ಎಚ್‌ಎಂಪಿವಿ ವೈರಸ್: ಯಾರೂ ಹೆದರಬೇಡಿ, ಹೆದರಿಸಬೇಡಿ – ಚೀನಾದಿಂದ ಮಾತನಾಡಿದ ಕನ್ನಡಿಗ

ನವದೆಹಲಿ: ಚೀನಾದಲ್ಲಿ ಎಚ್‌ಎಂಪಿವಿ ಎಂಬ ಹೊಸ ವೈರಸ್ ಕಾಣಿಸಿಕೊಂಡಿದೆ. ಕೊರೊನಾ ವೈರಸ್ ಮಾದರಿಯಲ್ಲಿಯೇ ಇದೂ ಸಹ ಪ್ರಭಾವ ಬೀರಲಿದೆ ಎಂಬ ಸುದ್ದಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿವೆ. ಚೀನಾದಲ್ಲಿ ಈಗಾಗಲೆ ಹಲವರಲ್ಲಿ ಈ ಎಚ್‌ಎಂಪಿಎ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ನೂಕು ಮಗ್ಗಲು ಉಂಟಾಗಿದೆ, ಜನರು ಸಾಯುತ್ತಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿದಾಡತೊಡಗಿವೆ.

ಎಚ್‌ಎಂಪಿವಿ ವೈರಸ್ ಜನರ ಮನಸ್ಸಲ್ಲಿ ಭಯ ಹುಟ್ಟುಹಾಕುತ್ತಿರುವ ಸಮಯದಲ್ಲೇ ಉತ್ತರ ಕರ್ನಾಟಕ ಮೂಲದ ರಾಜು ನಾಯಕ್ ಎಂಬುವವರು ಚೀನಾದಿಂದ ವಿಡಿಯೊ ಮಾಡಿ ಅಲ್ಲಿನ ಅಸಲಿಯತ್ತೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಉತ್ತರ ಚೀನಾದ ಡಾಲಿಯನ್ ಸಿಟಿಯಲ್ಲಿರುವ ಇವರು ಅಲ್ಲಿಂದಲೇ ವಿಡಿಯೊ ರೆಕಾರ್ಡ್ ಮಾಡಿ ನಿಜ ಪರಿಸ್ಥಿತಿ ಹೇಗಿದೆ ಎಂಬುದನ್ನು ತೋರಿಸಿದ್ದಾರೆ.‌

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಸ್ಥರ ಅನಿರ್ದಿಷ್ಟಾವಧಿ ಧರಣಿ

ಒಂದು ವಾರದಿಂದ ಚೀನಾದಲ್ಲಿ ಹಂಗಂತೆ ಹಿಂಗಂತೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ ಜನರು ಪರದಾಡುತ್ತಿದ್ದಾರೆ ಹಣಗಳನ್ನು ಹೂಳೋಕೂ ಜಾಗ ಇಲ್ಲವಂತೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇಲ್ಲಿ ನೋಡಿ, ಡಾಲಿಯನ್ ಸಿಟಿ ನಾರ್ಮಲ್ ಆಗಿದೆ.

ಟಿವಿಯಲ್ಲಿ ತೋರಿಸುತ್ತಿರುವ ಹಾಗೇವಿಲ್ಲ. ಜನ ಜೀವನ ಮೊದಲಿನಂತೇ ಇದೆ. ಶಾಪಿಂಗ್ ಮಾಲ್ ಹಾಗೂ ಇತರೆ ಜಾಗಗಳಲ್ಲಿ ಜನ ಎಂದಿನಂತೆ ಓಡಾಡುತ್ತಿದ್ದಾರೆ. ನೀವು ತೋರಿಸುವಂತಹ ಸಮಸ್ಯೆ ಇಲ್ಲ. ಟಿಆರ್‌ಪಿಗೋಸ್ಕರ ಇಂತಹ ಸುದ್ದಿಗಳನ್ನು ಹರಡಬೇಡಿ. ಅಂತಹದ್ದೇನೂ ಆಗಿಲ್ಲ.

ನಾನು 2008ರಿಂದ ಇದ್ದೇನೆ. ಆ ಥರಹ ಏನಾದರೂ ಇದ್ದರೆ ನಿಮಗಿಂತ ಮೊದಲೇ ನಮಗೆ ವಿಷಯ ಗೊತ್ತಾಗುತ್ತೆ. ನಾನೂ ಮಾಸ್ಕ್ ಹಾಕಿಲ್ಲ, ಇಲ್ಲಿನ ಜನರೂ ಮಾಸ್ಕ್ ಹಾಕಿಲ್ಲ. ಯಾರೂ ಹೆದರಬೇಡಿ, ಹೆದರಿಸಬೇಡಿ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ನೋಡಿ: HMPV ಬಗ್ಗೆ ಭಯ ಬೇಡ – ಚೀನಾದಿಂದ ಮಾತನಾಡಿದ ಕನ್ನಡಿಗ Janashakthi Media

Donate Janashakthi Media

Leave a Reply

Your email address will not be published. Required fields are marked *