`ಅಭಿವೃದ್ಧಿಯು ರಾಜಕೀಯ ಸಿದ್ದಾಂತಗಳಿಗೆ ಮೀರಿದ್ದು’ ಎನ್ನುವುದು ತಪ್ಪು ಪರಿಕಲ್ಪನೆ.’ `ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಬಿಡುಗಡೆ

ಅಭಿವೃದ್ಧಿ ಈ ಬಾರಿಯ ಚುನಾವಣೆಯಲ್ಲಿ ಮತ್ತು ಇತ್ತೀಚಿನ ರಾಜಕೀಯ ಸಂವಾದಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಶಬ್ದ. ಎಲ್ಲರೂ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ ಅದಕ್ಕೆ ತಮ್ಮದೇ ಆದ ಅರ್ಥ ಕೊಡುತ್ತಾರೆ. ಪ್ರೊ. ಚಂದ್ರ ಪೂಜಾರಿಯವರ ‘ಅಭಿವೃದ್ಧಿ ಮತ್ತು ರಾಜಕೀಯ’ ಎಂಬ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ನೆರವಾಗುವ ಪುಸ್ತಕ. ಮೇ 5, 2014 ರಂದು ಬೆಂಗಳೂರಿನಲ್ಲಿ ದೇವನೂರು ಮಹಾದೇವ ಬಿಡುಗಡೆ ಮಾಡಿದ ಪುಸ್ತಕದ ಬಗ್ಗೆ, ಬಿಡುಗಡೆ ಸಮಾರಂಭದಲ್ಲಿ ಪ್ರೊ. ಟಿ.ಆರ್. ಚಂದ್ರಶೇಖರ್ ಮತ್ತು ಕಾಂ. ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿದರು.10325541_493230744112006_2578448983301100945_n 10325541_493230744112006_2578448983301100945_n
ಪ್ರೊ. ಟಿ.ಆರ್. ಚಂದ್ರಶೇಖರ್ ಪುಸ್ತಕದ ಬಗ್ಗೆ ಮಾತನಾಡುತ್ತಾ ಅಭಿವೃದ್ಧಿ ಬಗ್ಗೆ ಇರುವ ಪ್ರಚಲಿತ ಪರಿಕಲ್ಪನೆಗಳು ಹೇಗೆ ತಪ್ಪು ಎಂದು ಈ ಪುಸ್ತಕ ವಿಷದ ಪಡಿಸುತ್ತದೆ ಎಂದರು. ಒಂದು ಕಡೆ ಅಭಿವೃದ್ಧಿಗೂ ರಾಜಕೀಯ ಸಿದ್ದಾಂತಕ್ಕೂ ಏನೂ ಸಂಬಂಧವಿಲ್ಲ. ಅದು ರಾಜಕೀಯ ಸಿದ್ದಾಂತಗಳಿಗೆ ಮೀರಿದ್ದು ಎನ್ನುವ ವ್ಯಾಪಕವಾಗಿರುವ ತಪ್ಪು ಪರಿಕಲ್ಪನೆ. ಒಟ್ಟು ಉತ್ಪನ್ನ (ಜಿಡಿಪಿ ಅಳೆಯುವಂತೆ) ಹೆಚ್ಚಾದರೆ ಸಾಕು. ಅದು ಕಟ್ಟ ಕಡೆಯ ಮುನುಷ್ಯನವರೆಗೂ ಸೋರಿ ಎಲ್ಲರ ‘ಅಭಿವೃದ್ಧಿ’ ಆಗುತ್ತದೆ ಎಂಬ ಪರಿಕಲ್ಪನೆ ತಪ್ಪು ಎಂದು ಹಲವಾರು ಅಧ್ಯಯನಗಳಿಂದ ಸಾಧಿತವಾಗಿದ್ದರೂ, ಅದನ್ನು ‘ಕಾಮನ್ ಸೆನ್ಸ್’ ಎಂಬ ರೀತಿಯಲ್ಲಿ ಬಿತ್ತಲಾಗುತ್ತಿದೆ. ಮಾನವ ಅಭಿವೃದ್ಧಿ ಸೂಚಕಗಳು ಅಳೆಯುವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂಬುದನ್ನೂ ನಿರ್ಲಕ್ಷಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ(ರೇಗಾ), ಸಾರ್ವಜನಿಕ ರೇಷನ್ ವ್ಯವಸ್ಥೆ(ಪಿ.ಡಿ.ಎಸ್.) ಮುಂತಾದ ಬಡತನ ನಿವಾರಣೆಗೆ ಕೈಗೊಳ್ಳಬೇಕಾದ ಯೋಜನೆಗಳಿಗೆ ಹೂಡಲಾಗುತ್ತಿರುವ ಹಣ ಅನುತ್ಪಾದಕ ಮತ್ತು ಪೋಲಾಗುತ್ತವೆ ಎಂದೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ.
`ಕನಿಷ್ಟ ಸಕರ್ಾರ, ಗರಿಷ್ಟ ಆಡಳಿತ’ !!!
ಮೋದಿ ಚುನಾವಣಾ ಭಾಷಣಗಳಲ್ಲಿ ಗಿಳಿ ಪಾಠದಂತೆ ಒಪ್ಪಿಸುತ್ತಿರುವ ‘ಮಿನಿಮಮ್ ಗವರ್ನಮೆಂಟ್ ಮಾಕ್ಸಿಮಮ್ ಗವನರ್ೆನ್ಸ್’ (ಕನಿಷ್ಟ ಸಕರ್ಾರ, ಗರಿಷ್ಟ ಆಡಳಿತ) ಎಂಬ ನೀತಿ ನವ-ಉದಾರವಾದಿ ಅಭಿವೃದ್ಧಿ ನೀತಿಯ ಸಾರ. ಜನತೆಗೆ ಆಹಾರ, ನೀರು, ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ಮೂಲ ಆವಶ್ಯಕತೆಗಳನ್ನು ಒದಗಿಸುವ ಜವಾಬ್ದಾರಿ ಸಕರ್ಾರದ್ದಲ್ಲ. ಇವೆಲ್ಲವನ್ನೂ ಎಲ್ಲಾ ಸಂಪನ್ಮೂಲಗಳ ಒಡೆತನ ಹೊಂದಿರುವ ಖಾಸಗಿ ವಲಯ ಒದಗಿಸುತ್ತದೆ. ಇದು ‘ಕನಿಷ್ಟ ಸಕರ್ಾರ’ದ ಅರ್ಥ. ಅದನ್ನು ಒದಗಿಸುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವುದು ಮತ್ತು ಅದಕ್ಕೆ ತಕ್ಕ ಬೆಲೆಯನ್ನು (ವಿದ್ಯುತ್, ನೀರು, ಪೆಟ್ರೋಲ್ ದರ: ಸ್ಕೂಲು ಕಾಲೇಜು ಫೀ)  ಜನ (ಅಗತ್ಯ ಬಿದ್ದರೆ ಬಲಪ್ರಯೋಗ ಮಾಡಿ) ತೆರುವಂತೆ ನೋಡಿಕೊಳ್ಳುವುದು ಸಕರ್ಾರದ ಕೆಲಸ. ಇದು ‘ಗರಿಷ್ಟ ಆಡಳಿತ’ದ ಅರ್ಥ. ಇದನ್ನು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ ಎಂದರು ಪ್ರೊ. ಚಂದ್ರಶೇಖರ್.
ಈ ಹಿನ್ನೆಲೆಯಲ್ಲಿ, ಅಭಿವೃದ್ಧಿ ಮತ್ತು ರಾಜಕೀಯಗಳ ನಡುವೆ ಇರುವ ಸಂಬಂಧ, ಹಾಗೂ – ಬಡತನ ನಿವಾರಣೆ, ಮಹಿಳಾ ಅಭಿವೃದ್ಧಿ, ಸಾಂಸ್ಕೃತಿಕ ರಾಜಕೀಯ, ಗುರುತಿನ(ಐಡೆಂಟಿಟಿ) ರಾಜಕೀಯ, ಆಮ್ ಆದ್ಮಿ ಪಕ್ಷದ ‘ಭ್ರಷ್ಟಾಚಾರ-ವಿರೋಧಿ ರಾಜಕೀಯ – ಮುಂತಾದ ಸಂಬಂಧಿತ ವಿಷಯಗಳ ಬಗ್ಗೆ ಪ್ರೊ. ಚಂದ್ರ ಪೂಜಾರಿಯವರ ‘ಅಭಿವೃದ್ಧಿ ಮತ್ತು ರಾಜಕೀಯ’ ಸರಿಯಾದ ಪರಿಕಲ್ಪನೆ ಮೂಡಿಸುತ್ತದೆ. ಇದು ಅತ್ಯಂತ ಪ್ರಸ್ತುತವಾದ ಸಂದಭರ್ೋಚಿತವಾದ ಪುಸ್ತಕ ಎಂದರು. ಕಾಂ. ಜಿ.ವಿ.ಶ್ರೀರಾಮರೆಡ್ಡಿ ಪುಸ್ತಕದ ಬಗ್ಗೆ ಮಾತನಾಡುತ್ತಾ ಸ್ವಾತಂತ್ರ್ಯನಂತರ ಆಳುವ ಬಂಡವಾಳಶಾಹಿ-ಭೂಮಾಲಕ ವರ್ಗಗಳು ಅನುಸರಿಸಿದ ಅಭಿವೃದ್ಧಿ ಪಥದ ಹಲವು ಮಜಲುಗಳನ್ನು ವಿವರಿಸಿ ಈಗಿನ ಅವರ  ಅಭಿವೃದ್ಧಿಯ ನವ-ಉದಾರವಾದಿ ಪಥದ ಬಗ್ಗೆ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದರು. ಆದರೆ 50ರಿಂದ 70ರ ದಶಕದವರೆಗೆ ಕಾಂಗ್ರೆಸ್ ಅನುಸರಿಸಿದ ಅಭಿವೃದ್ಧಿ ಪಥ (80ರ ದಶಕದ ನಂತರದ್ದಕ್ಕಿಂತ ಭಿನ್ನವಾದರೂ) ಸಹ ಬಂಡವಾಳಾಶಾಹಿ ಪಥವೇ. ಅದನ್ನು ‘ಸೋಶಲಿಸ್ಟ್ ಅಭಿವೃದ್ಧಿ’ ಎಂದು ಕರೆಯುವುದು ತಪ್ಪಾಗುತ್ತದೆ ಎಂದು ಕಾಂ. ರೆಡ್ಡಿ ಅಭಿಪ್ರಾಯ ಪಟ್ಟರು.

Donate Janashakthi Media

Leave a Reply

Your email address will not be published. Required fields are marked *