ನಾಪತ್ತೆಯಾಗಿದ್ದ ಪರ್ತಕರ್ತ ಮುಖೇಶ್​ ಚಂದ್ರಕಾರ್ ಶವವಾಗಿ ಪತ್ತೆ: ಹೃದಯ ಸೀಳಿ, ಯಕೃತ್​ನ್ನು 4 ಭಾಗವಾಗಿ ತುಂಡರಿಸಿ ಭೀಕರ ಹತ್ಯೆ

ತ್ತೀಸ್‌ಗಢ: ನಾಪತ್ತೆಯಾಗಿದ್ದ ಪರ್ತಕರ್ತ ಮುಖೇಶ್​ ಚಂದ್ರಕಾರ್ ಶವವಾಗಿ ಪತ್ತೆಯಾಗಿದ್ದು,  ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರ ಹೃದಯವನ್ನು ಸೀಳಿ, ಆತನ ಯಕೃತ್​ನ್ನು 4 ಭಾಗವಾಗಿ ತುಂಡಾಗಿಸಿ ಹತ್ಯೆ ಮಾಡಿದ್ದಾರೆ .

ತ್ತೀಸ್‌ಗಢದ ಬಿಜಾಪುರದಲ್ಲಿ ನಾಪತ್ತೆಯಾಗಿದ್ದ ಪರ್ತಕರ್ತರ ಮುಖೇಶ್​ ಚಂದ್ರಕಾರ್​ ಅವರ ಹೃದಯವನ್ನು ಸೀಳಿ, ಆತನ ಯಕೃತ್​ನ್ನು 4 ಭಾಗವಾಗಿ ತುಂಡಾಗಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವಕನ ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯರು ತನ್ನ ವೃತ್ತಿ ಜೀವನದಲ್ಲಿ ಇಂತಹ ದೃಷ್ಯವನ್ನು ಕಂಡಿಲ್ಲ ಎಂದು ಹೇಳಿದ್ದಾರೆ.

ಮುಖೇಶ್​ ಚಂದ್ರಕಾರ್​ ಒಬ್ಬ ಸ್ವತಂತ್ರ್ಯ ಪರ್ತಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದನು. ಜೊತೆಗೆ ಖಾಸಗಿ ವಾಹಿನಿಗಳಿಗೆ ಕೊಡುಗೆ ವರದಿಗಾರನಾಗಿಯೂ ಕೆಲಸ ಮಾಡುತ್ತಿದ್ದನು. ಅದರ ಜೊತೆಗೆ ‘ಬಸ್ತಾರ್​ ಜಂಕ್ಷನ್ ‘ ಎಂಬ ಯೂಟ್ಯೂಬ್​ ಚಾನಲ್​ನ್ನು ನಡೆಸುತ್ತಿದ್ದನು. ಈ ಚಾನೆಲ್​ಗೆ ಸುಮಾರು 1.59 ಲಕ್ಷ ಚಂದದಾರರು ಕೂಡ ಇದ್ದರು.

ಆದರೆ ಡಿಸೆಂಬರ್ 25 ರಂದು ಖಾಸಗಿ ವಾಹಿನಿಯಲ್ಲಿ ಮುಖೇಶ್​ ಬಿಜಾಪುರದ ರಸ್ತೆ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿ ವರದಿಯನ್ನು ಭಿತ್ತರಿಸಿದ್ದರು. ಇದನ್ನು ಭಿತ್ತರಿಸಿದ ನಂತರ ಕಳೆದ ಬುದವಾರ ಮುಖೇಶ್​ ಕಾಣೆಯಾದನು. ನಂತರ ಈತನ ಸಹೋದರ ಗುರುವಾರ ಕಾಣೆಯಾದ ದೂರು ದಾಖಲಿಸಿದ್ದರು.

ಇದನ್ನೂ ಓದಿ : ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ, ಯುವತಿಗೆ ಮದ್ಯ ಕುಡಿಸಿ ಆತ್ಯಾಚಾರವೆಸಗಿದ ಬಿಜೆಪಿ ಮುಖಂಡ

ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಮುಖೇಶ್​ಗಾಗಿ ಹುಡುಕಾಟ ಆರಂಭಿಸಿದ್ದರು. ಮುಖೇಶ್​ ಮೊಬೈಲ್​ ಲೋಕೆಶನ್​ ಟ್ರೇಸ್​ ಮಾಡಿದ ಪೊಲೀಸರಿಗೆ ಕಳೆದ ಶುಕ್ರವಾರ ಬಿಜಾಪುರದ ಛತ್ತನ್‌ಪಾರಾ ಬಸ್ತಿಯಲ್ಲಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಖೇಶ್​ ಶವ ಪತ್ತೆಯಾಗಿತ್ತು. ಕಾಂಗ್ರೆಸ್​ ಮುಖಂಡ ಸುರೇಶ್ ಚಂದ್ರಕರ್ ಎಂಬಾತನ ಭ್ರಷ್ಟಚಾರವನ್ನು ಬಯಲಿಗೆ ಎಳೆದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಪರ್ತಕರ್ತರ ಮುಖೇಶ್​ ಚಂದ್ರಶೇಖರ್​ ಮೃತದೇಹದ ಮರಣೋತ್ತರ ವರದಿ ಹೊರ ಬಂದಿದ್ದು. ಈ ವರದಿಯಲ್ಲಿನ ಅಂಶಗಳು ನಿಜಕ್ಕೂ ಭಯನಕವಾಗಿದೆ.

ಮುಕೇಶ್ ಚಂದ್ರಾಕರ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಪ್ರಕಾರ, ಅವರಿಗೆ 5 ಮುರಿದ ಪಕ್ಕೆಲುಬುಗಳು ಮತ್ತು 4 ಯಕೃತ್ತಿನ(ಲಿವರ್​) ತುಂಡುಗಳು ಪತ್ತೆಯಾಗಿವೆ. ತಮ್ಮ 12 ವರ್ಷಗಳ ವೃತ್ತಿ ಜೀವನದಲ್ಲಿ ಇಂತಹ ಕ್ರೌರ್ಯವನ್ನು ಕಂಡಿರಲಿಲ್ಲ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ. ಜೊತೆಗೆ ಮುಖೇಶ್​​ ತಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಗಾಯಗಳಾಗಿದ್ದು. ಹೃದಯಕ್ಕೆ ತೀವ್ರತರವಾದ ಗಾಯವಾಗಿದೆ. ಜೊತೆಗೆ ಹೊಟ್ಟೆ, ಎದೆ, ಬೆನ್ನು ಸೇರಿದಂತೆ ದೇಹದ ಪ್ರತಿ ಭಾಗದಲ್ಲೂ ಗಾಯವಾಗಿದೆ. ಮೃತದೇಹವನ್ನು ಕೈಮೇಲಿನ ಹಚ್ಚೆ ಮೂಲಕ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಪತಕರ್ತನ ಕೊಲೆ ಪ್ರಕರಣವನ್ನು ತನಿಖೆ ನಡೆಸಲು ಛತ್ತೀಸಗಡ ಸರ್ಕಾರ ಎಸ್​ಐಟಿಯನ್ನು ರಚನೆ ಮಾಡಿತ್ತು. ಕೊಲೆ ಪ್ರಕರಣದ ಕಾರ್ಯಚರಣೆಗೆ ಇಳಿದ ಪೊಲೀಸರಿಗೆ ಹೈದರಾಬಾದ್​ನಲ್ಲಿ ಸುರೇಶ್​​ ಎಂಬಾತನನ್ನು ಬಂಧಿಸಿದ್ದು. ಕೊಲೆ ಮಾಡಿದ ನಂತರ ಆರೋಪಿ ತಲೆಮರಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಗುತ್ತಿಗೆದಾರನಾಗಿರುವ ಈತನು ಕೂಡ ಭ್ರಷ್ಟಚಾರದಲ್ಲಿ ಪಾಲುದಾರನಾಗಿದ್ದನು ಎಂದು ಶಂಕಿಸಲಾಗಿದೆ.

ಇದನ್ನೂ ನೋಡಿ : ನಡುರಸ್ತೇಲಿ ಶರ್ಟ್‌ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media

Donate Janashakthi Media

Leave a Reply

Your email address will not be published. Required fields are marked *