ಕೋಲಾರ| 4 ಬಾಲಕರನ್ನು ಅಪಹರಣ ಮಾಡಿದ್ದ ಜೋತಿಷ್ಯಿ ಬಂಧನ

ಕೋಲಾರ: ಮಕ್ಕಳ ಅಪಹರಣದ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 4 ಬಾಲಕರನ್ನು ರಕ್ಷಣೆ ಮಾಡಿದ್ದಾರೆ. ಬಂಗಾರಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಅಪಹರಣಗೊಂಡಿದ ಮಕ್ಕಳನ್ನು ರಕ್ಷಿಸಲಾಗಿದ್ದು, ರಾಯಚೂರು ಮೂಲದ ಜೋತಿಷ್ಯಿ ವಿಷ್ಣು ರಾವ್ ಎಂಬಾತನನ್ನು ಬಂಧಿಸಲಾಗಿದೆ.

ಬಂಗಾರಪೇಟೆಯ ದೇಶಿಹಳ್ಳಿಯ ನಾಲ್ವರು ಮಕ್ಕಳನ್ನು ವಿಷ್ಣು ರಾವ್ ಎಂಬ ಜೋತಿಷ್ಯಿ ಕಿಡ್ನಾಪ್ ಮಾಡಿದ್ದನು. ಅದಲ್ಲದೆ ಮಕ್ಕಳನ್ನು ಲಾಡ್ಜ್‌ನಲ್ಲಿ ಕೂಡಿ ಹಾಕಿ ಪೋಷಕರಿಂದ ಹಣ ಬೇಡಿಕೆ ಇಟ್ಟಿದ್ದೂ, ಅಪಹರಣಗೊಂಡ ಬಾಲಕ ಲಿಖಿತ್ ತಾಯಿ ಸುಮಂಗಲಿ ಎನ್ನುವವರು ತನ್ನ ಮಗ ಲಿಖಿತ್ ಹಾಗೂ ಮೂವರು ಬಾಲಕರು ಅಪಹರಣಗೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಚ್ಚೆತ್ತ ಬಂಗಾರಪೇಟೆ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ನವದೆಹಲಿ| ವಿಧಾನಸಭಾ ಚುನಾವಣೆ – ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆ

ಬೆಂಗಳೂರಿನಲ್ಲಿ ಆರೋಪಿ ಅರೆಸ್ಟ್

ಸುಮಂಗಲಿ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ, ಸ್ವಾಮೀಜಿ ಎಷ್ಟು ರಾವ್ ಲಾಡವೊಂದರಲ್ಲಿ ಕೂಡಿ ಹಾಕಿ ಹಣಕ, ಬೇಡಿಕೆ ಇಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ, ಆಲದ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ ಲಿಬಿತ್ (16), ಶರತ್, ಮುಬಾರಕ್ ಹಾಗೂ ಹೇಮಂತ್ ಕುಮಾರ್ ಎಂಬ ಬಾಲಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಬಂಧನವಾಗಿರುವ ರಾಯಚೂರು ಮೂಲದ ಜ್ಯೋತಿಷಿ ಎಷ್ಟು ರಾವ್, ನಿಮ್ಮ ಟೈಂ ಸರಿಯಿಲ್ಲ ಎಂದು ವಾಮಾಚರಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದ ಸ್ವಾಮೀಜಿ ಬಳಿಯಿದ್ದ ನಿಂಬೆ ಹಣ್ಣು, ಮೂಳೆ ಸೇರಿದಂತೆ ವಾಮಾಚರಕ್ಕೆ ಬಳಸಿದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಇನ್ನು ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಪಿಚ್ಚರ್ ಪಯಣ – 154 , ಎಮಿಲಿಯಾ ಪೆರೇಝ್, ನಿರ್ದೇಶನ : ಜಾಕ್ ಆಡಿಯಾರ್ಡ್ , ವಿಶ್ಲೇಷಣೆ : ಮ.ಶ್ರೀ.ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *