದೆ.ಬೆಲೆ ಏರಿಕೆಯನ್ನು ಎದುರಿಸಲು ಹಣದುಬ್ಬರ ವಿರೋಧಿ “ವಿತವ್ಯಯ”ದ ಕ್ರಮಗಳನ್ನು ಟ್ರಂಪ್ ಆಡಳಿತವು ಒಂದು ವೇಳೆ ಕೈಗೊಂಡರೆ ಉದ್ಯೋಗಗಳ ಕುಗ್ಗುವಿಕೆಯು ಇನ್ನೂ ಹೆಚ್ಚು ಸ್ಪಷ್ಟವಾಗಿರುತ್ತದೆ. ಆದರೆ, ಟ್ರಂಪ್‌ ಕೈಗೊಳ್ಳುವ ಈ ಸುಂಕದ ಕ್ರಮದಿಂದಾಗಿ ಯುಎಸ್‌ನಲ್ಲಿ ಉತ್ಪಾದನೆಯಲ್ಲಿ ನಿವ್ವಳ ಹೆಚ್ಚಳವಾಗಲಿದೆ ಮತ್ತು ಉದ್ಯೋಗಗಳು ಹೆಚ್ಚುತ್ತವೆ ಎಂದು ನಾವು ಸದ್ಯಕ್ಕೆ ಊಹಿಸಿಕೊಳ್ಳೋಣ. ಸುಂಕದ

ಅಮೇರಿಕನ್ ಮಾರುಕಟ್ಟೆಗಳನ್ನು ಕಳೆದುಕೊಳ್ಳುವ ಮತ್ತು ತತ್ಸಂಬಂಧವಾಗಿ ಬೇಡಿಕೆಯನ್ನು ಹೆಚ್ಚಿಸುವ ಪ್ರತಿಕ್ರಮಗಳನ್ನು ಕೈಗೊಳ್ಳಲಾಗದ ಸನ್ನಿವೇಶದಲ್ಲಿ ವಿಶ್ವದ ಉಳಿದ ಭಾಗಗಳಲ್ಲಿ ಉದ್ಯೋಗಗಳು ಕಡಿಮೆಯಾಗುತ್ತವೆ.ಅಂದರೆ, ಯು.ಎಸ್‌. ತನ್ನ ನಿರುದ್ಯೋಗವನ್ನು ವಿಶ್ವದ ಉಳಿದ ಭಾಗಗಳಿಗೆ ರಫ್ತು ಮಾಡಿದಂತಾಗುತ್ತದೆ. ಇದು ಸುಂಕದ ಕ್ರಮಗಳ ಮೂಲಕ ವಿಶ್ವದ ಉಳಿದ ಭಾಗಗಳತ್ತ ʼನಿನ್ನ ನೆರೆಯವನು ಹಾಳಾಗಲಿʼ (beggar-thy-neighbour) ಎಂಬ ನೀತಿಯನ್ನು ಅನುಸರಿಸಿದಂತಾಗುತ್ತದೆ. ನಿಜ, ಈ ನೀತಿಯನ್ನು ಹಿಮ್ಮೆಟಿಸುವ ಉದ್ದೇಶದಿಂದ, ಆಂತರಿಕ ಬೇಡಿಕೆಗೆ ಉತ್ತೇಜನ ನೀಡುವಂಥಹ ಒಂದು ವಿಸ್ತರಣಕಾರೀ ವಿತ್ತೀಯ ನೀತಿಯನ್ನು (ಅರ್ಥವ್ಯವಸ್ಥೆಯ ವಿಸ್ತರಣೆಗಾಗಿ ಹಣ ನೀತಿಯು ಒಂದು ಮೊಂಡಾದ ಸಾಧನವಾಗಿರುವುದರಿಂದ) ಅನುಸರಿಸುವ ಮೂಲಕ ವಿಶ್ವದ ಉಳಿದ ಭಾಗವು ತನ್ನ ಮೇಲೆ ಎರಗುವ ಪ್ರತಿಕೂಲ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು, ನಿಜ.ಆದರೆ ಚೀನಾವನ್ನು ಹೊರತುಪಡಿಸಿ ಉಳಿದ ಅರ್ಥವ್ಯವಸ್ಥೆಗಳಲ್ಲಿ ಈ ವಿಸ್ತರಣಾ ವಿತ್ತೀಯ ನೀತಿಯನ್ನು ಅನುಸರಿಸುವುದು ಸಾಧ್ಯವಿಲ್ಲ. ಸುಂಕದ

ಅಂಥಹ ಒಂದು ವಿಸ್ತರಣಾ ವಿತ್ತೀಯ ನೀತಿಯು ಬಜೆಟ್‌ನಲ್ಲಿ ಬೃಹತ್‌ ಕೊರತೆಯ ರೂಪದಲ್ಲಿರಬೇಕು. ಮತ್ತು ಸಾಮಾನ್ಯವಾಗಿ ತಮ್ಮ ಆದಾಯದ ಹೆಚ್ಚು ಭಾಗವನ್ನು ಉಳಿತಾಯ ಮಾಡುವ ಶ್ರೀಮಂತರುಅಥವಾ ಬಂಡವಾಳಗಾರರ ಮೇಲೆ ಹೆಚ್ಚು ತೆರಿಗೆಗಳನ್ನು ಹೇರಬೇಕು. ಹೇಗೂ ತಮ್ಮ ಆದಾಯದ ಬಹು ಭಾಗವನ್ನು ಬಳಕೆ ಮಾಡಿಕೊಳ್ಳುವ ದುಡಿಯುವ ಜನರ ಮೇಲೆ ತೆರಿಗೆ ವಿಧಿಸುವುದು ಮತ್ತು ಅಂತಹ ತೆರಿಗೆ ಆದಾಯವನ್ನು ಬಳಸಿಕೊಂಡು ಸರ್ಕಾರದ ವೆಚ್ಚವನ್ನು ಉತ್ತೇಜಿಸುವ ಕ್ರಮವು ಒಟ್ಟು ಬೇಡಿಕೆಯ ಸಂಯೋಜನೆಯನ್ನು (ದುಡಿಯುವ ಜನರ ಬಳಕೆಯಲ್ಲಿ ಇಳಿಕೆ ಮತ್ತು ಹೆಚ್ಚು ಸರ್ಕಾರಿ ವೆಚ್ಚ) ಮಾತ್ರ ಬದಲಾಯಿಸುತ್ತದೆಯಲ್ಲದೆ ಅದರ ಪ್ರಮಾಣವನ್ನಲ್ಲ. ಆದರೆ, ಒಟ್ಟಾರೆ ಬೇಡಿಕೆಯ ಪ್ರಮಾಣವನ್ನು ವಾಸ್ತವವಾಗಿ ಹೆಚ್ಚಿಸುವಂತಹ ವಿತ್ತೀಯ ಕ್ರಮಗಳನ್ನು ಅಂತರಾಷ್ಟ್ರೀಯ ಹಣಕಾಸು ಬಂಡವಾಳವು ನಿಖರವಾಗಿ ವಿರೋಧಿಸುತ್ತದೆ. ಸುಂಕದ

ಅದು ನಿಗದಿಪಡಿಸಿದ ವಿತ್ತೀಯ ಕೊರತೆಯ ಮಿತಿ (ಸಾಮಾನ್ಯವಾಗಿ ಜಿಡಿಪಿಯ ಶೇ. 3ರಷ್ಟು) ಮೀರುವುದನ್ನು ವಿರೋಧಿಸುತ್ತದೆ ಮತ್ತು ಶ್ರೀಮಂತರ ಮೇಲೆ ಯಾವುದೇ ತೆರಿಗೆ ಹೇರುವುದನ್ನು ಅದು ನಿಸ್ಸಂಶಯವಾಗಿ ವಿರೋಧಿಸುತ್ತದೆ. ಏಕೆಂದರೆ, ಅಂತಹ ತೆರಿಗೆಗಳು ಹಣಕಾಸು ಒದಗಿಸುವವರ ಮೇಲೆಯೇ ಹೆಚ್ಚು ಬೀಳುತ್ತವೆ. ಬೇಡಿಕೆ-ಉತ್ತೇಜಿಸುವ ಇಂತಹ ಕ್ರಮಗಳನ್ನು ಅನುಸರಿಸುವ ಅರ್ಥವ್ಯವಸ್ಥೆಯು ಪಲಾಯನ ಪ್ರವೃತ್ತಿ ಹೊಂದಿರುವ ಹಣಕಾಸು ಬಂಡವಾಳಕ್ಕೆ ಬಲಿಪಶುವಾಗುತ್ತದೆ ಮತ್ತು ಬಂಡವಾಳದ ಈ ರೀತಿಯ ಪಲಾಯನದ ಕಾರಣದಿಂದ ಅಸ್ಥಿರಗೊಳ್ಳುತ್ತದೆ. ಈಕಾರಣದಿಂದಾಗಿಯೇ ಅಂತಹ ವಿತ್ತೀಯ ವಿಸ್ತರಣೆಯು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಪ್ರಾಬಲ್ಯವೇ ಜೀವಾಳವಾಗಿರುವ ಒಂದು ನವ ಉದಾರವಾದಿ ವ್ಯವಸ್ಥೆಯಲ್ಲಿ ಸಂಭವಿಸುವುದಿಲ್ಲ. ಸುಂಕದ

ಬಂಡವಾಳ ಪಲಾಯನದ ಬೆದರಿಕೆ

ಆಮದು ಸುಂಕಗಳನ್ನು ಹೇರುವ ಯುಎಸ್‌ನ ಕ್ರಮವು (ಟ್ರಂಪ್‌ ಅವರ ಪ್ರಸ್ತಾಪವು)ನವ ಉದಾರವಾದಿ ನೀತಿಗಳಿಂದ ಒಂದುರೀತಿಯಪಲ್ಲಟವಾಗಿದ್ದರೂ ಸಹ,ಅದರಲ್ಲಿಯೂಬಂಡವಾಳದ (ವಿಶೇಷವಾಗಿ ಹಣಕಾಸು ಬಂಡವಾಳದ) ಗಡಿಯಾಚೆಗಿನ ಮುಕ್ತ ಚಲನೆ ಇದ್ದೇ ಇರುತ್ತದೆ.ಈ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಸಂರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಪ್ರತಿಪಾದಿಸುವಾಗ ಟ್ರಂಪ್‌ರವರು ಬಂಡವಾಳ ನಿಯಂತ್ರಣದ ಪರವಾಗಿ ಒಂದು ಶಬ್ದವನ್ನೂ ಸಹ ಹೇಳಲಿಲ್ಲ ಎಂಬುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ. ಬಂಡವಾಳದ ಹರಿದಾಟಗಳ ಬಗ್ಗೆ ನಿಯಂತ್ರಣವೇ ಇಲ್ಲದಿರುವಾಗ ಬಂಡವಾಳವು ಒಡ್ಡುವ ಬೆದರಿಕೆಗೆ ಎಲ್ಲ ದೇಶಗಳೂ ಒಳಗಾಗಿವೆ. ಈ ದೇಶಗಳುವಿತ್ತೀಯ ವಿಸ್ತರಣೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ, ಬಂಡವಾಳವು ಹೊರ ಹರಿಯುವ ಬೆದರಿಕೆ ಒಡ್ಡುತ್ತದೆ. ಎಲ್ಲ ದೇಶಗಳೂ ಇಂತಹ ಸನ್ನಿವೇಶವನ್ನು ತಪ್ಪಿಸ ಬಯಸುತ್ತವೆ. ಸುಂಕದ

ಚೀನಾದ ಪ್ರಕರಣವು ಈ ವಿಷಯದಲ್ಲಿ ಸಂಪೂರ್ಣವಾಗಿ ವಿಭಿನ್ನವಾದುದೇ ಸರಿ. ನಿಜ ಹೇಳುವುದಾದರೆ, ಹಿಂದಿನ ಕೆಲವು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಯುಎಸ್‌ ಆಡಳಿತಗಳೆಲ್ಲವೂ  ಚೀನಾದಲ್ಲಿ ಉತ್ಪಾದಿಸಲಾದ ಸರಕುಗಳ ಆಮದುಗಳಿಂದ ಯುಎಸ್‌ ಮಾರುಕಟ್ಟೆಯನ್ನು ರಕ್ಷಿಸುತ್ತಾ ಬಂದಿವೆ.ಚೀನಾವು ವ್ಯಾಪಾರದ ಮೂಲಕ ಸಂಪಾದಿಸಿದ ನಿವ್ವಳ ಉಳಿಕೆಯು (ರಫ್ತುಗಳಿಂದ ಆಮದುಗಳನ್ನು ಕಳೆದಾಗ ದೊರಕುವ ಉಳಿಕೆ) ಇಳಿಯುತ್ತಾ ಬಂದಿದೆ ಎಂಬುದನ್ನು ಈ ಹಿಂದೆ ಹೇಳಲಾಗಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಕಳೆದುಕೊಂಡ ಮಾರುಕಟ್ಟೆಯ ಪಾಲನ್ನು ತನ್ನ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಸರಿಹೊಂದಿಸಿಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿದೆ. ಬೇರೆ ದೇಶಗಳು ಮಾಡಲು ಸಾಧ್ಯವಾಗದ ಈ ಕಾರ್ಯವನ್ನು ಚೀನಾ ಮಾಡುವುದು ಸಾಧ್ಯವಾಗುವ ಕಾರಣವೆಂದರೆ, ಅದುಕೈಗೊಂಡ ಎಲ್ಲ “ಉದಾರೀಕರಣದ” ಹೊರತಾಗಿಯೂ, ಚೀನಾವು ಮೂಲಭೂತವಾಗಿ ಒಂದು “ಕಮಾಂಡ್ ಎಕಾನಮಿ” (ಅಂದರೆ ಆದೇಶಿತಅರ್ಥವ್ಯವಸ್ಥೆ)ಆಗಿಯೇ ಇನ್ನೂ ಉಳಿದಿದೆ ಎಂಬುದು. ಸುಂಕದ

ಅಲ್ಲಿ ಆರ್ಥಿಕ ವಿಷಯಗಳಲ್ಲಿ ರಾಜಕೀಯ ನಾಯಕತ್ವದ ಆದೇಶ ಜಾರಿಯಾಗುತ್ತದೆ: ಚೀನಾದ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯದ ಪಾಲು ಬಲು ದೊಡ್ಡದು. ಸಾಮಾನ್ಯವಾಗಿ ಬಂಡವಾಳ-ಪ್ರಧಾನವಲ್ಲದ ಉದ್ದಿಮೆಗಳು, ಅವರ ಹೂಡಿಕೆಯ ನಿರ್ಧಾರಗಳು ಮತ್ತು ವೇತನ ನೀತಿ ಕೂಡ ಸರ್ಕಾರದಿಂದ ಪ್ರಭಾವಿತವಾಗಿರುತ್ತವೆ. ಜಾಗತಿಕ ಉತ್ತರದ ದೇಶಗಳನ್ನೂ ಒಳಗೊಂಡಂತೆ ವಿಶ್ವದ ಹೆಚ್ಚಿನ ಭಾಗಗಳಲ್ಲಿ ನಿಜ ವೇತನ ದರಗಳು ಸ್ಥಗಿತವಾಗಿರುವುದು ಕಂಡುಬಂದರೂ ಸಹ, ಸರ್ಕಾರದ ನಿರ್ದೇಶನಗಳ ಪರಿಣಾಮವಾಗಿ ಚೀನಾದ ನಿಜ ವೇತನಗಳು ಹೆಚ್ಚಳವನ್ನು ಕಂಡಿರುವುದು ನಿಜಕ್ಕೂ ಆಶ್ಚರ್ಯಕರವಲ್ಲ.ಆದ್ದರಿಂದ ಚೀನಾದ ಆಂತರಿಕ ಮಾರುಕಟ್ಟೆಯ ವಿಸ್ತರಣೆಯು, ಬಂಡವಾಳಶಾಹಿ ದೇಶಗಳಿಗಿಂತ ಭಿನ್ನವಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಆದೇಶಗಳಿಂದ ನಿರ್ಬಂಧಿಸಲ್ಪಟ್ಟಿಲ್ಲ. ಸುಂಕದ

ಸಮಾಜವಾದ ಇಲ್ಲವೇ ಪಾಶವೀಯತೆ

ಆದ್ದರಿಂದ, ಅಮೆರಿಕಾದ ಸಂರಕ್ಷಣಾತ್ಮಕ ವ್ಯಾಪಾರ ನೀತಿಯ ಪರಿಣಾಮಗಳನ್ನು ತಾತ್ವಿಕವಾಗಿ ಎದುರಿಸಬಹುದಾದ ಚೀನಾದ ಪರಿಸ್ಥಿತಿಯೇ ಬೇರೆ. ಆದರೆ, ವಿಶ್ವದ ಉಳಿದ ಭಾಗಗಳು ಅಮೆರಿಕಾದ ಸಂರಕ್ಷಣಾತ್ಮಕ ವ್ಯಾಪಾರ ನೀತಿಯ ಕಾರಣದಿಂದಾಗಿ ಹಿಂಜರಿತವು ಉಲ್ಬಣಗೊಳ್ಳುವುದನ್ನು ನೋಡಬೇಕಾಗುತ್ತದೆ. ಈ ಪರಿಣಾಮವು ನಿರ್ದಿಷ್ಟವಾಗಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ತೀವ್ರವಾಗಿರುತ್ತದೆ. ಟ್ರಂಪ್‌ರ ಸಂರಕ್ಷಣಾ ನೀತಿಯ ಬಗ್ಗೆ ಮೌನವಾಗಿರುವ ಬ್ರೆಟ್ಟನ್ ವುಡ್ಸ್ ಸಂಸ್ಥೆಗಳು ಮುಕ್ತ ವ್ಯಾಪಾರದ ಸದ್ಗುಣಗಳ ಬಗ್ಗೆ ಜಾಗತಿಕ ದಕ್ಷಿಣದ ದೇಶಗಳಿಗೆ ಉಪನ್ಯಾಸ ನೀಡುತ್ತವೆ ಮತ್ತು ತಮ್ಮದೇ ಆದ ಯಾವುದೇ ಸಂರಕ್ಷಣಾತ್ಮಕ ನೀತಿಗಳನ್ನು ಅಳವಡಿಸಿಕೊಳ್ಳದಂತೆ ಅವುಗಳನ್ನು ತಡೆಯುತ್ತವೆ. ಸುಂಕದ

ಅದೇ ಸಮಯದಲ್ಲಿ ದಕ್ಷಿಣದ ದೇಶಗಳು ಶ್ರೀಮಂತರ ಮೇಲೆ ಹೆಚ್ಚು ತೆರಿಗೆ (ಇದು ಬಂಡವಾಳದ ಒಳಹರಿವಿಗೆ ತೊಡಕಾಗುತ್ತದೆ)ಹೇರದಂತೆ ನೋಡಿಕೊಳ್ಳುತ್ತವೆ ಮತ್ತು ಅವು “ವಿತ್ತೀಯ ಕೊರತೆಯ ಮಾನದಂಡಗಳಿಗೆ” ಕಟ್ಟುನಿಟ್ಟಾಗಿ ಬದ್ಧರಾಗುವಂತೆ ಮಾಡುತ್ತವೆ.ಈ ದೇಶಗಳು ಅಮೆರಿಕಾದ ಸಂರಕ್ಷಣಾತ್ಮಕ ವ್ಯಾಪಾರ ನೀತಿಯ ಬಗ್ಗೆ ಮೃದು ಧೋರಣೆ ತಳೆಯುವಂತೆ ಮಾಡಲಾಗುತ್ತದೆ. ಆ ಮೂಲಕ ಸೃಷ್ಟಿಯಾಗುವ ಆರ್ಥಿಕ ಹಿಂಜರಿತದ ಪ್ರವೃತ್ತಿಯನ್ನು ಈ ದೇಶಗಳು ಸಹಿಸಿಕೊಳ್ಳಬೇಕಾಗುತ್ತದೆ ಮಾತ್ರವಲ್ಲ ರಫ್ತು ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಸ್ಥಳಾಂತರಿಸುವುದಕ್ಕಾಗಿ ಅಗತ್ಯವಾಗುವ ಬಂಡವಾಳದ ಒಳಹರಿವೂ ಒಣಗುತ್ತದೆ. ಸುಂಕದ

ವಿಶ್ವದ ಉಳಿದ ಭಾಗಗಳಲ್ಲಿ ಉಂಟಾಗುವ ಆರ್ಥಿಕ ಹಿಂಜರಿತದ ಪ್ರವೃತ್ತಿ ಉಲ್ಬಣಗೊಂಡರೆ, ಅದು ಪ್ರಸ್ತುತ ಜಗತ್ತನ್ನು ಆವರಿಸುತ್ತಿರುವ ನವ-ಫ್ಯಾಸಿಸ್ಟ್ ಪ್ರವೃತ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಕಾರ್ಪೊರೇಟ್ ಬಂಡವಾಳ ಮತ್ತು ನವ-ಫ್ಯಾಸಿಸ್ಟ್ ಅಂಶಗಳ ನಡುವಿನ ಮೈತ್ರಿಯಿಂದಾಗಿ ನವ-ಫ್ಯಾಸಿಸಂ ಉತ್ತೇಜನ ಪಡೆಯುವುದರಿಂದ, ಬಿಕ್ಕಟ್ಟಿನ ಉಲ್ಬಣವು ನವ-ಫ್ಯಾಸಿಸ್ಟ್ ಪ್ರವೃತ್ತಿಯನ್ನು ಮತ್ತಷ್ಟು ಬಲಪಡಿಸಲು ಕಾರಣವಾಗುತ್ತದೆ. ಇಂತಹ ಬಿಕ್ಕಟ್ಟು-ಬಾಧಿತ ದೇಶಗಳಲ್ಲಿ ಲೌಕಿಕ ಜೀವನದ ಸಮಸ್ಯೆಗಳಿಂದ ಕಥನಗಳನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನದಲ್ಲಿ ಕೆಲವು ದುರದೃಷ್ಟದ ಅಲ್ಪಸಂಖ್ಯಾತ ಗುಂಪುಗಳನ್ನು “ಅನ್ಯ”ರನ್ನಾಗಿ ಬಿಂಬಿಸಲಾಗುತ್ತದೆ.

ಹೀಗೆ, ಬಂಡವಾಳಶಾಹಿಯ ಬೆಳವಣಿಗೆಯ ಉಪಸಂಹಾರ ಹೇಗಿರುತ್ತದೆಯೆಂದರೆ,ಅಂತಿಮವಾಗಿ ಮಾನವ ಕುಲ ಒಂದೋ ಸಮಾಜವಾದವನ್ನು ಆಯ್ದುಕೊಳ್ಳಬೇಕು, ಇಲ್ಲವೇ ಪಾಶವೀಯತೆಯನ್ನು ಆಯ್ದುಕೊಳ್ಳಬೇಕು ಎಂಬ  ರೋಸಾ ಲಕ್ಸೆಂಬರ್ಗ್ ಹೇಳಿಕೆ ಅತ್ಯಂತ ಕರಾಳ ರೀತಿಯಲ್ಲಿ ನಿಜವಾಗುತ್ತಿದೆ. ನವ ಉದಾರವಾದಿ ಬಂಡವಾಳಶಾಹಿಗೆ ಮುಂದೆ ದಾರಿಕಾಣದಂತಾಗಿರುವುದುಬಂಡವಾಳಶಾಹಿಯ ಇತ್ತೀಚಿನ ಹಂತ. ಅದು ಮನುಕುಲವನ್ನು ಎಲ್ಲೆಡೆಯಿಂದಲೂ ಆವರಿಸಿಕೊಳ್ಳುವ ಮತ್ತು ಪಾಶವೀ ನವ-ಫ್ಯಾಸಿಸಂನ ಒಂದು ಸನ್ನಿವೇಶಕ್ಕೆ ತರುತ್ತಿದೆ. ಅದರಿಂದ ಹೊರಬರುವ ದಾರಿಯನ್ನು ಸಮಾಜವಾದಕ್ಕೆ ಹಂತ ಹಂತವಾಗಿ ಪರಿವರ್ತನೆ ಮಾತ್ರವೇ ತೋರಬಲ್ಲದು.

ಇದನ್ನೂ ನೋಡಿ: ಬಸ್‌ ‍ಪ್ರಯಾಣ ದರ ಹೆಚ್ಚಳ : ಫ್ರೀಡಂ ಪಾರ್ಕ್‌ ಬಳಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *